ಅನ್ನಂತ ಕಾಲದಲ್ಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊ

ಅನ್ನಂತ ಕಾಲದಲ್ಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊ

( ನಾಟಿ ರಾಗ , ಧ್ರುವತಾಳ) ಅನ್ನಂತ ಕಾಲದಲ್ಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊ ಅನ್ನಂತ ಕಾಲದಲ್ಲಿ ನಿನ್ನವನೆನಿಸದೆ ಮೂರುಖನಾದೆನೊ ಅನ್ನಂತ ಕಾಲದಲ್ಲಿ ನಿನ್ನ ಚರಣರತಿಯಿಲ್ಲದೆ ನೊಂದೆನೊ ಅನ್ನಂತ ಕಾಲದಲ್ಲಿ ಅದಾವ ಪುಣ್ಯದಿಂದ ಬಂದು ಇಂದು ನಿನ್ನವನೆನಿಸಿದೆ ಅದಾವ ಪುಣ್ಯದಿಂದಲೆನ್ನ ಮನ ನಿನ್ನಲ್ಲೆರಗಿತೊ ನೋಯದಂತೆ ಎನ್ನ ಪೊರೆದು ಪಾಲಿಸೊ ದೀನನಾಥ ಶ್ರೀರಂಗವಿಠಲ ೧ (ಮಠ್ಯತಾಳ) ಅನ್ನಕ ಭಯದ್ರವಿಣ ದೇಹನಿಮಿತ್ತ ಅನ್ನಕ ಶೋಕಾಶಯ ಮಾರಿ ಅನ್ನಕ ಲೋಭ ಅಶುಭದ ಲಾಭ ಅನ್ನಕ ನನ್ನದು ನಾನೆಂಬಹಮ್ಮಿಕೆ ಆವನ್ನಕ ನಿನ್ನ ಚರಣರತಿ ದೊರಕೊಳ್ಳದೊ ಉನ್ನಂತ ಗುಣಪರಿಪೂರ್ಣ ರಂಗವಿಠಲ ೨ (ತ್ರಿಪುಟತಾಳ) ತೊಳಲಿ ಸಂಸಾರ ಚಕ್ರದಲಿ ಸಿಲುಕಿ ಬಳಲಿದ ಜೀವಗಣಕೆ ಸಂತತ ನಳಿನನಾಭಾ ನಿನ್ನ ಪದಾಂಭೋಜ ನೆಳಲು ನೆಮ್ಮುಗೆಯಲ್ಲವೆ ಒಳವೆ ಜಗದೊಳು ಸಕಲ ಸುಖಂಗಳು ಕಳವಳಿಸುವರು ರಂಗವಿಠಲ ೩ (ರೂಪಕತಾಳ) ನೀ ಕರುಣಿಯೆಂದು ನಿನ್ನ ನಾ ಮೊರೆಹೊಕ್ಕೆ ನೀಕರಿಸದೆ ಎನ್ನ ಶ್ರೀಕಾಂತ ಕಾಯಯ್ಯ ನಿನ್ನವನೆಂಬೆ ನಾನು ಮತ್ತನ್ಯವನರಿಯೆ ನಿನ್ನವನೆಂಬೆ ನಾನು ಕಂದರ್ಪನೆಂದೆಂದು ಕಾಡದಂತೆ ಮಾಡೊ ವೃಂದಾರಕಾಧೀಶ ರಂಗವಿಠಲ ೪ (ಝಂಪೆತಾಳ) ಪರರ ಬಾಗಿಲು ಕಾಯಿದು ಹೋಯಿತೀ ಸಂಸಾರ ಪರರ ಗುಣಗಳ ತುತಿಸಿ ಹೋಯಿತೀ ನಾಲಗೆ ಪರರ ಹಾರಿ ಹಾರಿ ಹೋಯಿತ್ತಿಂತೆನ್ನ ಮನ ಪರಮಕಾರುಣಿಕನೆ ನಮೋ ರಂಗವಿಠಲಯ್ಯ ೫ (ಅಟ್ಟತಾಳ) ಎನ್ನ ಮನ ಹರಿ ನಿನ್ನ ಚರಣದೊಳೊಮ್ಮೆ ಎರಗದು ದುರಿತ ದುಷ್ಕೃತವೆಂತು ಸೈರಿಪೆನೊ ನಂದನಂದನ ಮುಕುಂದ ಎಂತು ಸೈರಿಪೆನೊ ಮಂದಹಾಸ ಗೋವಿಂದ ಎಂತು ಸೈರಿಪೆನೊ ಎನ್ನ ಮನವನು ನಿನ್ನ ಚರಣದೊಳೊಮ್ಮೆ ಎರಗಿಸೊ ರಂಗವಿಠಲ ಎಂತು ಸೈರಿಪೆನೊ ೬ (ತ್ರಿಪುಟತಾಳ) ವ್ರತ ಜಪತಪ ಯಾಗಂಗಳ ಮಾಡುವೆನೆಂದು ಮನೆಮನೆದಪ್ಪದೆ ತಿರುಗಿ ಬಳಲಿದೆ ಬೆಲೆಗೆ ಹೋಗದು ಸರಕು ಸಡಿಲದಯ್ಯಾ ಹರಿಯೆ ಕೊಂಬುವರಿಲ್ಲ ಬೆಲೆಗೆ ಹೋಗದು ಸರಕು ಸಡಿಲುವಂತೆ ಮರೆಗೆ ತೆಗೆದು ನಿನ್ನ ಚರಣದಡಿಯಲಿಟ್ಟು ಕಾಯೊ ರಂಗವಿಠಲ ೭ (ಏಕತಾಳ) ಭವವೆಂಬಟವಿಯಲ್ಲಿ ಭಯಕೊಳದಲಿ ಸಿಕ್ಕಿ ತಾಪತ್ರಯವೆಂಬ ದಾವಾನಲ ತಪ್ತ ನರರಿಗೆ ಹರಿ ನಿನ್ನ ನಾಮಾಶ್ರಯವಲ್ಲದೆ ಮತ್ತುಂಟೆ ಮನುಲೋಕದಲ್ಲುಂಟೆ ತನುಪರಿಣ(?)ವಲ್ಲಭ ಅಮೃತ ಒಸರುವ ಪದಪದುಮದ ನೆಳಲ ನೆಲೆವನೆಯಲಿ ಎನ್ನನಿರಿಸೊ ರಂಗವಿಠಲ ೮ (ಜತೆ) ಬೆಂದ ಸಂಸಾರದಿ ಬಂದು ನೊಂದು ಬಳಲಿದೆನಯ್ಯ ನಂದ ನಂದನ ಕಾಯೊ ರಂಗವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು