ಸತ್ಯಜನಾಭನೆ ಸತ್ಯಮಹಿಮನೆ

ಸತ್ಯಜನಾಭನೆ ಸತ್ಯಮಹಿಮನೆ ಸತ್ಯಕಾಮನೆ ಸತ್ಯಪೂರ್ಣನೆ ಸತ್ಯಭೂಷಣ ನಿತ್ಯ ಪುರಂದರವಿಠಲರೇಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಂದು ಕಾಲದಲ್ಲಿ ಆನೆ ಕುದುರೆ ಮೇಲ್ಮೆರೆಸುವೆ

ಒಂದು ಕಾಲದಲ್ಲಿ ಆನೆ ಕುದುರೆ ಮೇಲ್ಮೆರೆಸುವೆ ಒಂದು ಕಾಲದಲ್ಲಿ ಬರಿಗಾಲಲ್ಲಿ ನಡೆಸುವೆ ಒಂದು ಕಾಲದಲ್ಲಿ ಮೃಷ್ಟಾನ್ನವುಣಿಸುವೆ ಒಂದು ಕಾಲದಲ್ಲಿ ಉಪವಾಸವಿರಿಸುವೆ ನಿನ್ನ ಮಹಿಮೆಯ ನೀನೆ ಬಲ್ಲೆಯೊ ದೇವ ಪನ್ನಂಗಶಯನ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವುದು

ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವುದು ಭಕುತಿಸಾಧನವಲ್ಲದನ್ಯ ಸಾಧನವುಂಟೆ ಭಕುತಿಗಭಿಮಾನಿ ಭಾರತಿಯ ಕರುಣದಿಂ ಮುಕುತಿಗೆ ಪಥವೆಂದು ಮನವಿಟ್ಟು ಭಜಿಸಿರೊ ಅಖಿಳೇಶ ಪುರಂದರವಿಠಲ ತಾನೊಲಿವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಿಚ್ಚಿನೊಳಗೆ ಬಿದ್ದ ಕೀಟಕನು ನಾನಯ್ಯ

ಕಿಚ್ಚಿನೊಳಗೆ ಬಿದ್ದ ಕೀಟಕನು ನಾನಯ್ಯ ಅಚ್ಯುತನೆ ಕಾಯೊ , ಅನಂತನೆ ತೆಗೆಯೊ ಗೋವಿಂದ ಹರಿ ಪೊರೆಯೊ ಪುರಂದರವಿಠಲ ನೀ ಕರುಣವುಳ್ಳವನು ಕಾಣೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲಿ ಹರಿಕಥೆಯ ಪ್ರಸಂಗ

ಎಲ್ಲಿ ಹರಿಕಥೆಯ ಪ್ರಸಂಗ ಅಲ್ಲಿ ಗಂಗೆ ಯಮುನೆ ಗೋದಾವರಿ ಸಿಂಧು ಎಲ್ಲ ತೀರ್ಥವು ಬಂದು ಎಣೆಯಾಗಿ ನಿಂದಿರಲು ವಲ್ಲಭ ಪುರಂದರವಿಠಲನೊಪ್ಪಿದನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನೆಯೆಂಬ ಆಸೆಯು

ಮನೆಯೆಂಬ ಆಸೆಯು ಎನ್ನ ಮುಂದುಗೆಡಿಸುತಿದೆ ಮನೆವಾರತೆಯು ಎನ್ನ ಭಂಗಪಡಿಸುತಿದೆ ಸುತರಾಸೆಯು ಎನ್ನ ದೈನ್ಯಬಡಿಸುತಿದೆ ಇನಿತಾಸೆಯುಳಿದು ಬುದ್ಧಿ ನಿನ್ನಲ್ಲಿ ನಿಲುವಂತೆ ಮಾಡೊ ಸಿರಿಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನುಕೂಲವಿಲ್ಲದ ಸತಿಯ ವರ್ಜಿಸಬೇಕು

ಅನುಕೂಲವಿಲ್ಲದ ಸತಿಯ ವರ್ಜಿಸಬೇಕು ವಿನಯದಿ ಗುರುಹಿರಿಯರ ಪೂಜಿಸಬೇಕು ಮನಕೆ ಬಾರದ ಠಾವು ಬಿಟ್ಟು ತೊಲಗಬೇಕು ವನಜನಾಭನ ದಾಸರ ಸಂಗವಿರಬೇಕು ನೆನೆಯುತಲಿರಬೇಕು ಪುರಂದರವಿಠಲನ || (/ ಪುರಂದರವಿಠಲನ ಚರಣವನು ನಿತ್ಯ ನೆನೆಯುತಲಿರಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಓದಿದರೇನು

ಏನು ಓದಿದರೇನು ಏನು ಕೇಳಿದರೇನು ಹೀನ ಗುಣಗಳ ಹಿಂಗದ ಜನರು ಮಾನಾಭಿಮಾನವ ನಿನಗೊಪ್ಪಿಸಿದ ಮೇಲೆ ನೀನೆ ಸಲಹಬೇಕೊ ಪುರಂದರವಿಟ್ಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಬ್ಬರ ಬಂಟನಾಗಿ ಕಾಲ ಕಳೆವುದಕ್ಕಿಂತ

ಒಬ್ಬರ ಬಂಟನಾಗಿ ಕಾಲ ಕಳೆವುದಕ್ಕಿಂತ ನಿರ್ಬಂಧವಿಲ್ಲದ ತನ್ನಿಚ್ಛೆಯೊಳಿದ್ದು ಲಭ್ಯವಾದೊಂದು ತಾರಕ ಸಾಕುಸಾಕು ಎನಗೆ ಅಬ್ಬರ ಒಲ್ಲೆನಯ್ಯ ಅಷ್ಟರಲ್ಲೆ ಸಂತುಷ್ಟ ಗರ್ಭಿ ಕರುಣಾಕರ ಪುರಂದರವಿಠಲ ಲಭ್ಯ ಒಂದು ತಾರಕ ಸಾಕು ಸಾಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಲ ಮೇಲೆ ಮಲಗಿ

ಕಾಲ ಮೇಲೆ ಮಲಗಿ ಸಿಂಪಿಲಿ ಹಾಲ ಕುಡಿದು ಬೆಳೆದೆ ಮೂರು ಲೋಕವು ನಿನ್ನುದರದಲ್ಲಿರಲು ಇರೇಳು ಲೋಕವನೀರಡಿ ಮಾಡಲು ಮೂರುಲೋಕದೊಡೆಯ ಶ್ರೀಪುರಂದರವಿಟ್ಠಲ ನಿನ ಬಾಲಕತನದ ಲೀಲೆಗೆ ನಮೋ ನಮೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು