ಹರಿಯನರಿಯದ ಜನುಮ ಧರೆಯೊಳಗಧಮಾಧಮ

ಹರಿಯನರಿಯದ ಜನುಮ ಧರೆಯೊಳಗಧಮಾಧಮ

(ಭೀಮಪಲಾಸ್ ರಾಗ ಝಪ್ ತಾಳ ) ಹರಿಯನರಿಯದ ಜನುಮ ಧರೆಯೊಳಗಧಮಾಧಮ ಹರಿಯ ನೆನೆಯದ ನರನು ಪಾಮರನು ||ಧ್ರುವ|| ಹರಿಗೆ ನಮಿಸದ ಶಿರವು ತೋರುವ ಬೆಚ್ಚಿನ ತೆರವು ಹರಿಗೆ ವಂದಿಸದ್ಹಣೆಯು ಹುಳಕ ಮಣಿಯು ಹರಿಗೆ ಮುಗಿಯದ ಕೈಯು ಮುರಕ ಕೀಲಿಯ ಕೈಯು ಹರಿಯ ಕೊಂಡಾಡದ ನಾಲಿಗೆ ಒಡಕ ಸೊಲಿಗೆಯು ||೧|| ಹರಿಯ ಸ್ತುತಿಸದ ಮುಖವು ಚೀರುವ ಚಿಮ್ಮಡಿಯ ಮುಖವು ಹರಿಕಥೆ ಕೇಳದ ಕಿವಿಯು ಹಾಳುಗವಿಯು ಹರಿಯ ನೋಡದ ಕಣ್ಣು ತೋರುವ ನವಿಲ್ಗರಿಗಣ್ಣು ಹರಿಯ ಆರಾಧಿಸದ ಮನವು ಹೀನತನವು ||೨|| ಹರಿಯ ಸೇವೆಗೊದಗದ ಕಾಲು ಮುರಕ ಹೊರಸಿನ ಕಾಲು ಹರಿಗೆ ಮಾಡದ ಭಕ್ತಿ ಮೂಢಯುಕ್ತಿ ಹರಿಯೆ ಶ್ರೀಗುರುವೆಂದು ಗುರುವೆ ಪರದೈವೆಂದು ಸಲೆ ಮೊರೆಹೊಕ್ಕಿಹ ಮೂಢ ಮಹಿಪತಿಯು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು