ಪುರಂದರದಾಸ

Compositions of Purandara dasa

ಮನವೆ ಚಂಚಲಮತಿಯ ಬಿಡು

(ರಾಗ ಮಧ್ಯಮಾವತಿ ) ಮನವೆ ಚಂಚಲಮತಿಯ ಬಿಡು ||ಪ|| ನಮ್ಮ , ವನಜನಾಭನ ಭಜನೆಯ ಮಾಡು ||ಅ|| ಬಡಮನುಜಗೆ ಬಾಯಬಿಡುತ ದೈನ್ಯದಲವನ ಅಡಿಗಲಿಗೆರಗಲು ಪಡೆವುದೇನೊ ಕಡಲಶಯನ ಜಗದೊಡೆಯನ ನೆನೆಯೆ ಕೈ- ಪಿಡಿದು ಸಲಹುವನು ಬಿಡದಲೆ ಅನುಗಾಲ || ಬಲ್ಲಿದ ಭಜಕರ ಬಲ್ಲವ, ಬಲುಸಿರಿ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾಣಂತಿ ಎನ್ನ ಬಾ ಅಂತಿ

(ರಾಗ ಕಾಂಭೋಜ ಛಾಪುತಾಳ) ಬಾಣಂತಿ ಎನ್ನ ಬಾ ಅಂತಿ ||ಪ|| ಬಾಣಂತಿಯೆಂಬೋ ಬಗೆಯ ನೀನರಿತು ಬಾರೆಂದು ಕರೆಯೋದುಚಿತವೆ ರಂಗ ||ಅ|| ಹಿಂಗದೆ ಮೊಲೆಹಾಲು ನೆರೆಮನೆಗ್ಹೋಗಿ ಭಂಗಪಡಲಾರೆ ಕಂದನಿಗಾಗಿ || ಖಾರಕಷಾಯಂಗಳು, ಕೇಳೆಲೊ ರಂಗ ಒಪ್ಪೊತ್ತಿನಹಾರವು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯವದೆ ಜಯವದೆ ಈ ಮನೆತನಕೆ

(ಜೋಗಿಪದ ಏಕತಾಳ) ಜಯವದೆ ಜಯವದೆ ಈ ಮನೆತನಕೆ ಭಯವಿಲ್ಲ ಎಂದೆಂದಿಗು ನಿಜವು ಬಿಡು ಬಿಡು ಬಿಡು ಬಿಡು ಮನಸಂಶಯವ ಶುಕನೆಂಬ್ಹಕ್ಕಿ ಹೇಳುತದಪ್ಪ ಜಗವೆಂಬಾ ಗಿಡ ಹುಟ್ಟಿತಣ್ಣ ಹಕ್ಕಿಗಳೆರಡು ಕೂಡೈದಾವೆ ಹಣ್ಣುಗಳೆರಡು ಐದಾವಪ್ಪ ಮೂರು ಮೂರು ಗುಣ ಕೇಳಣ್ಣ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯತು ಕೋದಂಡರಾಮ

(ರಾಗ ನಾಟಿ ಝಂಪೆತಾಳ) ಜಯತು ಕೋದಂಡರಾಮ, ಜಯತು ದಶರಥರಾಮ ಜಯತು ಸೀತಾರಾಮ , ಜಯತು ರಘುರಾಮ , ಜಯತು ಜಯತು ||ಪ|| ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ ಪ್ರೀತಿಯಿಂದಲಿ ತಂದು ಸಕಲ ಭೂತಳವ ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳಂ ಜಯ ಮಂಗಳಂ

(ರಾಗ ಸುರುಟಿ ಆದಿತಾಳ) ಮಂಗಳಂ ಜಯ ಮಂಗಳಂ ||ಪ|| ಮುಕುಟಕ್ಕೆ ಮಂಗಳ ಮತ್ಸ್ಯವತಾರಗೆ ಮುಖಕ್ಕೆ ಮಂಗಳ ಮುದ್ದು ಕೂರ್ಮಗೆ ಸುಕಂಠಕೆ ಮಂಗಳ ಸೂಕರ ರೂಪಗೆ ನಖಕ್ಕೆ ಮಂಗಳ ನರಸಿಂಹಗೆ || ವಕ್ಷಕ್ಕೆ ಮಂಗಳ ವಟು ವಾಮನಗೆ ಪಕ್ಷಕ್ಕೆ ಮಂಗಳ ಪರಶುರಾಮಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡಿರಯ್ಯ ನೀವು ನೋಡಿರಯ್ಯ

( ರಾಗ ನಾದನಾಮಕ್ರಿಯೆ ಆದಿತಾಳ) ನೋಡಿರಯ್ಯ ನೀವು ನೋಡಿರಯ್ಯ ||ಪ|| ನೋಡಿರಯ್ಯ ಹರಿದಾಸರ ಮಾಯವ , ಜೋಡಾಗಿಪ್ಪ ಎರಡು ಪಕ್ಷಿ ಗೂಡನಗಲಿ ಗೂಡ ತೊರೆದು ಆಡುತ ಬಂದು ನುಂಗಿ ನೋಡುವ ಸೊಗಸು ||ಅ|| ಮನೆಯ ಒಳಗೆ ಒಂದು ತಗಣೆ ಮಾಳಿಗೆ ನುಂಗಿತು , ಮಂಚವ ನುಂಗಿತು
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾಸನಾಗೋ ನೀ ಶಿಷ್ಯನಾಗೋ

(ರಾಗ ಕಾಂಭೋಜ ಏಕತಾಳ) ದಾಸನಾಗೋ ನೀ ಶಿಷ್ಯನಾಗೋ ||ಪ|| ಏಸು ಕಾರ್ಯಂಗಳ (ಕಾಯಂಗಳ ?) ಕಳೆದು ಎಂಭತ್ತು - ನಾಲ್ಕು ಲಕ್ಷ ಜೀವರಾಶಿಯನ್ನೆ ದಾಟಿ ||ಅ|| ಆಶಾಪಾಶ ಎಂಬೋ ಪರಮಾಬ್ಧಿಯೊಳಗೆ ಮುಳುಗಿ ಮಾಯಾ- ಪಾಶಕ್ಕೊಳಗಾಗದೇ ಮಾನ್ಯನಾಗೊ , ನೀ ಧನ್ಯನಾಗೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಡಬಹುದೇ ಮಗಳ

( ರಾಗ ಶಂಕರಾಭರಣ ಅಟತಾಳ) ಕೊಡಬಹುದೇ ಮಗಳ ||ಪ|| ಹಿಡಿಬಿಟ್ಟಿಯನೆ ಮಾಡಿ ಹೀಗೆ ಸಮುದ್ರರಾಯ ||ಅ|| ಕುರುಹು ಖೂನಗಳಿಲ್ಲ , ಕೂಟ ಮಠಗಳಿಲ್ಲ ಅರಿಯರು ಆರಾರು ಆರ ಮಗನೆಂದು ಅರಸರ ಹೆಸರಿಗೆ ಸರಿಯಾದ ಅಳಿಯನಲ್ಲ ವರಸುಖಾಂಗಿಗೆ ತಕ್ಕ ವರನಹುದೆ ಇವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೆಟ್ಟೆನಲ್ಲೊ ಹರಿಯೆ

( ರಾಗ ಭೈರವಿ ತ್ರಿಪುಟತಾಳ) ಕೆಟ್ಟೆನಲ್ಲೊ ಹರಿಯೆ , ಸಿಟ್ಟು ಮಾಡಿ ಎನ್ನಬಿಟ್ಟು ಕಳೆಯಬೇಡ ||ಪ|| ಬಂದೆನು ನಾನು ತಂದೆತಾಯಿಗಳುದರದಿ ಒಂದು ಅರಿಯದೆ ಬಾಲಕತನದೊಳು ಮುಂದುವರಿದ ಯೌವನದೊಳು ಸತಿಸುತ - ರಂದವ ನೋಡುತ್ತ ನಿನ್ನ ನಾಮವ ಮರೆತೆನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕುಣಿದಾಡೊ ಕೃಷ್ಣ ಕುಣಿದಾಡೊ

(ರಾಗ ಪಂತುವರಾಳಿ ಏಕತಾಳ) ಕುಣಿದಾಡೊ ಕೃಷ್ಣ ಕುಣಿದಾಡೊ ಫಣಿಯ ಮೆಟ್ಟಿ ಬಾಲವ ಪಿಡಿದು ಕುಣಿಕುಣಿದಾಡುವ ಪಾದದೊಳೊಮ್ಮೆ ||ಪ|| ಮುಂಗುರುಳುಂಗುರ ಜಡೆಗಳರಳೆಲೆ ಪೊಂಗೊಳಲಲಿ ರಾಗಂಗಳ ನುಡಿಸುತ್ತ ತ್ರಿ- ಭಂಗಿಯಲಿ ನಿಂದು ಧಿಗಿಧಿಗಿತಾಂಗಿಣ-
ದಾಸ ಸಾಹಿತ್ಯ ಪ್ರಕಾರ
ಬರೆದವರು