ಇದಿರದಾವನು ನಿನಗೀ ಧರೆಯೊಳು

(ಪೂರ್ವಿ ರಾಗ ಆದಿತಾಳ) ಇದಿರದಾವನು ನಿನಗೀ ಧರೆಯೊಳು ಪದುಮನಾಭನ ದಾಸ ಪರಮೋಲ್ಲಾಸಾ ||ಪ|| ವಾದಿತಿಮಿರಮಾರ್ತಾಂಡನೆಂದೆನಿಸಿದ ವಾದಿಶರಭಭೇರುಂಡ ವ್ಯಾಸರಾಯಾ ||೧|| ಯತಿಗಳೊಳಗೆ ನಿಮ್ಮಂದದದವರುಗಳ ಪ್ರತಿಗಾಣೆನು ಈ ಕ್ಷಿತಿಯೊಳು ಯತಿರಾಯಾ ||೨|| ಹಮ್ಮನಳಿದು ಶ್ರೀಪತಿ ರಂಗವಿಠಲನ್ನ ಸುಮ್ಮಾನದಿಂ ಸೇವಿಪ ವ್ಯಾಸಮುನಿರಾಯಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದನಾದರು ಕೊಡದಿದ್ದರೆ ನಿನ್ನ ಪದಕಮಲವ ನಂಬಿ ಭಜಿಸುವದೆಂತೊ

(ಕೇದಾರಗೌಳ ರಾಗ ಆದಿತಾಳ) ಇದನಾದರು ಕೊಡದಿದ್ದರೆ ನಿನ್ನ ಪದಕಮಲವ ನಂಬಿ ಭಜಿಸುವದೆಂತೊ ||ಪ|| ಗ್ರಾಸವಾಸಗಳಿಗೆ ಇಲ್ಲವೆಂದು ನಿನ್ನ ಬೇಸರಿಸಿ ಬೇಡ ಬಂದುದಿಲ್ಲ ವಾಸುದೇವನೆ ನಿನ್ನ ದಾಸರ ದಾಸರ ದಾಸರ ದಾಸ್ಯವ ಕೊಡು ಸಾಕೆಂದರೆ ||೧|| ಸತಿಸುತರುಗಳ ಸಹಿತನಾಗಿ ನಾ ಹಿತದಿಂದ ಇರಬೇಕೆಂಬೊದಿಲ್ಲ ಇತರ ವಿಷಯಂಗಳಿಗೆರಗಿಸದೆ ಮನಕೆ ನಿನ್ನ ಕಥಾಮೃತವನೆ ಕೊಡು ಸಾಕೆಂದರೆ ||೨|| ಸಾಲವಾಯಿತು, ಸಂಬಳ ಎನಗೆ ಸಾಲದೆಂದು ಬೇಡ ಬಂದುದಿಲ್ಲ ನಾಲಗೆಯಲಿ ನಿನ್ನ ನಾಮದುಚ್ಚರಣೆಯ ಪಾಲಿಸಬೇಕೆಂದು ಬೇಡಿದೆನಲ್ಲದೆ ||೩|| ಒಡವೆ ಒಡ್ಯಾಣಗಳಿಲ್ಲೆಂದು ಬಡವನೆಂದು ಬೇಡಬಂದುದಿಲ್ಲ ಒಡೆಯ ನಿನ್ನಡಿಗಳಿಗೆರಗುವುದಕೆ ಮನ ಬಿಡದಿಹದೊಂದನು ಕೊಡು ಸಾಕೆಂದರೆ ||೪|| ಆಗಬೇಕು ರಾಜ್ಯಭೋಗಗಳೆನಗೆಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಟ್ಹಾಂಗೆ ಇರುವೆನೊ ಹರಿಯೇ ಎನ್ನ ದೊರೆಯೇ

(ಸಾವೇರಿ ರಾಗ ಆದಿತಾಳ) ಇಟ್ಹಾಂಗೆ ಇರುವೆನೊ ಹರಿಯೇ ಎನ್ನ ದೊರೆಯೇ ||ಪ|| ಸೃಷ್ಟಿವಂದಿತ ಪಾದಪದುಮ ಶ್ರೀಹರಿಯೇ ||ಅ.ಪ|| ಸಣ್ಣ ಶಾಲ್ಯೋದನ ಬೆಣ್ಣೆ ಕಾಸಿದ ತುಪ್ಪ ಚಿನ್ನದ ಹರಿವಾಣದಲಿ ಭೋಜನ ಘನ್ನಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ ಕ- ದನ್ನ ಕಾಣದೆ ಬಾಯ್ಬಿಡಿಸುವಿ ಹರಿಯೇ ||೧|| ಕೆಂಪಿಲಿ ಪೊಳೆವ ಪೀತಾಂಬರ ಉಡಿಸುವಿ ಸೊಂಪಿನಂಚಿನ ಶಾಲು ಹೊದಿಸುವಿಯೋ ಕಪಿಲಹರೇ ನಿನ್ನ ಕೃಪೆಯು ತಪ್ಪಿದ ಮ್ಯಾಲೆ ಕಪರ್ದಕ ಕೌಪೀನವು ದೊರೆಯದೊ ಹರಿಯೇ ||೨|| ಚಂದ್ರಶಾಲೆಲಿ ಚಂದ್ರಕಿರಣದಂತೊಪ್ಪುವ ಚಂದದ ಮಂಚದೊಳ್ ಮಲಗಿಸುವಿ ಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮ- ಮಂದಿರದೊಳು ತೋಳ್ತಲಗಿಂಬು ಹರಿಯೇ ||೩|| ನರಯಾನದೊಳು ಕ್ಷಣ ನರವರನೆನಿಸುವಿ ವರಛತ್ರ ಚಾಮರ ಹಾಕಿಸುವಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಕ್ಕೋ ನೋಡೆ ರಂಗನಾಥನ ಚಿಕ್ಕಪಾದವ

( ಮಧ್ಯಮಾವತಿ ರಾಗ ಏಕತಾಳ) ಇಕ್ಕೋ ನೋಡೆ ರಂಗನಾಥನ ಚಿಕ್ಕಪಾದವ ||ಪ|| ಸಿಕ್ಕಿತೆ ಶ್ರೀ ಲಕ್ಷ್ಮೀಪತಿಯ ದಿವ್ಯಪಾದವ ||ಅ.ಪ|| ಶಂಖ ಚಕ್ರ ಗದಾ ಪದ್ಮ ಅಂಕಿತ ಪಾದವ ಅಂಕುಶ ಕುಲಿಶ ಧ್ವಜರೇಖಾ ಅಂಕಿತ ಪಾದವ ಪಂಕಜಾಸನನ ಹೃದಯದಲ್ಲಿ ನಲಿಯುವ ಪಾದವ ಸಂಕಟಹರಣ ವೆಂಕಟೇಶನ ದಿವ್ಯ ಪಾದವ ||೧|| ಲಲನೆ ಲಕ್ಷ್ಮಿಯಂಕದಲ್ಲಿ ನಲಿಯುವ ಪಾದವ ಜಲಜಾಸನನ ಅಭೀಷ್ಟವೆಲ್ಲ ಸಲಿಸುವ ಪಾದವ ಮಲ್ಲರ ಗೆಲಿದು ಕಂಸಾಸುರನ ಕೊಂದ ಪಾದವ ಬಲಿಯ ಮೆಟ್ಟಿ ಭಾಗೀರಥಿಯ ಪಡೆದ ಪಾದವ ||೨|| ಬಂಡೆಯ ಬಾಲೆಯ ಮಾಡಿದ ಉದ್ದಂಡ ಪಾದವ ಬಂಡಿಲಿದ್ದ ಶಕಟಾಸುರನ ಒದ್ದ ಪಾದವ ಅಂಡಜ ಹನುಮರ ಭುಜದೊಳೊಪ್ಪುವ ಪಾದವ ಕಂಡೆವೆ ಶ್ರೀರಂಗವಿಠಲನ ದಿವ್ಯಪಾದವ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನ್ನಂತ ಕಾಲದಲ್ಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊ

( ನಾಟಿ ರಾಗ , ಧ್ರುವತಾಳ) ಅನ್ನಂತ ಕಾಲದಲ್ಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊ ಅನ್ನಂತ ಕಾಲದಲ್ಲಿ ನಿನ್ನವನೆನಿಸದೆ ಮೂರುಖನಾದೆನೊ ಅನ್ನಂತ ಕಾಲದಲ್ಲಿ ನಿನ್ನ ಚರಣರತಿಯಿಲ್ಲದೆ ನೊಂದೆನೊ ಅನ್ನಂತ ಕಾಲದಲ್ಲಿ ಅದಾವ ಪುಣ್ಯದಿಂದ ಬಂದು ಇಂದು ನಿನ್ನವನೆನಿಸಿದೆ ಅದಾವ ಪುಣ್ಯದಿಂದಲೆನ್ನ ಮನ ನಿನ್ನಲ್ಲೆರಗಿತೊ ನೋಯದಂತೆ ಎನ್ನ ಪೊರೆದು ಪಾಲಿಸೊ ದೀನನಾಥ ಶ್ರೀರಂಗವಿಠಲ ೧ (ಮಠ್ಯತಾಳ) ಅನ್ನಕ ಭಯದ್ರವಿಣ ದೇಹನಿಮಿತ್ತ ಅನ್ನಕ ಶೋಕಾಶಯ ಮಾರಿ ಅನ್ನಕ ಲೋಭ ಅಶುಭದ ಲಾಭ ಅನ್ನಕ ನನ್ನದು ನಾನೆಂಬಹಮ್ಮಿಕೆ ಆವನ್ನಕ ನಿನ್ನ ಚರಣರತಿ ದೊರಕೊಳ್ಳದೊ ಉನ್ನಂತ ಗುಣಪರಿಪೂರ್ಣ ರಂಗವಿಠಲ ೨ (ತ್ರಿಪುಟತಾಳ)
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ

(ಕಲ್ಯಾಣಿ ರಾಗ ಝಂಪೆತಾಳ)

ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ ||ಪ||

ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ ||ಅ.ಪ||

 

ಮುನ್ನ ನರಕಾಸುರನು ಬಡಿದು ಚಿಂತಾಮಣಿಯ

ತನ್ನ ಮನೆಯಲಿ ತಂದು ನಿಲ್ಲಿಸಿ ನೃಪರ

ಕನ್ನೆಯರ ಷೋಡಶಸಹಸ್ರವನೆ ತಂದಾತ

ಹೆಣ್ಣನೊಬ್ಬಳನೊಯ್ದುದಿಲ್ಲವೊ ನೋಡೊ ||೧||

 

ಸಾವಿರ ಕರ ಪಡೆದ ಕಾರ್ತವೀರ್ಯಾರ್ಜುನನು

ಭೂವಲಯದೊಳಗೇ ವೀರನೆನಿಸಿ

ರಾವಣನ ಸೆರೆಯಿಟ್ಟು ಕಾಮಧೇನುವ ಬಯಸಿ

ಸಾವಾಗ ಏನು ಕೊಂಡೊಯ್ದನೋ ನೋಡೊ ||೨||

 

ಕೌರವನು ಧರೆಯೆಲ್ಲ ತನಗಾಗಬೇಕೆಂದು

ವೀರಪಾಂಡವರೊಡನೆ ಕದನಮಾಡಿ

ಮಾರಿಯ ವಶವೈದಿ ಹೋಹಾಗ ತನ್ನೊಡನೆ

ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳ ಮಂಗಳ ಜಯಮಂಗಳ

(ಭೈರವಿ ರಾಗ ತೀನ್ ತಾಳ) ಮಂಗಳ ಮಂಗಳ ಜಯಮಂಗಳಾ , ಶುಭ- ಮಂಗಳ ಸ್ವಾಮಿ ಸರ್ವೋತ್ತಮಗೆ ಸಹಸ್ರ ಮಂಗಳ ದೇವೋತ್ತಮಗೆ ||ಪ|| ಕೇಶವ ನಾರಾಯಣಗೆ ಮಂಗಳ ವಾಸುದೇವ ಸುತ ಶ್ರೀಕೃಷ್ಣಗೆ ಮಂಗಳ ಹೃಷಿಕೇಶ ಪುರುಷೋತ್ತಮಗೆ ಮಂಗಳ ವಸುದೇವಸುತ ಶ್ರೀಕೃಷ್ಣಗೆ ಮಂಗಳ ||೧|| ಅಚ್ಯುತ ಜನಾರ್ದನಗೆ ಮಂಗಳ ಮತ್ಸ್ಯಕೂರ್ಮವರಾಹಗೆ ಮಂಗಳ ಸಚ್ಚಿದಾನಂದ ಶ್ರೀಧರಗೆ ಮಂಗಳ ಮುಚಕುಂದ ವರದ ವಿಷ್ಣುಗೆ ಮಂಗಳ ||೨|| ಮಾಧವ ಮಧುಸೂಧನಗೆ ಮಂಗಳ ಸಾಧು ಹೃದಯವಾಸಗೆ ಮಂಗಳ ಅಧೋಕ್ಷಜ ಅನಿರುದ್ಧಗೆ ಮಂಗಳ ಪದ್ಮನಾಭ ಪ್ರದ್ಯುಮ್ನಗೆ ಮಂಗಳ ||೩|| ಗರುಡವಾಹನ ಗೋವಿಂದಗೆ ಮಂಗಳ ಉರಗಶಯನ ಉಪೇಂದ್ರಗೆ ಮಂಗಳ ಹರಿ ದಾಮೋದರ ಸಮ್ಕರುಷಣಗೆ ಮಂಗಳ ನಾರಸಿಂಹ ತ್ರಿವಿಕ್ರಮಗೆ ಮಂಗಳ ||೪|| ಪರಮಪಾವನ ಭಾರ್ಗವಗೆ ಮಂಗಳ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯ ಜಯ ಕರುಣಾಕರ ಕೃಪಾಲ

(ಯಮನ್ ರಾಗ ತೀನ್ ತಾಲ್) ಜಯ ಜಯ ಕರುಣಾಕರ ಕೃಪಾಲ ಜಯ ಜಯ ಗುರುಮುನಿಜನ ಪ್ರತಿಪಾಲ ||ಧ್ರುವ|| ರಾಜತೇಜೋನಿಧಿ ರಾಜರಾಜೇಂದ್ರ ರಾಜಿಸುತಿಹ ಮಕುಟಮಣಿ ಸುರೇಂದ್ರ ಸುಜನಹೃದಯ ಸದ್ಗುಣಮಣಿ ಸಾಂದ್ರ ಅಜಸುತ ಸೇವಿತ ಸುಜ್ಞಾನ ಸುಮೋದ ||೧|| ಅಗಣಿತಗುಣ ಅಗಾಧ ಅಪಾರ ನಿಗಮಗೋಚರ ನಿರುಪಮ ನಿರ್ಧಾರ ಸಗುಣ ನಿರ್ಗುಣನಹುದೋ ಸಾಕ್ಷಾತ್ಕಾರ ಭಕ್ತವತ್ಸಲ ಮುನಿಜನ ಮಂದಾರ ||೨|| ಧೀರ ಉದಾರ ದಯಾನಿಧಿಪೂರ್ಣ ತಾರಕಸ್ವಾಮಿ ಸದ್ಗುರು ನಿಧಾನ ತರಳ ಮಹಿಪತಿ ಜನೋದ್ಧರಣ ಚರಣಸ್ಮರಣಿ ನಿಮ್ಮ ಸಕಲಾಭರಣ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾನಾ ತಂದನಾನಾ ತಾನಾ ತಂದನಾನಾ

( ಜಾನಪದ ಧಾಟಿ ) ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ||ಧ್ರುವ || ಬಲ್ಲೆಬಲ್ಲೆನೆಂಬರು ಬಲ್ಲರಿಯದಿಹರು ಬಲ್ಲರೆ ನೀವಿನ್ನು ಹೇಳುವದು ತಾನಾ ||೧|| ಕಣ್ಣು ಕಾಂಬುವದೇನು ಕಣ್ಣಿನೊಳಿಹುದೇನು ಕಣ್ಣು ಕಾಂಬುವ ಗತಿ ತಿಳಿಯುವದು ತಾನಾ ||೨|| ಕಿವಿಯು ಕಿವಿಯೆಂಬುವದೇನು ಕಿವಿಯು ಕೇಳುವದೇನು ಕಿವಿಯು ಕೇಳುವ ಗತಿ ತಿಳಿಯುವದು ತಾನಾ ||೩|| ಮೂಗು ಮೂಗೆಂಬುದೇನು ಮೂಗಿನೊಳಾಡುವದೇನು ಆಡುವ ಗತಿಗಳ ತಿಳಿಯುವದು ತಾನಾ ||೪|| ಬಾಯಿ ಬಾಯೆಂಬುದೇನು ಬಾಯಿಯೊಳ ನುಡಿವದೇನು ಬಾಯಿ ನುಡಿವ ಗತಿ ತಿಳಿಯುವದು ತಾನಾ ||೫|| ದೇಹ ದೇಹೆಂಬುದೇನು ದೇಹದೊಳಿಹುದೇನು ದೇಹದೊಳಿಹ ವಸ್ತು ತಿಳಿಯುವದು ತಾನಾ ||೬|| ಪ್ರಾಣವೆಂಬುದೇನು ಕರಣವೆಂಬುದೇನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯದೇವ ಜಯದೇವ ಜಯಗುರು ಮೈಲಾರಿ

( ಮಾಲಕಂಸ್ ರಾಗ ಝಪ್ ತಾಳ) ಜಯದೇವ ಜಯದೇವ ಜಯಗುರು ಮೈಲಾರಿ ಮನಮೈಲ ಮರ್ದಿಸಿದಯ್ಯ ನೀನೆ ಅಸುರಾರಿ ||ಧ್ರುವ|| ಖಡ್ಗವ ಕರದಲಿ ಪಿಡಿದು ಖಂಡಿಸಿದಜ್ಞಾನ ಖಂಡೇರಾಯೆನಿಸಿಕೊಂಡು ಪ್ರಕಟಿಸಿದನುದಿನ ಹಿಂಡದೈವಕೆ ಪ್ರಚಂಡನಹುದೊ ಪರಿಪೂರ್ಣ ಮಂಡಲದೊಳು ನಿಮ್ಮ ಕೊಂಡಾಡುದು ತಾ ಸುರಜನ ||೧|| ಮಲಹರಣ ಮಾಡಲು ಧರಿಸಿ ಅವತಾರ ಮೂಲೋಕ ಪಾವನ ಮಾಡುವ ಸಹಕಾರ ಸಲಹುವೆ ಭಕ್ತ ಜನರಿಗೆ ನೀ ಘನ ಮಂದಾರ ಮಲೆತಿಹ ದೈತ್ಯರ ಸಂಹರಿಸುವೆ ನೀ ಅತಿ ಶೂರ ||೨|| ಮಹಿಗೆ ಪತಿ ಅಹುದು ಶ್ರೀಗುರು ಭೂಪತಿ ಬಾಹ್ಯಾಂತ್ರ ಬೆಳಗುವೆ ಶ್ರೀಪಾದಕೆ ಆರ್ತಿ ಇಹಪರಕೆ ದಾತನಹುದೋ ಶ್ರೀಪತಿ ಜಯಜಯವೆಂದು ಬೆಳಗುವೆ ದಾಸ ಮಹಿಪತಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು