ಆಡಲು ಪೋಗೊಣು ಬಾರೊ ರಂಗ
- Read more about ಆಡಲು ಪೋಗೊಣು ಬಾರೊ ರಂಗ
- Log in to post comments
ಅಂಬರದಾಳವನು ರವಿಶಶಿ ಬಲ್ಲರು
- Read more about ಅಂಬರದಾಳವನು ರವಿಶಶಿ ಬಲ್ಲರು
- Log in to post comments
ಅಂದು ಬಾಹೋದು ನಮಗಿಂದೇ ಬರಲಿ
- Read more about ಅಂದು ಬಾಹೋದು ನಮಗಿಂದೇ ಬರಲಿ
- Log in to post comments
ಎಂದು ಕಾಂಬೆನು ಎನ್ನ ಸಲಹುವ
- Read more about ಎಂದು ಕಾಂಬೆನು ಎನ್ನ ಸಲಹುವ
- Log in to post comments
ಅಂಬೆಗಾಲಿಕ್ಕುತ ಬಂದ ಗೋವಿಂದ
ಅಂಬೆಗಾಲಿಕ್ಕುತ ಬಂದ ಗೋವಿಂದ ||ಪ||
ಅಂಬುಜನಾಭ ದಯದಿಂದ ಎನ್ನಮನೆಗೆ ||ಅ.ಪ||
ಜಲಚರ ಜಲವಾಸ ಧರಣೀಧರ ಮೃಗರೂಪ
ನೆಲನಳೆದು ಮೂರಡಿ ಮಾಡಿ ಬಂದ
ಕುಲನಾಶ ವನಮಾಸ ನವನೀತ ಚೋರನಿವ
ಲಲನೆಯರ ವ್ರತಭಂಗ ವಾಹನತುರಂಗ ||೧||
ಕಣ್ಣ ಬಿಡುವನು ತನ್ನ ಬೆನ್ನು ತಗ್ಗಿಸುವನು
ಮಣ್ಣು ಕೆದರಿ ಕೋರೆ ಬಾಯ ತೆರೆದು
ಚಿಣ್ಣ ಭಾರ್ಗವ ಲಕ್ಷ್ಮಣಣ್ಣ ಬೆಣ್ಣೆಯ ಕಳ್ಳ
ಮಾನವ ಬಿಟ್ಟು ಕುದುರೆಯನೇರಿದ ||೨||
ನೀರ ಪೊಕ್ಕನು ಗಿರಿಯ ನೆಗಹಿ ಧರಣಿಯ ತಂದು
ನರಮೃಗ ಬಲಿಬಂಧ ಕೊರಳುಗೊಯಿಕ
ಶರ ಮುರಿದೊರಳೆಳೆದು ನಿರವಾಣಿ ಹಯಹತ್ತಿ
ಪುರಂದರವಿಠಲ ತಾ ಬಂದ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಅಂಬೆಗಾಲಿಕ್ಕುತ ಬಂದ ಗೋವಿಂದ
- Log in to post comments
ಅಡಿಗಳಿಗೊಂದಿಪೆ ಪುರಂದರಗುರುವೆ
ಅಡಿಗಳಿಗೊಂದಿಪೆ ಪುರಂದರಗುರುವೆ ||ಪ||
ಕಡುಜ್ಞಾನಭಕ್ತಿವೈರಾಗ್ಯದ ನಿಧಿಯೆ ||ಅ||
ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ
ಗುರು ವ್ಯಾಸರಾಯರಿಂದುಪದೇಶಗೊಂಡೆ
ಎರಡೆರಡು ಲಕ್ಷದಿಪ್ಪತ್ತೈದು ಸಾವಿರ
ವರನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ ||೧||
ಗಂಗಾದಿ ಸಕಲ ತೀರ್ಥಂಗಳ ಚರಿಸಿದೆ
ರಂಗವದನ ವೇದವ್ಯಾಸನ
ಹಿಂಗದೆ ಮನದಲ್ಲಿ ನೆನೆದು ನೆನೆದು ಮೆರೆವ
ಮಂಗಳಮಹಿಮೆಯ ನುತಿಸಿ ನುತಿಸಿ ನಾ ||೨||
ನಿನ್ನತಿಶಯಗುಣ ವರ್ಣಿಸಲಳವಲ್ಲ
ನಿನ್ನ ಸೇವಕನ ಸೇವಕನೆಂತೆಂದು
ಪನ್ನಗಶಯನ ಮುಕುಂದ ಕರುಣ ಪ್ರ-
ಸನ್ನ ವಿಜಯವಿಠಲ ಸಂಪನ್ನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಅಡಿಗಳಿಗೊಂದಿಪೆ ಪುರಂದರಗುರುವೆ
- Log in to post comments
ಅಂತರಂಗದ ಕದವು ತೆರೆಯಿತಿಂದು
ಅಂತರಂಗದ ಕದವು ತೆರೆಯಿತಿಂದು ||ಪ||
ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ||ಅ||
ಏಸುದಿನವಾಯಿತೊ ಬೀಗಮುದ್ರೆಯ ಮಾಡಿ
ವಾಸವಾಗಿದ್ದರೋ ದುರುಳರಿಲ್ಲಿ
ಮೋಸವಾಯಿತು ಇಂದಿನ ತನಕ ತಮಸಿನ
ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||೧||
ಹರಿಕರುಣವೆಂಬ ಕೀಲಿಕೈ ದೊರಕಿತು
ಗುರುಕರುಣವೆಂಬಂಥ ಶಕ್ತಿಯಿಂದ
ಪರಮಭಾಗವತರ ಸಹವಾಸದಲಿ ಪೋಗಿ
ಹರಿಸ್ಮರಣೆಯಿಂದಲ್ಲಿ ಬೀಗವ ತೆಗೆದೆ ||೨||
ಸುತ್ತಲಿದ್ದವರು ಪಲಾಯನವಾದರು
ಭಕ್ತಿಕಕ್ಕಡವೆಂಬ ಜ್ಞಾನದೀಪ
ಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕೆ
ಎತ್ತನೋಡಿದರತ್ತ ಶೃಂಗಾರಸದನ ||೩||
ಹೊರಗೆ ದ್ವಾರವು ನಾಲ್ಕು , ಒಳಗೈದು ದ್ವಾರಗಳು
ಪರ ದಾರಿಗೆ ಪ್ರಾಣ ಜಯವಿಜಯರು
ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ
ಸರಸಿಜನಾಭನ ಅರಮನೆಯ ಸೊಬಗು ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಅಂತರಂಗದ ಕದವು ತೆರೆಯಿತಿಂದು
- Log in to post comments
ಅಡಿಗೆಯನು ಮಾಡಬೇಕಣ್ಣ, ನಾವೀಗ ಸುಜ್ಞಾನದ
ಅಡಿಗೆಯನು ಮಾಡಬೇಕಣ್ಣ, ನಾವೀಗ ಸುಜ್ಞಾನದ
ಅಡಿಗೆಯನು ಮಾಡಬೇಕಣ್ಣ ||ಪ||
ಅಡಿಗೆಯನು ಮಾಡಬೇಕಣ್ಣ , ಮದಿಸಬೇಕು ಮದಗಳನ್ನು
ಒಡೆಯನಾಜ್ಞೆಯಿಂದ ಒಳ್ಳೆ ಸಡಗರದಿ ಈ ಮನೆಯ ಸಾರಿಸಿ ||ಅ.ಪ||
ತನ್ನ ಗುರುವನು ನೆನೆಯಬೇಕಣ್ಣ , ತನುಭಾವವೆಂಬ
ಭಿನ್ನ ಕಶ್ಮಲವಳಿಯಬೇಕಣ್ಣ
ಒನಕೆಯಿಂದ ಕುಟ್ಟಿ ಕೇರಿ ತನಗೆ ತಾನೆ ಆದ ಕೆಚ್ಚ -
ನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ ||೧||
ತತ್ವಭಾಂಡವ ತೊಳೆಯಬೇಕಣ್ಣ , ಸತ್ಯಾತ್ಮನಾಗಿ
ಅರ್ತಿ ಅಕ್ಕಿಯ ಮಥಿಸಬೇಕಣ್ಣ
ಕತ್ತರಿ ಮನವೆಂಬ ಹೊಟ್ಟನ್ನು ಎತ್ತಿ ಒಲೆಗೆ ಹಾಕಿ ಇನ್ನು
ಹೊತ್ತಿಕೊಂಡಿಹ ಮಮತೆಯನ್ನು ಎತ್ತಿ ಹೆಸರ ಹಿಂಗಿಸುತಲಿ ||೨||
ಜನನ ಸೊಂಡಿಗೆ ಹುರಿಯಬೇಕಣ್ಣ , ನಿಜವಾಗಿ ನಿಂತು
ತನುವ ತುಪ್ಪವ ಕಾಸಬೇಕಣ್ಣ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಅಡಿಗೆಯನು ಮಾಡಬೇಕಣ್ಣ, ನಾವೀಗ ಸುಜ್ಞಾನದ
- Log in to post comments
ಅವರೇ ಕಾಯ್ ಬೇಕು ಕಾಲದಿ
ಅವರೇ ಕಾಯ್ ಬೇಕು ಕಾಲದಿ
ಅವರೇ ಕಾಯ್ ಬೇಕು ||ಪ||
ಅವರೆ ಬಹುರುಚಿಯವರೆ ಸಂಪದ
ಅವರಿಂದಲಿ ಮೋಕ್ಷಾದಿ ಸಾಧನವು ||ಅ||
ಯುಕ್ತರಾಗಿ ಇರುವ ಜನರಿಗೆ
ಭುಕ್ತಿಯನು ಕೊಡುವ
ಭಕ್ತರಿಗೆಲ್ಲಾ ಬಾಯ್ಸವಿಯಾದ
ಸಕ್ತಿಪುಟ್ಟಿಸುವ ಸರ್ವೋತ್ತಮವಾದ ||೧||
ಇವರೆಲ್ಲ ಅಳೆದು ಬಿತ್ತಿ
ವಿವರವಾಗಿ ಅಳೆದು
ತವಕದಿ ಮೂಟೆಯ ಕಟ್ಟಿಟ್ಟಿದ್ದರೆ
ಜವನವರೆಳೆಯುವ ಕಾಲಕ್ಕೊದಗುತ ||೨||
ಹಿತರಾಗಿ ಅವರೆ ಮಾತಾ-
ಪಿತರಾಗೀ ಅವರೆ
ಗತಿದಾಯಕರಾಗಿ ಅವರೆ ಭೂ-
ಸುತೆ ಗುರುರಾಮವಿಠಲರೀರ್ವರು ||೩||
--- ರಚನೆ:-ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಅವರೇ ಕಾಯ್ ಬೇಕು ಕಾಲದಿ
- Log in to post comments