ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು

(ಪೂರ್ವಿ ರಾಗ ದೀಪಚಂದಿ ತಾಳ) ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು ||ಧ್ರುವ|| ಎನ್ನೊಳು ಗುರು ತನ್ನ ಮರ್ಮವ ತೋರಿದ ಇನ್ನೇನಿನ್ನೇನು ||೧|| ಮುನ್ನಿನ ಕರ್ಮವು ನಿರ್ಮೂಲವಾಯಿತು ಇನ್ನೇನಿನ್ನೇನು ||೨|| ಎನ್ನೊಳು ಘನ ಬ್ರಹ್ಮವಸ್ತು ತಾನಾಯಿತು ಇನ್ನೇನಿನ್ನೇನು ||೩|| ನಾನು ನಾನೆಂಬುದು ನೆಲೆಯು ತಾ ತಿಳಿಯಿತು ಇನ್ನೇನಿನ್ನೇನು||೪|| ಏನೆಂದು ತಿಳಿಯದ ಅನುಮಾನಗಳೆಯಿತು ಇನ್ನೇನಿನ್ನೇನು ||೫|| ಪರಮತತ್ವದ ಗತಿ ನೆಲೆನಿಭ ತೋರಿತು ಇನ್ನೇನಿನ್ನೇನು ||೬|| ಎನ್ನೊಳಾತ್ಮ ಖೂನ ಕುರುಹುವು ತಿಳಿಯಿತು ಇನ್ನೇನಿನ್ನೇನು ||೭|| ಕನಸುಮನಸು ಎಲ್ಲ ನಿನ್ನ ಸೇವ್ಯಾಯಿತು ಇನ್ನೇನಿನ್ನೇನು ||೮| ಹಗಲಿರುಳೆಂಬುದು ಹಗರಣವಾಯಿತು ಇನ್ನೇನಿನ್ನೇನು ||೯||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದು ಎನ್ನ ಜನುಮ ಸಾಫಲ್ಯವಾಯಿತು

(ಭೈರವಿ ರಾಗ ದಾದರಾ ತಾಳ) ಇಂದು ಎನ್ನ ಜನುಮ ಸಾಫಲ್ಯವಾಯಿತು ಬಂದು ಎನ್ನ ಮೊದಲೆ ಪುಣ್ಯ ಕೈಗೂಡಿತು ||ಧ್ರುವ|| ಭಾನುಕೋಟಿ ತೇಜವಾಗಿ ರೂಪುದೋರಿತು ತಾನೆ ತನ್ನಿಂದೊಲಿದು ದಯವ ಬೀರಿತು ಜ್ಞಾನ ಭಕುತಿ ವೈರಾಗ್ಯವನ್ನು ಅರುಹಿತು ನಾನು ನೀನು ಎಂಬುವ ಅಹಂಭಾವ ಹರಿಯಿತು ||೧|| ಎಂದು ಇಂದಿರೇಶನ ಕಾಣದ ಕಣ್ಣುದೆರೆಯಿತು ಬಂದು ಬೀಳುವ ಭವಪಾಶದ ಬಲಿಯು ಹರಿಯಿತು ಚಂದವಾಗಿ ಸದ್ಗುರು ಕರುಣ ಮಳೆಯಗರೆಯಿತು ಹೊಂದಿ ಹರುಷಪಡುವಾನಂದ ಪಥವುದೋರಿತು ||೨|| ಭಿನ್ನವಿಲ್ಲದೆ ಸಹಸ್ರದಳದಲ್ಯಾಡುವ ಹಂಸನ ಕಣ್ಣು ಕಂಡು ಪಾವನವಾಯಿತು ವಾಸುದೇವನ ಎನ್ನ ಮನಸಿನಂತಾಯಿತು ಪುಣ್ಯ ಜೀವನ ಧನ್ಯಗೈಸಿತು ಮಹಿಪತಿ ಪ್ರಾಣಜೀವನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡು ಮನವೆ ನಿನ್ನೊಳಾಡುವ ಹಂಸನ

(ಬಸಂತ್ ರಾಗ ಝಪ್ ತಾಳ) ನೋಡು ಮನವೆ ನಿನ್ನೊಳಾಡುವ ಹಂಸನ ಇಡಾಪಿಂಗಳ ಮಧ್ಯನಾಡಿವಿಡಿದು ||ಪ|| ಆಧಾರವಂ ಬಲಿದು ಸ್ವಾಧಿಷ್ಠಾನವ ದಾಟಿ ಹಾದಿವಿಡಿದು ನೋಡು ಮಣಿಪುರದ ಒದಗಿ ಕುಡುವ ಅನಹತ ಹೃದಯಸ್ಥಾನವ ಸಾಧಿಸಿ ನೋಡುವದು ವಿಶುದ್ಧವ ||೧|| ಭೇದಿಸಿ ನೋಡುವದಾಜ್ಞಾ ಚಕ್ರ ದ್ವಿದಳ ಸಾಧಿಸುವದು ಸುಖ ಸಾಧುಜನ ಆಧಾರದಲಿಹ ತಾ ಅಧಿಷ್ಠಾನವ ನೋಡು ಅಧಿಪತಿ ಆಗಿಹಾಧೀನ ದೈವವ ||೨|| ಮ್ಯಾಲಿಹ ಬ್ರಹ್ಮಾಂಡ ಸಹಸ್ರದಳ ಕಮಲ ಹೊಳೆಯುತಿಹ ಭಾಸ್ಕರ ಪ್ರಭೆಯು ಕೂಡಿ ಮೂಲಸ್ಥಾನದ ನಿಜನೆಲೆನಿಭವ ನೋಡು ಬಲಕನೊಡೇಯ ಮಹಿಪತಿಸ್ವಾಮಿಯ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ

(ಬಿಹಾಗ್ ರಾಗ ದಾದರಾ ತಾಳ) ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ ಗುರುಮೂರ್ತಿಯಿಂದ ನಿತ್ಯವಾಗಿ ಪೂರ್ಣಬೆರೆತು ಕೂಡುವಾ ಬನ್ನಿ ಗುರ್ತದಿಂದ ||ಧ್ರುವ|| ಸೂರ್ಯನಿಲ್ಲದೆ ಸುಪ್ರಕಾಶ ತುಂಬಿದೆ ಹೇಳತೀನ ತೂರ್ಯಾವಸ್ಥೆಯೊಳು ಬೆರೆದು ಕೂಡಿದೆ ಜ್ಞಾನಿಬಲ್ಲ ಖೂನ ಬರಿಯ ಮಾತನಾಡಿ ಹೊರೆಯ ಹೇಳುವದಲ್ಲ ಅರಹು ಸ್ಥಾನ ಪರಿಯಾಯದಿಂದ ಪರಿಣಮಿಸಿ ನೋಡಿ ಪರಮಪ್ರಾಣ ||೧|| ಚಂದ್ರನಿಲ್ಲದೆ ಬೆಳದಿಂಗಳು ಬಿದ್ದಿದೆ ಬಹಳ ಇಂದ್ರಾದಿಗಳೆಲ್ಲ ಹರುಷದಿ ನೋಡುವರು ಸರ್ವಕಾಲ ಸುಂದರವಾದ ಸುವಸ್ತು ಒಳಗೊಂಡಿದೆ ಅಚಲ ಸಾಂದ್ರವಾಗಿ ಸುಖ ತುಂಬಿ ತುಳುಕುತಿದೆ ಥಳ ಥಳ ||೨|| ಮನದ ಕೊನೆಯಲಿದ್ದ ಘನಸುಖ ನೋಡಿರೋ ನೆನೆದು ಬೇಗ ಸ್ವಾನುಭವದಲನುಭವಿಸುವದು ಬ್ರಹ್ಮಭೋಗ ನಾ ನೀನೆಂಬುವ ಮಾತು ಏನು ತಾಳುವದಲ್ಲ ರಾಜಯೋಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನುಭವಿದೇ ನೋಡಿ ಆನಂದೋ ಬ್ರಹ್ಮ

(ಮಾಲಕಂಸ್ ರಾಗ ತಾಳ ತ್ರಿತಾಳ) ಅನುಭವಿದೇ ನೋಡಿ ಆನಂದೋ ಬ್ರಹ್ಮ ಏನೆಂದ್ಹೇಳಲಿನ್ನಾಗು ಸಂಭ್ರಮ ||ಧ್ರುವ|| ಸುಖ ನೋಡಿ ನಮ್ಮ ಸ್ವಾನುಭವದ ಸಖರಿಂದ ಮೀರಿ ಬಲು ಸುಸ್ವಾದ ಆಖರಿಂದ ಕೇಳಿ ಗುರು ನಿಜಬೋಧ ಶುಕಮುನಿ ಸೇವಿಸುವದಾ ||೧|| ಬೆರೆದು ನೋಡಿ ಆರು ಚಕ್ರವೇರಿ ಸುರಿಯುತಿದೆ ಸುಖಸಂತ್ರಾಧಾರಿ ಭೋರ್ಗರೆಯುತಿದೆ ಅನಂತಪರಿ- ದೋರಿ ಕೊಡುತಾನೆ ಶ್ರೀಹರಿ ||೨|| ಸುಗ್ಗಿ ಇದೇ ನೋಡಿ ಸುಜ್ಞಾನಿಗಳು ಲಗ್ಗೆ ಮಾಡಿಕೊಳ್ಳಿ ಅದೆ ಬಲು ಬಹಳ ಬೊಗ್ಗಿ ಉಣಬೇಕು ಇದು ಸರ್ವಕಾಲ ಹಿಗ್ಗಿಕೊಳ್ಳೊ ಮಹಿಪತಿ ನೀ ತರಳ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದೇವ ಬಂದ ದೇವಕಿ ಕಂದ

(ರಾಗ ಮಿಶ್ರಪೀಲೂ , ತ್ರಿತಾಳ) ದೇವ ಬಂದ ದೇವಕಿ ಕಂದ ||ಧ್ರುವ|| ದೇವ ಬಂದ ದೇವತೆಗಳ ಪ್ರಿಯ ಭುವನತ್ರಯಕಾಗಿಹ ಆಶ್ರಯ ||ಪ|| ಮಾಮನೋಹರ ಮಾಧವ ಮುರಾರಿ ಸಾಮಜವರದ ಸದಾ ಸಹಕಾರಿ ||೧|| ಉರಗಶಯನ ಹರಿ ಕರುಣಾನಂದ ಗರುಡವಾಹನ ಗೋಪಾಲ ಗೋವಿಂದ ||೨|| ಸರ್ವಾನಂದ ಶ್ರೀಹರಿ ಸಿರಿಲೋಲ ಸಾರ್ವಭೌಮ ಸದಾ ಕೃಪಾಲ ||೩|| ಲೇಸಿಲೆ ಹೊರೆವ ಮಹಿಪತಿ ಪ್ರಾಣೇಶ ಭಾಸ್ಕರಕೋಟಿ ಸುತೇಜಪ್ರಕಾಶ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಡಿರೆ ನಡಿರೆ ನೋಡುವ ಶ್ರೀಕೃಷ್ಣನ

(ಭೀಮಪಲಾಸ್ ರಾಗ ತೀನ್ ತಾಳ ) ನಡಿರೆ ನಡಿರೆ ನೋಡುವ ಶ್ರೀಕೃಷ್ಣನ ನಡಿರೆ ನಡಿರೆ ನೋಡುವ ||ಧ್ರುವ|| ನಡಿರೆ ನೋಡುವ ಬನ್ನಿ ತುಡುಗ ಶ್ರೀಕೃಷ್ಣನ ಅಡಿಗಳಾಶ್ರಯ ಹಿಡುವ ಮಂಡಲದೊಳು ||೧|| ತುಡುಗತನದಿ ಬಂದು ಕದಿದ ಬೆಣ್ಣೆಯ ಮೆದ್ದು ಒಡನೆ ಗೋಪೇರ ಕಾಡಿದ ನೋಡಮ್ಮ ||೨|| ಬಿಡದೆ ಕಾಳಿಂಗನ ಹೆಡೆಯ ಮೆಟ್ಟಿದ ನೋಡಿ ತಡೆಯದೆ ಧುಮುಕಿದ ಮಡುವಿನೊಳು ||೩|| ಕ್ರೀಡಿಸಿ ಗೋಪೇರ ಉಡುಗೆ ಸೆಳೆದುಕೊಂಡು ಒಡನೆ ಗಿಡವನೇರಿದ ನೋಡಮ್ಮ ||೪|| ಮಾಡದ ಮಾಡಿ ತಾ ಬಿಡದೆ ಬೇಡಿಸಿಕೊಂಡು ಒಡನೆ ಉಡುಗೆ ನೀಡಿದ ನೋಡಮ್ಮ ||೫|| ಬಡವರಿಗಳವಲ್ಲ ಪೊಡವಿಯೊಳಗಿದು ಆಡಿದಾನಂದದಾಟ ನೋಡಮ್ಮ ||೬|| ಹಿಡಿಯಹೋಗಲು ಮೂಢ ಮಹಿಪತಿಯ ನೋಡಿ ಒಡಲ ಹೊಕ್ಕು ಕೂಡಿದ ಒಡೆಯನಮ್ಮ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲೇಸು ಲೇಸಾಯಿತೆನ್ನ ಜನುಮ ನೋಡಿ

(ಭೀಮಪಲಾಸ್ ರಾಗ ತೀನ್ ತಾಳ) ಲೇಸು ಲೇಸಾಯಿತೆನ್ನ ಜನುಮ ನೋಡಿ ವಾಸುದೇವನೆ ಬಂದ ಕೈಗೂಡಿ ||ಧ್ರುವ|| ಎನ್ನ ಮಾನಾಭಿಮಾನ ಆದ ಹರಿಯೆ ಇನ್ನು ಇಂಥ ಪುಣ್ಯಕ ನೋಡಿ ಸರಿಯೆ ಧನ್ಯಗೈಸಿದುತ್ತೀರ್ಣಾಗಲರಿಯೆ ಇನ್ನೊಬ್ಬರಿಗೇನು ಮುಚ್ಚುಮರಿಯೆ ||೧|| ಕೋಟಿ ಜನ್ಮದಲಿ ಮಾಡಿದ ಸುಪುಣ್ಯ ನಾಟಿ ಬಂತೆನ್ನೊಳಗಸು ತಾರ್ಕಣ್ಯ ನೀಟದೋರಿತು ಘನ ಸುಚೈತನ್ಯ ನೋಟ ನೆಲೆಗೊಂಡಾಯಿತು ಧನ್ಯ ||೨|| ತಾನೆ ತಾನಾದೆನ್ನೊಳು ಬಂದು ನೋಡಿ ಭಾನುಕೋಟಿ ಪ್ರಕಾಶ ದಯಮಾಡಿ ದೀನ ಮಹಿಪತಿಗೆ ಸ್ವಸುಖ ನೀಡಿ ಮನೋಹರ ಮಾಡಿದ ಮನಗೂಡಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಲದೆಲೆಯ ಮ್ಯಾಲೆ ಮಲಗಿ

( ಬಸಂತ್ ರಾಗ ದಾದರಾ ತಾಳ) ಆಲದೆಲೆಯ ಮ್ಯಾಲೆ ಮಲಗ್ಯುಂಗುಟ ಚಪ್ಪರಿಪನು ನೀನಾರೈ ಮೂಲರೂಪದ ನಿಜದೋರದೆ ಬಾಲಕನಾಗಿಹ ನೀನಾರೈ ||ಧ್ರುವ|| ಚೆಲುವ ಕಂಗಳ ನೋಟದಲ್ಹೊಳೆಯುತ ಜಲದೊಳಗಾಡುವನಾರೈ ಕಾಲುಡುಗಿಸಿ ಬೆನ್ನಿಲೆ ಬಲು ಕಠಿಣವ ತಾಳಿದವ ನೀನಾರೈ ||೧|| ಕೋರ್ಹಲ್ಲಲಿ ಬೇರನೆ ಅಗಳ್ಯಾಡುತ ದೋರುವ ನೀನಾರೈ ನರಮೃಗರೂಪದಿ ತರಳಗೊಲಿದು ಭರದಲಿ ಬಂದವನಾರೈ ||೨|| ಒಪ್ಪಿಲಿ ಮೂರು ಪಾದವ ಭೂಮಿಯೊಪ್ಪಿಸಿಕೊಂಡವನಾರೈ ಚಪ್ಪಗೊಡಲಿ ಕೈಯಲಿ ಪಿಡಕೊಂಡು ಇಪ್ಪವ ನೀನಾರೈ ||೩|| ಬಳ್ಳಿ ಹಿಡಿದು ಕಲ್ಲನೆ ಉದ್ಧರಿಸಿದ ಮಲ್ಲನು ನೀನಾರೈ ಗೊಲ್ಲತಿಯರ ಮೋಹಿಸಿ ಎಳೆದಾಡುವ ಚೆಲುವನು ನೀನಾರೈ ||೪|| ಒದಗಿ ತ್ರಿಪುರದಲಿ ಹಳಿದು ನಾರೇರ ವ್ರತ ಚದುರನು ನೀನಾರೈ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು

(ಕಾಂಬೋಧ (ಭೂಪ್) ರಾಗ ತ್ರಿತಾಳ) ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು ನಿಜಗುಹ್ಯದ ಮಾತು ಗುರುತವಾಗಿಹ ಸಾಧು ಬಲ್ಲ ಖೂನ ||ಧ್ರುವ|| ನೀಗದ ನೀಗಿತು ಹೋಗದ ಹೋಯಿತು ತ್ಯಾಗಲ್ಯೊಂದು ಬಾಗದ ಬಾಗಿತು ಸಾಗದ ಸಾಗಿತು ಯೋಗಲ್ಯೊಂದು ಆಗದ ಆಯಿತು ಕೂಗದ ಕೂಗಿತು ಈಗಲ್ಯೊಂದು ತೂಗದ ತೂಗಿತು ಸುಗಮ ತಾ ತೋರಿತು ಜಗದೊಳೊಂದು ||೧|| ಹರಿಯದ ಹರಿಯಿತು ಮುರಿಯದ ಮುರಿಯಿತು ಹುರಿಯಲೊಂದು ಮರೆಯದ ಮರೆಯಿತು ಅರಿಯದ ಅರಿಯಿತು ಅರಿವಿಲೊಂದು ಸುರೆಯದ ಸುರಿಯಿತು ಗರೆಯದ ಗರಿಯಿತು ತ್ಯರಿಯಲೊಂದು ಜರಿಯದ ಜರಿಯಿತು ಬೆರಿಯದ ಬೆರೆಯಿತು ಕುರಿವಿಲೊಂದು ||೨|| ಜಾರದ ಜಾರಿತು ಮೀರದ ಮೀರಿತು ಹಾರಲೊಂದು ತೋರದ ತೋರಿತು ಸೇರದ ಸೇರಿತು ಸಾರಲೊಂದು ಬೀರದ ಬೀರಿತು ಸಾರಸದೋರಿತು ಕರದಲೊಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು