ಜಗನ್ನಾಥದಾಸ

ನಿನ್ನ ದಾಸರ ದಾಸನೆಂತಾಹೆನೋ

--------ರಾಗ -ಕಾಂಬೋಧಿ (ಮಾಲಕಂಸ್) ಝಂಪೆತಾಳ ನಿನ್ನ ದಾಸರ ದಾಸನೆಂತಾಹೆನೋ ||ಪ|| ಅನಂತ ಅಪರಾಧವನುಗಾಲ ಮಾಡುತಿಹೆ ||ಅ.ಪ|| ಸ್ನಾನ ಸಂಧ್ಯಾನ ಜಪ ಮೌನವೇ ಮೊದಲಾದ ನಾನಾ ವಿಧದ ವಿಹಿತ ಧರ್ಮ ತೊರೆದು ನಾನು ನನ್ನದು ಎಂಬ ಹೀನ ಬುದ್ಧಿಗಳಿಂದ ಹೀನ ಜನರೊಡನಾಡಿ ಜ್ಞಾನಿ ಜನಗಳ ನಿಂದಿಸಿದೆ ||೧|| ಏಕಾದಶಿಯ ಜರೆದು ಲೋಕವಾರ್ತೆಗಳಿಂದ ಶ್ರೀಕಾಂತ ನಿನ್ನ ಸೇವೆಯನು ಮರೆದು ಬೇಕಾದ ವೈಷಿಕವ ಸ್ವೀಕರಿಸಿ ಲೋಕದೊಳು ಸಾಕಿದವರನು ನಾ ನಿರಾಕರಿಸಿ ಬಾಳುವೆನು ||೨|| ಎನಗಧಿಕರಾದವರೊಡನೆ ದ್ವೇಷವನು ಅನುಗಾಲ ಮಾಡುವೆನು ಅನಿಮಿಷೇಶ ಎನಗೆ ಸರಿಯಾದವರ ಕಂಡು ಮತ್ಸರಿಸುವೆನು ಎನಗಿಂತ ನೀಚರನು ನೋಡಿ ನಾ ನಗುತಿಪ್ಪೆ ||೩|| ಕಾಸಿನಾಸೆಗೆ ಪೋಗಿ ದಾಸವೇಷವ ಧರಿಸಿ ಮೋಸ ಮಾಡುವೆ ಜನರ ಪಾಶ ಬೀರಿ ವಾಸುದೇವನೆ ಸರ್ವದೇಶಕಲಾದಿಗಳಿ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಾದಿರಾಜಗುರು ನೀ ದಯಮಾಡದೆ

------ ರಾಗ-ಧನಶ್ರೀ (ಜೀವನಪುರಿ) ಆದಿತಾಳ(ತೀನ್ ತಾಲ್) ವಾದಿರಾಜಗುರು ನೀ ದಯಮಾಡದೆ ||ಪ|| ಈ ದುರಿತವ ಕಳೆಯದಿರ್ಪರ್ಯಾರೊ ||ಅ.ಪ|| ಕಲಿಯ ಬಾಧೆಯು ತಾ ವೆಗ್ಗಳವಾಗಿದೆ ಇಳೆಯೊಳು ಯತಿಕುಲತಿಲಕ ಕೃಪಾಳೊ ||೧|| ದೇಶಿಕಾರ್ಯ ವಾಗೀಶ ಕುವರ ತವ ದಾಸ ಸಮೂಹವ ನೀ ಸಲಹೈ ಸದಾ ||೨|| ಜನ್ಮಾದಿವ್ಯಾದ್ಯುನ್ಮಾದ ಭ್ರಮ ನಿಮ್ಮೊರೆ ಹೊಕ್ಕರಿಗಿನ್ಮೊದಲುಂಟೆ ||೩|| ನೀ ಗತಿಯೆಂದನುರಾಗದಿ ನಂಬಿದ ಭೋಗಿಪುರೀಶನ ರೋಗವ ಕಳೆದೆ ||೪|| ಯಲರುಣಿ ಭಯಕಂಜಿ ನಿಮ್ಮಾಸನ ಕೆಳಗಿರೆ ಕಂಡದನುಳುಹಿದೆ ಕರುಣಿ ||೫|| ಗರಮಿಶ್ರಿತ ನರಹರಿ ನೈವೇದ್ಯವ ಅರಿತು ಉಂಡು ಅದನರಗಿಸಿಕೊಂಡೆ ||೬|| ಹಯವದನನ ಪದದ್ವಯ ಭಜಕಾಗ್ರಣಿ ದಯದಿ ವಿಪ್ರನಿಗೆ ನಯನವನಿತ್ತೆ ||೭|| ಮೋದ ಮುನಿಮತ ಮಹೋದಧಿ ಪೂರ್ಣ ವಿಧೋದಯ ಶರಣರ ಕಾದುಕೊ ದೊರೆಯೆ ||೮||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾಸರಾಯ ಪುರಂದರದಾಸರಾಯ

-----ರಾಗ-ಸಾವೇರಿ(ಭೈರವಿ) ಅಟತಾಳ (ದೀಪಚಂದಿ) ದಾಸರಾಯ ಪುರಂದರದಾಸರಾಯ ||ಪ|| ದಾಸರಾಯ ಪ್ರತಿದಾಸರದಲಿ ಶ್ರೀನಿ- ವಾಸನ ತೋರೊ ದಯಾಸಾಂದ್ರ ಪುರಂದರ ||ಅ.ಪ|| ವರದನಾಮಕ ಭೂಮಿಸುರನ ಮಡದಿ ಬ- ಸುರಲಿ ಜನಿಸಿ ಬಂದು ಮೆರೆದೆ ಧರಣಿಯೊಳು ||೧|| ಕುಲಿಶಧರಾಹ್ವಯ ಪೊಳಲೊಳು ಮಡದಿ ಮ- ಕ್ಕಳ ಕೂಡೆ ಸುಖದಿ ಕೆಲವು ಕಾಲದೊಳಿದ್ಯೊ ||೨|| ವ್ಯಾಸರಾಯರಲಿ ಭಾಸುರ ಮಂತ್ರೋಪ- ದೇಶವ ಕೊಂಡು ರಮೇಶನ ಭಜಿಸಿದೆ ||೩|| ಮನೆ ಧನ ಧಾನ್ಯ ವಾಹನ ವಸ್ತುಗಳೆಲ್ಲ ತೃಣಕೆ ಬಗೆದು ಕೃಷ್ಣಾರ್ಪಣವೆಂದೆ ಬುಧರಿಗೆ ||೪|| ಪ್ರಾಕೃತಭಾಷೆಯೋಳ್ ನೀ ಕೃತಿ ಪೇಳಿ ಆ ಪ್ರಾಕೃತಹರಿಯಿಂದೆ ಸ್ವೀಕೃತನಾದೆ ||೫|| ತೀರ್ಥಕ್ಷೇತ್ರಗಳ ಮೂರ್ತಿ ಮಹಿಮೆಗಳ ಕೀರ್ತಿಸಿ ಜಗದಿ ಕೃತಾರ್ಥನೆಂದೆನಿಸಿದೆ ||೬|| ಪಾತಕ ವನನಿಧಿ ಪೋತನೆನಿಪ ಜಗ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋಪಾಲದಾಸರಾಯ ನಿನ್ನಯ ಪಾದ

---- ರಾಗ ಮೋಹನ(ಭೂಪ್ ) ಅಟತಾಳ (ದೀಪಚಂದಿ) ಗೋಪಾಲದಾಸರಾಯ ನಿನ್ನಯ ಪಾದ ನಾ ಪೊಂದಿದೆನು ನಿಶ್ಚಯ ||ಪ|| ಈ ಪೀಡಿಪ ತಾಪತ್ರಯಗಳನೋಡಿಸಿ ಕೈಪಿಡಿದೆನ್ನನು ನೀ ಪಾಲಿಸನುದಿನ ||ಅ.ಪ|| ಘೋರವ್ಯಾಧಿಗಳ ನೋಡಿ ವಿಜಯರಾಯ ಭೂರಿಕರುಣವ ಮಾಡಿ ತೋರಿದರಿವರೇ ಉದ್ಧಾರಕರೆಂದಂದಿ- ನಾರಭ್ಯ ತವಪಾದ ಸೇರಿದೆ ಸಲಹೆಂದು| ಸೂರಿಜನ ಸಂಪ್ರೀಯ ಸುಗುಣೋ- ದಾರ ಎನ್ನಯ ದೋಷನಿಚಯವ ದೂರಗೈಸು ದಯಾಂಬುಧಿಯೆ ನಿ- ವಾರಿಸದೆ ಕರಪಿಡಿದು ಬೇಗ ||೧|| ಅಪಮೃತ್ಯುವನು ತೊಡೆದೆ ಎನ್ನೊಳಗಿಪ್ಪ ಅಪರಾಧಗಳ ಮರೆದೆ ಚಪಲಚಿತ್ತನಿಗೊಲಿದು ವಿಪುಲಮತಿಯನಿತ್ತು ನಿಪುಣನೆಂದೆನಿಸಿದೆ ತಪಸಿಗಳಿಂದಲಿ | ಕೃಪಣವತ್ಸಲ ನಿನ್ನ ಕರುಣಕೆ ಉಪಮೆಗಾಣೆನೊ ಸಂತತವು ಕಾ- ಶ್ಯಪಿಯೊಳಗೆ ಬುಧರಿಂದ ಜಗದಾ- ಧಿಪನ ಕಿಂಕರನೆನಿಸಿ ಮೆರೆದೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರುಣಿಗಳೊಳಗೆಣೆ ಕಾಣೆನೊ ನಿನಗೆ

---ರಾಗ ಧನಶ್ರೀ (ಭೀಮ್ ಪಲಾಸ್ ) ಅಟತಾಳ (ದೀಪಚಂದಿ) ಕರುಣಿಗಳೊಳಗೆಣೆ ಕಾಣೆನೊ ನಿನಗೆ ಸ- ದ್ಗುರುವರ ರಾಘವೇ೦ದ್ರ || ಪ || ಚರಣ ಕಮಲಯುಗ್ಮ ಮೊರೆಹೊಕ್ಕವರ ಮನದ ಹರಕೆಯ ನಿರುತದಲೀವೆ-ನೀ ಕಾವೇ || ಅ || ರಾಘವೇ೦ದ್ರ ಗುರುವೇ ಗತಿ ಎ೦ದನು- ರಾಗದಿ೦ದಲಿ ಭಜಿಪ ಭಾಗವತರ ದುರಿತೌಘಗಳಳಿದು ಚೆ- ನ್ನಾಗಿ ಸ೦ತೈಸುವೆ ನೀ ಸನ್ಮೌನಿ || ೧ || ಸುಧೀ೦ದ್ರಯತಿಕರ ಪದುಮಸ೦ಭವ ಮಧು ವಧ ಪಾದಾ೦ಬುಜ ಮಧುಪ ತ್ರಿದಶಭೂರುಹದ೦ತೆ ಬುಧಜನರೀಪ್ಸಿತ ಒದಗಿ ಪಾಲಿಸಿ ಪೊರೆವೆ ಮದ್ಗುರುವೆ || ೨ || ಕುಧರದೇವನ ದಿವ್ಯರದನದಿ ಜನಿಸಿದ ನದಿಯ ತೀರದಿ ಶೋಭಿಪ ಸದಮಲ ಘನ ಮ೦ತ್ರಸದನನಿಲಯ ಜಿತ- ಮದನ ಶ್ರೀ ಜಗನ್ನಾಥವಿಠ್ಠಲನ ದೂತ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಘವೇ೦ದ್ರಯತಿಸಾರ್ವಭೌಮ

ರಾಗ - ಧನ್ಯಾಸಿ (ಬಿಲಾವಲ್) ಆದಿತಾಳ( ಕಹರವಾ) ರಾಘವೇ೦ದ್ರಯತಿಸಾರ್ವಭೌಮ ದುರಿತೌಘದೂರ ತೇ ನಮೋ ನಮೋ ಮಾಗಧರಿಪುಮತ ಸಾಗರಮೀನ ಮಹಾಘವಿನಾಶನ ನಮೋ ನಮೋ ||ಪ|| ಶ್ಲಾಘಿತಗುಣಗಣ ಸೂರಿಪ್ರಸ೦ಗ ಸದಾಗಮಜ್ಞ ತೇ ನಮೋ ನಮೋ ಮೇಘಶ್ಯಾಮಲ ರಾಮಾರಾಧಕಮೋಘ ಬೊಧ ತೇ ನಮೋ ನಮೋ || ೧ || ತು೦ಗಭದ್ರ ಸುತರ೦ಗಿಣಿತೀರಗ ಮ೦ಗಳಚರಿತ ಶುಭಾ೦ಗ ನಮೋ ಇ೦ಗಿತಜ್ಞ ಕಾಳಿ೦ಗಮರ್ದನ ಯದುಪು೦ಗವ ಹೃದಯಸುರ೦ಗ ನಮೋ ಸ೦ಗಿರಚಿಹ್ನಿತ ಶೃ೦ಗಾರಾನನ ತಿ೦ಗಳ ಕುರುಣಾಪಾ೦ಗ ನಮೋ ಗಾ೦ಗೇಯ ಸಮಭಾ೦ಗ ಕುಮತ ಮಾತ೦ಗ ಸ೦ಘ ಶಿತಪಿ೦ಗ ನಮೋ || ೨ || ಕೋವಿದಮಸ್ತಕಶೋಭಿತಮಣಿ ಸ೦ಭಾವಿತಮಹಿಮ ಪಾಲಯ ಮಾ೦ ಸೇವಿ(/ವಾ?)ಪರ ಸರ್ವಾರ್ಥಪ್ರದ ಬೃ೦ದಾವನಮ೦ದಿರ ಪಾಲಯ ಮಾ೦ ಭಾವಜಮಾರ್ಗಣ ಭುಜಗವಿನಾಯಕ ಭಾವಜ್ಞಪ್ರಿಯ ಪಾಲಯ ಮಾ೦
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀ ರಾಘವೇ೦ದ್ರ ನಿಮ್ಮ ಚಾರುಚರಣವ

-----ರಾಗ ನವರೋಜು (ಬಿಲಾವಲ್) ಆದಿತಾಳ(ಕಹರವಾ) ಶ್ರೀ ರಾಘವೇ೦ದ್ರ ನಿಮ್ಮ ಚಾರುಚರಣವ ಸಾರಿದೆ ಶರಣ ಮ೦ದಾರ ಕರುಣವ || ಪ || ಘೋರ ಭವ ವನಧಿ ತಾರಿಸು ಕರುಣದಿ ಸೂರಿ ಸುಧೀ೦ದ್ರ ಕುಮಾರ ಉದಾರ || ಅ.ಪ || ಮುನಿರಾಯ ನಿಮ್ಮ ಪಾದವನರುಹ ಧ್ಯಾನ ಪ್ರಣವ ಸುಸ್ತವನ ಅರ್ಚನೆ ಮಾಳ್ಪ ನಾನಾ ಜನರ ವಾ೦ಛಿತವೀವ ಗುಣಗಣಪೂರ್ಣ ಜ್ಞಾನ ಧನವ ಪಾಲಿಸೆನಗೀಕ್ಷಣ ನಿನ್ನಾಧೀನ ಮನುಜನ ಪ್ರತಿದಿನ ದಣಿದಣಿಸುವುದು ಘನವೇ ಗುರುಪಾವನತರಚರಿತ || ೧ || ಮೂಲರಾಮನ ಪಾದಕೀಲಾಲಜ ಮಧುಪ ಬಾಲನ ಬಿನ್ನಪ ಲಾಲಿಸೋ ಮುನಿಪ ತಾಳಲಾರೆನೊ ತಾಪತ್ರಯದ ಸ೦ತಾಪ ಕೇಳೊ ವಿಮಲಜ್ಞಾನ ಶೀಲ ಸ್ವರೂಪ ಭೂಲಲನಾಪತಿ ಕೋಲನ೦ದಿನಿ ಕೂಲಗ ವರಮ೦ತ್ರಾಲಯನಿಲಯ || ೨ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶಿವ ನೀನ್ಹ್ಯಾಗಾದ್ಯೋ

---ರಾಗ ಮಧ್ಯಮಾವತಿ (ಭೂಪ್ ) ಅಟತಾಳ (ದೀಪಚಂದಿ) ಶಿವ ನೀನ್ಹ್ಯಾಗಾದ್ಯೋ ನರಪಶು ಶಿವ ನೀನ್ಹ್ಯಾಗಾದ್ಯೋ ಶಿವ ನೀನಾದರೆ ಶಿವನರಾಣಿ ನಿನಗ್ಯುವತಿ ಆದಳಲ್ಲೊ ಅವಿವೇಕಿ ಮನುಜಾ ||ಪ|| ಗರಗೊರಳೊಲಿ ಧರಿಸಿದ ಮಹದೇವನ ಸರಿಯಾಗುವಿಯಂತೊದರುತಿಹುವಿ ಪರಮಾನ್ನದಿ ಮಕ್ಷಿಕ ಬೀಳಲು ಉಂಡು ಕರಗಿಸಿಕೊಳ್ಳದೆ ಅಳುವ ಮುಗ್ಗಲುಗೇಡಿ ||೧|| ಕುಂಡಲಿಭೂಷಣ ಚಂಡವಿಕ್ರಮ ಕ- ಮಂಡಲುಧರನು ನಾನೆಂಬೀ ಕಂಡರೆ ಸರ್ಪನ ಕಳವಳಗೊಳುತೀ ಹೆಂಡಗಾರ ಹೆಣ ಮುಂಡೇಗಂಡ ||೨|| ನಂದಿವಾಹನ ಪುರಂದರಾದಿ ಸುರ- ವಂದ್ಯಹರನೇ ನಾನೆಂತೆಂಬೀ ಮಂದಮತಿಯೆ ಒಂದಿನ ಎತ್ತೇರಲು ಮಂದಿಯೊಳಗೆ ನೀ ನಿಂದಿತನಾಗುವಿ ||೩|| ಪೀತಾಂಬರ ನಿರ್ಭೀತ ಭೂತಗಣ- ನಾಥನೆ ನಾನೆಯೆಂತೆಂಬೀ ಧೋತರ ಬಿಟ್ಟರೆ ಪಾದರಕ್ಷೆಯಲಿ ಘಾತಿಸುವರು ನಿನ್ನ ಭೂತ ಸೋಕಿತೆಂದು ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅರಿತವರಿಗತಿಸುಲಭ ಹರಿಯ ಪೂಜೆ

----ರಾಗ ಕಾಂಬೋಧಿ (ಬಾಗೇಶ್ರೀ) ಝಂಪೆತಾಳ ಅರಿತವರಿಗತಿಸುಲಭ ಹರಿಯ ಪೂಜೆ ||ಪ|| ಅರಿಯದವ ನಿರ್ಭಾಗ್ಯತರ ಲೋಕದೊಳಗೆ ||ಅ.ಪ|| ಹೈಮಾಂಡ ಮಂಟಪವು ಭೂಮಂಡಲವೆ ಪೀಠ ಸೋಮಸೂರ್ಯರೆ ದೀಪ ಭೂರುಹಗಳು ಚಾಮರಗಳತಿ ವಿಮಲ ವ್ಯೋಮ ಮಂಡಲ ಛತ್ರ ಯಾಮಾಷ್ಟಕಗಳಷ್ಟದಳದ ಪದ್ಮವು ಎಂದು ||೧|| ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ ಮಲಯಜಾನಿಲವೆ ಶ್ರೀಗಂಧಧೂಪ ಇಳೆಯೊಳಗೆ ಬೆಳೆವ ಧಾನ್ಯಗಳೆಲ್ಲ ನೈವೇದ್ಯ ಥಳಥಳಿಪ ಮಿಂಚು ಕರ್ಪೂರದಾರತಿ ಎಂದು ||೨|| ನಕ್ಷತ್ರಮಂಡಲವೆ ಲಕ್ಷದೀಪಾವಳಿಯು ದಕ್ಷಿಣೋತ್ತರ ಅಯನಗಳೆರಡು ಬನವು ವೃಕ್ಷದಲ್ಲಿಜ ಸಫಲ ಪುಷ್ಪಗಳೊಳಗೆ ಲಕ್ಷ್ಮೀ ವಕ್ಷವ್ಯಾಪಕನಾಗಿ ತಾನೆ ಭೋಗಿಪನೆಂದು ||೩|| ಗುಡುಗು ಸಪ್ತಸಮುದ್ರ ಸಿಡಿಲು ಘೋಷವೆ ವಾದ್ಯ ಪೊಡವಿಪರಿಗೀವ ಕಪ್ಪವೆ ಕಾಣಿಕೆ ಉಡುಪ ಭಾಸ್ಕರರ ಮಂಡಲಗಳಾದರ್ಶಗಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾರಿದ ಡಂಗುರ ಯಮನು

----ರಾಗ - ನಾದನಾಮಕ್ರಿಯೆ (ಸಾರಂಗ) ಅಟತಾಳ (ದೀಪಚಂದಿ) ಸಾರಿದ ಡಂಗುರ ಯಮನು-ಅಘ- ನಾರಿಯರೆಳೆದು ತಂದು ನರಕದೊಳಿಡು ಎಂದು ||ಅ.ಪ|| ಹೊತ್ತಾರೆ ಎದ್ದು ಪತಿಗೆ ಎರಗದವಳ ಮೃತ್ತಿಕೆ ಶೌಚ ಮಾಡದೆ ಇಪ್ಪಳ ಹೊತ್ತಾಗೆ ಮೈತೊಳೆದತ್ತಿಗೆ ನಾದಿನಿ ಅತ್ತೆ ಮಾವರ ಬೈವಳೆತ್ತಿ ತನ್ನಿರೊ ಎಂದು ||೧|| ತಿಲಕಾಯುಧವ ಬಿಟ್ಟು ಕುಂಕುಮವಿಡುವಳ ಬೆಳಗಾದ ಕಾಲಕ್ಕು ಮಲಗಿಪ್ಪಳ ಮಲಿನ ವಸ್ತ್ರವನುಟ್ಟು ಪತಿಬಳಿ ಪೋಪಳ ಕಲಹಕಾರಿಯ ಪಿಡಿದೆಳೆತನ್ನಿರೊ ಎಂದು ||೨|| ಉತ್ತಮ ಗುರುಹಿರಿಯರನು ನಿಂದಿಸುವಳ ಹೆತ್ತ ಮಕ್ಕಳ ಮಾರಿ ಬದುಕುವಳ ಪ್ರತ್ಯೇಕ ಶಯ್ಯದಿ ಮಲಗಿಪ್ಪಳ ನೀಚ- ವೃತ್ತಿಯಳ ಪಿಡಿದೆತ್ತಿ ತನ್ನಿರೊ ಎಂದು ||೩|| ಜಲಜಕ್ಕಿಸಾಳಿ ಕಂಬಳಿ ಲೋಳೀ ಬಕ್ಕಿ ಗೊಂ- ದಲ ಮೊದಲಾದುವು ದೈವವೆಂದು ತಿಳಿದು ಪಿಶಾಚಿ ಎಂಜಲನುಂಡು ಹಿಗ್ಗುವ
ದಾಸ ಸಾಹಿತ್ಯ ಪ್ರಕಾರ
ಬರೆದವರು