ಶರಣು ಶರಣು ಶರಣು ದೇವಾದಿಗಳೊಂದಿತನಹುದೋ ಸ್ವಾಮಿ ಗಣನಾಥ
(ಸಾರಂಗ ರಾಗ , ಕೇರವಾ ತಾಳ)
ಶರಣು ಶರಣು ಶರಣು
ದೇವಾದಿಗಳೊಂದಿತನಹುದೋ ಸ್ವಾಮಿ ಗಣನಾಥಾ ||ಪ||
ಅಖಿಳಭುವನದೊಳು ಪೂಜಿತಾ
ಭಕುತಜನಕೆ ನೀ ಸಾಕ್ಷಾತಾ
ಸಕಲವಿದ್ಯಾವರದಾತಾ
ಶಕುತನಹುದಯ್ಯಾ ಪ್ರಖ್ಯಾತ ||೧||
ಶುದ್ಧಬುದ್ಧರ ಸಹಕಾರಾ
ಬುದ್ಧ ಈವ ಘನ ಉದಾರಾ
ರಿದ್ಧಿ ಸಿದ್ಧಿಗಾಗಿಹೆ ನೀ ಆಧಾರಾ
ಸಿದ್ಧಿದಾಯಕ ವಿಘ್ನಹರಾ ||೨||
ಜನಕೆ ಮಾಡುವ ದೋಷನಾಶಾ
ಅನುದಿನವು ಮತಿಪ್ರಕಾಶಾ
ದೀನ ಮಹೀಪತಿಯಾ
ಮನೋಭಾವಪೂರಿತಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments