ಕೊಟ್ಟು ಕೊಂಡಾಡಬೇಕು ಘಟ್ಟಿಗೊಂಡು ಗುರುಭಕ್ತಿ

ಕೊಟ್ಟು ಕೊಂಡಾಡಬೇಕು ಘಟ್ಟಿಗೊಂಡು ಗುರುಭಕ್ತಿ

( ಭೀಮಪಲಾಸ ರಾಗ ತೀನ್ ತಾಳ) ಕೊಟ್ಟು ಕೊಂಡಾಡಬೇಕು ಘಟ್ಟಿಗೊಂಡು ಗುರುಭಕ್ತಿ ಗುಟ್ಟಿನೊಳು ಕೊಡಬೇಕು ಇಟ್ಟುದೋರುತದ ಮುಕ್ತಿ ||ಪ|| ಕೊಟ್ಟ ಗುರುವಿಗೆ ಮನ ಕೊಳ್ಳಬೇಕು ನಿಜಘನ ಇಟ್ಟಾದೆ ನಿಜಧನ ಪಡಿಬೇಕು ಸಾಧನ ಕೊಟ್ಟಾಂಗ ಕೊಂಬು ಖೂನ ಹೇಳಿಕೊಡುವನ ಗುರುಜ್ಞಾನ ಮುಟ್ಟಿ ಭಜಿಸುದು ಪೂರ್ಣಸ್ವಾಮಿ ಶ್ರೀನಾಥಾರ್ಪಣ ||೧|| ಕೊಟ್ಟು ಕೊಂಡ ನೋಡಿ ನೇಮ ಸೃಷ್ಟಿಯೊಳು ಸುದಾಮ ಮುಷ್ಟಿ ಅವಲಕ್ಕಿ ಧರ್ಮ ಪಡೆದುಕೊಂಡ ದಿವ್ಯಗ್ರಾಮ ಕೊಟ್ಟು ಶಾಕದಳವಮ್ಮ ದ್ರೌಪದಿ ಆದಳು ಸಂಭ್ರಮ ಕೃಷ್ಣಗಿದೆ ಅತಿಪ್ರೇಮ ಶಿಷ್ಟಜನಕ ಸುಕ್ರಮ ||೨|| ಮುಕ್ತಿಗಿದೆ ಮೇಲು ಭಕ್ತಿ ನೋಡಿ ಸಜ್ಜನರ ಯುಕ್ತಿ ಭೋಕ್ತ ಬಲ್ಲ ಗುರುಮೂರ್ತಿ ಮಾಡಬೇಕು ಭಾವಭಕ್ತಿ ಮುಕ್ತ ಜನರಿಗಿದೆ ಗತಿಕೊಟ್ಟು ಕೊಂಡಾಡುವ ಶಕ್ತಿ ಅರ್ತು ಇದೇ ಮಹಿಪತಿ ಕೊಂಡಾಡೊ ಗುರುಸ್ತುತಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು