ಧನ್ಯ ನಾನಾದೆ ವಿಠಲನ ಕಂಡು

ಧನ್ಯ ನಾನಾದೆ ವಿಠಲನ ಕಂಡು

( ರಾಗ - ಧನ್ಯಾಸಿ(ಸೋಹನಿ) ಆದಿತಾಳ(ತೀನ್ ತಾಳ) ) ಧನ್ಯ ನಾನಾದೆ ವಿಠಲನ ಕಂಡು ಧನ್ಯ ನಾನಾದೆ ಧನ್ಯ ನಾನಾದೆ ಕಾಮನ ಪಿತ ಲಾವಣ್ಯಮೂರುತಿಯ ಕಣ್ಣಲಿ ನೋಡಿ ||ಪ|| ದೇವವರೇಣ್ಯ ಸದಾವಿನೋದಿ ವೃಂ- ದಾವನ ಸಂಚಾರ ಗೋಪನ ಕಂಡು ||೧|| ಮಂಗಳಾಂಗ ಕಾಳಿಂಗಮರ್ದನ ಮಾ- ತಂಗ ವರವಶದ ರಂಗನ ಕಂಡು ||೨|| ಹಾಟಕಾಂಬರ ಕಿರೀಟ ಸಾರಥಿ ತಾಟಕಾರಿ ವೈರಾಟನ ಕಂಡು ||೩|| ಚಿಂತಿತ ಫಲದ ಕೃತಾಂತನಾತ್ಮಜಾ- ದ್ಯಂತರಹಿತ ನಿಶ್ಚಿಂತನ ಕಂಡು ||೪|| ಮಾತುಳಾಂತಕ ವಿಧಾತಪಿತ ಜಗ- ನ್ನಾಥವಿಠಲ ವಿಖ್ಯಾತನ ಕಂಡು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು