ಇತರೆ

ಪಟ್ಟಿಯಲ್ಲಿಲ್ಲದ ಬೇರೆ ದಾಸರ ರಚನೆಗಳಿಗೆ ಈ ಟ್ಯಾಗ್ ಹಾಕಬಹುದು

ಏನೆಂದು ಕಾಣೆನು ಎನಗುಸುರು ಹರಿಯೆ

(ರಾಗ ಕಲ್ಯಾಣಿ ಝಂಪೆತಾಳ) ಏನೆಂದು ಕಾಣೆನು ಎನಗುಸುರು ಹರಿಯೆ ಈ ನಾರಿಗಳ ರೂಪು ಚೆಲುವೆಂದು ವರ್ಣಿಪರು ||ಪ|| ಹುಳುಕು ಮೋರೆಯ ಕಂಡು ಕುಮುದಬಾಂಧವನೆಂದು ಕೊಳಕುಮೂಗನು ಎಳ್ಳಿನರಳೆನ್ನುತ ಪಳಿತ ಕೇಶಗಳನು ಚೂರ್ಣ ಕುಂತಳವೆನುತ ನಳಿನನಾಭನೆ ಕವಿಗಳೆಂತು ವರ್ಣಿಪರೋ ||೧|| ಉಚ್ಚೆಯಾ ದ್ವಾರವನು ಮದನಮಂದಿರವೆಂದು ತುಚ್ಛವಾದಂಡ ಕರಿಕುಂಭವೆಂದು ಮಚ್ಚರದ ಹೃದಯವನು ಕುಸುಮಕೋಮಲವೆಂದು ಇಚ್ಛೆ ಬಂದಂತೆ ಕವಿಗಳು ಪೇಳ್ವರಯ್ಯ ||೨|| ಅಡಬಲದ ಗ್ರಂಥಿಯನು ಕಲಶಕುಚವೆಂಬರು ಕಡು ಒರಟು ಪಾಣಿಯನು ತಳಿರೆಂಬರು ತಡಬಡುವ ಡೊಂಕು ಕಾಲನು ಕಮಲವೆಂದೆನುತ ಕಡುಪಾಪಿ ಕಬ್ಬಿಗರು ಬಣ್ಣಿಸುವರಯ್ಯ ||೩|| ತೊಗಲು ಮಾಂಸಗಳಿಂದ ಕೂಡಿರುವ ಕಾಯವನು ಬೊಗಳುವರು ಬಂಗಾರಬಳ್ಳಿಯೆಂದು ಜಗವು ಎಲ್ಲವು ಇವರ ಕೆಟ್ಟ ಕವಿತೆಯ ಕೇಳಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಚರಣಾಮೃತ ರುಚಿಕರವಲ್ಲವು ಪರಮಭಕ್ತರಿಗಲ್ಲದೆ

(ರಾಗ ರೇಗುಪ್ತಿ ಮತ್ತು ಪೂರ್ವಿ , ಆದಿತಾಳ) ಹರಿಚರಣಾಮೃತ ರುಚಿಕರವಲ್ಲವು ಪರಮಭಕ್ತರಿಗಲ್ಲದೆ ಅರಿಯದ ಮೂಢಮನುಜನಿಗೆ ಪೇಳಲು ಹರುಷವಾಗಬಲ್ಲುದೆ ||ಪ|| ಅಂದುಗೆ ಅರಳೆಲೆ ಇಟ್ಟರೆ ಕೋಡಗ ಕಂದನಾಗಬಲ್ಲುದೆ ಹಂದಿಗೆ ಸಕ್ಕರೆ ತುಪ್ಪವ ತಿನಿಸಲು ದಂತಿಯಾಗಬಲ್ಲುದೆ ಚಂದಿರ ಕಿರಣವ ನೋಡಲು ಅಂಧಕ ಅಂದವರಿಯಬಲ್ಲನೇ ಇಂದಿರೆಯರಸನ ಮಹಿಮೆಯ ಮಂದ ಮನುಜ ಬಲ್ಲನೇ ||೧|| ಉರಗಗೆ ಕ್ಷೀರವನೆರೆಯಲು ವಿಷ ತಾ ಹರಿದುಹೋಗಬಲ್ಲುದೆ ಭರದಿಂದ ಶುನಕನ ಬಾಲವ ತಿದ್ದಲು ಸರಳವಾಗಬಲ್ಲುದೆ ಪರಿಪರಿ ಬಂಗಾರವ ಇಡೆ ದಾಸಿಯು ಅರಸಿಯಾಗಬಲ್ಲಳೆ ಭರದಿಂದ ನೀಲಿಯ ತೊಳೆಯಲು ಅದರಾ ಕರಿದು ಹೋಗಬಲ್ಲುದೆ ||೨|| ಮೋಡಕೆ ಮೋರವು ಕುಣಿಯಲು ಕುಕ್ಕುಟ ನೋಡಿ ಕುಣಿಯಲುಬಲ್ಲುದೆ ಗೋಡೆಯ ಮುಂದೆ ನಾಟ್ಯವನಾಡಲು ನೋಡಿ ಕೊಡಲು ಬಲ್ಲುದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಳೋ ಕೇಳೋ ಮನುಜನೆ ಕೇಳೋ ಕೇಳೋ

( ಭೈರವಿ ರಾಗ ತ್ರಿವಿಡೆ ತಾಳ) ಕೇಳೋ ಕೇಳೋ ಮನುಜನೆ ಕೇಳೊ ಕೇಳೊ ||ಪ|| ಕೇಳು ಲೋಕದ ಬಾಳಿನೊಗೆತನ ಕಾಳು ಮಾಡದೆ ಬಿಡುವುದೆ ನಾಳೆ ಯಮನಾಳುಗಳು ಬೇಗದಿ ಕಾಲ ಹಿಡಿದೆಳೆದೊಯ್ಯದಿರುವರೆ ||ಅ.ಪ|| ಕೋತಿ ಕಂಠಕೆ ರತ್ನಹಾರವ ಕೋತು ಹಾಕಲು ಬಲ್ಲುದೆ ಪ್ರೀತಿಯಿಂದಲಿ ಕತ್ತೆ ಹಾಲೋಗರವನಿಕಲು ರುಚಿಪುದೆ ಜಾತಿರತ್ನದ ತಕ್ಕ ಮೌಲ್ಯವ ಜಾಡನಾ ಮನ ಅರಿವುದೆ ರೀತಿಯಿಂದಲಿ ಪೇಳ್ದ ಧರ್ಮದ ರೀತಿ ಮೂರ್ಖಗೆ ತಿಳಿವುದೆ ||೧|| ಕುರುಡನಿಗೆ ಕರ್ಪೂರ ದೀಪವ ಕಾಣಿಸಿದರವ ಕಾಂಬನೆ ಬರಿದೆ ಕಿವುಡಗೆ ಗೀತವಾದ್ಯವ ಬಾರಿಸಲು ಅವ ಕೇಳ್ವನೆ ಇರದೆ ಮೋಟನ ಬರೆದು ತೋರೆನೆ ಬರೆದು ತೋರಿಸಬಲ್ಲನೆ ಕರುಣವಿಲ್ಲದವಂಗೆ ದುಃಖವ ಒರೆಯೆ ಕರುಣಿಸಲಾಪನೆ ||೨|| ನೀಚನಿಗೆ ಸಂಪತ್ತು ಬಂದರೆ ನೀಚತನವನು ಬಿಡುವನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾತಕೆ ಮರುಳಾದೆಯೋ ಮನವೆ

(ರಾಗ ಶಂಕರಾಭರಣ ಝಂಪೆತಾಳ) ಯಾತಕೆ ಮರುಳಾದೆಯೋ ಮನವೆ ಏತಕೆ ಮರುಳಾದೆಯೋ ಯಾತಕೆ ಮರುಳಾದೆ ಕಾಕುದೈವವ ನಂಬಿ ಕಾತರಪಟ್ಟು ನೀ ನೀತಿಮಾರ್ಗವ ಬಿಟ್ಟು ||ಪ|| ಮಾರಿಯು ಮಸಣಿಯು ಕಾಯ್ವುದೆ ನಿನ್ನ ಕೋರಿಕೆಯನು ಕೊಡಬಲ್ಲುದೆ ಧೀರನು ನೀನಾಗಿ ಹರಿಪಾದವ ನಂಬಲು ಆರಿಗು ತೀರದ ಮುಕುತಿಯ ಕೊಡುವನು ||೧|| ಆ ಜಾತಿ ಈ ಜಾತಿ ಎನ್ನದೆ ನೀನು ಸೋಜಿಗವ ಪಟ್ಟು ಸಾಯದೆ ಮೂಜಗದೀಶನ್ನ ದಾಸರ ನಂಬಲು ಮಾಜದೆ ಜಾನದ ದಾರಿಯ ತೋರ್ಪರು ||೨|| ಏನಾಯ್ತು ಈ ಕರ್ಮಮಾರ್ಗದಿ ನೀನು ನಾನಾ ದುಃಖವ ಪೊಂದಿದೆ ಇನ್ನಾದರು ಶ್ರೀ ಅಚ್ಯುತನ ನೆನೆದರೆ ಜಾನದ ತತ್ವವು ತಾನೆ ತಿಳಿವುದಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ ಬುದ್ಧಿ ಮನವೆ

(ರಾಗ ರೇಗುಪ್ತಿ ಆದಿತಾಳ) ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ ಬುದ್ಧಿ ಮನವೆ ದೂರೋ ಬುದ್ಧಿ ಮಾಡಬೇಡ ಕೈಯಲಿ ಕೋ ಕಡ್ಡಿ , ನಿನ್ನ ಕೈಯಲಿ ||ಪ|| ಕೋಪವನ್ನೆ ಮಾಡದಿರು , ಪಾಪಕೆ ಗುರಿಯಾಗದಿರು ಶ್ರೀಪತಿಯ ಧ್ಯಾನವನ್ನು ನೀ ಪಠಿಸುತಿರು ಮನವೆ ||೧|| ಅಷ್ಟಮದದಿ ಬೆರೆಯದಿರು , ನಷ್ಟಕೆ ಗುರಿಯಾಗದಿರು ದುಷ್ಟಸಂಗವನ್ನು ಮಾಡಿ ಭ್ರಷ್ಟನಾಗಬೇಡ ಮನವೆ ||೨|| ಸಿರಿಯ ಮೆಚ್ಚಿ ಮೆರೆಯದಿರು , ಬರಿದೆ ಹೊತ್ತು ಕಳೆಯದಿರು ಪರರ ನಿಂದೆಯನ್ನು ಮಾಡಿ ನರಕಿಯಾಗಬೇಡ ಮನವೆ ||೩|| ಕಾಯವನ್ನು ನಂಬದಿರು , ಮಾಯಕೆ ಮರುಳಾಗದಿರು ಸ್ತ್ರೀಯರನ್ನು ಕಂಡು ನೀನು ಬಯಸದಿರು ಮರುಳು ಮನವೆ ||೪|| ನಿನ್ನ ನಿಜವ ನಂಬದಿರು , ಉನ್ನತಾಸೆ ಮಾಡದಿರು ಚನ್ನಕೇಶವನ್ನ ಪಾದವನ್ನು ನೀನು ನಂಬು ಮನವೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಶವನೊಲುಮೆಯು ಆಗುವ ತನಕ

---ರಾಗ ಶಂಕರಾಭರಣ ಆದಿತಾಳ ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರು ಮನವೆ ಕ್ಲೇಶಪಾಶಗಳ ಹರಿದು ವಿಲಾಸದಿ ದಾಸರ ನುತಿಗಳ ಪೊಗಳುತ ಮನದೊಳು ||ಪ|| ಮೋಸದಿ ಜೀವಿಯ ಘಾಸಿ ಮಾಡಿದ ಫಲ ಕಾಶಿಗೆ ಹೋದರೆ ಹೋದೀತೆ ದಾಸರ ಕರೆತಂದು ಕಾಸು ಕೊಟ್ಟ ಫಲ ಲೇಸಾಗದೆ ಸಸಿನಿದ್ದೀತೆ ಭಾಷೆಯ ಕೊಟ್ಟು ನಿರಾಸೆಯ ಮಾಡಿದ ಫಲ ಮೋಸವು ಮಾಡದೆ ಬಿಟ್ಟೀತೆ ಶಶಿವದನೆಯ ಅಧರಾಮೃತ ಸೇವಿಸಿ ಸುಧೆಯಿಂದೆಡೆ ನಿಜವಾದೀತೆ ||೧|| ಕನಕದ ಪಾತ್ರದ ಘನತೆಯ ಪ್ರಭೆಗಳು ಶುನಕನ ಮನಸಿಗೆ ಸೊಗಸೀತೆ ಹೀನ ಮನುಜನಿಗೆ ಜ್ಞಾನವ ಬೋಧಿಸೆ ಹೀನ ವಿಷಯಗಳು ಹೋದೀತೆ ಮಾನಿನಿ ಮನಸು ನಿಧಾನವು ಇಲ್ಲದಿರೆ ಮನಾಭಿಮಾನ ಉಳಿದೀತೆ ಭಾನುವಿಕಾಸನ ಭಜನೆಯ ಮಾಡದ ದೀನಗೆ ಮುಕುತಿಯು ದೊರಕೀತೆ ||೨|| ಸತ್ಯದ ಧರ್ಮದ ನಿತ್ಯವು ಬೋಧಿಸೆ ತೊತ್ತಿನ ಮನಸಿಗೆ ಸೊಗಸೀತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎದ್ದಿರ್ಯಾ? ನೀವಿನ್ನೆದ್ದಿರ್ಯಾ? ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ

---- ರಾಗ ಭೂಪಾಲಿ ( ಜೋಗಿಯಾ) ದೀಪಚಂದಿ ತಾಳ ಎದ್ದಿರ್ಯಾ ? ನೀವಿನ್ನೆದ್ದಿರ್ಯಾ ? ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ ||ಧ್ರುವ || ಶುದ್ಧಿ ಮೆರೆದು ಭವನಿದ್ರಿಯಗಳದಿನ್ನೆದ್ದಿರ್ಯಾ ||೧|| ಕಾಯಮಂದಿರದೊಳು ಮಾಯಾಮುಸುಕು ತೆಗೆದಿನ್ನೆದ್ದಿರ್ಯಾ ||೨|| ಚೆನ್ನಾಗಿ ಮಲಗಿದ್ದ ಜನ್ಮಹಾಸಿಗಿ ಬಿಟ್ಟು ಇನ್ನೆದ್ದಿರ್ಯಾ ||೩|| ಮನದಲ್ಲಿ ಇನಕೋಟಿತೇಜನ ಕಾಣ್ವ್ಹಾಂಗೆ ಇನ್ನೆದ್ದಿರ್ಯಾ ||೪|| ಎದ್ದಿದ್ದರೆ ನೀವಿನ್ನು ಶುದ್ಧಬುದ್ಧರಾಗಿ ಇನ್ನೆದ್ದಿರ್ಯಾ ||೫|| ತನ್ನ ತಾ ತಿಳಿವ್ಹಾಂಗೆ ಕಣ್ದೆರೆದಿನ್ನು ಇನ್ನೆದ್ದಿರ್ಯಾ ||೬|| ದೀನ ಮಹಿಪತಿಸ್ವಾಮಿ ಮನೋಹರ ಮಾಡ್ವ್ಹಾಂಗ ||೭|| ---- ರಚನೆ ---ಮಹಿಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ

------ಭೀಮಪಲಾಸ್ ರಾಗ ತೀನ್ ತಾಳ ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ ಹೆಮ್ಮೆಯೆಂಬ ಹಲ್ಲು ಮುರಿದೆ ಪೂರ್ಣ ಸುಮ್ಮನಿರುವೆ ಕಂಡು ಸಂತತ ಚರಣ ಒಮ್ಮನದಿಂದೆ ತೃಪ್ತ್ಯಾಯಿತು ಜೀವನ ||೧|| ಸದ್ಬೋಧವನ್ನ ನೀಡಲು ಓಡಿಬಂದೆ ಸದ್ಗುರುವೆ ಒಡೆಯ ನೀನಹುದೆಂದೆ ಬಿದ್ದುಕೊಂಡಿಹೆ ನಾ ನಿಮ್ಮ ಮನೆಯ ಮುಂದೆ ಬುದ್ಧಿವಂತರ ಬೆನ್ನಟ್ಟಿ ಹೋಗೆ ಹಿಂದೆ ||೨|| ಹಳಿಯೆಂದರೆ ನಾ ಹೋಗೆ ಎಂದೆಂದಿಗೂ ಬಿಟ್ಟು ಕೇಳಿಕೊಂಡಿಹೆ ಗುಹ್ಯವಾಕ್ಯದ ಹೆಜ್ಜಿ ಮೆಟ್ಟು ಸುಳುವುದೋರಲು ನಿಮ್ಮ ಸದ್ಗತಿ ಮುಕ್ತಿಯುಂಟು ತಿಳದ್ಹಾಕಿದೆ ನಾ ನಿಮ್ಮ ಪಾದರಕ್ಷಕೆ ಗಂಟು ||೩|| ಬಾಗಿಲ ಕಾಯಿಕೊಂಡು ಬಿದ್ದಿಹ ನಿಮ್ಮ ಶ್ವಾನ ಹಗಲಿರುಳು ನಾ ಬೊಗಳುವೆ ನಿಜಗುಣ ಜಾಗಿಸುವದೆನ್ನೊಳು ನಮ್ಮಯ್ಯ ನಿಮ್ಮ ಖೂನ ಸುಗಮದಿಂದ ದೊರೆಯಿತು ನಿಜಸ್ಥಾನ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದೇ ನಿತ್ಯ ನಮಸ್ಕಾರ

(ರಾಗ - ದಾನೀ ದೀಪಚಂದಿ ತಾಳ) ಇದೇ ನಿತ್ಯ ನಮಸ್ಕಾರ ನೋಡಿ ಗುರುಚರಣಕೆ ಮನಗೂಡಿ ||ಪ|| ಬಿಡದಿಹುದೇ ಸತ್ಸಂಗ ನೋಡಿ ಇದುವೇ ಶಿರಸಾಷ್ಟಾಂಗ ಕಡದ್ಹೋಯಿತು ಭವದುಸ್ಸಂಗ ದೃಢಮಾಡಿ ಮನ ಅಂತರಂಗ ||೧|| ನಮ್ರತೆಯಲಿಹುದೇ ನಮನ ಪ್ರೇಮಭಾವವೆಂಬುದು ಪ್ರದಕ್ಷಿಣ ನೇಮದಿಂದ ನಡೆದವನು ದಿನಾ ಬ್ರಹ್ಮಾನಂದದೋರುವ ಸಾಧನ ||೨|| ಗುರ್ವಿನಂಘ್ರಿಗೆ ಎಡೆಮಾಡಿ ಅರ್ವಿನೊಳಾದ ಮಹಿಪತಿ ನೋಡಿ ಗರ್ವ ಪುಣ್ಯೆಂಬುದ ಈಡ್ಯಾಡಿ ಸರ್ವ ಪಾಪ ಹೋಯಿತು ಓಡಿ ||೩|| ------------ರಚನೆ ಮಹಿಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಲಹು ಶ್ರೀ ಗುರುರಾಯ ಸಲಹು ಬುಧಜನಪ್ರಿಯ

ರಾಗ - ಮಾಲಕಂಸ್ ತಾಳ - ಝಪ್ ಸಲಹು ಶ್ರೀ ಗುರುರಾಯ ಸಲಹು ಬುಧಜನಪ್ರಿಯ ಸಲಹೆನ್ನ ಪರಮಗೇಹ್ಯ ||ಪ|| ಚಿಕ್ಕವನು ನಾ ಮೊದಲು ಸೊಕ್ಕಿ ಭವಸುಳಿಯೊಳಗೆ ಸಿಕ್ಕಿ ಬಹು ನೊಂದೆನೆಂದು ಹೊಕ್ಕೆ ಮೊರೆ ನಿನ್ನ ಹಿಂ- ದಿಕ್ಕಿಕೋ ದಯದಿಂದ ಮಕ್ಕಳಂದದಲಿ ಚೆನ್ನಾಗೆನ್ನ ||೧|| ಪಿಂತಿನ ಬವಣೆಗಳು ಎಂತಾದರಾಗಲಿ ಶಾಂತಮೂರುತಿಯೆ ಎನ್ನ ಅಂತರಂಗದಲಿನ್ನು ನಿಂತು ನಿನ್ನಯ ರೂಪ ಸಂತತವಾಗಿ ತೋರೋ ಬೀರೋ ||೨|| ಅನ್ಯಪಥಜಕೆಳಸಿದ ಘನ ತಪ್ಪನು ಕ್ಷಮಿಸಿ ನಿನ್ನ ಪದಯುಗಳ ತೋರಿ ಸನ್ನುತನೆ ಮಹಿಪತಿ ಚಿನ್ನಕೃಷ್ಣನ ಸ್ವಾಮಿ ಇನ್ನಾರೆ ದಯವ ಮಾಡೋ ನೋಡೋ ||೩|| ----------- ರಚನೆ- ಮಹಿಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು