ಅಡಿಗಳಿಗೊಂದಿಪೆ ಪುರಂದರಗುರುವೆ

ಅಡಿಗಳಿಗೊಂದಿಪೆ ಪುರಂದರಗುರುವೆ

ಅಡಿಗಳಿಗೊಂದಿಪೆ ಪುರಂದರಗುರುವೆ ||ಪ|| ಕಡುಜ್ಞಾನಭಕ್ತಿವೈರಾಗ್ಯದ ನಿಧಿಯೆ ||ಅ|| ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ ಗುರು ವ್ಯಾಸರಾಯರಿಂದುಪದೇಶಗೊಂಡೆ ಎರಡೆರಡು ಲಕ್ಷದಿಪ್ಪತ್ತೈದು ಸಾವಿರ ವರನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ ||೧|| ಗಂಗಾದಿ ಸಕಲ ತೀರ್ಥಂಗಳ ಚರಿಸಿದೆ ರಂಗವದನ ವೇದವ್ಯಾಸನ ಹಿಂಗದೆ ಮನದಲ್ಲಿ ನೆನೆದು ನೆನೆದು ಮೆರೆವ ಮಂಗಳಮಹಿಮೆಯ ನುತಿಸಿ ನುತಿಸಿ ನಾ ||೨|| ನಿನ್ನತಿಶಯಗುಣ ವರ್ಣಿಸಲಳವಲ್ಲ ನಿನ್ನ ಸೇವಕನ ಸೇವಕನೆಂತೆಂದು ಪನ್ನಗಶಯನ ಮುಕುಂದ ಕರುಣ ಪ್ರ- ಸನ್ನ ವಿಜಯವಿಠಲ ಸಂಪನ್ನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು