ಏಕೆ ದೂರುವಿರೇ ರಂಗಯ್ಯನ

(ಕಲ್ಯಾಣಿ ರಾಗ ಅಟ್ಟತಾಳ/ ತ್ರಿಪುಟ ತಾಳ) ಏಕೆ ದೂರುವಿರೇ ರಂಗಯ್ಯನ ಏಕೆ ದೂರುವಿರೇ ||ಪ|| ಸಾಕು ನಿಮ್ಮ ದೂರ ಬಲ್ಲೆನು ಈ ಕುವರನಾ ಕೃತ್ಯ ಮಾಳ್ಪನೆ ||ಅ.ಪ|| ದಟ್ಟಡಿಯಿಡಲರಿಯ ಗೋವತ್ಸವ ಬಿಟ್ಟು ಚಲಿಸಬಲ್ಲನೆ ಘಟ್ಟಿಯಾಗಿ ಗೊತ್ತಿನಲ್ಲಿ ಕಟ್ಟಿನೊಳು ಕಟ್ಟಿದ್ದ ಕರುಗಳ ಬಿಟ್ಟನೇ ಈಕೃಷ್ಣನ ಮೇ- ಲೆಷ್ಟು ಹೊಟ್ಟೆಕಿಚ್ಚೆ ನಿಮಗೆ ||೧|| ಕೆನೆಹಾಲು ಬೆಣ್ಣೆಯನು ಇತ್ತರೆ ಆ ದಿನವೊಲ್ಲನು ಊಟವ ಮನೆಮನೆಗಳನು ಪೊಕ್ಕು ಬೆಣ್ಣೆ ಪಾಲ್ಮೊಸರನ್ನು ತಿನ್ನುತ ವನಿತೆಯರ ಕೂಡಾಡಿದನೆಂ- ದೆನಲು ನಿಮಗೆ ನಾಚಿಕಿಲ್ಲವೆ ||೨|| ಪಾಲು ಮೊಸರು ಬೆಣ್ಣೆಯು ಇಲ್ಲವೆ ನ- ಮ್ಮಾಲಯದೊಳು ನೋಡಿರೆ ಹೇಳುವರೆ ಈ‌ ಠೌಳಿಗಳ ಗೋ- ಪಾಲಬಾಲನ ನೋಡಿ ಸೈಸದೆ ಬಾಳುವಿರ ಭವ ಜಲಧಿಯಿಂದಲಿ ತೇಲಿಸುವನೆ ರಂಗವಿಠಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿ

(ಹಿಂದೋಳ ರಾಗ ರೂಪಕತಾಳ)

ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿ

ಮೀನು ಗಾಳವ ನುಂಗಿ ಮೋಸಹೋದ ತೆರನಂತೆ ||ಧ್ರುವ||

 

ನನ್ನ ಮನೆ ನನ್ನ ಸತಿ ನನ್ನ ಸುತರೆಂದೆನಿಸಿ

ಹೊನ್ನುಗಳ ಗಳಿಸಿ ಹೆಚ್ಚು ಹೋರ್ಯಾಡಿ

ಸಣ್ಣವರ ಮದುವೆ ಸಂಭ್ರಮದಿ ಮಾಡುವೆನೆಂದು

ಅನ್ನ ಮೊದಲು ಕಾಣದೆ ಅಂತರಪಿಶಾಚಿಯಂತೆ ||೧||

 

ಬಲುವೋದಿಕೆಯಲ್ಲಿ ಬಲ್ಲವರೆನಿಸಬೇಕೆನುತ

ಹಲವು ಬುದ್ಧಿಯಲಿ ಹಿರ್ರನೆ ಹಿಗ್ಗುತ

ಮಲಿನ ಮನಸಿನಜ್ಞಾನದಲಿ ತಾನರಿಯದೆ

ಬಲೆಯಲ್ಲಿ ಸಿಲುಕಿದ ಪಕ್ಷಿಯಂತೆ ಬಳಲುತಿಹ ||೨||

 

ಮಿಗಿಲು ಆಸೆಗೆ ಬಿದ್ದು ಬಗೆ ಬಗೆ ಹೂಣಿಕೆಯಲಿ

ಹೊಗದಲ್ಲಿ ಹೊಗುವರು ಹೊಲಬಿಟ್ಟು ತಿಳಿಯರು

ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದೇ ನಮ್ಮ ವೃತ್ತಿ ಸದ್ಗುರು ಭಾವಭಕ್ತಿ

( ಪಹಾಡಿ ರಾಗ ಕೇರವಾ ತಾಳ) ಇದೇ ನಮ್ಮ ವೃತ್ತಿ ಸದ್ಗುರು ಭಾವಭಕ್ತಿ ||ಧ್ರುವ|| ಇದೇ ನಮ್ಮ ಮನೆಯು ಸದ್ಗುರು ಸ್ಮರಣೆಯು ಇದೇ ನಮ್ಮ ವರ್ತನೆಯು ಸದ್ಗುರು ಪ್ರಾರ್ಥನೆಯು ||೧|| ಇದೇ ನಮ್ಮ ಗ್ರಾಮ ಸದ್ಗುರು ದಿವ್ಯನಾಮ ಇದೇ ನಮ್ಮ ಸ್ತೋಮ ಸದ್ಗುರು ಆತ್ಮಾರಾಮ ||೨|| ಇದೇ ನಮ್ಮ ಭೂಮಿ ಸದ್ಗುರು ಘನಸ್ವಾಮಿ ಇದೇ ನಮ್ಮ ಸೀಮಿ ಸದ್ಗುರು ಅಂತರ್ಯಾಮಿ ||೩|| ಇದೇ ನಮ್ಮ ದೇಶ ಸದ್ಗುರು ಉಪದೇಶ ಇದೇ ನಮ್ಮಭ್ಯಾಸ ಸದ್ಗುರು ಜಗದೀಶ ||೪|| ಇದೇ ನಮ್ಮ ವಾಸ ಸದ್ಗುರು ಸಮರಸ ಇದೇ ನಮ್ಮ ಗ್ರಾಸ ಸದ್ಗುರು ಪ್ರೇಮರಸ ||೫|| ಇದೇ ನಮ್ಮ ವ್ಯಸನ ಸದ್ಗುರು ನಿಜಧ್ಯಾಸ ಇದೇ ನಮ್ಮ ಆಶೆ ಸದ್ಗುರು ಸುಪ್ರಕಾಶ ||೬|| ಇದೇ ನಮ್ಮಾಶ್ರಮ ಸದ್ಗುರು ನಿಜೋತ್ತಮ ಇದೇ ನಮ್ಮುದ್ಯಮ ಸದ್ಗುರು ಸಮಾಗಮ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದಿನಿರುಳಿನ ಕನಸಿನಲ್ಲಿ ಬಂದು

(ರಾಗ ಶುದ್ಧಸಾವೇರಿ ಅಟ್ಟತಾಳ) ಇಂದಿನಿರುಳಿನ ಕನಸಿನಲ್ಲಿ ಬಂದು ಮುಂದೆ ನಿಂದುದ ಕಂಡೆನೆ ಗೋವಳನ ||ಪ|| ಆಣಿಮುತ್ತಿನ ವೆಂಡೆಯದ ಕಾಲಂದುಗೆ ಗೆಜ್ಜೆ ಜಾಣನಂಗಜನ ಪಿತನ ಕೈಯ ವೇಣು ಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆ ವಾಣಿಯ ರಚನೆ ಎಲ್ಲಿ[ಯು] ಈ ಗೋವಳನಾ ||೧|| ಮೊಲ್ಲೆ ಮಲ್ಲಿಗೆ ಚೊಲ್ಲೆಯದ ಚಲ್ಲಣದ ಶಿರ- ದಲ್ಲಿ ಗುಂಜಿಯ ದಂಡೆಯ ಚೆಲ್ವ ಕಂಗಳ ಗೋಪಿಯರ ಮೇಲೆ ಕಡೆಗಣ್ಣ ಚೆಲ್ಲುತೊಯ್ಯನೆ ನಡೆದ ಗೋವಳನ ||೨|| ತಿತ್ತಿ ಮೌರಿ ಕೊಂಬು ಸುತ್ತಿದ ಕತ್ತ ತಾವಿಲಿ ತುತ್ತುರೂ ತೂರು ತೂರೆನುತ ಚಿತ್ತವ ಮರುಳು ಮಾಡಿದನೆ ಪೊಂಗೊಳಲೂದಿ ಮೊತ್ತದ ಗೋಪಿಯರನೆಲ್ಲ ಗೋವಳನ ||೩|| ಎಸಳುಕಂಗಳ ಢಾಳ ಶಶಿ ನೊಸಲ ತಿಲಕ ಎಸೆವ ಬಿಂಬಾಧರದ ಪೊಸ ಮುತ್ತಿನೋಲೆ ಮೂಕುತಿ ಹೊನ್ನುಡಿ ಘಂಟೆ ಎಸೆವ ನೂಪುರ ಹಾಹೆಯ(?) ಗೋವಳನ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇನ್ನಿವನು ಈಗ ಬರಲಿದಕೆ ಬಗೆಯೇನು

(ರಾಗ ಮುಖಾರಿ ಝಂಪೆತಾಳ) ಇನ್ನಿವನು ಈಗ ಬರಲಿದಕೆ ಬಗೆಯೇನು ಚೆನ್ನಾಗಿ ಪೇಳೆ ರಮಣಿ ||ಪ|| ಮನ್ನಿಸಿ ಮಮತೆಯಲಿ ಮನವ ಸೆಳೆಕೊಂಡೊಯ್ದ ಅನ್ಯರನು ಕೂಡುವನೆ ಕೆಳದಿ ಕೆಳದಿ ||ಅ.ಪ|| ಬಣ್ಣದ ಗಿಣಿ ಬರೆದ ಸಣ್ಣ ಕುಪ್ಪಸವುಳ್ಳ ಚಿನ್ನದ ಶ್ರೀರೇಖೆ ಸೀರೆ ಬಿನ್ನಣವುಳ್ಳ ಬಿಳಿಯೆಲೆ ಅಡಿಕೆ ಕೆನೆಸುಣ್ಣ ಕರ್ಪೂರ ಕಾಚಿನುಂಡೆ ಕಣ್ಣಿಗಿಂಪಾದ ಕಡುಚೆಲ್ವ ಮಲ್ಲಿಗೆ ಮೊಗ್ಗೆ ಉನ್ನತವಾದ ದಂಡೆ ಇನ್ನು ಈ ಪರಿಮಳವು ಬಗೆಬಗೆಯ ಆಭರಣ ರನ್ನ ಕೆತ್ತಿಸಿದ ಗೋಡೆ ಮುನ್ನ ಸಿಂಗರ ಮಾಡಿ ಎದೆ ಹಿಡಿದು ಬಿಗಿಯಪ್ಪಿ ನಿನ್ನೆ ಈ ವೇಳೆ ಕೂಡಿದ ದೃಢದೆ ||೧|| ಈಗಾಗ ಬಾಹನೆಂತಿರುವೆ ತಾನೂರಿದ್ದ ಉಗುರು ಗುರುತನು ನೋಡುತ ಸೋಗೆಗಣ್ಣಿನ ಕಾಡಿಗೆಯ ಕಲಕಿದನೆಂದು ಬೇಗ ನಟನೆಯ ಮಾಡುತ ರಾಗದಿಂದಲಿ ರವಿಕೆನೆರಿಯನು ಬದಲುಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಾಸುದೇವ ನಿನ್ನ ಮರ್ಮಕರ್ಮಂಗಳ

(ಮುಖಾರಿ ರಾಗ ಅಟತಾಳ) ವಾಸುದೇವ ನಿನ್ನ ಮರ್ಮಕರ್ಮಂಗಳ ದೇಶದೇಶದಲ್ಲಿ ಪ್ರಕಟಿಸಲೊ ||ಪ|| ಬೇಸರದೆ ಎನ್ನ ಹೃದಯಕಮಲದಲ್ಲಿ ವಾಸವಾಗಿ ಸುಮ್ಮನಿದ್ದೀಯೊ ||ಅ.ಪ|| ತರಳತನದಲಿದ್ದು ದುರುಳನಾಗಿ ಬಂದು ಒರಳಿಗೆ ಕಟ್ಟಿಸಿಕೊಂಡುದನು ತುರುವ ಕಾಯಲಿ ಪೋಗಿ ಕಲ್ಲಿಯೋಗರವನು ಗೊಲ್ಲರ ಕೂಡೆ ನೀ ಉಂಡುದನು ನೆರೆಮನೆ ಹೊರಮನೆಗಳ ಪೊಕ್ಕು ಬೆಣ್ಣೆಯ ಅರಿಯದಂತೆ ಕದ್ದು ಮೆದ್ದುದನು ಕೆರಳಿಸಿದೆಯಾದರೆ ಒದರುವೆ ಎಲೊ ನರ- ಹರಿ ಎನ್ನ ಬಾಯಿಗೆ ಬಂದುದನು ||೧|| ಕಟ್ಟಿ ಕರೆವ ಏಳುದಿನದ ಮಳೆಗೆ ವೋಗಿ ಬೆಟ್ಟವ ಪೊತ್ತದ್ದು ಹೇಳಲೊ ಅಟ್ಟಿಸಿಕೊಳ್ಳುತ ಯಾಗಶಾಲೆಗೆ ಪೋಗಿ ಹೊಟ್ಟೆಯ ಹೊರೆದದ್ದು ಹೇಳಲೊ ದುಷ್ಟ ಹಾವಿನ ಹೆಡೆಯನು ತುಳಿದಾಡಿದ ದುಷ್ಟತನವನು ಹೇಳಲೊ ನೆಟ್ಟುನೆ ಅಂಬರಕೆತ್ತಿದನ ಹೊಯ್ದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಲ್ಲವನು ಉಳ್ಳವನು ನೀನಿರಲು ಭಜಿಸದೆ

ಬಲ್ಲವನು ಉಳ್ಳವನು ನೀನಿರಲು ಭಜಿಸದೆ ಕ್ಷುಲ್ಲಕರ ಮತವಿಡಿದು ಸುಖವ ಬಯಸುವೆ ನಾನು ಕಲ್ಲು ಗೋವಿನ ಹಾಲು ಕರು ಬಯಸಿದಂತೆ ನಾ ಹಲ್ಲು ಹೋಹುದನರಿಯೆ ಅಕಟಕತ ಮಂದಮತಿಯು ಕಳ್ಳ ಗೋವನು ಹುಲ್ಲು ಗಂಜಿಯನೆರೆದು ಸಲಹಿದಡೆ ಏನು ಫಲ ಬಲ್ಲಿದಾಸೆಯ ಬಿಡಿಸೋ ನಮೋ ರಂಗವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬರುವುದು ಬುದ್ಧಿಯು ಬಲವು ಕೀರುತಿಯು

ಬರುವುದು ಬುದ್ಧಿಯು ಬಲವು ಕೀರುತಿಯು ನಿರುತದಿ ಧೈರ್ಯವು ನಿರ್ಭಯತ್ವವು ಅರೋಗಾನಂದ ಅಜಾಡ್ಯ ವಾಕ್ಪಟುತ್ವವು ಹರೇ ರಂಗವಿಠಲ ಹನುಮಾ ಎನಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾ ತಾ ತಾ ತಾ ತಾ ರಂಗ ನಿನ್ನ ಪಾದ

(ತೋಡಿ ರಾಗ , ಆದಿತಾಳ) ತಾ ತಾ ತಾ ತಾ ತಾ ರಂಗ ನಿನ್ನ ಪಾದ ಧೈ ಧೈ ಧೈ ಧೈ ಧೈ ಎಂದು ಕುಣಿಯುತ ||ಪ|| ನಿಗಮವ ತಂದು ನಗವ ಬೆನ್ನಲಿ ಹೊತ್ತು ಅಗೆದು ಬೇರು ತಿಂದು ಬಾಲನ ಸಲಹಿದೆ ಅಂದು ||೧|| ಪೊಡವಿ ಈರಡಿ ಮಾಡಿ ಕೊಡಲಿ ಪಿಡಿದು ಮುನಿ ಮಡದಿಯ ಸಲಹಿದೆ ಎನ್ನೊಡೆಯ ಶ್ರೀಕೃಷ್ಣ ||೨|| ಅಂಗನೆಯ ವ್ರತಭಂಗವ ಮಾಡಿ(ದೆ) ತುಂಗ ಕುದುರೆಯೇರಿದ ರಂಗವಿಠಲನೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಲಿಕಾಲಕೆ ಸಮಯುಗವಿಲ್ಲವಯ್ಯ

ಕಲಿಕಾಲಕೆ ಸಮಯುಗವಿಲ್ಲವಯ್ಯ ಕಲುಷ ಹರಿಸಿ ಕೈವಲ್ಯವೀವುದಯ್ಯ ಸಲೆ ನಾಮಕೀರ್ತನೆ ಸ್ಮರಣೆ ಸಾಕಯ್ಯ ಸ್ಮರಿಸಲು ಸಾಯುಜ್ಯ ಪದವೀವುದಯ್ಯ ಬಲವಂತ ಶ್ರೀರಂಗವಿಠಲನ ನೆನೆದರೆ ಕಲಿಯುಗ ಕೃತಯುಗವಾಗುವುದಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು