ರಥವಾನೇರಿದ ರಾಘವೇಂದ್ರ | ಸದ್ಗುಣಗಳ ಸಾಂದ್ರ
ರಾಗ - ಪೂರ್ವಿ : ತಾಳ - ಆದಿತಾಳ
ರಥವಾನೇರಿದ ರಾಘವೇಂದ್ರ | ಸದ್ಗುಣಗಳ ಸಾಂದ್ರ | ಪ |
ಸತತ ಮಾರ್ಗದಿ ಸಂತತ ಸೇವಿಪರಿಗೆ | ಅತಿಹಿತದಲಿ ಮನೋರಥವ ಕೊಡುವೆನೆಂದು | ಅ ಪ |
ಚತುರ ದಿಕ್ಕು ವಿದಿಕ್ಕುಗಳಲ್ಲಿ |
ಚರಿಪಾಜನರಲ್ಲಿ ಮಿತಿಲ್ಲದೆ ಬಂದು ಓಲೈಸುತಲಿ |
ವರವಾ ಬೇಡುತಲಿನುತಿಸುತ ಪರಿಪರಿ ನತರಾಗಿ
ಹರಿಗೆ ಗತಿಪೇಳದೆ ಸರ್ವಥಾ ಬಿಡೆನೆಂದು | ೧ |
ಅತುಳ ಮಹಿಮಾನಾ ದಿನದಲ್ಲಿ |
ದಿತಿಜಾವಂಶದಲಿ ಉತ್ಪತ್ತಿಯಾಗಿ ಉಚಿತಾದಲ್ಲಿ |
ಉತ್ತಮ ಮತಿಯಲ್ಲಿಅತಿಶಯವಿರುತಿರೆ ಪಿತನ ಬಾಧೆಗೆ |
ಮನ್ಮಥ ಪಿತನೊಲಿಸಿದ ಜಿತ ಕರುಣದಲಿ | ೨ |
ಪ್ರಥಮ ಪ್ರಲ್ಹಾದ ವ್ಯಾಸಮುನಿಯೆ |
ಯತಿ ರಾಘವೇಂದ್ರ ಪತೀತರೋದ್ಧಾರಿಯೆ ಪಾವನಕಾರಿಯೇ |
ಕರಮುಗಿವೆನು ದೊರೆಯೆ |
ಕ್ಷಿತಿಯೊಳು ಗೋಪಾಲವಿಟ್ಠಲನ ಸ್ಮರಿಸುತ |
ಪ್ರತಿ ಮಂತ್ರಾಲಯದೊಳು ಅತಿ ಮೆರೆವ | ೩ |
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments