ಭಾರತಿ ಭಕುತಿಯನು ಕೊಡುವದು

ಭಾರತಿ ಭಕುತಿಯನು ಕೊಡುವದು

ರಾಗ: ಸುರಟಿ ಆದಿತಾಳ ಭಾರತಿ ಭಕುತಿಯನು ಕೊಡುವದು ಮಾರುತ ಸತಿ ನೀನು ||ಪ|| ಮೂರು ಲೋಕದೊಳಗಾರು ನಿನಗೆ ಸರಿ | ಮಾರಾರಿಗಳಿಂದಾರಾಧಿತಳೆ ||ಅ. ಪ|| ವಾಣಿ ಎನ್ನ ವದನದಲ್ಲಿಡು ಮಾಣದೆ ಹರಿಸ್ತವನ| ವೀಣಾಧೃತ ಸುಜ್ಞಾನಿಯೆ ಪಂಕಜ | ಪಾಣಿಯೇ ಕೋಕಿಲ ವಾಣಿಯೇ ಪಾಲಿಸೆ ಸುಂದರಿ ಶುಭಕಾರಿ ಸುಮನಸ ವೃಂದ ಶೋಭಿತ ಕಬರಿ|| ಮಂದಹಾಸ ಮುಖದಿಂದ ನೋಡಿ ನಿನ್ನ ಕಂದನೆಂದು ಎನ್ನ ಮುಂದಕೆ ಕರೆಯೆ ಮಂಗಳಾಂಗಿ ಎನ್ನ ಅಂತರಂಗದಲ್ಲಿಡು ಮುನ್ನ | ತುಂಗ ವಿಕ್ರಮ ತಂದೆ ಗೋಪಾಲ ವಿಠ್ಠಲನ | ಹಿಂಗದೆ ನೆನೆವ ಸುಖಂಗಳ ನೀಡೆ
ದಾಸ ಸಾಹಿತ್ಯ ಪ್ರಕಾರ
ಬರೆದವರು