ನಾನು ನೀನು ಎನ್ನದಿರೊ ಹೀನ ಮಾನವ
( ಭೈರವಿ ರಾಗ ಮಟ್ಟತಾಳ)
ನಾನು ನೀನು ಎನ್ನದಿರೊ ಹೀನ ಮಾನವ
ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಪ್ರಾಣಿ ||ಪ||
ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೊ
ಅನ್ನದಿಂದ ಬಂದ ಕಾಮ ನಿನ್ನದೇನೆಲೊ
ಕರ್ಣದಿಂದ ಬರುವ ಘೋಷ ನಿನ್ನದೇನೆಲೊ
ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೊ ||೧||
ಹಲವು ಜನ್ಮದಲಿ ಬಂದಿರ್ವನು ನೀನೆಲೋ
ಮಲದ ಗರ್ಭದಲಿ ನಿಂದಿರುವನು ನೀನೆಲೋ
ಜಲದ ದಾರಿಯಲ್ಲಿ ಬಂದಿರುವನು ನೀನೆಲೋ
ಕುಲವು ಜಾತಿ ಗೋತ್ರಗಳುಳ್ಳವನು ನೀನೆಲೋ ||೨||
ಕಾಲ ಕರ್ಮ ಶೀಲ ನೇಮ ನಿನ್ನದೇನೆಲೋ
ಜಲ ವಿದ್ಯೆ ಬಯಲ ಮಾಯೆ ನಿನ್ನದೇನೆಲೋ
ಕೀಲು ಜಡಿದ ನರದ ಬೊಂಬೆ ನಿನ್ನದೇನೆಲೋ
ಲೋಲ ಆದಿಕೇಶವನ್ನ ಭಕ್ತನಾಗೆಲೋ ಪ್ರಾಣೀ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ನಾನು ನೀನು ಎನ್ನದಿರೊ ಹೀನ ಮಾನವ
- Log in to post comments