ಮಹೀಪತಿದಾಸರು

ಬಿರುದು ದಾರದು ಗೋವಿಂದಾ

(ಸಾರಂಗ ರಾಗ ದೀಪಚಂದಿ ತಾಳ) ಬಿರುದು ದಾರದು ಗೋವಿಂದಾ ಅರಿತು ನೋಡಯ್ಯಾ ಶ್ರೀ ಹರಿಮುಕುಂದಾ ||ಪ|| ಪತಿಯಾ ಕಣ್ಣಿನ ಮುಂದೆಳೆಯಲು ಸತಿಯಾ ಗತಿಗಾತಿಹುದು ದಾರಿಗೆ ಕೊರತಿಯಾ ||೧|| ಒಡೆಯನಾ ಮುಂದ ಬಂಟಗಾಗಿರೆ ಕುಂದು ಒಡನೆ ಬೀಳುದು ತೊಡಕಾರಿಗೆ ಬಂದು ||೨|| ನಿನ್ನವನೆನಿಸಿ ಮಹಿಪತಿಗೆ ಪೂರ್ಣಾ ಇನ್ನಾರಿಸುವರೆ ಎನ್ನವಗುಣಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಯೋ ಕಾಯೋ ಕರುಣಾಕರ ಗೋವಿಂದಾ

( ಯಮನ್ ರಾಗ ತ್ರಿತಾಳ) ಕಾಯೋ ಕಾಯೋ ಕರುಣಾಕರ ಗೋವಿಂದಾ ಕಾಯೋ ನಮ್ಮ ಕೃಪಾಸಿಂಧು ಹರಿ ಮುಕುಂದಾ ||ಪ|| ಬೊಮ್ಮನ ಪಡದಾ ಪರಾಪರ ಧೊರಿಯೇ ಸಮ್ಯಕ್ ಜ್ಞಾನವನಿತ್ತು ಕಾಯೋ ಮುರಾರಿಯೆ ನಿಮ್ಮ ವಿನಾ ಅನ್ಯ ಪಥವ ನಾನರಿಯೆ ನಮ್ಮ ದೈವಾ ನೀನಹುದೋ ನರಹರಿಯೇ ||೧|| ಭವಭಯದಾ ದುರಿತಾ ಪರಿಹರಿಸೋ ಭಾವಭಕ್ತ್ರಿಯೊಳು ಮನಾ ಪೂರ್ಣವಿರಿಸೋ ಕಾವ ಕರುಣನೆ ನಿಮ್ಮ ದಯ ಬೀರಿಸೋ ದಿವಾರಾತ್ರಿಯಲಿ ನಿಮ್ಮ ಸ್ಮರಣಿಲಿರಿಸೋ ||೨|| ಕಾಯೋ ಕಾಯೋ ಕೊಟ್ಟು ನಿಮ್ಮ ನಿಜ ಧ್ಯಾನವಾ ಕಾಯೋ ಕರುಣಿಸಿ ಎನ್ನ ಜೀವನವಾ ಕಾಯೋ ದಯದಿಂದ ಎನ್ನ ಅಭಿಮಾನವಾ ಕಾಯೋ ನಿಜದಾಸ ಮಹಿಪತಿ ಪ್ರಾಣವಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಜಿಸು ಮನವೆ ಭಜಿಸು ಮನವೆ

(ಭೂಪ್ ರಾಗ ದಾದರಾ ತಾಳ) ಭಜಿಸು ಮನವೆ ಭಜಿಸು ಮನವೆ ಅಜಸುರಮುನಿವಂದಿತ ಪಾದ ಪೂಜಿಸು ನಿಜಸ್ವರೂಪ ನಿತ್ಯ ಸುಜನಮನೋಹರ ||ಪ|| ಪರಮಪುರುಷ ಪರಂಜ್ಯೋತಿ ಪಾರಾವಾರ ಹರಿಗೋಪಾಲ ಕರುಣಾಕೃಪಾಲ ಮೂರುತಿ ಸ್ವಾಮಿ ಸಿರಿಲೋಲನ ||ಅ.ಪ|| ಅತೀತ ಗುಣಾನಂತಮಹಿಮ ಪತಿತಪಾವನ ಪೂರ್ಣ ಸತತ ಸದೋದಿತವಾದ ಅತಿಶಯಾನಂದನ ||೧|| ಅವ್ಯಕ್ತ ಅವಿನಾಶ ಸು- ದಿಯ ಸುಪವಿತ್ರದಾಗರ ಘಮಘಮಿಸುವ ದಿವ್ಯತೇಜ ರವಿಕೋಟಿ ಕಿರಣನ ||೨|| ಅನಾಥಬಂಧು ಅನುದಿನ ಅಣುರೇಣು ತೃಣಪೂರ್ಣ ಪ್ರಾಣದೊಡೆಯ ಮಹಿಪತಿ ದೀನದಯಾಳುನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನೇ ದಯಾನಿಧಿಯು ಶ್ರೀಗುರುರಾಯ

-----ರಾಗ - ಕಲ್ಯಾಣಿ-(ಕಾಫಿ) ತೀನ್ ತಾಳ ನೀನೇ ದಯಾನಿಧಿಯು ಶ್ರೀಗುರುರಾಯ ನೀನೇ ದಯಾನಿಧಿಯು || ಧ್ರುವ || ಕರುಣದಿ ಕುಂತಿಯ ಪುತ್ರರಿಗೆ ಒಲಿದು ಕಾಳಗ ನಿರ್ಮಿಸಿ ಕೌರವರಳಿದು ಉಳಿಯದೆ ಇಳೆಯೊಳು ವಂಶವ ಸವರಿದ ಶೇಷಶಯನ ಶ್ರೀ ಕೇಶವ ನೀನೆ ||೧|| ನರಗೊಲಿದು ನರಕಾಸುರನ ಮರ್ದಿಸಿ ನಾರಗನೆಂದಜಮಿಳನ ನೀ ತಾರಿಸಿ ನಾರದಗೊಲಿದು ನಾಟ್ಯವನಾಡಿದ ನರಹರಿಯು ನಾರಾಯಣ ನೀನೆ ||೨|| ವೇದವ ಕದ್ದೊಯಿದಸುರನ ಸೀಳಿ ಮಚ್ಛವತಾರದ ರೂಪವ ತಾಳಿ ಮಾವನ ಕೊಂದ ಮಾನ್ಯರ ಮಡುಹಿದ ಮೈದುನಗೊಲಿದ ಶ್ರೀ ಮಾಧವ ನೀನೆ ||೩|| ಗೋಕುಲದಲಿ ಪುಟ್ಟಿ ಧರೆಯೊಳು ಬೆರಳಲಿ ಗೋವರ್ಧನ ಗಿರಿಯನೆತ್ತಿ ಗೋಕುಲ ಕಾಯ್ದ ಗೋಪಿಯರಿಗೊಲಿದ ಗೋಪಾಲಕೃಷ್ಣ ಗೋವಿಂದನು ನೀನೆ ||೪|| ಸೃಷ್ಟಿನೆಲ್ಲ ಬೆನ್ನಿಲಿ ತಾಳಿದ ಶೇಷನ ಸಂ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೊಂದಿ ಸುಖಿಸು ಹರಿಯ ಪಾದ

( ಭೀಮ ಪಲಾಸ್ ರಾಗ ಆದಿತಾಳ(ತೀನ್ ತಾಲ್ )) ಹೊಂದಿ ಸುಖಿಸು ಹರಿಯ ಪಾದ ||ಧ್ರುವ|| ನಾನಾ ಪುಣ್ಯ ನಿದಾನದಿ ಧರೆಯೊಳು ಮಾನವ ಜನುಮಕೆ ನೀನೀಗ ಬಂದು ಶ್ವಾನ ಸೂಕರ ಪರಿ ತಾ ನಿಜವರಿಯದೆ ಜ್ಞಾನಶೂನ್ಯವಾಗಿ ನೀನಿಹುದಣ್ಣ ||೧|| ಹಿಡಿವರೆ ಭ್ರಾಂತಿಯ ಜಡಿವರೆ ಮಮತೆಯ ನುಡಿವರೆ ಪುಸಿಯನು ಬಿಡುವರೆ ಸತ್ಯವ ಇಡುವರೆ ದುರ್ಗುಣ ಸಿಡುವರೆ ಬೋಧಕೆ ಕೆಡುವರೆ ಮರವಿಲಿ ಮಡಿವರೆ ವ್ಯರ್ಥ ||೨|| ಮೂರುದಿನದ ಸಂಸಾರದೊಳಗೆ ಕಂ- ಸಾರಿಯ ಭಕ್ತಿಯ ಸೇರಿ ಭವಾಬ್ಧಿಯ ಪಾರವಗಾಂಬುದು ಸಾರಸ್ವಹಿತ ಸಹ- ಕಾರ ಮಹಿಪತಿ ಸಾರಿದ ಬೋಧ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾಟ ಪಕಡೋ ಸೀಧಾ -( ಕನ್ನಡ , ಮರಾಠಿ, ಹಿಂದಿ - ತ್ರಿಭಾಷಾ ಪದ್ಯ )

( ಕೇದಾರ ರಾಗ ಆದಿತಾಳ) ಬಾಟ ಪಕಡೋ ಸೀಧಾ ನ ಪಡೆ ತೇಥೆ ಬಾಧಾ ಇದುವೆ ಗುರು ನಿಜಬೋಧಾ ಸ್ವಸುಖ ಸಮ್ಮತವಾದಾ ||ಪ|| ಬಂದಗೀ ಕರ್ತಾ ಕರಕೇ ಝೂಟಾ ತಿಳಿಯದು ನಿಜ ಘನದಾಟಾ ಮರ್ಮ ನ ಕಳತಾ ಕರಣೀ ಖೋಟಾ ಕೇಳಿ ಶ್ರೀಗುರುವಿಗೆ ನೀಟಾ ||೧|| ಜಾನ ಬೂಝಕರ ಚಲನಾ ಭಾಯಿ ಲಕ್ಷ್ಯ ಲಾವುನೀ ಗುರುಪಾಯಿ ಇದು ಎಲ್ಲರಿಗೆ ದೋರುದೇನಯ್ಯ ಹೇ ಸಮಝೇ ವಿರಲಾ ಕೋಯೀ ||೨|| ತಿಳಿದು ನೋಡಿ ಶ್ರೀಗುರು ಕೃಪೆಯಿಂದಾ ಹುವಾ ಖುದಾಕಾ ಬಂದ ಮಹಿಪತಿಗಾಯಿತು ಬಲು ಆನಂದಾ ಹರೀಮ್ಹಣಾ ಗೋವಿಂದಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದತ್ತ ದತ್ತೆನಲು ಹತ್ತಿ ತಾ ಬಹನು

( ಮಾಂಡ್ ರಾಗ ಕೇರವಾ ತಾಳ) ದತ್ತ ದತ್ತೆನಲು ಹತ್ತಿ ತಾ ಬಹನು ಚಿತ್ತದೊಳಗಾಗುವ ಮತ್ತೆ ತಾ ಶಾಶ್ವತನು ದತ್ತ ಉಳ್ಳವನ ಹತ್ತಿಲೇ ಇಹನು ವೃತ್ತಿ ಒಂದಾದರೆ ಹಸ್ತಗು(ಗೂ?)ಡುವನು ||೧|| ಎತ್ತ ನೋಡಿದರೆ ಮೊತ್ತವಾಗಿಹ ತಾಂ ಉತ್ತಮೋತ್ತಮರನೆತ್ತುವ ತಾಯಿ ತಾ ಅತ್ತಲಿತ್ತಾಗದೆ ಹತ್ತಿಲೆ ಸೂಸುತ ಮುತ್ತಿನಂತಹನು ನೆತ್ತಿಲಿ ಭಾಸುತ ||೨|| ದತ್ತನೆಂದೆನಲು ಕತ್ತಲೆ ಪೋಗುದು ಮೃತ್ಯು ಅಂಜುತಲಿ ಭೃತ್ಯನಾಗಿಹುದು ದತ್ತನಿಂದಧಿಕ ಮತ್ತು ತಾ ಒಂದು ಉತ್ತಮರಿಗೆ ತಾ ಸತ್ಯ ಭಾಸುದು ||೩|| ಒತ್ತಿ ಉನ್ಮನಿಯಾವಸ್ಥಿಯೊಳಾಡುವುದು ಸ್ವಸ್ತಮನಾದರೆ ವಸ್ತು ಕೈಗೂಡುವದು ಬಿತ್ತಿ ಮನ ಗುರುಭಕ್ತಿ ಮಾಡುವುದು ದತ್ತ ತನ್ನೊಳು ತಾನೆವೆ ಭಾಸುವುದು ||೪|| ದತ್ತ ದತ್ತೆಂದು ತಾ ಅರ್ತ ಮಹಿಪತಿಯ ಬೆರ್ತ ನೋಡಿದ ಮನವು ಸುಮೂರ್ತಿಯು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಯನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ

(ಬಾಗೇಶ್ರೀ ರಾಗ ಝಪ್ ತಾಳ) ಭಯನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ ||ಪ|| ಕ್ಲೇಶಪಾಶವ ಕತ್ತರಿಸಿ ದೋಷನಾಶವನು ಗೈಸಿ ಮೋಕ್ಷಿಸುವ ಕೇಶವ ನಿಮ್ಮ ನಾಮ ||೧|| ನರಕ ಘೋರದ ಘಟವೆಂಬ ನರಜನ್ಮದುರ್ಘಟ ತಾರಿಸುವ ನಾರಾಯಣ ನಿಮ್ಮ ನಾಮ ||೨|| ಮದ ಮತ್ಸರವ ಜರಿಸಿ ಭೇದಾಭೇದವ ಹರಿಸಿ ಸದ್ಗೈಸುತಿಹ ಮಾಧವ ನಿಮ್ಮ ನಾಮ ||೩|| ಗೋವಿಸಿಹ ವಿದ್ಯದ ಮಾಯಾ ಮೋಹವನಳಿಸಿ ಭವ ಹಿಂಗಿಸುವ ಗೋವಿಂದ ನಿಮ್ಮ ನಾಮ ||೪|| ಇಷ್ಟಾರ್ಥಗಳ ಕೊಟ್ಟು ಕಷ್ಟಾರ್ಥ ಪರಿಹರಿಸಿ ದೃಷ್ಟಾಂತದಲಿ ಹೊರೆವ ವಿಷ್ಣು ನಿಮ್ಮ ನಾಮ ||೫|| ಮೊದಲು ಮೂವಿಧಿಗಳ ಜರಿಸಿ ಸದಮಲ ಪುಣ್ಯ- ಪದವೀವ ಮಧುಸೂಧನ ನಿಮ್ಮ ನಾಮ ||೬|| ತ್ರಿವಿಧಾಧ್ಯಾತ್ಮ ಸ್ಥಿತಿಗತಿಯ ಈವ ಶಾಸ್ತ್ರಗಳನರಿಸಿ ಭಾವಭಕ್ತಿ ಈವ ತ್ರಿವಿಕ್ರಮ ನಿಮ್ಮ ನಾಮ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶರಣರಕ್ಷಕನಹುದೊ ಸಿರಿಯಲೋಲನೆ ಪೂರ್ಣ

(ಭೈರವಿ ರಾಗ ತೀನ್ ತಾಳ ) ಶರಣರಕ್ಷಕನಹುದೊ ಸಿರಿಯಲೋಲನೆ ಪೂರ್ಣ ||ಪ|| ವರ ಪಾಂಡವರ ಮಿತ್ರ ಕರುಣಾನಂದದ ಗಾತ್ರ ಅರವಿಂದನೇತ್ರ ಸುರಮುನಿಸ್ತೋತ್ರ ಹರಿ ನಿನ್ನ ಚರಿತ್ರ ಪರಮಪವಿತ್ರ ||೧|| ವಿದುರವಂದಿತ ದೇವ ಬುಧಜನ ಪ್ರಾಣಜೀವ ಯದುಕುಲೋದ್ಭವ ನೀನೇ ಶ್ರೀಮಾಧವ ಸದಾ ಸದ್ಗೈಸುವ ಆದಿಕೇಶವ ||೨|| ಆನಂದ ಘನಲೋಲ ನೀನೆ ಸರ್ವಕಾಲ ಅನಾಥರನುಕೂಲ ಶರಣಾಗತವತ್ಸಲ ದೀನ ಮಹಿಪತಿ ಸ್ವಾಮಿ ನೀನೇ ಕೃಪಾಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೇ

(ಬಾಗೇಶ್ರೀ ರಾಗ ಝಪ್ ತಾಳ) ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೇ ವಿಶ್ವವಂದಿತ ವಿಶ್ವನಾಥ ನೀನೆ ||ಪ|| ವಿಶ್ವಾತ್ಮಲ್ಯಾಡುವ ವಿಶ್ವಸ್ವರೂಪವು ನೀನೆ ವಿಶ್ವನಿರ್ಮಿತ ವಿಶ್ವಪಾಲ ನೀನೆ ವಿಶ್ವವುದ್ಧರಿಸುವ ವಿಶ್ವಪಾವನನೆ ವಿಶ್ವಲಿಹ ವಿಶ್ವೇಶ್ವರನು ನೀನೆ ||೧|| ವಿಶ್ವತೋಚಕ್ಷು ನೀ ವಿಶ್ವತೋಮುಖ ನೀನೆ ವಿಶ್ವತೋಬಾಹು ಸಾಕ್ಷಾತ್ ನೀನೆ ವಿಶ್ವಾಂತ್ರಸೂತ್ರನೆ ವಿಶ್ವಂಭವನು ನೀನೆ ವಿಶ್ವರಹಿತ ವಿರಾಜಿತನು ನೀನೆ ||೨|| ವಿಶ್ವಾಂತರಾತ್ಮ ಭಾಸ್ಕರ ಕೋಟಿತೇಜನೆ ವಿಶ್ವಾನಂದ ಘನಮಹಿಮ ನೀನೇ ವಿಶ್ವಾತ್ಮಹಂಸ ಮಹಿಪತಿ ಗುರುನಾಥನೆ ವಿಶ್ವಾಸಲೋಲ ವಿಶ್ವೇಶ ನೀನೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು