ದಶಾವತಾರ

ತರಳೆ ರನ್ನೆ ಕಪ್ಪು ಮೈಯವ ಯಾತರ ಚಲುವನೇ ?

ತರಳೆ ರನ್ನೆ ಕಪ್ಪು ಮೈಯವ ಯಾತರ ಚಲುವನೇ ? ಕರಿಯ ಜಟೆಯ ಜೋಗಿಗಿಂತ ಉತ್ತಮನಲ್ಲವೇನೆ ? ಜಲಧಿಯೊಳು ವಾಸವೇನೆ ಮನೆಗಳು ಇಲ್ಲವೆ ? ಲಲನೆ ಕೇಳು ಕಾಡಿಗಿಂತ ಲೇಸು ಅಲ್ಲವೇ ? ಮಂದರ ಗಿರಿಯ ಪೊತ್ತಿಹುದು ಏನು ಚಂದವೇ ? ಕಂದನ ಒಯ್ದು ಅಡವಿಯಲ್ಲಿಡುವುದು ಯಾವ ನ್ಯಾಯವೇ ?
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಳಿಯ ಮರ್ದನ ರಂಗಗೆ ಹೇಳೆ

ಪಲ್ಲವಿ: ಕಾಳಿಯ ಮರ್ದನ ರಂಗಗೆ ಹೇಳೆ ಗೋಪಮ್ಮ ಬುದ್ಧಿ ಕೇಳಲೊಲ್ಲನು ಎನ್ನ ಮಾತನು ಚರಣ: ದಿಟ್ಟ ನೀರೊಳು ಕಣ್ಣ ಮುಚ್ಚನೆ ಹೋಗಿ ಬೆಟ್ಟಕೆ ಬೆನ್ನಾತು ನಿಂತನೆ ಸಿಟ್ಟಲಿ ಕೋರೆದಾಡೆ ತಿವಿದನೆ ಅಹ ಗಟ್ಟಿ ಉಕ್ಕನು ಒಡೆದು ಬಂದನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇವನ ಪಿಡಿದುಕೊಂಡು ಹೋಗೆಲೋ ಜೋಗಿ

ಇವನ ಪಿಡಿದುಕೊಂಡು ಹೋಗೆಲೋ ಜೋಗಿ ಇವ ನಮ್ಮ ಮಾತು ಕೇಳದೆ ಪುಂಡನಾದ ||ಪ|| ಆಡುತಾಡುತ ಹೋಗಿ ನೀರಲ್ಲಿ ಮುಳುಗಿದ | ಬೇಡವೆಂದರೆ ಬೆಟ್ಟ ಬೆನ್ನಲ್ಲಿ ಪೊತ್ತ | ದಾಡೆಯ ಮೇಲೆ ತಾ ಧಾರುಣಿ ನೆಗಹಿದ | ನೋಡಿದವರಿಗೆ ಬಾಯ್ ತೆರೆದಂಜಿಸಿದ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಳಲೊಲ್ಲನೆ ಎನ್ನ ಮಾತನು

ಪಲ್ಲವಿ: ಕೇಳಲೊಲ್ಲನೆ ಎನ್ನ ಮಾತನು ರಂಗ ಕಾಳಿಯಮರ್ದನ ಕೃಷ್ಣಗೆ ಪೇಳೆ ಗೋಪ್ಯಮ್ಮ ಬುದ್ಧಿ ಚರಣಗಳು: ಬಿಟ್ಟ ಕಂಗಳ ಮುಚ್ಚಲೊಲ್ಲನೆ ಬೇಗ ಬೆಟ್ಟಕ್ಕೆ ಬೆನ್ನೊಡ್ಡಿ ನಿಂತನೆ ಸಿಟ್ಟಿಸಿ ಕೋರೆ ಹಲ್ಲ ತೋರ್ದನೆ ಅತಿ ಗಟ್ಟಿ ಉಕ್ಕಿನ ಕಂಭವನೊಡೆದು ಬಂದನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧರಣಿಗೆ ದೊರೆಯೆಂದು ನಂಬಿದೆ

ಪಲ್ಲವಿ: ಧರಣಿಗೆ ದೊರೆಯೆಂದು ನಂಬಿದೆ ಇಂಥ ಪರಮ ಲೋಭಿಯೆಂಬುದರಿಯೆ ಶ್ರೀ ಹರಿಯೆ ಚರಣಗಳು: ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ ಓಡಿ ನೀರೊಳು ಸೇರಿಕೊಂಡೆ ಬೇಗ ಹೇಡಿಯ ತೆರದಲಿ ಮೋರೆಯ ತೋರದೆ ಓಡಿ ಅರಣ್ಯದಿ ಮೃಗಗಳ ಸೇರಿದೆ ಬಡವರ ಬಿನ್ನಹ ಲಾಲಿಸದೆ ಹಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರಯ್ಯ ವೆಂಕಟರಮಣ

ಪಲ್ಲವಿ: ಬಾರಯ್ಯ ವೆಂಕಟರಮಣ ಭಾಗ್ಯದ ನಿಧಿಯೆ ಅನುಪಲ್ಲವಿ: ಬಾರೊ ವಿಶ್ವಂಭರನೇ ಬಾರೋ ಭಕ್ತರ ಸಲಹುವನೇ ಬಾರೋ ಚರಣಗಳು: ೧: ವೇದ ಗೋಚರನೇ ಬಾರೋ ಆದಿ ಕಚ್ಛಪ ನೀ ಬಾರೋ ಮೋದಸೂಕರ ಬಾರೋ ಸದಯಾ ನರಸಿಂಹ ಬಾರೋ ೨: ವಾಮನ ಭಾರ್ಗವನೆ ಬಾರೋ ರಾಮಕೃಷ್ಣನೆ ನೀ ಬಾರೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಪ್ಪಪ್ಪಾ ನೀ ನೋಡಪ್ಪ

೧. ಅಪ್ಪಪ್ಪಾ ನೀ ನೋಡಪ್ಪ ಮೈಯಲ್ಲವು ಕೆಸರಪ್ಪ ಕಪ್ಪು ಬಡಿವುದೇನಪ್ಪ ತೊಳೆವೆನೊ ನೀ ಬಾರಪ್ಪ ೨: ಬಾರಪ್ಪ ನೀ ಬಾರಪ್ಪ ಭಾರ ಹೊರುವುದೇನಪ್ಪ ಭಾರವೆಲ್ಲ ನಿನದಪ್ಪಾ ಸುರರ ಕಾವ ಎನ್ನಪ್ಪ ೩: ಎನ್ನಪ್ಪ ಎನ್ನಪ್ಪ ಮೋರೆ ಸೊಟ್ಟು ಯಾಕಪ್ಪ
ದಾಸ ಸಾಹಿತ್ಯ ಪ್ರಕಾರ
ಬರೆದವರು