ವರವ ಕೊಡು ಎನಗೆ ವಾಗ್ದೇವಿ
ರಾಗ : ಕಲ್ಯಾಣಿ ತಾಳ : ರೂಪಕ
ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣ ಕಮಲಗಳ ದಯಮಾಡು ದೇವಿ || ಪಲ್ಲವಿ ||
ಶಶಿಮುಖದ ನಸುನಗೆಯ ಬಾಲೆ
ಎಸೆವ ಕರ್ಣದ ಮುತ್ತಿನೋಲೆ
ನಸುವ ಸುಪಲ್ಲ ಗಣಶೀಲೆ |
ದೇವಿ ಬಿಸಜಾಕ್ಷಿ ಎನ್ನ ಹೃದಯದೊಳು ನಿಂದಳೆ || ೧ ||
ಇಂಪು ಸೊಂಪಿನ ಚಂದ್ರಬಿಂಬೆ
ಕೆಂಪು ತುಟಿಗಳ ನಾಸಿಕದ ರಂಭೆ
ಚೊಂಪು ಮದನ ಸಿಂಗಾಡಿ ಪೂರ್ಣ ಶಕ್ತಿ ಬೊಂಬೆ |
ಒಳ್ಳೆ ಸಂಪಿಗೆ ಮುಡಿಗಿಟ್ಟು ರಾಜಿಪ ಶಾರದಾಂಬೆ || ೨ ||
ರವಿಕೋಟಿ ತೇಜ ಪ್ರಕಾಶೆ | ಮಹಾ
ಕವಿಜನ ಹೃತ್ಕಮಲವಾಸೆ
ಅವಿರಳಪುರಿ ಕಾಗಿನೆಲೆಯಾದಿ ಕೇಶವನ
ಸುತನೀಗೆ ಸನ್ನುತ ರಾಣಿ ವಾಸೆ || ೩ ||
Forums
- Log in to post comments
ಉ: ವರವ ಕೊಡು ಎನಗೆ ವಾಗ್ದೇವಿ
In reply to ಉ: ವರವ ಕೊಡು ಎನಗೆ ವಾಗ್ದೇವಿ by Sunil Jayaprakash
ಉ: ವರವ ಕೊಡು ಎನಗೆ ವಾಗ್ದೇವಿ
Re: ವರವ ಕೊಡು ಎನಗೆ ವಾಗ್ದೇವಿ
Re: ವರವ ಕೊಡು ಎನಗೆ ವಾಗ್ದೇವಿ