ಹಗಲು ನಾಲ್ಕು ಝಾವ

ಹಗಲು ನಾಲ್ಕು ಝಾವ ಹಸಿವನು ಕಳೆದೆನೊ ಇರುಳು ನಾಲ್ಕು ಝಾವ ವಿಷಯಕ್ಕೆ ಕೂಡಿದೆನೊ ವ್ಯರ್ಥವಾಯಿತಲ್ಲ ಈ ಸಂಸಾರಸುಖವೆಲ್ಲ ಕೇಲಯ್ಯ ತಂದೆ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಿಂಬರೆ ಅನ್ನ ಹುಟ್ಟಲುಬೇಡ

ತಿಂಬರೆ ಅನ್ನ ಹುಟ್ಟಲುಬೇಡ ಅನ್ನ ಹುಟ್ಟಿದರೆ ಬಟ್ಟೆ ದೊರಕಲುಬೇಡ ಬಟ್ಟೆ ದೊರಕಿದರೆ ಇಂಪು ತೋರಲುಬೇಡ ಇಂಪು ನಿನ್ನ ಪಾದಾರವಿಂದದಲಿ ಸಂತೋಷ ತೋರಿಸಯ್ಯ ಇಂದಿರಾರಾಧ್ಯ ಶ್ರೀ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎರಗಿ ಭಜಿಪೆನೊ ನಿನ್ನ

ಎರಗಿ ಭಜಿಪೆನೊ ನಿನ್ನ ಚರಣಸನ್ನಿಧಿಗೆ ಕರುಣದಿಂದಲಿ ನಿನ್ನ ಸ್ಮರಣೆಯನು ಎನಗಿತ್ತು ಮರೆಯದೆ ಸಲಹೊ ಶ್ರೀ- ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನ್ನ ಕಡೆಹಾಯಿಸುವುದು ನಿನ್ನ ಭಾರ

ಎನ್ನ ಕಡೆಹಾಯಿಸುವುದು ನಿನ್ನ ಭಾರ , ನಿನ್ನ ನೆನೆಯುತ್ತಲಿಹುದು ಎನ್ನ ವ್ಯಾಪಾರ ಎನ್ನ ಸತಿಸುತರಿಗೆ ನೀನೇ ಗತಿ , ನಿನ್ನನೊಪ್ಪಿಸುವುದು ಎನ್ನ ನೀತಿ ಎನ್ನ ಪಡಿಯಕ್ಕಿ ಸಲಹುವುದು ನಿನ್ನ ಧರ್ಮ , ನಿನ್ನ ಅಡಿಗೆರಗುವುದು ಎನ್ನ ಕರ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಿರಿವಿರಿಂಚಾದಿಗಳು ಅರಿಯದಂಥ

ಸಿರಿವಿರಿಂಚಾದಿಗಳು ಅರಿಯದಂಥ ಮಹಿಮೆ ಎಣಿಸಿ ಪಾಡುವುದಕ್ಕೆ ಅರ್ಹರ್ಯಾರೊ ಅರವಿಂದದಳನಯನ ಶರಣೆಂದವರ ಕಾಯ್ವ ಕರುಣಾಸಾಗರ ನಮ್ಮ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪ್ರಸನ್ನರಕ್ಷಕ ನೀನು ಪಾಲಿಸೊ

ಪ್ರಸನ್ನರಕ್ಷಕ ನೀನು ಪಾಲಿಸೊ, ನಿನ್ನವನು ನಾನು ಉಪಸಾಧನವರಿಯೆನೊ ಒಮ್ಮೆ ನಿನ್ನ ನೆನೆವೆನು ಅಪರಾಧಿಗಾದಡೇನು , ಅಭಯಪ್ರದನು ನೀನು ವಿಪರೀತ ಮಾಡದೆನ್ನನು ಪುರಂದರವಿಠಲ ನಂಬಿದೆನೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೆಲ್ಲದ ಕಟ್ಟೆಯ ಕಟ್ಟಿ

ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯ ಏನು ನೋಡಿದರೇನು , ಏನು ಕೇಳಿದರೇನು ಮನದೊಳಗಿನ ತಾಮಸ ಮಾಣದನ್ನಕ ಕೊಳಲ ಧ್ವನಿಗೆ ಸರ್ಪ ತಲೆದೂಗುವಂದದಿ ಇದಕೇನು ಮದ್ದು ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಗಲು ನಿನ್ನ ನೆನೆಯಲಿಲ್ಲ

ಹಗಲು ನಿನ್ನ ನೆನೆಯಲಿಲ್ಲ ಹಸಿವು ತೃಷೆಯಿಂದ ಇರುಳು ನಿನ್ನ ನೆನೆಯಲಿಲ್ಲ ನಿದ್ರೆಭರದಿಂದ ಈ ಎರಡರ ಬಾಧೆಗೆ ನಾನೊಳಗಾದೆನೊ ಸಲಹೊ ಪುರಂದರವಿಠಲ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು