ಪದ / ದೇವರನಾಮ

ದಾಸರ ಪದಗಳು

ನೆರೆನಂಬು ಮನವೆ ಹರಿಯ

( ಪೂರಿಯಾ ರಾಗ , ರೂಪಕತಾಳ) ನೆರೆನಂಬು ಮನವೆ ಹರಿಯ ಸಿರಿಯನಾಳುವ ದೊರಿಯ ||ಪ|| ಸ್ಮರಿಸಿದಾಕ್ಷಣ ಕರಿಯ ಸೆರೆಯ ಬಿಡಿಸಿದನರಿಯ ಮರೆಯದೆ ಜಗದೊಳು ಹರಿಯ ಚರಣಕಮಲಯುಗ ಮರಿಯ ||೧|| ಧರಿಯೊಳು ದ್ರೌಪದಿ ಮೊರೆಯ ಹರಿ ಕೇಳಿದ ನೀನರಿಯ ಅರಿತು ನಡೆವನೀ ಪರಿಯ ಸಾರುತಿದೆ ಕೃತಿ ಖರೆಯ ||೨|| ಅರಿವಿನೊಳು ಮನ ಹರಿಯ ದೋರುವ ಘನ ಆಶ್ಚರಿಯ ತರಳ ಮಹಿಪತಿ ದೊರಿಯ ನೆರೆನಂಬಿರು ಈ ಪರಿಯ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರುಣಸಾಗರನಹುದೊ ಶರಣಜನರ ಪ್ರಿಯ

( ಜೀವನಪುರಿ ರಾಗ ತೀನ್ ತಾಳ) ಕರುಣಸಾಗರನಹುದೊ ಶರಣಜನರ ಪ್ರಿಯ ||ಪ|| ಕರಿರಾಜ ಮೊರೆ ಇಡಲು ಭರದಿಂದೊದಗಿ ಬಂದ್ಯೊ ದುರಿತ ಬಂದಡರಿದ ಅವಸರದೊಳು ನೀ ಪರಿಹರಿಸಿದ್ಯೊ ಶ್ರಮ ಪರಮದಯಾಳ ||೧|| ದುರಿತ ನಿರ್ಮಿಸಿದವನ ಬೆರಳಲಿ ಸೀಳಿದ್ಯೋ ಪೂರ್ಣ ಹರಿಯಂದಾ ಮಾತಿಗೆ ಕರುಣದಿಂದೊದಗಿ ನೀ ಪರಿಪರಿ ಕಾಯಿದ್ಯೊ ತರಳ ಪ್ರಹ್ಲಾದನ ||೨|| ಧರ್ಮಪತ್ನಿಯ ಸೆರಗ ಭರದಿಂದೆಳೆಯುವ ಸಮಯ ಸ್ಮರಣಿ ಒದಗಿ ಬಂದ್ಯೊ ಪರಿಪರಿ ವಸ್ತುವ ಪೂರಿಸಿದ್ಯೊ ಶ್ರೀಹರಿ ಕೃಷ್ಣ ಕೃಪಾಳು ||೩|| ಅರಗಿನ ಮನೆಯೊಳು ಮರೆಮೋಸ ಮಾಡಿರಲು ದೋರಿ ವಿವರದಿಂದ ಪೊರವೊಂದಿಸಿದ್ಯೋ ಸ್ವಾಮಿ ಶರಣಾಗತವತ್ಸಲ ಪಾಂಡವಪ್ರಿಯ ||೪|| ಹಲವು ಪರಿಯಲೆನ್ನ ಸಲಹುವ ಸದ್ಗುರುಪೂರ್ಣ ಬಾಲಕ ಮಹಿಪತಿಯ ಪಾಲಕ ನೀನಹುದೊ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನೇ ಪರಮಪಾವನೀ ನಿರಂಜಿನೀ

(ಬಾಗೇಶ್ರೀ ರಾಗ ತ್ರಿತಾಳ) ನೀನೇ ಪರಮಪಾವನೀ ನಿರಂಜಿನೀ ನೀನೇ ಪರಮಪಾವನೀ ||ಪ|| ಆ‌ದಿ ನಾರಾಯಣೀ ಸಾಧುಜನ ವಂದಿನೀ ಸದಾನಂದರೂಪಿಣೀ ಸದ್ಗತಿ ಸುಖದಾಯಿನೀ ||೧|| ಲಕ್ಷುಮಿ ರೂಪಿಣೀ ಸಾಕ್ಷಾತ್ಕಾರಿಣೀ ರಕ್ಷ ರಕ್ಷಾತ್ಮಿಣೀ ಅಕ್ಷಯ ಪದದಾಯಿನೀ ||೨|| ಅನಾಥರಕ್ಷಿಣೀ ದೀನೋದ್ಧಾರಿಣೀ ಅನಂತಾನಂತ ಗುಣೀ ಮುನಿಜನಭೂಷಿಣೀ ||೩|| ದಾರಿದ್ರ್ಯಭಂಜನೀ ದುರಿತವಿಧ್ವಂಸಿನೀ ಪರಮ ಸಂಜೀವಿನೀ ಸುರಮುನಿರಂಜನೀ ||೪|| ಸ್ವಾಮಿ ಶ್ರೀಗುರುವಿಣೀ ಬ್ರಹ್ಮಾನಂದರೂಪಿಣೀ ಮಹಿಪತಿ ಕುಲಸ್ವಾಮಿನೀ ನೀನೇ ಪರಮಪಾವನೀ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಮ್ಮ ಕುಲದೈವನೀತ ಬೊಮ್ಮನ ಪಡೆದಾತ

------ಖಂಬಾವತಿ ರಾಗ ತ್ರಿತಾಳ (ಝಪ್ ) ನಮ್ಮ ಕುಲದೈವನೀತ ಬೊಮ್ಮನ ಪಡೆದಾತ ಸಾಮಗಾಯನ ಪ್ರೀತ ಸ್ವಾಮಿ ಈತ ||ಪ|| ವೇದ ಉದ್ಧರನೀತ ಮೇದಿನಿಯ ಪೊತ್ತಾತ ಸಾಧುಜನವಂದಿತ ಸದ್ವಸ್ತು ಈತ ||೧|| ಧಾರುಣಿಯ ಗೆದ್ದಾತ ತರಳಗೊಲಿದಿಹನೀತ ವರಮುನಿಗಳ ದಾತ ಕರುಣಿ ಈತ ||೨|| ಮೂರು ಪಾದಳದಾತ ಪರಶುಧರನಹುದೀತ ಸುರಜನರ ಪೂಜಿತ ಸರ್ವೋತ್ತಮನೀತ ||೩|| ಪವನಸುತಗೊಲಿದಾತ ಮಾವನ ಮಡಹಿದಾತ ಭುವನತ್ರಯಲೀತ ದೇವನೀತ ||೪|| ಬತ್ತಲೆಯು ಸುಳಿದಾತ ಉತ್ತಮ ಹಯವನೇರಿದಾತ ಭಕ್ತರಿಗೆ ಹೊರೆವಾತ ಶಕ್ತನೀತ ||೫|| ಅಣುರೇಣುದೊಳು ಈತ ಅನುಕೂಲವಾದಾತ ಆನಂದ ಬ್ರಹ್ಮ ಅನಂತ ಈತ ||೬|| ಮಹಾಮಹಿಮನಹುದೀತ ಬಾಹ್ಯಂತರ ಪೂರಿತ ಮಹಿಪತಿಯ ಸಾಕ್ಷಾತ ವಸ್ತು ಈತ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಮ ರಾಮೆನ್ನಿರೋ

(ನಂದ ರಾಗ , ಝಂಪೆತಾಳ) ರಾಮ ರಾಮೆನ್ನಿರೋ ಮುಖ್ಯ ತಾ ಕಾರಣಾ ನೇಮದಿಂದಾಯಿತು ಅಹಲ್ಯೋದ್ಧಾರಣಾ ರೋಮ ರೋಮಕ ತಾ ಮ್ರೇಮ ಬಾ ಹೋಗುಣಾ ನಾಮಸ್ಮರಿಸಿ ದಶರಥಾತ್ಮಜನಾ ||ಪ|| ಒಮ್ಮೆ ಸ್ಮರಿಸಿರೋ ರಾಮರಾಮೆಂದು ತಾ ಸುಮ್ಮನೇ ಬಾಹುದು ಸಾರಸ ಅಮೃತಾ ತಮ್ಮನಾ ಜೀವನಾ ಪಡೆದ ಸಂಜೀವ ತಾ ಝಮ್ಮನೇ ಹಾದಿ ಮಾಡಿತು ಸಮುದ್ರ ತಾ ||೧|| ರಾಮರಾಮೆನ್ನಲು ಸಾಮರಾಜ್ಯಾಹುದು ನೇಮದಿಂದೆನ್ನಿರೋ ಶ್ರಮ ನೀಗಿ ಹೋಹುದು ನಾಮ ಕೊಂಡಾಡಲು ರಾಮನ ತಾಹುದು ಸುಮ್ಮನೆಯಾದರೆ ತಾ ಮನೆ ಬಾಹುದು ||೨|| ರಾಮ ರಾಮೆಂದರೆ ತಾ ಬ್ರಹ್ಮರಾಕ್ಷಸ ತಾ ಸುಮ್ಮನೆ ಓಡಿ ಹೋಗುದು ತಾತ್ಕಾಲ ತಾ ನಾಮ ಸೇವಿಸಲು ಘಮ್ಮನ್ಹೊಳೆದು ತಾ ಝಮ್ಮನೇ ಬಾಹುದು ಭಾಗ್ಯ ಕೈಗೊಟ್ಟು ತಾ ||೩|| ರಾಮನಾಮವೆ ತಾ ಪಾಪಕೆ ಎರವುತಾ ನಾಮ ತೇಲಿಸಿತು ನೀರೊಳು ಎರವುತಾ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಯಬೇಕೆನ್ನ ಶ್ರೀ ದೇವಾದಿ ದೇವಿಣಿ

( ಭೈರವಿ ರಾಗ ತಾಳ- ತ್ರಿತಾಳ) ಕಾಯಬೇಕೆನ್ನ ಶ್ರೀ ದೇವಾದಿ ದೇವಿಣಿ ದಯವುಳ್ಳ ಸ್ವಾಮಿ ಸಹಕಾರಿ ನಾರಾಯಣಿ ||ಪ|| ಕರುಣಾನಂದ ಗುಣಿ ಶರಣ ಸಂರಕ್ಷಣೀ ದಾರಿದ್ರ್ಯಭಂಜನಿ ದುರಿತವಿಧ್ವಂಸಿನೀ ||೧|| ಘನಸುಖದಾಯಿನೀ ದೀನ ಉದ್ಧಾರಿಣೀ ಮುನಿಜನ ಶಿಖಾಮಣಿ ನೀನೇ ಶ್ರೀಲಕ್ಷುಮಿಣಿ ||೨|| ಬಾಹ್ಯಾಂತ್ರ ವ್ಯಾಪಿಣೀ ಮಹಾಗುರು ರೂಪಿಣೀ ಸಾಹ್ಯದಲಿ ನೀ ಪೂರ್ಣಿ ಮಹಿಪತಿಯ ಸ್ವಾಮಿನಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದೇವಾಧಿದೇವ ನೀನಹುದೋ ಶ್ರೀಹರಿ

(ರಾಗ ಭೀಮಪಲಾಸ್ ತ್ರಿತಾಳ) ದೇವಾಧಿದೇವ ನೀನಹುದೋ ಶ್ರೀಹರಿ ಕಾವ ಕರುಣಿ ನೀನೆವೆ ಮುರಾರಿ ||ಪ|| ಕಮಲಭವಾರ್ಚಿತ ಕಾರುಣ್ಯಶೀಲ ವಿಮಲ ವಿರಾಜಿತ ಮದನ ಗೋಪಾಲ ||೧|| ಕನಕಾಂಬರಧರ ಕಸ್ತೂರಿತಿಲಕ ಸನಕಾದಿವಂದ್ಯ ಶರಣರಕ್ಷಕ ||೨|| ಅಮಿತಪರಾಕ್ರಮ ಅಗಣಿತ ಮಹಿಮ ಅಮರಜನೇತ್ರ ನೀನಹುದೊ ನಿಸ್ಸೀಮ ||೩|| ಮುನಿಜನ ಪಾಲಕ ಮಾಮನೋಹರ ಘನಸುಖದಾಯಕ ಸುಜನ ಸಹಕಾರ ||೪|| ಭಾನುಕೋಟಿತೇಜ ನೀನೇ ಸುಹೃದಯ ದೀನದಯಾಳು ನೀನಹುದೋ ಮಹಿಪತಿಯ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀ ರಾಮಾ ರಾಮಾ

(ದುರ್ಗಾ ರಾಗ ತಾಳ ತ್ರಿತಾಳ) ಶ್ರೀ ರಾಮಾ ರಾಮಾ ||ಪ|| ಜಯ ಜಯಾತ್ಮರಾಮಾ ದಯಗುಣದಿ ನಿಸ್ಸೀಮಾ ಮಾಯಾರಹಿತನುಪಮಾ- ಕಾಯಾ ಕೃಪಾನಿಧಿ ನಮ್ಮಾ ||೧|| ಮುನಿಜನರಾ ಪ್ರತಿಪಾಲಾ ದೀನಬಂಧು ದೀನದಯಾಳಾ ಘನಸುಖದ ಕಲ್ಲೋಳಾ ನೀನಹುದೈ ಅಚಲಾ ||೨|| ಕರುಣಾಬ್ಧಿ ನೀನೇ ರಾಮಾ ಹರಹೃದಯ ವಿಶ್ರಾಮಾ ತರಮಹೀಪತಿ ನಿಮ್ಮ ಸ್ಮರಿಸುವ ಪಾದಪದ್ಮ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯ ಜಯ ಸರಸ್ವತಿ ಜಯವರ ಪೂರಣಮತಿ

(ಬಾಗೇಶ್ರೀ ರಾಗ , ಝಂಪೆತಾಳ ) ಜಯ ಜಯ ಸರಸ್ವತಿ ಜಯವರ ಪೂರಣಮತಿ ತ್ರಯಲೋಕ್ಯದಲಿ ಖ್ಯಾತಿ ಜಯ ಸುಕೀರ್ತಿ ||ಪ|| ವಿದ್ಯಾವರದಾಯಿನೀ ಸಿದ್ಧಿಗೆ ಶಿಖಾಮಣೀ ಬುದ್ಧಿಪ್ರಕಾಶಿನೀ ಸದ್ಭೂಷಿಣೀ ||೧|| ಕರಕಮಲದಲಿ ವೀಣೀ ಸುರಸ ಅಮೃತವಾಣೀ ವರವಿದ್ಯದಲಿ ದಾನೀ ಸುಪ್ರವೀಣೀ ||೨|| ಪ್ರಸನ್ನ ವದನೀ ವಿಶ್ವದಲಿ ನೀ ಪೂರ್ಣೀ ಹಂಸವಾಹಿನೀ ಪೂರ್ಣಿ ಸ್ವಸಿದ್ಧಿಣೀ ||೩|| ಸದಾಸದ್ಗುರು ಸ್ತುತಿ ಒದಗುಹಾಂಗ ಸ್ಫೂರ್ತಿ ಇದೇ ಮಹಿಪತಿ ಕುರ್ತಿ ( ಕೃತಿ?) ಬೋಧಿಸು ಮತಿ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಂಜಾನೆ ಎದ್ದು ಮುರಹರನ ಸ್ಮರಿಸೆಲಾ ಮನವೇ (ಚತುರ್ವಿಂಶತಿ ನಾಮಾವಳಿ )

( ವಸಂತ ರಾಗ ಝಂಪೆತಾಳ) ಮುಂಜಾನೆ ಎದ್ದು ಮುರಹರನ ಸ್ಮರಿಸೆಲಾ ಮನವೇ ಅಂಜು ಭವಭಯದುರಿತ ಹಿಂಗಿಸುವನು ||ಪ|| ಕೇಶವೆಂದೆನಲು ತಾ ಕ್ಲೇಶ ಪರಿಹರಿಸುವನು ನಾಶಗೈಸುವ ಭವ ನಾರಾಯಣೆನಲು | ಮೀಸಲು ಮನದಲೊಮ್ಮೆ ಮಾಧವೆಂದೆನಲು ತಾ ಭಾ- ವಿಸುವ ಹೃದಯದೊಳು ಗೋವಿಂದನು | ವಾಸನಿಯ ಪೂರಿಸುವ ವಿಷ್ಣುಯೆಂದೆನಲು ತಾ ದೋಷ ಛೇದಿಸುವ ಮಧುಸೂದನನೆನಲು | ಭಾಷೆ ಪಾಲಿಸುವ ತ್ರಿವಿಕ್ರಮೆಂದೆನಲು ತಾ ಲೇಸು ಗೈಸುವ ಜನುಮ ವಾಮನನೆನಲು ||೧|| ಸಿರಿ ಸಕಲ ಪದವೀವ ಶ್ರೀಧರನೆಂದೆನಲು ತಾ ಹರುಷ ಗತಿಯೀವ ಹೃಷಿಕೇಶನೆನಲು | ಪರಮಪಾತಕದೂರ ಪದ್ಮನಾಭೆಂದೆನಲು ದಾರಿದ್ರ್ಯಭಂಜನ ದಾಮೋದರೆನಲು | ಸುರಿಸುವ ಅಮೃತ ಸಂಕರುಷಣೆಂದೆನಲು ಹೊರೆವ ಧರೆಯೊಳು ವಾಸುದೇವನೆನಲು | ಪರಿಪರಿಯ ಸಲಹುವ ಪ್ರದ್ಯುಮ್ನನೆಂದೆನಲು
ದಾಸ ಸಾಹಿತ್ಯ ಪ್ರಕಾರ
ಬರೆದವರು