ಮಹೀಪತಿದಾಸರು

ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ

( ಭೈರವಿ ರಾಗ ಕೇರವಾ ತಾಳ) ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ ಪ್ರಾಣನಾಯಕನ ತಿಳಿಯುದೊಂದೆ ಜ್ಞಾನಾಭ್ಯಾಸ ಮಾಡಿ ||ಧ್ರುವ|| ಕರಿಮಣಿ ಒಂದಿಲ್ಲದೆ ಹೆಂಗಸಿಗೆ ಸರಮುತ್ತು ಯಾಕೆ ಸಾರ ಸಂಜೀವನಿಲ್ಲದೆ ನೂರು ಗಿಡಮೂಲಿಕೆ ಯಾಕೆ ನೆರೆ ಇಲ್ಲದೆ ಸಾಧುಸಜ್ಜನರ ಸರ್ವಬಳಗವ್ಯಾಕೆ ಪರಮ ತತ್ವಜ್ಞಾನ ಒಂದಿಲ್ಲದೆ ಸುರಿಯುವ ಮಾತಿನ್ನ್ಯಾಕೆ ||೧|| ಪ್ರಾಣವಿಲ್ಲದ ಸುಂದರವಾದ ಶರೀರವ್ಯಾಕೆ ಖೂನವಿಲ್ಲದೆ ತನ್ನ ನೂರುಕಾಲ ಬದುಕುವದ್ಯಾಕೆ ಸ್ವಾನುಭವದ ಸುಖ ನೆಲೆಗೊಳ್ಳದೆ ಒಣ ಡಂಭವ್ಯಾಕೆ ತಾನಾಗಿಹ ವಸ್ತು ದೊರಕಿಲ್ಲದೆ ನಾ ನೀನೆಂಬುವದ್ಯಾಕೆ ||೨|| ಶ್ರೀಹರಿ ಮಹಿಮೆಯ ಸೋಹ್ಯ ತಿಳಿಯದೆ ದೇಹವ್ಯಾಕೆ ಗುಹ್ಯಗುರುತವಿಲ್ಲದೆ ಸಾಯಸಬಡುವದ್ಯಾಕೆ ಸಾಹ್ಯಮಾಡುವ ಸದ್ವಸ್ತು ನೋಡದ ಕಣ್ಣು ನೋಟವ್ಯಾಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾಡಬಾರದು ನೋಡಿ ಕೇಡಿಗರ ಸಂಗ

(ರಾಗ ಮಾಂಡ್ ತಾಳ ಕೇರವಾ ) ಮಾಡಬಾರದು ನೋಡಿ ಕೇಡಿಗರ ಸಂಗ ಬೇಡಿ ಕಾಡದೆ ಬಾಹುದಭಿಮಾನ ಭಂಗ ||ಧ್ರುವ|| ಹೊಟ್ಟಿಯನು ಹೊಕ್ಕು ಕಟ್ಟಿಗೆ ತಂದು ನಿಲ್ಲಿಸುವರು ಗುಟ್ಟಿಲಿಹ ತುಟ್ಟಿಗೆ ತಾಹರು ಕೊಟ್ಟಿದೆನೆ ಬಾಯಾರಿ ಬಟ್ಟೆಗೆಳತಾಹರು ನಟ್ಟಸ್ನೇಹದ ಬಳಕಿ ತುಟ್ಟಿಸುವರು ||೧|| ಬೆಲ್ಲ ಬಾಯಲಿ ಸುರಿಸಿ ಎಲ್ಲರನು ಮೋಹಿಸುತ ಅಲ್ಲಹುದು ಮಾಡಿ ಗೆಲವಿಸಿಕೊಂಬರು ಸಲ್ಲದರ ಕೈವಿಡಿದು ಇಲ್ಲದನೆ ಸ್ಥಾಪಿಸುತ ಬಲ್ಲಿದರ ಭ್ರಮೆಗೆಡಿಸಿ ಅಣಕವಾಡುವರೋ ||೨|| ಏನನಾದರೆ ಕೊಟ್ಟು ಹೀನಮನುಜರ ಸಂಗ ಮನ್ನಣೆಯಲಿದ್ದು ತಾಂ ತ್ಯಜಿಸಿ ಬ್ಯಾಗ ದೀನಮಹಿಪತಿ ಪ್ರಾಣದೊಡೆಯ ಶ್ರೀನಿಧಿಚರಣ ನೆನೆವರ ನೆರೆಲಿದ್ದು ಸುಖಿಸುವುದು ಲೇಸು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು

(ಮಾಂಡ್ ರಾಗ ಕೇರವಾ ತಾಳ) ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು ವಿಷ್ಣುನರಿತವನೆ ವೈಷ್ಣವರು ||ಧ್ರುವ|| ಭಕ್ತಿರಸದೊಳು ಮುಣುಗಿ ಭಕ್ತಿಗೈದುವ ಗತಿಯ ಯುಕ್ತಿ ತಿಳಿದವನೆ ವೈಷ್ಣವನು ||೧|| ಹರಿ ಪರಂದೈವೆಂದು ಹರಿಯ ಕೊಂಡಾಡುತಲಿ ಹರಿಯ ನೆನೆಯುವವನೆ ವೈಷ್ಣವನು ||೨|| ಹರಿ ಓಂ ತತ್ಸದಿತಿಯೆಂಬ ಹರಿವಾಕ್ಯವನು ಅರಿತವನೆ ಪರಮ ವೈಷ್ಣವನು ||೩|| ಹರಿಧ್ಯಾನ ನೆಲೆಗೊಂಡು ಹರಿನಾಮ ಬಲಗೊಂಡು ಹರಿಯ ಸ್ಮರಿಸುವನೇ ವೈಷ್ಣವನು ||೪|| ಪರದೆ ಇಲ್ಲದಪಾರಬ್ರಹ್ಮಸ್ವರೂಪವನು ಗುರುತ ಕಂಡವನೇ ಪರಮ ವೈಷ್ಣವನು ||೫|| ಗುರುಕೃಪೆಯಿಂದ ಪರಗತಿ ಸಾಧನವು ಮುಟ್ಟೆ ಅರಿತು ಬೆರೆದವನೆ ಪರಮ ವೈಷ್ಣವನು ||೬|| ಮೂಲಮೂರುತಿಗಾಗಿ ಮೇಲ್ಗಿರಿಯನೇರುವ ಕೀಲ ತಿಳಿದವನೆ ವೈಷ್ಣವನು ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧನಲಂಪಟಗೆ ಎಲ್ಲಿಹುದು ಗುರುಕೃಪೆಯ ಜ್ಞಾನ

(ಸಾರಂಗ್ (ಮಾಲಕಂಸ್ ) ರಾಗ ಝಂಪೆತಾಳ) ಧನಲಂಪಟಗೆ ಎಲ್ಲಿಹುದು ಗುರುಕೃಪೆಯ ಜ್ಞಾನ ತನುಲಂಪಟಗೆ ಎಲ್ಲಿಹುದು ತನ್ನೊಳು ಖೂನ ||ಪ|| ವಿಷಯಲಂಪಟಗೆ ಎಲ್ಲಿಹುದು ತಾ ವಿರಕ್ತಿಯು ದೆಸೆಗೆಟ್ಟವಗೆ ಎಲ್ಲಿಹುದು ಯುಕ್ತಿಯು ಮುಸುಕಿದ ಮಾಯದವಗೆ ಲ್ಲಿಹುದು ಮುಕ್ತಿಯು ಹುಸಿಯಾಡುವವಗೆಲ್ಲಿಹುದು ಋಷಿಭಕ್ತಿಯು ||೧|| ಮರುಳಗುಂಟೆ ಅರಿವು ರಾಜಸನ್ಮಾನದ ತರಳಗುಂಟೆ ಭಯವು ಘಟಸರ್ಪದ ಎರಳೆಗುಂಟೆ ಖೂನ ಮೃಗಜಲವೆಂಬುವದ ಸೋರೆಗುಂಟೆ ಮಾತು ಚಾತುರ್ಯದ ||೨|| ಕನಸು ಕಾಂಬುವಗೆ ಎಲ್ಲಿಹುದು ತಾನಿಹ ಸ್ಥಾನ ಮನದಿಚ್ಛೆ ಇದ್ದವಗೆ ಎಲ್ಲಿಯ ಧ್ಯಾನ ದೀನಮಹಿಪತಿಸ್ವಾಮಿ ಕಾಣದವಗೆಲ್ಲಿ ಘನ ಅನುಭವಿಸಿಕೊಳದೆ ಜನ್ಮಕೆ ಬಂದಿದೇನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಹರಿ ಎನ್ನಿ ಹರಿವುದು ಪಾಪ

(ಮಾಂಡ್ ರಾಗ ಕೇರವಾ ತಾಳ) ಹರಿಹರಿ ಎನ್ನಿ ಹರಿವುದು ಪಾಪ ಧರೆಯೊಳು ಧರೆಯೊಳು ಕರಮುಗಿದು ಗುರುವಿಗೆ ಕೇಳುವುದು ಬಲು ಮೇಲು ||ಧ್ರುವ|| ಮೂಢಗೆ ಉಪಾಯ ಹೇಳಿದರೆ ತಿಳಿವದೆ ತಿಳಿವದೆ ಖೋಡಿಗೆ ಸುಲಕ್ಷಣದ ಮಾತು ಹೊಳೆವದೆ ||೧|| ಮೋಡದ ಮುಸುಕಿನಲಿ ಸೂರ್ಯನ ಬಿಸಿಲು ಬೀಳುದೆ ಬೀಳುದೆ ಗೂಢ ಗುರುವಿನ ಮಾತಿದು ನಾಡಿಗೆ ತಿಳಿವುದೆ ||೨|| ವಿಷ ಕಚ್ಚಿದ ಮನಕೆ ಸುಘನ ಭಾಸುದೆ ಭಾಸುದೆ ತುಸು ಝರಿ ಇಲ್ಲದ ಬಾವಿಲಿ ನೀರು ಸೂಸುದೆ ಸೂಸುದೆ ||೩|| ಹಸೆಗೆಟ್ಟಿಹ ಕುಕ್ಕಡಿನೂಲ್ಹಾಸಿಗೆ ಬಾಹುದೆ ಬಾಹುದೆ ಕಸಕಡ್ಡಿಲ್ಲದ ಮುಗಿಲೆಂದಿಗೆ ತಾ ಮಾಸುದೆ ||೪|| ಮೀಸಲ ಮನ ಒಂದಾದರೆ ಸಾಕು ತಿಳಕೊಳ್ಳಿ ತಿಳಕೊಳ್ಳಿ ಭಾಸ್ಕರ ಗುರುರಾಯನ ಶ್ರೀಪಾದಕೆ ಬಲಗೊಳ್ಳಿ ಬಲಗೊಳ್ಳಿ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದು ಕಾಯಲಾ ಭಕ್ತವತ್ಸಲಾ

(ತಿಲಂಗ ರಾಗ ದಾದರಾ ತಾಳ) ಇಂದು ಕಾಯಲಾ ಭಕ್ತವತ್ಸಲಾ ಬಂದು ಒದಗಿ ನಿಂದು ಭಯವ ದೂರ ಮಾಡೆಲಾ ||ಪ|| ಮೊರೆಯ ಕೇಳೆಲಾ ಹರಿಯೆ ನಿಶ್ಚಲಾ ಕರುಣದಿಂದ ಒದಗಿ ಬೇಗ ದುರಿತ ಹರಿಸೆಲಾ ||೧|| ಸುಳುಹುದೋರೆಲಾ ಹೊಳೆದು ವಿಠ್ಠಲಾ ಖಳರ ಕೈಯ ಸೆಳೆದುಕೊಂಡು ಬಲೆಯ ಬಿಡಿಸೆಲಾ ||೨|| ತಂದೆ ನೀನೆಲಾ ತಾಯಿ ನೀನೆಲಾ ಬಂಧು ಬಳಗ ದೈವ ಕುಲಕೋಟಿ ನೀನೆಲಾ ||೩|| ಹಿಂದೆ ಶರಣರ ಬಂದು ಕಾಯ್ದೆಲಾ ಸಂದು ವಿಘ್ನದೊಳು ಬಂದು ರಕ್ಷಿಸಿದೆಲಾ ||೪|| ಅಂದು ಒದಗಿ ನೀ ಬಂದು ಪರಿಯಲಾ ಇಂದು ಅಭಿಮಾನ ಕಾವ ಬಿರುದು ನಿನದೆಲಾ ||೫|| ದೀನಜನರಿಗೇ ದಾತ ನೀನೆಲಾ ಅಣುಗ ನಿನ್ನ ದಾಸನೆಂದು ಪ್ರಾಣನುಳುಹೆಲಾ ||೬|| ಪುಣ್ಯಪ್ರಭೆಯದಾ ಕಣ್ಣದೆರಿಯಲಾ ಧನ್ಯಗೈಸಿ ಮಹಿಪತಿ ಮಾತ ಮನ್ನಿಸೆಲಾ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯನರಿಯದ ಜನುಮ ಧರೆಯೊಳಗಧಮಾಧಮ

(ಭೀಮಪಲಾಸ್ ರಾಗ ಝಪ್ ತಾಳ ) ಹರಿಯನರಿಯದ ಜನುಮ ಧರೆಯೊಳಗಧಮಾಧಮ ಹರಿಯ ನೆನೆಯದ ನರನು ಪಾಮರನು ||ಧ್ರುವ|| ಹರಿಗೆ ನಮಿಸದ ಶಿರವು ತೋರುವ ಬೆಚ್ಚಿನ ತೆರವು ಹರಿಗೆ ವಂದಿಸದ್ಹಣೆಯು ಹುಳಕ ಮಣಿಯು ಹರಿಗೆ ಮುಗಿಯದ ಕೈಯು ಮುರಕ ಕೀಲಿಯ ಕೈಯು ಹರಿಯ ಕೊಂಡಾಡದ ನಾಲಿಗೆ ಒಡಕ ಸೊಲಿಗೆಯು ||೧|| ಹರಿಯ ಸ್ತುತಿಸದ ಮುಖವು ಚೀರುವ ಚಿಮ್ಮಡಿಯ ಮುಖವು ಹರಿಕಥೆ ಕೇಳದ ಕಿವಿಯು ಹಾಳುಗವಿಯು ಹರಿಯ ನೋಡದ ಕಣ್ಣು ತೋರುವ ನವಿಲ್ಗರಿಗಣ್ಣು ಹರಿಯ ಆರಾಧಿಸದ ಮನವು ಹೀನತನವು ||೨|| ಹರಿಯ ಸೇವೆಗೊದಗದ ಕಾಲು ಮುರಕ ಹೊರಸಿನ ಕಾಲು ಹರಿಗೆ ಮಾಡದ ಭಕ್ತಿ ಮೂಢಯುಕ್ತಿ ಹರಿಯೆ ಶ್ರೀಗುರುವೆಂದು ಗುರುವೆ ಪರದೈವೆಂದು ಸಲೆ ಮೊರೆಹೊಕ್ಕಿಹ ಮೂಢ ಮಹಿಪತಿಯು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಯೊ ಕರುಣಾಭಯ ಕೃದ್ಭಯನಾಶನ

(ಸೋಹನಿ ರಾಗ ಝಂಪೆತಾಳ ) ಕಾಯೊ ಕರುಣಾಭಯ ಕೃದ್ಭಯನಾಶನ ||ಧ್ರುವ|| ಕಂದ ಪ್ರಹ್ಲಾದಗಾಗಿ ಸಂಧಿಸೊದಗಿ ನಿಂತು ಬಂದು ರಕ್ಷಿಸಿದೆ ಪ್ರಾಣ ಚಂದವಾಗಿ ನೀ ||೧|| ದ್ರೌಪದಿಯ ಅಭಿಮಾನ ಕೃಪೆಯಿಂದ ನೀ ಪೂರ್ಣ ಉಪಾಯದಲಿಗಾಯ್ದ ಅಪಾರಮಹಿಮ ||೨|| ಕರಿಯ ಮೊರೆಯನು ಕೇಳಿ ಸೆರೆಯ ಬಿಡಿಸಿದೆ ಎಂದು ಮೊರೆಯ ಹೊಕ್ಕೆನು ನಿಮಗೆ ಹರಿಹರಿಯೆಂದು ||೩|| ಸ್ಮರಿಸಿದಾಕ್ಷಣ ಬಂದು ಕರುಣದಿಂದನ್ಯರಿಗೆ ಪರಿಪರಿಯಿಂದ್ಹೊರೆದೆ ವರದ ಮುನಿಗಳ ||೪|| ಶರಣು ಹೊಕ್ಕೆನು ನಿಮ್ಮ ತರಳ ಮಹಿಪತಿ ಪ್ರಾಣ ಹೊರೆದು ರಕ್ಷಿಸು ಎನ್ನ ಪರಮಪಾವನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ

(ಪಹಾಡಿ ರಾಗ ಕೇರವಾ ತಾಳ) ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ ಗುರ್ತು ಮಾಡಿಕೊಡುವ ಪೂರ್ಣ ಸದ್ಗುರು ಸಮರ್ಥ ||ಧ್ರುವ|| ಒಳ್ಳೆ ಒಳ್ಳೆ ವರು ಬಂದು ಕೇಳಿರೋ ನೀವಿನ್ನು ತಿಳಿದುಕೊಳ್ಳಿ ಇದಕೆ ಬೀಳುವುದಿಲ್ಲಾ ಹಣಹೊನ್ನು ಉಳ್ಳ ಬುದ್ಧಿಯಿಂದ ನೀವು ತೆರೆದು ನೋಡಿ ಕಣ್ಣು ಕೊಳ್ಳಲರಿಯದವನ ಬಾಯಾಗ ಬೀಳುದು ಮಣ್ಣು ||೧|| ಬ್ರಹ್ಮಸುಖ ಇದೇ ಇದೇ ನೋಡಿರೋ ಸಾಕ್ಷಾತ ಸಮ್ಯಕ್ ಜ್ಞಾನ ಪ್ಯಾಟಿಯೊಳು ತುಂಬಿ ತುಳುಕುತ್ತ ಒಮ್ಮನ ಮಾಡಿಕೊಂಡು ಬಂದು ಕೊಳ್ಯಮೃತ ನೇಮದಿಂದ ಕೊಳ್ಳಲಿಕ್ಕೆ ದೋರುದು ಸ್ವಹಿತ ||೨|| ಇಹಪರ ಸಾರ್ಥಕಿದೆ ಕೇಳಿರೊ ನೀವೆಲ್ಲ ದೇಹ ಅಭಿಮಾನಿಗಿದು ಸಾಧ್ಯವಾಗುವುದಲ್ಲ ಸೋಹ್ಯವರಿತು ಸೂರೆಗೊಂಡ ಮಹಿಮ ತಾ ಬಲ್ಲ ಗುಹ್ಯವಾಕ್ಯ ತಿಳಿದು ನೋಡಿ ಮಹಿಪತಿ ಸೊಲ್ಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ

(ಭೈರವಿ ರಾಗ ದಾದರಾ ತಾಳ) ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ ಮುಕ್ತಿಯೋಗ್ಯ ಮಾಡೊ ಭಾವಭೋಕ್ತ ಕೃಪಾನಿಧೆ ||ಧ್ರುವ|| ಧ್ಯಾನ ಮೌನ ಸ್ನಾನ ಸಂಧ್ಯಾ ಖೂನ ಗುರುತು ಅರಿಯೆ ನಾ ನ್ಯೂನ ಪೂರ್ಣ ನೋಡದೆನ್ನ ರಕ್ಷಿಸೋ ದಯಾನಿಧೆ ||೧|| ಹೀನದೀನ ಜ್ಞಾನಶೂನ್ಯ ದಾನಧರ್ಮ ಅರಿಯೆ ನಾ ನೀನೆ ಕಾಯಬೇಕು ಎನ್ನ ಕರುಣದಿ ಕೃಪಾನಿಧೆ ||೨|| ದುರುಳ ದುರ್ವಾಸನೆಯ ದುರಾಚಾರಿ ದುರಾತ್ಮ ನಾ ತರಣೋಪಾಯ ತೋರಿಸೆನ್ನ ಹೊರೆಯೊ ದಯಾನಿಧೆ ||೩|| ಅರುಹುಕುರುಹುನರಿಯದಿಹ ಮರುಳ ಮಂಕ ತರಳ ನಾ ಕರವ ಪಿಡಿದು ಧರೆಯೊಳಿನ್ನು ತಾರಿಸೊ ದಯಾನಿಧೆ ||೪|| ಆಶಪಾಶದಲ್ಲಿ ವಾಸವಾದ ದೋಷರಾಶಿ ನಾ ಭಾಸಿ ಪಾಲಿಸು ಪುಣ್ಯ ಪ್ರಕಾಶಿಸೊ ದಯಾನಿಧೆ ||೫|| ಏಸು ಜನ್ಮ ಮೋಸಹೋಗಿ ಘಾಸಿಯಾದ ಜೀವ ನಾ
ದಾಸ ಸಾಹಿತ್ಯ ಪ್ರಕಾರ
ಬರೆದವರು