ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ

ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ

ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ ಸುಮ್ಮನೆ ಇಬ್ಬರೂ ಕೂಡಿ ಸಾಟಿ ಮಾಡಿ ನೋಡುವ ||ಪ|| ಸರಕು ಬೆಲ್ಲ ತುಪ್ಪ ಧಾನ್ಯ, ಸವೆದೀತೆಂಬ ಚಿಂತೆಯುಂಟು ಹರಿನಮಾಮೃತಸಾರಕ್ಕೆ ಆರ ಅಂಜಿಕೆ ಇಲ್ಲವಯ್ಯ || ವ್ಯಾಪಾರ ಉದ್ಯೋಗಕಿನ್ನು ಅಪಾರ ಅಂಜಿಕೆಯುಂಟು ಗೋಪಾಳ ಬೇಡುವುದಕ್ಕೆ ಯಾರ ಅಂಜಿಕೆ ಇಲ್ಲವಯ್ಯ|| ಕಡಗ ಕಂಠಮಾಲೆಗಿನ್ನು ತುಡುಗರ ಅಂಜಿಕೆಯುಂಟು ಅಡವೀ ತುಳಸಿಮಾಲೆಗಿನ್ನು ಯಾರ ಅಂಜಿಕೆ ಇಲ್ಲವಯ್ಯ|| ಹೆಣ್ಣು ಹೊನ್ನು ಮಣ್ಣುಗಳಿಗೆ ಕಣ್ಣಿಡುವರಂಜಿಕೆಯುಂಟು ಪನ್ನಗಶಯನನ ನಾಮಕಾರ ಅಂಜಿಕೆ ಇಲ್ಲವಯ್ಯ || ನಿಮ್ಮ ಭಾಗ್ಯ ಲಕ್ಷ್ಮೀ-ದೇವಿ ನಮ್ಮ ಭಾಗ್ಯ ನಾರಾಯಣ ನಮ್ಮ ಪುರಂದರವಿಠಲನ ಅನುದಿನ ಸ್ಮರಿಸುವುದಯ್ಯ || ( ಟಿಪ್ಪಣಿ :- ವಿಜಯನಗರದ ಅರಸ ಶ್ರೀಕೃಷ್ಣದೇವರಾಯನು ಪುರಂದರದಾಸರನ್ನು ಭೇಟಿಯಾದಾಗ ಪುರಂದರದಾಸರು ಇದನ್ನು ರಚಿಸಿದರಂತೆ ) ಇದರ ಇನ್ನೊಂದು ಪಾಠಾಂತರ ಹೀಗಿದೆ ( http://purandara.wordpress.com/2008/05/13/%E0%B2%A8%E0%B2%BF%E0%B2%AE%E0%B3%8D%E0%B2%AE-%E0%B2%AD%E0%B2%BE%E0%B2%97%E0%B3%8D%E0%B2%AF-%E0%B2%A6%E0%B3%8A%E0%B2%A1%E0%B3%8D%E0%B2%A1%E0%B2%A6%E0%B3%8B/) ದಿಂದ :- ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ ಸಮ್ಮತಿಯಲಿ ನಾವು ನೀವು ಸಾಟಿ ಮಾಡಿ ನೋಡುವ ಬನ್ನಿ ||ಪ|| ಸರಕು ಬೆಲ್ಲ ತುಪ್ಪ ಧಾನ್ಯ, ಸವೆಯಿತೆಂಬ ಚಿಂತೆಯುಂಟು ಹರಿಯ ನಾಮಾಮೃತಕೆ ಇನ್ನು ಯಾವ ಚಿಂತೆ ಇಲ್ಲವಯ್ಯ || ಹೇಮ ಹೊನ್ನು ಹಣಗಳಿಗೆ ಹೇರಳದ ಭಯಗಳುಂಟು ರಾಮನಾಮ-ದ್ರವ್ಯಕಿನ್ನು ಯಾವ ಭಯವು ಇಲ್ಲವಯ್ಯ || ನಿಮ್ಮ ಭಾಗ್ಯ ಲಕ್ಷ್ಮೀ-ದೇವಿ ನಮ್ಮ ಭಾಗ್ಯ ನಾರಾಯಣ ನಮ್ಮ ನಿಮ್ಮ ಭಾಗ್ಯದೊಡೆಯ ನಮ್ಮ ಪುರಂದರವಿಠ್ಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು