ಮಹೀಪತಿದಾಸರು

ಕಾಲಕಾಲದಲಿ ಕೇಶವನೆನ್ನಿರೊ

---ಭೀಮ್ ಪಲಾಸ್ ( ದೇಸಾಕ್ಷಿ) ರಾಗ ತೀನ್ ತಾಳ ಕಾಲಕಾಲದಲಿ ಕೇಶವನೆನ್ನಿರೊ ಬಾಲಮುಕುಂದ ಮಾಧವನೆನ್ನಿರೊ ||ಪ|| ಉದಯಕಾಲದಲಿ ಅನಂತಮಹಿಮನೆನ್ನಿ ಮಧ್ಯಾಹ್ನದಲಿ ಪದ್ಮನಾಭನೆನ್ನಿ ಸಂಧ್ಯಾಸಾಯಂಕಾಲದಲಿ ಶ್ರೀಧರನೆನ್ನಿ ಸದಾಕಾಲದಲಿ ಶ್ರೀಹರಿಯೆನ್ನಿರೊ ||೧|| ಏಳುತ ಮತ್ಸ್ಯಾವತಾರ ಅಚ್ಯುತನೆನ್ನಿ ಮಲಗುತ ಶೇಷಶಯನನೆನ್ನಿರೊ ಹೇಳುತ ವಿಷ್ಣುವರಾಹವತಾರೆನ್ನಿ ಕೇಳುತ ಕೃಷ್ಣಾವತಾರನೆನ್ನಿ ||೨|| ನಡೆಯುತ ಸಗುಣನಿರ್ಗುಣ ಸರ್ವೋತ್ತಮನೆನ್ನಿ ನುಡಿಯುತ ನಾರಾಯಣನೆನ್ನಿರೊ ಮಾಡುತ ಸೃಷ್ಟಿನಿರ್ಮಿತ ದಾಮೋದರನೆನ್ನಿ ಕೂಡುತ ಕೂರ್ಮಾವತಾರನೆನ್ನಿ ||೩|| ಆಡುತ ಗರುಡವಾಹನ ತ್ರಿವಿಕ್ರಮನೆನ್ನಿ ಬೇಡುತ ಸ್ವಾಮಿ ವಾಮನನೆನ್ನಿರೊ ನೋಡುತ ವಾರಿಜನೇತ್ರ ಪ್ರಸಿದ್ಧನೆನ್ನಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುರು ನಾಮ ಸ್ಮರಿಸಿರೊ ಶ್ರೀಗುರುನಾಮ

( ರಾಗ ತೋಡಿ , ದೀಪಚಂದಿ ತಾಳ) ಗುರು ನಾಮ ಸ್ಮರಿಸಿರೊ ಶ್ರೀಗುರುನಾಮ ಸುರಮುನಿ ಜನರ ಪ್ರಿಯವಾದ ನಾಮ ||ಪ|| ಬ್ರಹ್ಮವಿಷ್ಣುರುದ್ರರಿಗಿದೇ ನಿಜನಾಮ ಪ್ರೇಮದಿಂದ ಸ್ಮರಿಸುವುದು ಇದೇ ನಾಮ ಸಮಸ್ತ ಲೋಕಕ್ಕೆ ಸಾರವಾದ ನಾಮ ನೇಮದಿಂದ ತಾರಿಸುವ ದಿವ್ಯನಾಮ ||೧|| ಸಕಲಾಗಮ ಪೂಜಿತಕಿದೇ ನಾಮ ಏಕೋಮಯವಾಗಿ ತೋರುವದಿದೇ ನಾಮ ಶುಕನಾಮ ದೇವರಿಗಿದೇ ನಿಜನಾಮ ಸುಖ ಸರ್ವರಿಗೆ ತೋರುವ ಗುರುನಾಮ ||೨|| ಕರ್ಮಬಂಧನ ಛೇದಿಸುವದಿದೇ ನಾಮ ಕರ್ಮದೋರಿ ಕೊಡುವುದು ಗುರುನಾಮ ಬ್ರಹ್ಮಾನಂದ ಸುಖದೋರುವಾನಂದ ನಾಮ ಧರ್ಮ ಜಾಗಿಸಿ ಕೊಡುವುದೀ ಗುರುನಾಮ ||೩|| ಅಜಮಿಳಗ ತಾರಿಸಿದುದೀ ನಾಮ ಗಜಭಯ ಪರಿಹರಿಸಿದಿದೇ ನಾಮ ಸುಜನರಿಗೆ ಪ್ರಸನ್ನವಾದ ನಾಮ ಮೂಜಗಕೆ ತಾ ಮುಖ್ಯವಾದ ಗುರುನಾಮ ||೪|| ಅಹಲ್ಯ ಉದ್ಧರಣ ಮಾಡಿದುದಿದೇ ನಾಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ನಂಬಿದವರಿಗೆ ಸರಿಯೆ ಜಗದೊಳಗೆ

(ಭೀಮಪಲಾಸ್ ರಾಗ , ತ್ರಿತಾಳ) ಹರಿ ನಂಬಿದವರಿಗೆ ಸರಿಯೆ ಜಗದೊಳಗೆ ಹರಿದಾಸಾದವಗೆ ಸಕಲ ಮಾನ್ಯವಾಗೆ ||ಪ|| ಹರಿಜ್ಞಾನ ಉಳ್ಳವಗೆ ದಣಿವಿಕೆಲ್ಲಿಹುದವಗೆ ಹರಿಧ್ಯಾನ ಉಳ್ಳವಗೆ ತಾ ದುರಿತವೆಲ್ಲಿಹುದವಗೆ ||೧|| ಹರಿನಾಮುಳ್ಳಅವಗೆ ನಾಸ್ತಿಕವೆಲ್ಲಿಹುದವಗೆ ಹರಿಯ ದಯ ಉಳ್ಳಅವಗೆ ದೈನ್ಯವು ಎಲ್ಲಿಹುದವಗೆ ಹರಿಯ ಭಾವಿಕಗೆ ಭವ ಉಂಟೆ ಅವಗೆ ಹರಿಭಕ್ತ್ಯುಳ್ಳಅವಗೆ ತಾ ಭವವೆಲ್ಲಿಹುದವಗೆ ||೩|| ಹರಿದಾಸರ ದಾಸಾದ ಮಹಿಪತಿಗೆ ಸರಿ ಉಂಟೆ ಪೂರ್ವಪುಣ್ಯದ ಫಲಶ್ರುತಿಗೆ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ವಾಮಿ ನೀನೆ ಸಾರ್ವಭೌಮ ಶ್ರೀರಘುರಾಮ

(ದೇಸ್ ರಾಗ ದಾದರಾ ತಾಳ ) ಸ್ವಾಮಿ ನೀನೆ ಸಾರ್ವಭೌಮ ಶ್ರೀರಘುರಾಮ ಸೋಮಶೇಖರಪ್ರಿಯ ದಿವ್ಯ ನಿನ್ನ ನಾಮ ||ಪ|| ಕಾಕುಸ್ಥತಿಲಕ ಕಾರುಣ್ಯನಿಧಿ ಕೃಪಾಲ ಪ್ರಕಟ ಪ್ರಖ್ಯಾತಲಿಹ ಸತ್ಯಶೀಲ ನಾಕಜರ ಸೆರೆಬಿಡಿಸ್ಯಾದೆ ಸಾನುಕೂಲ ಸಕಲಸುಖವೀವ ಮೂಲೋಕಪಾಲ ||೧|| ಖರದೂಷಣಾರಿ ಶರಣಾಗತರ ಸಹಕಾರಿ ಸರ್ವರಾಧಾರಿ ಕೋದಂಡಧಾರಿ ದುರಿತ ದುಷ್ಕೃತ ದುರುಳ ದುಷ್ಟಜನಸಂಹಾರಿ ವರಪೂರ್ಣವೀವ ಪರಮ ಉದಾರಿ ||೨|| ಅನುದಿನದಲಿ ನಿನ್ನ ನಡೆನುಡಿಗಳೊಂದವೆ ನೇಮ ಅನಂತಗುಣ ಪೂರ್ಣಾನಂದ ಮಹಮಹಿಮ ದೀನ ಮಹಿಪತಿ ಆತ್ಮಾರಾಮ ಪೂರಿತ ಕಾಮ ಭಾನುಕೋಟಿ ತೇಜ ಘನದಯ ನಿಸ್ಸೀಮ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ

(ಭೈರವಿ ರಾಗ ತೀನ್ ತಾಳ) ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ ಏಕಾಕಾರದಲೆನ್ನ ಹೊರಿಯಲಾರೇನಯ್ಯ ||ಪ|| ನೀರ ತೆರೆಯ ಕಡಿದು ಹೃದಯಕ ಸ್ವರಣದಿ ಭರದಿ ಮುಣುಗಿ ನೀರ ನಡಿಗಿ ದಣಿದೇನಯ್ಯ ||೧|| ವಾರಿಧಿ ಮಥನದಿ ಮೇರುಪರ್ವತವನ್ನು ಭಾರ ಬೆನ್ನಿಲಿ ಪೊತ್ತು ಬೆವರಿ ದಣಿದೇನಯ್ಯ ||೨|| ಧರೆಯ ಕದ್ದಸುರನ ಕೋರೆದಾಡಿಂದ ಸೀಳಿ ಭರದಿಂದ ಹೊಯಿದಾಡಿ ಹೋರಿ ದಣಿದೇನಯ್ಯ ||೩|| ತರಳಗೊಲಿದು ಪ್ರಕಟಿಸಿ ದೈತ್ಯನ ಸೀಳಿ ಕರುಳ್ವನಮಾಲೆಯ ಧರಿಸಿ ದಣಿದೇನಯ್ಯ ||೪|| ಧರಿಯ ಮೂರಡಿ ಮಾಡಿ ಎರೆದು ದಾನವ ಬೇಡಿ ನರನ ಪಾತಾಳಕೊತ್ತಿ ಬೆಳೆದು ದಣಿದೇನಯ್ಯ ||೫|| ಹಿರಿಯಳ ಶಿರವನು ಹರಿದು ಕತ್ತರಿಸಿತ್ತು ಕರದಲ್ಲಿ ಪರಶುವ ಪಿಡಿದು ದಣಿದೇನಯ್ಯ ||೬|| ಶಿರಗಳ ಚೆಂಡಾಡಿ ರಾವಣೇಂದ್ರಜಿತನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಎನ್ನಿರೊ

(ತಿಲಕಕಾಮೋದ ರಾಗ ದಾದರಾ ತಾಳ) ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಎನ್ನಿರೊ ತ್ರಾಹಿ ತಾರಕ ಬ್ರಹ್ಮನಿಗೆನ್ನಿರೋ ||ಪ|| ತ್ರಾಹಿ ಮತ್ಸ್ಯ ಕೂರ್ಮಾವತಾರಗೆನ್ನಿರೋ ತ್ರಾಹಿ ವರಾಹನರಸಿಂಹಗೆನ್ನಿರೋ ತ್ರಾಹಿ ವಾಮನ ಭಾರ್ಗವಗೆನ್ನಿರೋ ತ್ರಾಹಿ ರಾಮ ಕೃಷ್ಣಗೋಪಾಲಗೆನ್ನಿರೋ ||೧|| ತ್ರಾಹಿ ಬೌದ್ಧ ಕಲ್ಕ್ಯಾವತಾರಗೆನ್ನಿರೋ ತ್ರಾಹಿ ಸಗುಣ ನಿರ್ಗುಣಗೆನ್ನಿರೋ ತ್ರಾಹಿ ವಟಪತ್ರಶಯನಗೆನ್ನಿರೋ ತ್ರಾಹಿ ತ್ರೈಲೋಕ್ಯ ವಂದಿತಗೆನ್ನಿರೋ ||೨|| ತ್ರಾಹಿ ಹರಿಹರವಿರಂಚಿಗೆನ್ನಿರೋ ತ್ರಾಹಿ ಸುರವರ ನಿರಂಜನಗೆನ್ನಿರೋ ತ್ರಾಹಿ ಭಕ್ತ ಸಹಕಾರಗೆನ್ನಿರೋ ತ್ರಾಹಿ ಮಹಿಪತಿಪಾಲಗೆನ್ನಿರೋ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆರೆನಂಬು ಮನವೆ ಹರಿಯ

( ಪೂರಿಯಾ ರಾಗ , ರೂಪಕತಾಳ) ನೆರೆನಂಬು ಮನವೆ ಹರಿಯ ಸಿರಿಯನಾಳುವ ದೊರಿಯ ||ಪ|| ಸ್ಮರಿಸಿದಾಕ್ಷಣ ಕರಿಯ ಸೆರೆಯ ಬಿಡಿಸಿದನರಿಯ ಮರೆಯದೆ ಜಗದೊಳು ಹರಿಯ ಚರಣಕಮಲಯುಗ ಮರಿಯ ||೧|| ಧರಿಯೊಳು ದ್ರೌಪದಿ ಮೊರೆಯ ಹರಿ ಕೇಳಿದ ನೀನರಿಯ ಅರಿತು ನಡೆವನೀ ಪರಿಯ ಸಾರುತಿದೆ ಕೃತಿ ಖರೆಯ ||೨|| ಅರಿವಿನೊಳು ಮನ ಹರಿಯ ದೋರುವ ಘನ ಆಶ್ಚರಿಯ ತರಳ ಮಹಿಪತಿ ದೊರಿಯ ನೆರೆನಂಬಿರು ಈ ಪರಿಯ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರುಣಸಾಗರನಹುದೊ ಶರಣಜನರ ಪ್ರಿಯ

( ಜೀವನಪುರಿ ರಾಗ ತೀನ್ ತಾಳ) ಕರುಣಸಾಗರನಹುದೊ ಶರಣಜನರ ಪ್ರಿಯ ||ಪ|| ಕರಿರಾಜ ಮೊರೆ ಇಡಲು ಭರದಿಂದೊದಗಿ ಬಂದ್ಯೊ ದುರಿತ ಬಂದಡರಿದ ಅವಸರದೊಳು ನೀ ಪರಿಹರಿಸಿದ್ಯೊ ಶ್ರಮ ಪರಮದಯಾಳ ||೧|| ದುರಿತ ನಿರ್ಮಿಸಿದವನ ಬೆರಳಲಿ ಸೀಳಿದ್ಯೋ ಪೂರ್ಣ ಹರಿಯಂದಾ ಮಾತಿಗೆ ಕರುಣದಿಂದೊದಗಿ ನೀ ಪರಿಪರಿ ಕಾಯಿದ್ಯೊ ತರಳ ಪ್ರಹ್ಲಾದನ ||೨|| ಧರ್ಮಪತ್ನಿಯ ಸೆರಗ ಭರದಿಂದೆಳೆಯುವ ಸಮಯ ಸ್ಮರಣಿ ಒದಗಿ ಬಂದ್ಯೊ ಪರಿಪರಿ ವಸ್ತುವ ಪೂರಿಸಿದ್ಯೊ ಶ್ರೀಹರಿ ಕೃಷ್ಣ ಕೃಪಾಳು ||೩|| ಅರಗಿನ ಮನೆಯೊಳು ಮರೆಮೋಸ ಮಾಡಿರಲು ದೋರಿ ವಿವರದಿಂದ ಪೊರವೊಂದಿಸಿದ್ಯೋ ಸ್ವಾಮಿ ಶರಣಾಗತವತ್ಸಲ ಪಾಂಡವಪ್ರಿಯ ||೪|| ಹಲವು ಪರಿಯಲೆನ್ನ ಸಲಹುವ ಸದ್ಗುರುಪೂರ್ಣ ಬಾಲಕ ಮಹಿಪತಿಯ ಪಾಲಕ ನೀನಹುದೊ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನೇ ಪರಮಪಾವನೀ ನಿರಂಜಿನೀ

(ಬಾಗೇಶ್ರೀ ರಾಗ ತ್ರಿತಾಳ) ನೀನೇ ಪರಮಪಾವನೀ ನಿರಂಜಿನೀ ನೀನೇ ಪರಮಪಾವನೀ ||ಪ|| ಆ‌ದಿ ನಾರಾಯಣೀ ಸಾಧುಜನ ವಂದಿನೀ ಸದಾನಂದರೂಪಿಣೀ ಸದ್ಗತಿ ಸುಖದಾಯಿನೀ ||೧|| ಲಕ್ಷುಮಿ ರೂಪಿಣೀ ಸಾಕ್ಷಾತ್ಕಾರಿಣೀ ರಕ್ಷ ರಕ್ಷಾತ್ಮಿಣೀ ಅಕ್ಷಯ ಪದದಾಯಿನೀ ||೨|| ಅನಾಥರಕ್ಷಿಣೀ ದೀನೋದ್ಧಾರಿಣೀ ಅನಂತಾನಂತ ಗುಣೀ ಮುನಿಜನಭೂಷಿಣೀ ||೩|| ದಾರಿದ್ರ್ಯಭಂಜನೀ ದುರಿತವಿಧ್ವಂಸಿನೀ ಪರಮ ಸಂಜೀವಿನೀ ಸುರಮುನಿರಂಜನೀ ||೪|| ಸ್ವಾಮಿ ಶ್ರೀಗುರುವಿಣೀ ಬ್ರಹ್ಮಾನಂದರೂಪಿಣೀ ಮಹಿಪತಿ ಕುಲಸ್ವಾಮಿನೀ ನೀನೇ ಪರಮಪಾವನೀ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಮ್ಮ ಕುಲದೈವನೀತ ಬೊಮ್ಮನ ಪಡೆದಾತ

------ಖಂಬಾವತಿ ರಾಗ ತ್ರಿತಾಳ (ಝಪ್ ) ನಮ್ಮ ಕುಲದೈವನೀತ ಬೊಮ್ಮನ ಪಡೆದಾತ ಸಾಮಗಾಯನ ಪ್ರೀತ ಸ್ವಾಮಿ ಈತ ||ಪ|| ವೇದ ಉದ್ಧರನೀತ ಮೇದಿನಿಯ ಪೊತ್ತಾತ ಸಾಧುಜನವಂದಿತ ಸದ್ವಸ್ತು ಈತ ||೧|| ಧಾರುಣಿಯ ಗೆದ್ದಾತ ತರಳಗೊಲಿದಿಹನೀತ ವರಮುನಿಗಳ ದಾತ ಕರುಣಿ ಈತ ||೨|| ಮೂರು ಪಾದಳದಾತ ಪರಶುಧರನಹುದೀತ ಸುರಜನರ ಪೂಜಿತ ಸರ್ವೋತ್ತಮನೀತ ||೩|| ಪವನಸುತಗೊಲಿದಾತ ಮಾವನ ಮಡಹಿದಾತ ಭುವನತ್ರಯಲೀತ ದೇವನೀತ ||೪|| ಬತ್ತಲೆಯು ಸುಳಿದಾತ ಉತ್ತಮ ಹಯವನೇರಿದಾತ ಭಕ್ತರಿಗೆ ಹೊರೆವಾತ ಶಕ್ತನೀತ ||೫|| ಅಣುರೇಣುದೊಳು ಈತ ಅನುಕೂಲವಾದಾತ ಆನಂದ ಬ್ರಹ್ಮ ಅನಂತ ಈತ ||೬|| ಮಹಾಮಹಿಮನಹುದೀತ ಬಾಹ್ಯಂತರ ಪೂರಿತ ಮಹಿಪತಿಯ ಸಾಕ್ಷಾತ ವಸ್ತು ಈತ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು