ಇದೇ ನೋಡಿರೋ ಸಂಧ್ಯಾನ , ಸದಾ ಆತ್ಮಾನುಸಂಧಾನ
(ಹಂಸಧ್ವನಿ ರಾಗ ಏಕತಾಳ)
ಇದೇ ನೋಡಿರೋ ಸಂಧ್ಯಾನ
ಸದಾ ಆತ್ಮಾನುಸಂಧಾನ ||ಧ್ರುವ||
ತಿಳಿಯದೆನಗೆ ತ್ರಿಕಾಲ
ಹೊಳವುತಿಹುದು ಸೂರ್ಯ ಅಚಲಾ
ಕಾಳವ್ಯಾಳ್ಯಲ್ಲಿದಕ ಸಮೂಲಾ
ಇಳೆಯೊಳಾಯಿತು ಧರ್ಮಾನುಕೂಲಾ ||೧||
ಚಂಚಲೆಂಬುದೆ ಆಚಮನ
ಮುಂಚೆ ಸಂಧ್ಯಾನಕಿದೆ ಸಾಧನ
ಸಂಚಿತ ಪ್ರಾಲಬ್ಧಕ್ರಿಯಮಾಣಾ
ವಂಚನಿಲ್ಲದ್ದಾಯಿತು ಅರ್ಘ್ಯದಾನ ||೨||
ಪರಮೇಷ್ಠಿ ಪರಬ್ರಹ್ಮಋಷಿಃ
ಅರಿತು ಪ್ರಣಮ್ಯ ಸಾಧಿಸಿ
ತಿರುಗಿ ನೋಡಿ ಘನ ಸ್ಮರಿಸಿ
ಕರಗಿ ಹೋಯಿತು ಪಾಪದ ರಾಶಿ ||೩||
ಆ ಜಪವೆ ಗಾಯತ್ರಿ ಮಂತ್ರ
ಬೀಜಾಕ್ಷರವಿದು ಪವಿತ್ರ
ರಾಜಿಸುತಿಹುದು ಸರ್ವಾಂತರಾ
ನಿಜಗುಹ್ಯ ಋಷಿಮುನಿ ಗೋತ್ರ ||೪||
ಸದೋದಿತ ಗುರುಬೋಧ ಪೂರ್ಣ
ಇದಕಿಲ್ಲ ಉದಯಾಸ್ತಮಾನ
ಇದೇ ಮಹಿಪತಿ ಸಂಧ್ಯಾನ
ಸದಾ ನಿತ್ಯಾನುಸಂಧಾನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments