ಪುರಂದರದಾಸ

Compositions of Purandara dasa

ಜೀವ ಜೀವಕೆ ಭೇದ , ಜಡಜಡಕೆ ಭೇದ

ಜೀವ ಜೀವಕೆ ಭೇದ , ಜಡಜಡಕೆ ಭೇದ ಜೀವಜಡ ಪರಮಾತ್ಮನಿಗೆ ಭೇದ ಜೀವಾಜೀವ ಮುಕ್ತಾಮುಕ್ತರ ಭೇದ ಸಂಸಾರದೊಳು ಭೇದ ಮುಕ್ತರೊಡೆಯ ಹರಿ ಭಕ್ತರಾಧೀನ , ಜಗ- ತ್ಕರ್ತು ನೀ ಸಲಹಯ್ಯ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಂತತ ಹನ್ನೆರಡು ಕೋಟಿ ಸುವರ್ಣಪುಷ್ಪ

ಸಂತತ ಹನ್ನೆರಡು ಕೋಟಿ ಸುವರ್ಣಪುಷ್ಪ ಸಮರ್ಪಿಸಲು ಅಂತ್ಯಫಲದಿ ಕೋಟಿ ಕೋಟಿ ಅಗಣಿತಫಲವು ಅರ್ಧ ತುಳಸೀದಳದ ತಂತು ಮಾತ್ರ ಭಕ್ತಿಯಿಂದ ಸಮರ್ಪಿಸಲು ಶ್ರೀಹೇಮಗತ ಪುರಂದರವಿಠಲ ವೈಕುಂಠಪದವಿಯನೀವನೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆ ಹರಿಸಿರಿಚರಣವಿರಲು

ಆ ಹರಿಸಿರಿಚರಣವಿರಲು ಮಿಕ್ಕ ಭೂರಿದೈವಗಳಿಗೇಕೆ ಭಜಿಸುವೆ ಮರುಳೆ ನೀರಡಿಸಿ ಜಾಹ್ನವಿ ತೀರದಲ್ಲಿದ್ದು ಭಾವಿ ನೀರು ಕುಡಿವ ಮಾನವರುಂಟೆ ಕಾರುಣ್ಯ ವೈಕುಂಠ ವಿಠಲರೇಯ ತಿರುವೇಂಗಳಪ್ಪ ಸಿರಿ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೇಡುವ ಕಷ್ಟಕ್ಕಿಂತ ಸಾವುದೆ ವರಲೇಸು

ಬೇಡುವ ಕಷ್ಟಕ್ಕಿಂತ ಸಾವುದೆ ವರಲೇಸು ಬೇಡುವವರಿಗೆ ವೊಬ್ಬಿ ಉಳಿಯೊದುಂಟೇನೊ ದೇವ ಧೊರೆಯುಂಟೆ ಗೂಡು ಕಿರಿದು ಮಾಡಿ ಬಲಿಯ ದಾನವ ಬೇಡಿ ನಾಡು ಅರಿಯಲು ಸ್ಥೂಲ ಸೂಕ್ಷ್ಮ ನಿನ್ನದೆ ಬೇಡುವ ಕಷ್ಟವನು ನೀನೆ ಬಲ್ಲೆಯೊ ಸ್ವಾಮಿ ಎನ್ನ ಬೇಡದಂತೆ ಮಾಡಯ್ಯ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧ್ವಜ ವಜ್ರಾಂಕುಶ ರೇಖಾಂಕಿತವಾದ

ಧ್ವಜ ವಜ್ರಾಂಕುಶ ರೇಖಾಂಕಿತವಾದ ಹರಿಪಾದಾಂಬುಜ ಸೇವಿಪ ಭಾಗವತರ ಭಾಗ್ಯ ನೋಡೊ ತ್ರಿಜಗವಂದ್ಯನ ಪಾಡುಭಕ್ತಿಯನು ಬೇಡು ಕುಜನರ ಮಾತುಗಳ ಸುಡು , ದುರ್ಜನರ ಸಂಗವ ಬಿಡು ಗಜೇಂದ್ರನ ಕಾಯಿದ ಶ್ರೀಕೃಷ್ಣನ ಸ್ಮರಣೆ ಮಾಡು ಪುರಂದರವಿಠಲನ ಬಿಡದೆ ಕೊಂಡಾಡು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಣಕದಿಂದಾಗಲಿ ಡಂಭದಿಂದಾಗಲಿ

ಅಣಕದಿಂದಾಗಲಿ ಡಂಭದಿಂದಾಗಲಿ ಇದ್ದಾಡಾಗಲಿ ಬಿದ್ದಾಡಾಗಲಿ ತಾಗಿದಾಡಾಗಲಿ ತಾಕಿಲ್ಲದಾಡಾಗಲಿ ಮರೆದು ಮತ್ತೊಮ್ಮೆಯಾಗಲಿ ಹರಿಹರಿಯೆಂದವನಿಗೆ ನರಕದ ಭಯವೇಕೆ ಯಮಪಟ್ಟಣ ಕಟ್ಟಿದರೇನು ಯಮಪಟ್ಟಣ ಬಟ್ಟಬಯಲಾದರೇನು ಹರಿದಾಸರಿಗೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀಪತಿಯ ಕಟಾಕ್ಷವೀಕ್ಷಣ ತಪ್ಪುವಾಗ

ಶ್ರೀಪತಿಯ ಕಟಾಕ್ಷವೀಕ್ಷಣ ತಪ್ಪುವಾಗ ಅನೇಕ ಬಂಧುಗಳು ಲಕ್ಷವೈದ್ಯರುಗಳು ಇರಲಾಗಿ ಕಣ್ಣುಕಣ್ಣು ಬಿಡುವರು ತಾಪಸಿಯರಣ್ಯದೊಳಗೆ ಒಬ್ಬ ಒಂಟಿಯಾಗಿರಲು ಅಂಜಬೇಡೆಂದು ನಮ್ಮ ಕಂಜನಾಭನೆ ಬಂದು ಆಪತ್ತುಗಳ ಪರಿಹರಿಸುವ ನಮ್ಮ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆವಾವ ಯುಗದಲಿ ವಿಷ್ಣುವ್ಯಾಪಕನಾಗಿ

ಆವಾವ ಯುಗದಲಿ ವಿಷ್ಣುವ್ಯಾಪಕನಾಗಿ ವಿಷ್ಣು ಇದ್ದಲ್ಲಿ ವಿಷ್ಣು ಲೋಕಕಾಗಿಪ್ಪದಾಗಿ ಸಾಲೋಕ್ಯ ಸಾರೂಪ್ಯ ಸಾಮೀಪ್ಯ ಸಾಯುಜ್ಯ ಸಾದೃಶ್ಯಂಗಳು ಪಂಚವಿಧ ಮುಕುತಿದಾಯಕ ಭರಿತ ನಮ್ಮ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಣುವಾಗಬಲ್ಲ ಮಹತ್ತಾಗಬಲ್ಲ

ಅಣುವಾಗಬಲ್ಲ ಮಹತ್ತಾಗಬಲ್ಲ ಅಣು ಮಹತ್ತೆರಡೊಂದಾಗಬಲ್ಲ ರೂಪನಾಗಬಲ್ಲ ಅರೂಪನಾಗಬಲ್ಲ ರೂಪ ಅರೂಪ ಎರಡೊಂದಾಗಬಲ್ಲ ಸುಗುಣನಾಗಬಲ್ಲ ನಿರ್ಗುಣನಾಗಬಲ್ಲ ಸುಗುಣ ನಿರ್ಗುಣ ಎರಡೊಂದಾಗಬಲ್ಲ ವ್ಯಕ್ತನಾಗಬಲ್ಲ ಅವ್ಯಕ್ತನಾಗಬಲ್ಲ ವ್ಯಕ್ತ ಅವ್ಯಕ್ತ ಎರಡೊಂದಾಗಬಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಂದೆ ನಾ ತಂದೆ ನೀ ತಂದೆ ನಾ ಬಂದೆ

ತಂದೆ ನಾ ತಂದೆ ನೀ ತಂದೆ ನಾ ಬಂದೆ ಕಾಮದಲಿ ತಂದೆ ನೀ ಕ್ರೋಧದಲಿ ತಂದೆ ತಾಮಸ ಕಡುಯೋನಿಯಲ್ಲಿ ನೀ ತಂದೆ ನಾ ಬಂದೆ ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ ಎಂಭತ್ತನಾಲಕು ಲಕ್ಷ ಯೋನಿಯಲ್ಲಿ ನೀ ತಂದೆ ನಾ ಬಂದೆ ಹಿಂದಿನ ಜನ್ಮ ಹೇಗಾದರಾಗಲಿ ಮುಂದೆನ್ನ ಸಲಹೊ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು