ಪದ / ದೇವರನಾಮ

ದಾಸರ ಪದಗಳು

ಶರಣು ಶರಣು (೨) (ವಿನಾಯಕ ಸ್ತೋತ್ರ)

( ರಾಗ ಸೌರಾಷ್ಟ್ರ ಚಾಪುತಾಳ) ಶರಣು ಶರಣು ||ಪ|| ಶರಣು ಬೆನಕನೆ ಕನಕರೂಪನೆ ಕಾಮಿನಿಸಂಗದೂರನೇ || ಶರಣು ಸಾಂಬನ ಪ್ರೀತಿಪುತ್ರನೆ ಶರಣುಜನರಿಗೆ ಮಿತ್ರನೆ ||ಅ|| ಏಕದಂತನೆ ಲೋಕಖ್ಯಾತನೆ ಏಕವಾಕ್ಯಪ್ರವೀಣನೇ ಏಕವಿಂಶತಿ ಪತ್ರಪೂಜಿತನೇಕ ವಿಘ್ನವಿನಾಯಕ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶರಣು ಶರಣು (೧)

( ರಾಗ ನಾಟ ಝಂಪೆತಾಳ) ಶರಣು ಶರಣು ||ಪ|| ಶರಣು ಸಕಲೋದ್ಧಾರ ಅಸುರಕುಲಸಂಹಾರ ಅರಸುದಶರಥಬಾಲ ಜಾನಕೀಲೋಲ ||ಅ|| ಈ ಮುದ್ದು ಈ ಮುಖವು ಈ ತನುವಿನ ಕಾಂತಿ ಈ ಬಿಲ್ಲು ಈ ಬಾಣ ಈ ನೀತಿ ಭಾವ ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ ಆವ ದೇವರಿಗುಂಟು ಭೂಲೋಕದೊಳಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶರಣಂಬೆ ವಾಣಿ ಪೊರೆಯ ಕಲ್ಯಾಣಿ

( ರಾಗ ಕಲ್ಯಾಣಿ ಆದಿತಾಳ) ಶರಣಂಬೆ ವಾಣಿ ಪೊರೆಯ ಕಲ್ಯಾಣಿ ||ಪ|| ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ || ಜಗದೊಳು ನಿಮ್ಮ ಪೊಗಳುವೆನಮ್ಮ ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ || ಪಾಡುವೆ ಶ್ರುತಿಯ ಬೇಡುವೆ ಮತಿಯ ಪುರಂದರವಿಠಲನ ಸೋದರಸೊಸೆಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ

( ರಾಗ ಕಲ್ಯಾಣಿ ಆದಿತಾಳ) ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ ಅ- ಸತ್ಯದಲಿ ಮಾಡುವ ಕರ್ಮ ವ್ಯರ್ಥ || ಪ|| ಅಪ್ಪಳಿಸಿ ಪರರ ಒಡವೆಗಳ ತಂದುಂಡು ತಾ- ನೊಪ್ಪದಿಂದುಪವಾಸ ವ್ರತವ ಮಾಡಿ ತಪ್ಪದಲೆ ಸ್ವರ್ಗವನು ಸೂರೆಗೊಂಬುವನೆಂಬೆ ಸರ್ಪಗಳು ಮಾಡಿದ ಅಪರಾಧವೇನಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಣ್ಣವನಿವನಾರಮ್ಮ

( ರಾಗ ಶಂಕರಾಭರಣ ಆದಿತಾಳ) ಸಣ್ಣವನಿವನಾರಮ್ಮ ಪೇಳೆಲೆ ತಂಗಿ ||ಪ|| ಕಾಣದ ಮಾಣಿಕ್ಯವ ಕಂಡೆನು ಇಂದಿಲ್ಲಿ || ಒಬ್ಬರ ಸುತನಲ್ಲ ಭಕ್ತವತ್ಸಲನಕ್ಕ ಉಬ್ಬಿ ನೆನೆವರಲಿ ಸುತ್ತಿ ನಲಿದಾಡುವ || ಭವಾದಿಗಳ ತಾತ ಭವಕೆ ತಾರಕನೀತ ಧವಳಗಂಗೆಯ ಪೆತ್ತ ಶ್ರೀವತ್ಸದಿಂದೊಪ್ಪುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಂಸಾರವೆಂಬಂಥ ಭಾಗ್ಯವಿರಲಿ

( ರಾಗ ಕಾಂಭೋಜ ಅಟತಾಳ) ಸಂಸಾರವೆಂಬಂಥ ಭಾಗ್ಯವಿರಲಿ ||ಪ|| ಕಂಸಾರಿ ನೆನವೆಂಬ ಸೌಭಾಗ್ಯವಿರಲಿ ||ಅ|| ತಂದೆ ನೀನೇ ಕೃಷ್ಣ ತಾಯಿ ಇಂದಿರೆದೇವಿ ಪೊಂದಿದ ಅಣ್ಣನು ವನಜಸಂಭವನು ಇಂದುಮುಖಿ ಸರಸ್ವತೀದೇವಿಯೆ ಅತ್ತಿಗೆಯು ಎಂದಿಂದಿಗೂ ವಾಯುದೇವರೆ ಗುರುವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಲ್ಲದೊ ಕೃಷ್ಣ ಸಲ್ಲದೊ

( ರಾಗ ಕಲ್ಯಾಣಿ ಅಟತಾಳ) ಸಲ್ಲದೊ ಕೃಷ್ಣ ಸಲ್ಲದೊ ||ಪ|| ಸಿರಿವಲ್ಲಭ ಇದ ನೋಡಿ ಪಾಲಿಸಬೇಕೋ ||ಅ|| ಬಿತ್ತಿ ಬೆಳೆಸಿ ತಲೆಯೆತ್ತಿದ ಪೈರನ್ನು ಮತ್ತೆ ತುರುವಿಂಡು ಬಿಟ್ಟು ಮೆಲ್ಲಿಸುವದು || ಸಾವಿರ ಹೊನ್ನಿಕ್ಕಿ ಸದನವ ಸಾಧಿಸಿ ಪಾವಕನುರಿಗೆ ನೀನೊಪ್ಪಿಸಿ ಕೊಡುವುದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾಲಿಗರಿನ್ನು ಬಿಡುವರೆ

( ರಾಗ ದರ್ಬಾರ್ ಆದಿತಾಳ) ಸಾಲಿಗರಿನ್ನು ಬಿಡುವರೆ ||ಪ|| ಬಲು ಜಾಲಗಳನು ಮಾಡಿ ಕಾಲ ನೂಕಿ ಕಳೆದರೆ ||ಅ|| ಜಲದೊಳು ಪೊಕ್ಕಡಗಿರಲು , ಬಲು ಗಿರಿಯನೆ ಪೊತ್ತು ಭಾರವೆಂದೆನಲು ತಲೆ ಕುಕ್ಕಿ ನೆಲಕೆ ಬಗ್ಗಿರಲು ಹಲ್ಲ ಕಿರಿಕಿರಿದರಿಯೆಂದೆನಲು || ಕಾಯವ ವಂಚಿಸಿಕೊಳಲು , ಬಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾಕು ಸಂಸಾರ ತೆರೆಯ ನೂಕಲಾರೆನು

( ರಾಗ ಹಿಂದುಸ್ತಾನ್ ದೇಶಿ ರೂಪಕತಾಳ) ಸಾಕು ಸಂಸಾರ ತೆರೆಯ ನೂಕಲಾರೆನು ಬೇಕು ನಿನ್ನ ಚರಣಕಮಲ ಬೇರನ್ಯತ್ರ ಗತಿಯ ಕಾಣೆ ||ಪ|| ಹುಟ್ಟಿದಂದಿನಿಂದ ಕಷ್ಟಪಟ್ಟು ಕಂಗೆಟ್ಟು ಮನದಿ ಗುಟ್ಟು ಪೇಳ್ವೆನಯ್ಯ ಒಂದಿಷ್ಟು ಲಾಲಿಸೊ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾಕು ಸಂಸಾರ ನಮಗಿನ್ನೇತರ

( ರಾಗ ಆನಂದಭೈರವಿ ಆದಿತಾಳ) ಸಾಕು ಸಂಸಾರ ನಮಗಿನ್ನೇತರ ಒಗತನ ||ಪ|| ಲೋಕದೊಳಗೆ ಎನ್ನ ಬೇಕೆಂಬುವರಿಲ್ಲ ವಿವೇಕಿ ಪುರುಷ ಪರವಶನಾದರೆ ಏತರ ಸಂಸಾರ ||ಅ|| ಕಾಮವೆಂಬೊ ನೆಗೆಹೆಣ್ಣು ಎನ್ನ ಕಟ್ಟಿ ಆಳುತಾಳೆ ಕ್ರೋಧವೆಂಬೊ ಸವತಿ ಕೊಲ್ಲುತಾಳೆ , ಏತರ ಒಗತನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು