ಪೊಂದಿ ಬದುಕಿರೋ ರಾಘವೇಂದ್ರರಾಯರ

ಪೊಂದಿ ಬದುಕಿರೋ ರಾಘವೇಂದ್ರರಾಯರ

ರಾ ಗ - ಸೌರಾಷ್ಟ್ರ : ತಾ ಳ - ಆ ದಿ ತಾ ಳ ಪೊಂದಿ ಬದುಕಿರೋ ರಾಘವೇಂದ್ರರಾಯರ | ಕುಂದದೆಮ್ಮನು ಕರುಣದಿಂದ ಪೊರೆವರ | ಪ | ನಂಬಿ ತುತಿಸುವ ಜನಕದಂಬಕಿಷ್ಟವ | ತುಂಬಿಕೊಡುವನು ಅನ್ಯರ ಹಂಬಲೀಯನು | ೧ | ಅಲವಬೋಧರ ಸುಮತ ಜಲಧಿಚಂದಿರ | ಒಲಿದು ಭಕ್ತರ ಕಾವ ಸುಲಭ ಸುಂದರ | ೨ | ಗುರುಸುಧೀಂದ್ರರ ವಿಮಲಕರಜರೆನಿಪರ | ಸ್ಮರಿಸಿ ಸುರುಚಿರ ಚರಣಯುಗಳ ಪುಷ್ಕರ | ೩ | ಫಾಲಲೋಚನ ವಿನುತ ಮೂಲರಾಮನ | ಶೀಲಸದ್ಗುಣ ತುತಿಪ ಶೀಲರನುದಿನ | ೪ | ಭೂತಭಾವನ ಜಗನ್ನಾಥವಿಟ್ಠಲನ | ಪ್ರೀತಿಪಾತ್ರನ ನ೦ಬರೀತನೀಕ್ಷಣ | ೫ |
ದಾಸ ಸಾಹಿತ್ಯ ಪ್ರಕಾರ
ಬರೆದವರು