ಜಯ ಜಯ ಮಂಗಳ ಹರಿಗೆ

ಜಯ ಜಯ ಮಂಗಳ ಹರಿಗೆ

(ಶ್ರೀರಾಗ ಆದಿತಾಳ) ಜಯ ಜಯ ಮಂಗಳ ಹರಿಗೆ ಜಯ ಜಯ ಮಂಗಳ ಸಿರಿಗೆ ಜಯ ಜಯ ಮಂಗಳ ವರದಪುರಂದರವಿಠಲಗೆ ||೧|| ಶುಭ ಇದು ಶೋಭನ ಹರಿಗೆ ಶುಭ ಇದು ಶೋಭನ ಸಿರಿಗೆ ಶುಭ ಇದು ಶೋಭನ ವರದಪುರಂದರವಿಠಲಗೆ ||೨|| ಪರಮಾನಂದವು ಹರಿಗೆ ಪರಮಾನಂದವು ಸಿರಿಗೆ ಪರಮಾನಂದವು ವರದಪುರಂದರವಿಠಲಗೆ ||೨|| ಜಯ ಜಯ ಪಂಕಜ ಹರಿಗೆ ಜಯ ಜಯ ಪಂಕಜ ಸಿರಿಗೆ ಜಯ ಜಯ ಪಂಕಜ ವರದಪುರಂದರವಿಠಲಗೆ ||೧|| ಜಯ ಜಯ ನಂದನ ಸುತಗೆ ಜಯ ಜಯ ಭೀಷ್ಮಕಸುತೆಗೆ ಜಯ ಜಯ ದಂಪತಿ ವರದಪುರಂದರವಿಠಲಗೆ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು