ಮಂಗಳ ಮಂಗಳ ಜಯಮಂಗಳ
(ಭೈರವಿ ರಾಗ ತೀನ್ ತಾಳ)
ಮಂಗಳ ಮಂಗಳ ಜಯಮಂಗಳಾ , ಶುಭ-
ಮಂಗಳ ಸ್ವಾಮಿ ಸರ್ವೋತ್ತಮಗೆ
ಸಹಸ್ರ ಮಂಗಳ ದೇವೋತ್ತಮಗೆ ||ಪ||
ಕೇಶವ ನಾರಾಯಣಗೆ ಮಂಗಳ
ವಾಸುದೇವ ಸುತ ಶ್ರೀಕೃಷ್ಣಗೆ ಮಂಗಳ
ಹೃಷಿಕೇಶ ಪುರುಷೋತ್ತಮಗೆ ಮಂಗಳ
ವಸುದೇವಸುತ ಶ್ರೀಕೃಷ್ಣಗೆ ಮಂಗಳ ||೧||
ಅಚ್ಯುತ ಜನಾರ್ದನಗೆ ಮಂಗಳ
ಮತ್ಸ್ಯಕೂರ್ಮವರಾಹಗೆ ಮಂಗಳ
ಸಚ್ಚಿದಾನಂದ ಶ್ರೀಧರಗೆ ಮಂಗಳ
ಮುಚಕುಂದ ವರದ ವಿಷ್ಣುಗೆ ಮಂಗಳ ||೨||
ಮಾಧವ ಮಧುಸೂಧನಗೆ ಮಂಗಳ
ಸಾಧು ಹೃದಯವಾಸಗೆ ಮಂಗಳ
ಅಧೋಕ್ಷಜ ಅನಿರುದ್ಧಗೆ ಮಂಗಳ
ಪದ್ಮನಾಭ ಪ್ರದ್ಯುಮ್ನಗೆ ಮಂಗಳ ||೩||
ಗರುಡವಾಹನ ಗೋವಿಂದಗೆ ಮಂಗಳ
ಉರಗಶಯನ ಉಪೇಂದ್ರಗೆ ಮಂಗಳ
ಹರಿ ದಾಮೋದರ ಸಮ್ಕರುಷಣಗೆ ಮಂಗಳ
ನಾರಸಿಂಹ ತ್ರಿವಿಕ್ರಮಗೆ ಮಂಗಳ ||೪||
ಪರಮಪಾವನ ಭಾರ್ಗವಗೆ ಮಂಗಳ
ಕರುಣಾಕರ ಶ್ರೀವಿಕ್ರಮಗೆ ಮಂಗಳ
ಧರೆಯೊಳು ಬೌದ್ಧ ಕಲ್ಕಿಗೆ ಮಂಗಳ
ತರಳ ಮಹಿಪತಿ ಸ್ವಾಮಿಗೆ ಮಂಗಳ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments