ಶ್ರೀಪಾದರಾಯ

ಪೋಪು ಹೋಗೋಣ ಬಾರೊ ರಂಗ

ರಾಗ: ಧನ್ಯಾಸಿ ಆದಿ ತಾಳ ಪೋಪು ಹೋಗೋಣ ಬಾರೊ ರಂಗ ಪೋಪು ಹೋಗೋಣ ಬಾರೊ ಜಾಹ್ನವಿಯ ತೀರವಂತೆ ಜನಕರಾಯನ ಕುವರಿಯಂತೆ ಜಾನಕಿಯ ವಿವಾಹವಂತೆ ಜಾಣ ನೀನು ಬರಬೇಕಂತೆ ಕುಂಡಿನೀಯ ನಗರವಂತೆ ಭೀಷ್ಮಕರಾಜನ ಕುವರಿಯಂತೆ ಶಿಶುಪಾಲನ ಒಲ್ಲಳಂತೆ ನಿನಗೆ ವಾಲೆ ಬರೆದಳಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಯಾಡಿ ಬಂದ್ಯೋ ನೀ ಹೇಳಯ್ಯ

ರಾಗ: ರೇಗುಪ್ತಿ ತಾಳ: ಛಾಪ ಎಲ್ಯಾಡಿ ಬಂದ್ಯೋ ನೀ ಹೇಳಯ್ಯ ನಿಲ್ಲು ನಿಲ್ಲು ಗೋಪಾಲ ಕೃಷ್ಣಯ್ಯ ||ಪ|| ನೊಸಲಲ್ಲಿ ಕಿರುಬೆವರಿಟ್ಟಿದೆ ಅಲ್ಲಿ ಹೊಸಪರಿ ಸುದ್ದಿಯು ಹುಟ್ಟಿದೆ ಪುಸಿಯಲ್ಲ ಈ ಮಾತು ನಿನ್ನ ನಸುನಗೆ ಕೀರ್ತಿ ಹೆಚ್ಚಿದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಎಲ್ಯಾಡಿ ಬಂದ್ಯೊ ಎನ್ನ ರಂಗಯ್ಯಾ ನೀ

ರಾಗ: ಶಂಕರಾಭರಣ ತಾಳ: ತ್ರಿಪುಟ ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ ಎಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ||ಪ|| ಆಲಯದೊಳಗೆ ನೀನಾಡದೆ ಚಿನಿ ಪಾಲು ಸಕ್ಕರೆ ನೀನೊಲ್ಲದೆ ಚಿಕ್ಕ ಬಾಲರೊಡನೆ ಕೂಡ್ಯಾಡದೆ ಮುದ್ದು ಬಾಲಯ್ಯ ನೀ ಎನ್ನ ಕಣ್ಣ ಮುಂದಾಡದೆ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಬಾರೋ ನಮ್ಮ ಮನೆಗೆ

ಪಲ್ಲವಿ: ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ

 

ಚರಣ:

1: ಗೊಲ್ಲ ಬಾಲಕರನು ನಿಲ್ಲಿಸಿ ಹೆಗಲೇರಿ ಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ

2: ಕಸ್ತೂರಿ ತಿಲಕವ ಶಿಸ್ತಾಗಿ ಫಣೆಯಲಿಟ್ಟು ಮಸ್ತಾಗಿ ಕುಣಿವ ಪರವಸ್ತು ಕಾಣೇನೆಂದು

3: ಮುಜ್ಜಗವನೆಲ್ಲ ಬೊಜ್ಜೆಯೊಳಗೆಯಿಟ್ಟು ಗೆಜ್ಜೆಯ ಕಟ್ಟಿ ತಪ್ಪು ಹೆಜ್ಜೆಯನಿಕ್ಕುತ

4: ನಾರಿಯರು ಬಿಚ್ಚಿಟ್ಟ ಸೀರೆಗಳನೊಯ್ದು ಮೇರೆಯಿಲ್ಲದೆ ಕೈಯ ತೋರೆಂದ ಶ್ರೀ ಕೃಷ್ಣ

5: ಅಂಗನೆಯರ ವ್ರತ ಭಂಗವ ಮಾಡಿದ ರಂಗ ವಿಟ್ಠಲ ಭವಭಂಗ ಪರಿಹರಿಸೋ

ದಾಸ ಸಾಹಿತ್ಯ ಪ್ರಕಾರ
ಬರೆದವರು