ಕನಕದಾಸರು

ಕನಕದಾಸರ ಕುರಿತು

ಮುಂಡಿಗೆ - 3

ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮ ||ಪ|| ತುಂಬಿ ನಾಳತುದಿ ತುಂಬಿ ಭಾನು ಪ್ರಭೆ ಚಂದಮಾಮ ||ಅ.ಪ|| ಕದರು ಗಾತರ ಕಂಬ ತೆಕ್ಕೆ ಗಾತರ ಹೂವು ಚಂದಮಾಮ| ಆನೆ ಗಾತರ ಕಾಯಿ ಒಂಟೆ ಗಾತರ ಹಣ್ಣು ಚಂದಮಾಮ ||೧|| ಕಾಲಿಲ್ಲದಾತನು ಹತ್ತಿದನಾ ಮರವನು ಚಂದಮಾಮ|

ಮುಂಡಿಗೆ -2

ಮುಂಡಿಗೆ -2 ಓಹೋ ಎನ ಜೀವ ಮೈಯೆಲ್ಲ ನವಗಾಯ ||ಪ|| ಗಾಯ ಕಟ್ಟುವರಿಲ್ಲ ಗಾಳಿ ಹಾಕುವರಿಲ್ಲ. ||ಅ.ಪ.|| ಮಾಡಿಲ್ಲ ಮಳೆಯಿಲ್ಲ ಮರದ ಮೇಲೆ ನೀರ ಕಂಡೆ ಕಾಡು ಸುಡುವುದ ಕಂಡೆ ಬೂದಿಯ ಕಾಣಲಿಲ್ಲ. ||೧|| ಬಿತ್ತಲಿಲ್ಲ ಬೆಳೆಯಲಿಲ್ಲ ನೆಟ್ಟು ನೀರ ತೋರಲಿಲ್ಲ

ಆರು ಬದುಕಿದರಯ್ಯ

ರಾಗ : ಮುಖಾರಿ ತಾಳ : ತ್ರಿಪುಟ ಆರು ಬದುಕಿದರಯ್ಯ ಹರಿ ನಿನ್ನ ನಂಬಿ || ಪಲ್ಲವಿ || ತೋರು ಈ ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ || ಅನುಪಲ್ಲವಿ || ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ ಸುಲಭದಲಿ ಕೌರವರ ಮನೆಯ ಮುರಿದೆ ನೆಲವ ಬೇಡಲು ಹೋಗಿ ಬಲಿಯ ಭೂಮಿಗೆ ತುಳಿದೆ

ನಮ್ಮಮ್ಮ ಶಾರದೆ

ರಾಗ : ಮೋಹನ ತಾಳ : ಅಟ ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ || ಪಲ್ಲವಿ || ಕಮ್ಮ ಗೋಲನ ವೈರಿಸುತನಾದ ಸೊಂಡಿಲ ಹೆಮ್ಮಯ್ಯ ಗಣನಾಥನೆ || ಅನುಪಲ್ಲವಿ || ಮೋರೆಕಪ್ಪಿನ ಭಾವ ಮೊರದಗಲ ಕಿವಿ ಕೋರೆದಾಡಿಯವನ್ಯಾರಮ್ಮ ಮೂರು ಕಣ್ಣಿನ ಸುತ ಮುರಿದಿಟ್ಟ ಚಂದ್ರನ

ವರವ ಕೊಡು ಎನಗೆ ವಾಗ್ದೇವಿ

ರಾಗ : ಕಲ್ಯಾಣಿ ತಾಳ : ರೂಪಕ ವರವ ಕೊಡು ಎನಗೆ ವಾಗ್ದೇವಿ ನಿನ್ನ ಚರಣ ಕಮಲಗಳ ದಯಮಾಡು ದೇವಿ || ಪಲ್ಲವಿ || ಶಶಿಮುಖದ ನಸುನಗೆಯ ಬಾಲೆ ಎಸೆವ ಕರ್ಣದ ಮುತ್ತಿನೋಲೆ ನಸುವ ಸುಪಲ್ಲ ಗಣಶೀಲೆ |