ತಾನಾ ತಂದನಾನಾ ತಾನಾ ತಂದನಾನಾ

ತಾನಾ ತಂದನಾನಾ ತಾನಾ ತಂದನಾನಾ

( ಜಾನಪದ ಧಾಟಿ ) ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ||ಧ್ರುವ || ಬಲ್ಲೆಬಲ್ಲೆನೆಂಬರು ಬಲ್ಲರಿಯದಿಹರು ಬಲ್ಲರೆ ನೀವಿನ್ನು ಹೇಳುವದು ತಾನಾ ||೧|| ಕಣ್ಣು ಕಾಂಬುವದೇನು ಕಣ್ಣಿನೊಳಿಹುದೇನು ಕಣ್ಣು ಕಾಂಬುವ ಗತಿ ತಿಳಿಯುವದು ತಾನಾ ||೨|| ಕಿವಿಯು ಕಿವಿಯೆಂಬುವದೇನು ಕಿವಿಯು ಕೇಳುವದೇನು ಕಿವಿಯು ಕೇಳುವ ಗತಿ ತಿಳಿಯುವದು ತಾನಾ ||೩|| ಮೂಗು ಮೂಗೆಂಬುದೇನು ಮೂಗಿನೊಳಾಡುವದೇನು ಆಡುವ ಗತಿಗಳ ತಿಳಿಯುವದು ತಾನಾ ||೪|| ಬಾಯಿ ಬಾಯೆಂಬುದೇನು ಬಾಯಿಯೊಳ ನುಡಿವದೇನು ಬಾಯಿ ನುಡಿವ ಗತಿ ತಿಳಿಯುವದು ತಾನಾ ||೫|| ದೇಹ ದೇಹೆಂಬುದೇನು ದೇಹದೊಳಿಹುದೇನು ದೇಹದೊಳಿಹ ವಸ್ತು ತಿಳಿಯುವದು ತಾನಾ ||೬|| ಪ್ರಾಣವೆಂಬುದೇನು ಕರಣವೆಂಬುದೇನು ತತ್ವಗಳೆಂಬುದೇನು ತಿಳಿಯುವದು ತಾನಾ ||೭|| ಜೀವ ಅಂಬುದೇನು ಜೀವಭಾವಗಳೇನು ಜೀವ ಶಿವದ ಗತಿ ತಿಳಿಯುವದು ತಾನಾ ||೮|| ಅರುವ್ಹೆಂಬುದೇನು ದುರವ್ಹೆಂಬುದೇನು ಇದರೊಳು ಖೂನ ಕುರುಹು ತಿಳಿಯುವದು ತಾನಾ||೯|| ಕನಸುವಂಬುದೇನು ಕನಸು ಕಾಂಬುವದೇನು ಕನಸು ಹೇಳುವದೇನು ತಿಳಿಯುವದು ತಾನಾ ||೧೦|| ಹಗಲು ಎದ್ದಿಹದೇನು ಇರುಳು ಮಲಗುವದೇನು ಇದರ ಹಗರಣವನು ತಿಳಿಯುವದು ತಾನಾ ||೧೧|| ಹುಟ್ಟಿ ಬಾಳುವದೇನು ಸತ್ತು ಹೋಗುವದೇನು ಸತ್ತು ಹುಟ್ಟುವದೇನು ತಿಳಿಯುವದು ತಾನಾ ||೧೨|| ಹೆಣ್ಣು ಗಂಡೆಂಬುವದೇನು ಹೆಣ್ಣುಗಂಡು ಕೂಡುವದೇನು ಕೂಡುವದೇನೆಂದು ತಿಳಿಯುವದು ತಾನಾ ||೧೩|| ಅನುಭವಗಳ ಗತಿಗಳ ತಿಳಿಯಲು ಆತ್ಮದೊಳು ತಿಳಿಯಲು ಜನ್ಮವು ಅಳಿಯುವದು ತಾನಾ ||೧೪|| ಆತ್ಮ ಅನುಭವವು ತಿಳಿಯುವದು ಗುರುಕೃಪೆಯು ತಿಳಿಯಲು ಜೀವನ್ಮುಕ್ತಿಯು ತಾನಾ ||೧೫|| ಮಹೀಪತೆಂಬ್ಹೆಸರನು ಕರೆದರೋ ಎಂಬುವದೇನು ಓ ಎಂಬುವದೆನಗಿನ್ನು ತಿಳಿಯಿತು ತಾನಾ ||೧೬|| ಇಂತು ಪರಿಯಾಯವು ತಿಳುಹಿದ ಗುರುರಾಯ ಎನ್ನೊಳು ಭಾಸ್ಕರ ಗುರು ತಾನೆ ತಾನಾ ||೧೭||
ದಾಸ ಸಾಹಿತ್ಯ ಪ್ರಕಾರ
ಬರೆದವರು