ಪುರಂದರದಾಸ

Compositions of Purandara dasa

ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ

ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ ಸುಮ್ಮನೆ ಇಬ್ಬರೂ ಕೂಡಿ ಸಾಟಿ ಮಾಡಿ ನೋಡುವ ||ಪ|| ಸರಕು ಬೆಲ್ಲ ತುಪ್ಪ ಧಾನ್ಯ, ಸವೆದೀತೆಂಬ ಚಿಂತೆಯುಂಟು ಹರಿನಮಾಮೃತಸಾರಕ್ಕೆ ಆರ ಅಂಜಿಕೆ ಇಲ್ಲವಯ್ಯ || ವ್ಯಾಪಾರ ಉದ್ಯೋಗಕಿನ್ನು ಅಪಾರ ಅಂಜಿಕೆಯುಂಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನರಹರಿ ಎನಬಾರದೆ

(ರಾಗ ಕಲ್ಯಾಣಿ ಅಟತಾಳ) ನರಹರಿ ಎನಬಾರದೆ ||ಪ|| ಬಾರಿ ಬಾರಿಗೀ ಶರೀರವು ಬಾರದ್ಹಾಗೆ ಮಾಡೋ ನಾಮವು ಘೋರಿಸಿದ ಪ್ರಹ್ಲಾದನ ಜನಕನ ಉರವ ಸೀಳಿದ ನಾಮವು ||ಅ|| ದಾರಿದ್ರ್ಯಾದಿ ಭಯವೊಂದು ಇಲ್ಲ , ದಾರಿ ವೈಕುಂಠಕೆ ತೋರೋದಲ್ಲ ನಾರಾಯಣ ನಿಮ್ಮ ನಾಮ ಉಚ್ಚರಿಸಿದ ನಾರದ ದೇವಋಷಿಯಾದನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆರೆ ನಂಬಿರೊ ಎಲೆ ಅಣ್ಣ

( ಉದಯರಾಗ ) ನೆರೆ ನಂಬಿರೊ ಎಲೆ ಅಣ್ಣ ||ಪ|| ಸಿರಿಯರಸನ ಕರುಣಾಳುವ ಸರಸಿಜಸಂಭವನ ಪಿತನ ಸುರರೊಡೆಯನ ಸಕಲ ವೇದ ಒರಲೊ ಹರಿಯ ಪರದೇವತೆ ಇದೇ ಇದೇ ಎಂದು ಕರಕಮಲದೊಳಿಟ್ಟು ಮೆರೆವ ಪರಮಹಂಸರಾದ ವ್ಯಾಸರಾಯರ || ಜ್ಞಾನಭಕ್ತಿ ವೈರಾಗ್ಯ ನಿಧಾನವ ನಮಗಿತ್ತು ಮೆರೆವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಂಥ ಬೇಡಿ ಪ್ರಾಣಿಗಳಿರ

(ಉದಯರಾಗ ಆದಿತಾಳ) ಪಂಥ ಬೇಡಿ ಪ್ರಾಣಿಗಳಿರ ||ಪ|| ಸಂತತ ಹರಿದಾಸರಾಗಿ ಅಂತಕಪುರ ಸುಖವಿಲ್ಲ ಯಮನು ಬಹು ಹೊಲ್ಲ ||ಅ|| ಕಡೆಯ ಝಾಮದಲೆದ್ದು ಹರಿಯ ಸ್ಮರಣೆಯ ಮಾಡಿ ನುಡಿ ಹರಿಯ ಕೀರ್ತನೆ ಒಡನೆ ಮಾಡಿ ಕಡುಸ್ನೇಹದಲ್ಲಿ ಕರವ ಪಾದಕಮಲದಲಿಟ್ಟು ಬಿಡದೆ ಸೇವೆಯ ಮಾಡೋ ಚಿತ್ತವಲ್ಲಿಡೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈ ಗ್ರಾಮದಲಿ ವಾಸ

(ರಾಗ ಮುಖಾರಿ ಅಟತಾಳ) ಈ ಗ್ರಾಮದಲಿ ವಾಸ ಇರುವುದೆ ಪ್ರಯಾಸ ||ಪ|| ಹೊನ್ನು ಹಣಗಳು ಇಲ್ಲ ಇರುವುದಕೆ ಸ್ಥಳವಿಲ್ಲ ತನ್ನವರು ತನಗೆ ಎಂಬವರು ಇಲ್ಲ ಬೆನ್ನು ತೊಕ್ಕಂಬದಕೆ ಮತ್ತೆ ಸೋದರರಿಲ್ಲ ಇನ್ನಿಲ್ಲಿ ಇಹವಿಲ್ಲ ಪರವಿಲ್ಲವಲ್ಲ || ದುಡುಕಿ ಕೆಡಕನಿಗೂರು ಒಡವೆವುಳ್ಳವಗೂರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೇಗೆ ಮಾಡಲಿ ಮಗುವಿಗೆ ಏನಾಯಿತೆ

(ರಾಗ ಬಿಲಹರಿ ಝಂಪೆತಾಳ) ಹೇಗೆ ಮಾಡಲಿ ಮಗುವಿಗೆ ಏನಾಯಿತೆ , ಇದ- ರಾಗಮವ ಬಲ್ಲವರು ತಿಳಿದು ಪೇಳಿ ||ಪ|| ಕಣ್ಣಮುಚ್ಚಲೊಲ್ಲನು ತೂಗಿ ಮಲಗಿಸಿದರೆ ಬೆನ್ನ ಮೇಲಿನ ಬುಕಟಿ ಕಲ್ಲ ಅರಿಯಾಗಿದೆ || ರೋಗವಿದೇನು ದಾಡೆಯಲಿ ನೀರು ಇಳಿವುತದೆ ಕೂಗುವ ಧ್ವನಿ ಒಮ್ಮೆ ಕುಂದಿದುದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋವಿಂದಾ ಹರಿ ಗೋವಿಂದಾ

(ರಾಗ ಹುಸೇನಿ ಅಟತಾಳ) ಗೋವಿಂದಾ ಹರಿ ಗೋವಿಂದಾ ||ಪ|| ನಿಂತರೆ ನೆಳಲಿಲ್ಲ ಹಿಡಿಯಲು ಕೊಂಬಿಲ್ಲ ಎತ್ತ ತೋರುವೆ ಎನ್ನ ಕರ್ತು ವಿಚಾರಿಸೊ || ಸುತ್ತಮುತ್ತಲಿದ್ದ ಕತ್ತಲೆಯೊಳಗೆಂಬ ಎತ್ತೆತ್ತೋರುವೆ ಎನ್ನ ಕರ್ತು ವಿಚಾರಿಸೊ || ಸುರನರರಿಗೆಲ್ಲ ನೀನೇ ಗತಿಯೆಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯ ಜಯ, ಜಯ ಜಾನಕೀಕಾಂತ

(ರಾಗ ನಾಟ ಆದಿತಾಳ) ಜಯ ಜಯ ||ಪ|| ಜಯ ಜಾನಕೀಕಾಂತ ಜಯ ಸಾಧುಜನವಿನುತ ಜಯತು ಮಹಿಮಾನಂತ ಜಯಭಾಗ್ಯವಂತ ||ಅ|| ದಶರಥನ ಮಗ ವೀರ ದಶಕಂಠಸಂಹಾರ ಪಶುಪತೀಶ್ವರಮಿತ್ರ ಪಾವನಚರಿತ್ರ ಕುಸುಮಬಾಣಸ್ವರೂಪ ಕುಶಲಕೀರ್ತಿಕಲಾಪ ಅಸಮ ಸಾಹಸಶಿಕ್ಷ ಅಂಬುಜದಳಾಕ್ಷ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಗದಂತರ್ಯಾಮಿಯೆನ್ನ ಸ್ವಾಮಿ

(ರಾಗ ಆನಂದಭೈರವಿ ಆದಿತಾಳ) ಜಗದಂತರ್ಯಾಮಿಯೆನ್ನ ಸ್ವಾಮಿ ||ಪ|| ಅಗಣಿತಗುಣ ನೀನು ನಿನ್ನ ಗುಣವಲ್ಲವೆಂದು ಬಗೆವವ ಜಗದೊಳಗೆ ಬ್ರಹ್ಮಹತ್ಯಗಾರ ||ಅ|| ಜಗತುಕರ್ತು ನೀನಿರಲು ಅನ್ಯರನ್ನೆ ದೈವವೆಂದು ಬಗೆವವ ಜಗದೊಳಗೆ ಸ್ವರ್ಣಸ್ತೇಯಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಬ್ಬರು ಹೆಂಡಿರ ಸುಖವು ಇಂದು ಕಂಡೆನಯ್ಯ

(ರಾಗ ಕಾಂಭೋಜ ಅಟತಾಳ) ಇಬ್ಬರ್ಹೆಂಡಿರ ಸುಖವು ಇಂದು ಕಂಡೆನಯ್ಯ ||ಪ|| ಅಬ್ಬಬ್ಬ ಎಂದಿಗೂ ಸಾಕು ಸಾಕಯ್ಯ ||ಅ|| ಒಬ್ಬಳಲಿ ಪೋಗಿ ಪೋಗರವ ಮಾಡೆನ್ನಲು ಬೊಬ್ಬೆ ಏನಿದು ಕೊಬ್ಬೆ? ನಡೆ ಎಂದಳು ತಬ್ಬಿಬ್ಬುಗೊಂಡು ಇನ್ನೊಬ್ಬಳನು ಮಾಡೆನಲು ಅಬ್ಬಾ ಬಿಸಿ ಮುಟ್ಟಲಾಪೆನೆ ಎಂದಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು