ಬಾರಯ್ಯ ವೆಂಕಟರಮಣ

ಬಾರಯ್ಯ ವೆಂಕಟರಮಣ

ಪಲ್ಲವಿ: ಬಾರಯ್ಯ ವೆಂಕಟರಮಣ ಭಾಗ್ಯದ ನಿಧಿಯೆ ಅನುಪಲ್ಲವಿ: ಬಾರೊ ವಿಶ್ವಂಭರನೇ ಬಾರೋ ಭಕ್ತರ ಸಲಹುವನೇ ಬಾರೋ ಚರಣಗಳು: ೧: ವೇದ ಗೋಚರನೇ ಬಾರೋ ಆದಿ ಕಚ್ಛಪ ನೀ ಬಾರೋ ಮೋದಸೂಕರ ಬಾರೋ ಸದಯಾ ನರಸಿಂಹ ಬಾರೋ ೨: ವಾಮನ ಭಾರ್ಗವನೆ ಬಾರೋ ರಾಮಕೃಷ್ಣನೆ ನೀ ಬಾರೋ ಪ್ರೇಮದ ಬುದ್ಧನೆ ಬಾರೋ ಸ್ವಾಮಿ ಕಲ್ಕಿ ನೀ ಬಾರೋ ೩: ಅರವಿಂದ ನಾಭ ಬಾರೋ ಸುರರ ಪ್ರಭುವೇ ಬಾರೋ ಪುರುಹೂತ ವಂದ್ಯ ಬಾರೋ ಪುರಂದರ ವಿಠ್ಠಲ ಬಾರೋ
ದಾಸ ಸಾಹಿತ್ಯ ಪ್ರಕಾರ
ಬರೆದವರು