ಪುರಂದರದಾಸ

Compositions of Purandara dasa

ಕಾಗೆ ಕೂಗಿತಲ್ಲ ಈಗ

(ರಾಗ ಪೂರ್ವಿ ಅಟತಾಳ) ಕಾಗೆ ಕೂಗಿತಲ್ಲ, ಈಗ ಒಂದು ಕಾಗೆ ಕೂಗಿತಲ್ಲ ||ಪ|| ಎಲ್ಲರೇಳದ ಮುನ್ನ ಗುಲ್ಲು ಮಾಡುತಲೆದ್ದು ಚೆಲ್ಲಿದ ಧನಧಾನ್ಯವ ಮೆಲ್ಲುತ ಮಲ್ಲಿಗೆ ಮುಡಿಯವರು ಮರೆದೊರಗಲು ಬೇಡಿ ಫುಲ್ಲನಾಭನ ಪೂಜಾಸಮಯವಿದೆಂದು || ಯಾರು ಏಳದ ಮುನ್ನ ಓರಂತೆ ತಾನೆದ್ದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರುಣಿಸು ನರಹರಿ ಹರಿಗೋವಿಂದ

(ರಾಗ ಧನಶ್ರೀ ಆದಿತಾಳ) ಕರುಣಿಸು ನರಹರಿ ಹರಿಗೋವಿಂದ ನರಜನರಿಗೆ ಮೆಚ್ಚಿ ಸಲಹೋ ಮುಕುಂದ ||ಪ|| ಮಾತುಗಳಾಡದೆ ಮೌನದಿಂದಿದ್ದರೆ ಭೂತ ಬಡೆದವನೆಂದು ಕರೆಯುವರೊ ಚಾತುರ್ಯದಿಂದಲಿ ಮಾತುಗಳಾಡಲು ಪಿತ್ತೇರಿ ಬಲು ಬಾಯಿಬಡಕನೆಂಬುವರಯ್ಯ || ಬಲು ಚೆನ್ನಿಗತನವ ತಾನು ಮಾಡಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರುಣಿಸಿ ಕೇಳೊ ಕಂದನ ಮಾತನು

(ರಾಗ ಆನಂದಭೈರವಿ ಅಟತಾಳ ) ಕರುಣಿಸಿ ಕೇಳೊ ಕಂದನ ಮಾತನು ||ಪ|| ಗರುಡವಾಹನನೆ ಗಂಗೆಯ ಪೆತ್ತ ಶ್ರೀ ಹರಿಯೆ ||ಅ|| ಇತ್ತ ಬಾರೆಂಬರಿಲ್ಲ , ಯಾರು ಕೇಳುವರಿಲ್ಲ ಹತ್ತಿರ ಕುಳ್ಳಿರಿಸಿ ಆದರಿಪರಿಲ್ಲ ತತ್ತರಗೊಳುತೇನೆ ತಾವರೆಲೆನೀರಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರೆದು ಭಿಕ್ಷೆಯ ನೀಡೆ

(ರಾಗ ಆರಭಿ ಅಟತಾಳ) ಕರೆದು ಭಿಕ್ಷೆಯ ನೀಡೆ , ಗೋಪ್ಯಮ್ಮ ನಿಮ್ಮ ತರಳ ಗೋಪಾಲನಿಗೆ ||ಪ|| ಅಂಗೈಯ ತಾವರೆಯು , ಹೊಳೆವ ಮುಂಗೈಯ ಸರಪಣಿಯು ಅಂಗಳದೊಳಗೆ ನಲಿನಲಿದಾಡುತ ಮಂಗಳಚರಣಂಗಳ ಚೆಲುವಗೆ || ಅಂಬೆಗಾಲಿಡುವವಗೆ , ಮುಂಗುರಳಲಿ ಅರಳೋಲೆ ಮಾಗಾಯಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಪ್ಪು ಎನ್ನಲು ಬೇಡವೋ ಶ್ರೀ ಹರಿಯನ್ನು

(ರಾಗ ಶಂಕರಾಭರಣ ಅಟತಾಳ) ಕಪ್ಪು ಎನ್ನಲು ಬೇಡವೋ , ಶ್ರೀ ಹರಿಯನ್ನು ಕಪ್ಪು ಎನ್ನಲು ಬೇಡವೋ ||ಪ|| ಹರಿಯ ಮಧ್ಯದಿ ಕಪ್ಪು ,ಹಾಲಾಹಲವು ಕಪ್ಪು , ಪರಮ ಅಶ್ವವೆ ಕಪ್ಪು ಪಾರಿಜಾತವೆ ಕಪ್ಪು , ಕರಿಗಳೆಲ್ಲವು ಕಪ್ಪು , ಸುಲಲಿತವರನೆ ಕಪ್ಪು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ಕಂಡೆನು ಕೋದಂಡಪಾಣಿಯನು

(ರಾಗ ಸಾವೇರಿ ಆದಿತಾಳ) ಕಂಡೆ ಕಂಡೆನು ಕೋದಂಡಪಾಣಿಯನು ||ಪ|| ಕಂಡು ಈಗ ಕೊಂಡಾಡಿದೆ ನಿನ್ನ ನಾಮವನನುದಿನ ಸ್ಮರಣೆಯ ದಿನದಿನ ಹರುಷದಿ ಮಾಡು ||ಅ|| ಜನಮುನಿ ಋಷಿಗಳು ಘನಪ್ರಮುಖರೆಲ್ಲ ಮನಭೀಷ್ಟಗಳ ಬೇಡಲು ಪೊನ್ನು ಹೆಣ್ಣು ಕೋಟಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಂದಕ್ಷರವ ಪೇಳಿದವರು ಉರ್ವಿಯೊಳಗೆ ಅವರೆ ಗುರು

(ಗುರು) ಒಂದಕ್ಷರವ ಪೇಳಿದವರು ಉರ್ವಿಯೊಳಗೆ ಅವರೆ ಗುರು ಎಂದು ಇಳೆಯೊಳು ಬಹುಮಾನ ಮಾಡಬೇಕು ಕುಂದದೆ ಒಂದಿಷ್ಟು ಅಪಮಾನ ಮಾಡಿದರೆ ತಪ್ಪದೆ ಒಂದು ನೂರು ಶ್ವಾನಜನ್ಮ ಕೋಟಿ ಹೊಲೆಜನ್ಮ ತಂದೀವನು ಪುರಂದರವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಪರಾಧ ಹತ್ತಕ್ಕೆ ಅಭಿಷೇಕ ಉದಕ

(ಅಭಿಷೇಕ ಮಹಿಮೆ) ಅಪರಾಧ ಹತ್ತಕ್ಕೆ ಅಭಿಷೇಕ ಉದಕ ಅಪರಾಧ ನೂರಕೆ ಕ್ಷೀರ ಹರಿಗೆ ಅಪರಾಧ ಸಹಸ್ರಕೆ ಹಾಲು ಮೊಸರು ಕಾಣೊ || ಅಪರಾಧ ಲಕ್ಷಕೆ ಜೇನು ಘೃತ ಅಪರಾಧ ಹತ್ತು ಲಕ್ಷಕೆ ಬಲುಪರಿ ಕ್ಷೀರ ಅಪರಾಧ ಕ್ಷಮೆಗೆ ಅಚ್ಚ ತೆಂಗಿನ ಹಾಲು ಅಪರಾಧ ಕೋಟಿಗೆ ಸ್ವಚ್ಛ ಜಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಧ್ಯಾಂಗುಲಿಯ ಮೇಲೆ ಮಣಿಸರವಿಟ್ಟಿನ್ನು

(ಜಪ) ಮಧ್ಯಾಂಗುಲಿಯ ಮೇಲೆ ಮಣಿಸರವಿಟ್ಟಿನ್ನು ಬದ್ಧ ಅಂಗುಟಾಗ್ರ ಎಣಿಸಬೇಕು ಕಿರಿ ಅಂಗುಲಿ ಪಂಚ ಭೋಗಿಸಿ (ಬಗ್ಗಿಸಿ?) ಇರಬೇಕು ಭದ್ರವಾಗಿ ನಿಲ್ಲಿಸಿ ನೀರು ಸೋರದೆ ಗಾಯತ್ರಿಯ ಬುದ್ಧಿಪೂರ್ವಕದಿಂದ ಗೆಯ್ವುತಲಿರಬೇಕು ಮುದ್ದುಮೂರುತಿ ನಮ್ಮ ಪುರಂದರವಿಠಲನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನಾಮಿಕಾಖ್ಯ ಮಧ್ಯದ

(ಜಪ) ಅನಾಮಿಕಾಖ್ಯ ಮಧ್ಯದ ಎರಡನೆಯ ಗೆರೆಯಾದಿ ಇನಿತು ಮಧ್ಯಾಂಗುಲಿ ಕೊನೆಗೆರೆ ಕೂಡಿಸಿ ಮನುಮೂರ್ತಿ ಪರಿಮಾಣ ಅಂಗುಷ್ಠದಿಂದಲಿ ಎಣಿಸು ತರ್ಜನಿಮೂಲ ಪರ್ಯಂತರ ಘನ ಹತ್ತು ಗೆರೆ ಜಪ ಪುರಂದರವಿಠಲಗೆ ಮನದಿ ಅರ್ಪಿಸುತ ಗಾಯತ್ರಿ ಜಪವ
ದಾಸ ಸಾಹಿತ್ಯ ಪ್ರಕಾರ
ಬರೆದವರು