ಪದ / ದೇವರನಾಮ

ದಾಸರ ಪದಗಳು

ಅಮ್ಮಾ ಬಾ ನಮ್ಮಮ್ಮನೇ

(ಮಾಂಡ್ ರಾಗ ಕೇರವಾ ತಾಳ ) ಅಮ್ಮಾ ಬಾ ನಮ್ಮಮ್ಮನೆ ಅಮ್ಮ ನೀಡಮ್ಮನೆ ಬೊಮ್ಮನಾ ಪಡೆದ ಶ್ರೀಹರಿ ಪರಬ್ರಹ್ಮನೆ ||ಪ|| ಬೇಡುವೆ ನಿಮ್ಮನೆ ಕಾಡುವೆ ಸುಮ್ಮನೆ ಓಡ್ಯಾಡಿ ಬಂದು ಅಂಡಲಿವೆ ನಾ ತಮ್ಮನೆ ||೧|| ಬಯಸಿ ಬಂದೊಡೆ ನಾ ಕಾಯಬೇಕೆನ್ನನ ತಾಯಿ ತಂದ್ಯೊಬಳೆ ನೀನೇ ಸನಾತನ ||೨|| ಉಣಿಸು ನಾಮಾಮೃತ ದಣಿಸು ಮನೋರಥ ದೀನ ಮಹಿಪತಿ ಜೀವ ಪ್ರಾಣಕ ಸನಾಥ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶರಣು ಶರಣು ಶರಣು ದೇವಾದಿಗಳೊಂದಿತನಹುದೋ ಸ್ವಾಮಿ ಗಣನಾಥ

(ಸಾರಂಗ ರಾಗ , ಕೇರವಾ ತಾಳ) ಶರಣು ಶರಣು ಶರಣು ದೇವಾದಿಗಳೊಂದಿತನಹುದೋ ಸ್ವಾಮಿ ಗಣನಾಥಾ ||ಪ|| ಅಖಿಳಭುವನದೊಳು ಪೂಜಿತಾ ಭಕುತಜನಕೆ ನೀ ಸಾಕ್ಷಾತಾ ಸಕಲವಿದ್ಯಾವರದಾತಾ ಶಕುತನಹುದಯ್ಯಾ ಪ್ರಖ್ಯಾತ ||೧|| ಶುದ್ಧಬುದ್ಧರ ಸಹಕಾರಾ ಬುದ್ಧ ಈವ ಘನ ಉದಾರಾ ರಿದ್ಧಿ ಸಿದ್ಧಿಗಾಗಿಹೆ ನೀ ಆಧಾರಾ ಸಿದ್ಧಿದಾಯಕ ವಿಘ್ನಹರಾ ||೨|| ಜನಕೆ ಮಾಡುವ ದೋಷನಾಶಾ ಅನುದಿನವು ಮತಿಪ್ರಕಾಶಾ ದೀನ ಮಹೀಪತಿಯಾ ಮನೋಭಾವಪೂರಿತಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿಮ್ಮಿಂದ ಗುರು ಪರಮಕಲ್ಯಾಣವು

(ರಾಗ - ಬಹುಳಿ (ಶಂಕರಾ) ಝಪ್ ತಾಳ) ನಿಮ್ಮಿಂದ ಗುರು ಪರಮಕಲ್ಯಾಣವು ನಿಮ್ಮಿಂದಲೆನಗೆ ಘನ ಪರಿಪೂರ್ಣವು||ಪ|| ಹುರಿದು ಭವಬೀಜ ಧರೆಯೊಳು ದಯ ಕರುಣದಲಿ ಪರಮ ಆನಂದ ಸುಖ ಮಳೆಯಗರೆದು ಕರ್ಮಪಾಶಗಳೆಂಬ ಕರಿಕಿಬೇರನು ಕಿತ್ತಿ ಹರಗಿ ಬಿತ್ತಲು ನಾಮ ತಾರಕುಪದೇಶದಲಿ ||೧|| ವರ ಪ್ರತಾಪದ ಬೆಳೆಯು ತುಂಬಿ ತುಳುಕುವ ಸಿರಿಯು ಸರ್ವಮಯವೆಂಬ ತೆನೆಗಳು ತುಂಬಿ ಏರಿ ಸುಷುಮ್ನ ನಾಳದ ಮಂಚಿಕೆಯ ಮೆಟ್ಟಿ ಪರಿಪರಿ ಅವಸ್ಥೆ ಹಕ್ಕಿಗಳ ಹಾರಿಸಲಾಗಿ ||೨|| ಮುರಿದು ಭೇದಾಬೇದವೆಂಬ ಗೂಡಲೊಟ್ಟಿ ಅರಿವು ಕಣದಲ್ಲಿ ತರತರದಲಿಕ್ಕಿ ಜ್ಞಾನವೈರಾಗ್ಯವೆಂಬೆರಡು ಎತ್ತುಗಳ ಹೂಡಿ ಸರ್ವಗುಣ ತೆನೆ ತೆಗೆದು ತುಳಿದು ರಾಶಿ ಮಾಡಿಸಲಾಗಿ ||೩|| ಸರ್ವಮಯವೆಂಬ ರಾಶಿಯು ಒಬ್ಬುಳಿಯ ಮಾಡಿ ತೂರಿ ತರ್ಕ ಭಾಸಗಳೆದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಟ್ಟು ಕೊಂಡಾಡಬೇಕು ಘಟ್ಟಿಗೊಂಡು ಗುರುಭಕ್ತಿ

( ಭೀಮಪಲಾಸ ರಾಗ ತೀನ್ ತಾಳ) ಕೊಟ್ಟು ಕೊಂಡಾಡಬೇಕು ಘಟ್ಟಿಗೊಂಡು ಗುರುಭಕ್ತಿ ಗುಟ್ಟಿನೊಳು ಕೊಡಬೇಕು ಇಟ್ಟುದೋರುತದ ಮುಕ್ತಿ ||ಪ|| ಕೊಟ್ಟ ಗುರುವಿಗೆ ಮನ ಕೊಳ್ಳಬೇಕು ನಿಜಘನ ಇಟ್ಟಾದೆ ನಿಜಧನ ಪಡಿಬೇಕು ಸಾಧನ ಕೊಟ್ಟಾಂಗ ಕೊಂಬು ಖೂನ ಹೇಳಿಕೊಡುವನ ಗುರುಜ್ಞಾನ ಮುಟ್ಟಿ ಭಜಿಸುದು ಪೂರ್ಣಸ್ವಾಮಿ ಶ್ರೀನಾಥಾರ್ಪಣ ||೧|| ಕೊಟ್ಟು ಕೊಂಡ ನೋಡಿ ನೇಮ ಸೃಷ್ಟಿಯೊಳು ಸುದಾಮ ಮುಷ್ಟಿ ಅವಲಕ್ಕಿ ಧರ್ಮ ಪಡೆದುಕೊಂಡ ದಿವ್ಯಗ್ರಾಮ ಕೊಟ್ಟು ಶಾಕದಳವಮ್ಮ ದ್ರೌಪದಿ ಆದಳು ಸಂಭ್ರಮ ಕೃಷ್ಣಗಿದೆ ಅತಿಪ್ರೇಮ ಶಿಷ್ಟಜನಕ ಸುಕ್ರಮ ||೨|| ಮುಕ್ತಿಗಿದೆ ಮೇಲು ಭಕ್ತಿ ನೋಡಿ ಸಜ್ಜನರ ಯುಕ್ತಿ ಭೋಕ್ತ ಬಲ್ಲ ಗುರುಮೂರ್ತಿ ಮಾಡಬೇಕು ಭಾವಭಕ್ತಿ ಮುಕ್ತ ಜನರಿಗಿದೆ ಗತಿಕೊಟ್ಟು ಕೊಂಡಾಡುವ ಶಕ್ತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದು ಶ್ರೀಗುರುಪಾದಪದ್ಮ ನೋಡುವ

(ರಾಗ - ವರಾಳಿ ( ಬಹಾರ್ ) ತೀನ್ ತಾಳ) ಇಂದು ಶ್ರೀಗುರುಪಾದಪದ್ಮ ನೋಡುವ ಎಂದೆಂದು ಬಿಡದೆ ಭಕ್ತಿಭಾವ ಮಾಡುವ ||ಪ|| ಮನವೆಂಬ ಮಂಟಪವನಾಡುವ ನೆನವು ನವರತ್ನದ ಸಿಂಹಾಸನಿಡುವ ಜ್ಞಾನಧ್ಯಾನದೆಡಬಲದಿ ಪಿಡಿವ ಅನುವಾಗಿ ಅನಿಮಿಷದಲಿ ನೋಡುವ ||೧|| ತನುವೆಂಬ ತಾರತಮ್ಯಭಾವ ಮಾಡುವ ಅನುಭವದಿಂದನುಪಮನ ನೋಡುವ ಆನಂದವೆಂಬ ಅಭಿಷೇಕವ ಮಾಡುವ ಮನೋ ಅಭೀಷ್ಟೆಯ ಸುವಸ್ತ್ರ ನೀಡುವ ||೨|| ಬುದ್ಧಿಭಾವನೆಯ ಗಂಧಾಕ್ಷತೆ ಇಡುವ ಶುದ್ಧ ಸುವಾಸನೆ ಪರಿಮಳ ಮಾಡುವ ಶಬ್ದ ಸುವಾಕ್ಯದ ಪುಷ್ಪವ ನೀಡುವ ಸಿದ್ಧಾಂತವೆಂಬುವ ಸುಸೇವೆ ಮಾಡುವ ||೩|| ಪ್ರಾಣಪಂಚದಾ ಪಾದಪೂಜೆಯ ಮಾಡುವ ಪುಣ್ಯ ಪೂರ್ವಾರ್ಜಿತ ಫಲಗಳಿಡುವ ಅನೇಕವಾದ ಪರಿಪೂಜೆ ಮಾಡುವ ಧನ್ಯಧನ್ಯವಾಗುವ ಮುಕ್ತಿ ಬೇಡುವ ||೪|| ನಿರ್ವಿಕಲ್ಪ ನಿಜಮೂರುತಿ ನೋಡುವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪೂಜಿ ಮಾಡುವ ಬನ್ನಿರೊ ಗುರುಪಾದ

( ಭೈರವಿರಾಗ ತೀನ್ ತಾಳ) ಪೂಜಿ ಮಾಡುವ ಬನ್ನಿರೊ ಗುರುಪಾದ ಪೂಜಿ ಮಾಡುವ ಬನ್ನಿರೊ ||ಪ|| ತಿಳುಹು ತಿಳಿಯ ನೀರಿಲೆ ತನುವಿಲೆ ಅಭಿಷೇಕವ ಮಾಡುವ ನಿರ್ಮಳವೆಂಬ ಸುವಸ್ತ್ರದಿಂದಲಿ ದಿವ್ಯ ಪೂಜಿ ಮಾಡುವ ಬನ್ನಿರೊ ||೧|| ಶುದ್ಧ ಸುವಾಸನೆಯ ಗಂಧದಾರತಿ ಅಕ್ಷತಿಯಿಡುವ ಸದ್ಭಾವ ಪರಿಮಳ ಪುಷ್ಪದಿಂದಲಿ ದಿವ್ಯ ಪೂಜಿ ಮಾಡುವ ಬನ್ನಿರೊ ||೨|| ಅರವೆಂಬ ದೀಪದಲಿ ಗುರುಸ್ವರೂಪವ ನೋಡುವ ಬನ್ನಿರೊ ಪರಮಾನಂದ ಹರುಷ ನೋಡುತ ನಿಜ ನಲಿದಾಡುವ ಬನ್ನಿರೊ || ೩|| ಭಕ್ತವತ್ಸಲ ಮೂರ್ತಿಗೆ ಸುಖದುಃಖ ಧೂಪಾರತಿ ಮಾಡುವ ಏಕೋಚಿತ್ತವೆಂಬ ಏಕಾರತಿಯಿಂದ ಪೂಜಿ ಮಾಡುವ ಬನ್ನಿರೊ ||೪|| ನೆನವು ನೈವೇದ್ಯದಲಿ ಮನಬುದ್ಧಿ ತಾಂಬೂಲವ ನೀಡುವ ಪ್ರಾಣ ಮಹಿಪತಿಯ ಪಂಚಾರತಿಯಿಂದ ಪೂಜಿ ಮಾಡುವ ಬನ್ನಿರೊ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುರು ಮಧ್ವಮುನಿರನ್ನ ಮೂರುಪರಿಯದೋರಿದೆ ನಿನ್ನ

(ಖಮಾಜರಾಗ ಆದಿತಾಳ) ಗುರು ಮಧ್ವಮುನಿರನ್ನ ಮೂರುಪರಿಯದೋರಿದೆ ನಿನ್ನ ಹರಿಭಕ್ತಿಯಲಿ ಅವಿಚ್ಛಿನ್ನ ಸರಿಯಾರು ಧರೆಯೊಳು ನಿನ್ನ ಸ್ಮರಣೆಯಲಿ ರಾಮನ ಪರಮಪಾಪನ್ನ ||೧|| ಅತಿಬಾಹು ಪರಾಕ್ರಮ ಕ್ಷಿತಿಯೊಳು ನಿನ್ನದೇ ನೇಮ ಪ್ರಥಮಲ್ಯಾದೆ ಹನುಮ ದ್ವಿತೀಯಲ್ಯಾದೆ ಭೀಮ ತೃತೀಯದಲಿ ಪೂರ್ಣಪ್ರಜ್ಞನೆನಿಸಿದೆ ನಿಸ್ಸೀಮ ||೨|| ಸಾಹ್ಯಕ್ಕೆ ಕಾರಣ ಮಹಾದೈತ್ಯರ ಮರ್ದನ ಶ್ರೀಹರಿ ಸಾನ್ನಿಧ್ಯ ಪೂರ್ಣ ಇಹ ಸಕಲನಿಪುಣ ಮಹಿಪತಿ ಮುಖ್ಯಪ್ರಾಣ ಸ್ವಹಿತಸಾಧನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪರಮ ಸಂಜೀವನವು ಗುರು ನಿಮ್ಮ ನಾಮ

( ತಿಲಕಕಾಂಬೋದ ರಾಗ ಝಂಪೆತಾಳ) ಪರಮ ಸಂಜೀವನವು ಗುರು ನಿಮ್ಮ ನಾಮ ಸುರಮುನಿಯು ಸೇವಿಸುವ ದಿವ್ಯನಾಮ ||ಪ|| ಕರಿಯ ಮೊರೆಯನು ಕೇಳಿ ದುರಿತ ಹರಿಸಿದ ನಾಮ ಮೊರೆಯ ಹೊಕ್ಕವರ ಸ್ಥಿರ ಹೊರೆವ ನಾಮ ತರಳ ಪ್ರಹ್ಲಾದನವಸರಕೆ ಒಲಿದಿಹ ನಾಮ ಸ್ಮರಿಸುವರ ವಜ್ರಪಂಜರ ನಿಮ್ಮ ನಾಮ||೧|| ಧರೆಯೊಳಗೆ ದ್ರೌಪದಿಯ ಸ್ಮರಣೆಗೊದಗಿದ ನಾಮ ಕರುಣದಿಂದಭಿಮಾನಗಾಯ್ದ ನಾಮ ದಾರಿದ್ರ್ಯವನು ಸುಧಾಮನಿಗ್ಹಿಂಗಿಸಿದ ನಾಮ ಸಿರಿಸಂಪತ್ತಿಯು ಆಯಿತೀ ನಾಮ ||೨|| ಹರುಷಕರವಿತ್ತು ಉಪಮನ್ಯುಗೊಲಿದ ನಾಮ ಕ್ಷೀರಸಾಗರದಲಿಪ್ಪ ನಾಮ ಶರಣುಹೊಕ್ಕವರ ಪರಿಪರಿ ಕಾಯ್ದ ನಾಮ ಧೀರಧ್ರುವಗಚಲಪದವಿತ್ತ ನಾಮ ||೩|| ಕರೆದು ನಾರಗನೆಂದವನ ತಾರಿಸಿದ ನಾಮ ಪರಮಪಾತಕ ಪರಿಹರಿಸಿದ ನಾಮ ವರಮುನಿಜನರ ತೃಪ್ತಿಗೈಸುವ ನಾಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಾಸ್ಕರಗುರುವರ ಮಗುಟ ವಿಶ್ವದೊಳೊಬ್ಬರೆ ಪ್ರಗಟ

(ರಾಗ-ಹಂಸಧ್ವನಿ ತಾಳ-ದಾದರಾ) ಭಾಸ್ಕರಗುರುವರ ಮಗುಟ ವಿಶ್ವದೊಳೊಬ್ಬರೆ ಪ್ರಗಟ ಭಾಸ್ಕರಗುರುದಯನೋಟ ರಸಕಾಯ ಸವಿದುಂಬೂಟ ||ಪ|| ಭಾಸ್ಕರಗುರು ನಿಜದೆಯ ಲೇಸುದೋರುವ ವಿಜಯ ಭಾಸ್ಕರಗುರು ಅಭಯ ಹಸನಾದ ಪುಣ್ಯೋದಯ ||೧|| ಭಾಸ್ಕರ ಕರುಣಾಕಟಾಕ್ಷ ಭಾಸುದು ಘನ ಪ್ರತ್ಯಕ್ಷ ಭಾಸ್ಕರಗುರು ನಿಜಭಿಕ್ಷ ಹಸನಾಗಿ ಮಾಡುವಾ ಸಂರಕ್ಷ ||೨|| ಭಾಸ್ಕರಗುರು ನಿಜಬೋಧ ಭಾಸುವ ಘನಸರ್ವದಾ ಭಾಸ್ಕರಗುರು ಪ್ರಸಾದ ಸ್ವಸುಖದೋರುವ ಸಂವಿಸ್ವಾದ ||೩|| ಭಾಸ್ಕರಗುರು ಉಪದೇಶ ಭಾಸುವ ಬಲು ಸಂತೋಷ ಭಾಸ್ಕರಗುರುವರೇಶ ಈಶನಹುದೊ ಸರ್ವೇಶ ||೪|| ಭಾಸ್ಕರಗುರುಕೃಪೆ ಜ್ಞಾನ ಲೇಸಾಗಿ ತೋರುವದುನ್ಮನ ಭಾಸ್ಕರಗುರು ದಯಕರುಣ ದಾಸಮಹಿಪತಿಗಾಭರಣ ||೫|| --- ಮಹೀಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರುಣಿಸೊ ಗುರುವೆ ಚರಣಸ್ಮರಣೆಯ ನಿಮ್ಮ

(ರಾಗ ಭೈರವಿ ಕೇರವಾ ತಾಳ) ಕರುಣಿಸೊ ಗುರುವೆ ಚರಣಸ್ಮರಣೆಯ ನಿಮ್ಮ ||ಪ|| ಸ್ಮರಿಸಲಿಕ್ಕೆ ನಾ ನಿಮ್ಮ ತರಳ ಪ್ರಹ್ಲಾದನಲ್ಲ ಅರಿತು ಮಾಡುವುದು ದಯ ತರಣೋಪಾಯದ ||೧|| ಒಲಿಸಿಕೊಳ್ಳಲು ನಿಮ್ಮ ಫಲ್ಗುಣನಂಥವನಲ್ಲ ಗೆಲಿಸುವದೋ ನೀ ಸುಪಥ ನೆಲೆ ನಿಭದೋರಿ ||೨|| ಮೊರೆ ಇಡಲು ನಾ ನಿಮ್ಮ ಕರಿರಾಜನಂಥವನಲ್ಲ ಕರುಣಿಸುವುದೊ ಎನಗೆ ಅರವಿಡಿದು ಪೂರ್ಣ ||೩|| ಶರಣು ಹೋಗಲು ನಿಮ್ಮ ಧೀರ ವಿಭೀಷಣನಲ್ಲ ಪಾರ ಗೆಲಿಸುವದೊ ನಿಮ್ಮ ವರಕೃಪೆಯಿಂದ ||೪|| ಭಕ್ತಿಮಾಡಲು ನಿಮ್ಮ ಶಕ್ತ ಸಮರ್ಥನಲ್ಲ ಯುಕ್ತಿದೋರುವದೊ ನಿಮ್ಮ ಮುಕ್ತಿ ಮಾರ್ಗದ ||೫|| ಸ್ತುತಿಯ ಮಾಡಲು ನಿಮ್ಮ ಅತಿಶಯ ಭಕ್ತ ನಾನಲ್ಲ ಗತಿಸುಖದೋರೆನಗೆ ಪತಿತಪಾವನ ||೬|| ದಾಸರ ದಾಸನೆಂದು ಲೇಸಾಗಿ ಮಹಿಪತಿಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು