ಕೇಳೋ ಕೇಳೋ ಮನುಜನೆ ಕೇಳೋ ಕೇಳೋ

ಕೇಳೋ ಕೇಳೋ ಮನುಜನೆ ಕೇಳೋ ಕೇಳೋ

( ಭೈರವಿ ರಾಗ ತ್ರಿವಿಡೆ ತಾಳ) ಕೇಳೋ ಕೇಳೋ ಮನುಜನೆ ಕೇಳೊ ಕೇಳೊ ||ಪ|| ಕೇಳು ಲೋಕದ ಬಾಳಿನೊಗೆತನ ಕಾಳು ಮಾಡದೆ ಬಿಡುವುದೆ ನಾಳೆ ಯಮನಾಳುಗಳು ಬೇಗದಿ ಕಾಲ ಹಿಡಿದೆಳೆದೊಯ್ಯದಿರುವರೆ ||ಅ.ಪ|| ಕೋತಿ ಕಂಠಕೆ ರತ್ನಹಾರವ ಕೋತು ಹಾಕಲು ಬಲ್ಲುದೆ ಪ್ರೀತಿಯಿಂದಲಿ ಕತ್ತೆ ಹಾಲೋಗರವನಿಕಲು ರುಚಿಪುದೆ ಜಾತಿರತ್ನದ ತಕ್ಕ ಮೌಲ್ಯವ ಜಾಡನಾ ಮನ ಅರಿವುದೆ ರೀತಿಯಿಂದಲಿ ಪೇಳ್ದ ಧರ್ಮದ ರೀತಿ ಮೂರ್ಖಗೆ ತಿಳಿವುದೆ ||೧|| ಕುರುಡನಿಗೆ ಕರ್ಪೂರ ದೀಪವ ಕಾಣಿಸಿದರವ ಕಾಂಬನೆ ಬರಿದೆ ಕಿವುಡಗೆ ಗೀತವಾದ್ಯವ ಬಾರಿಸಲು ಅವ ಕೇಳ್ವನೆ ಇರದೆ ಮೋಟನ ಬರೆದು ತೋರೆನೆ ಬರೆದು ತೋರಿಸಬಲ್ಲನೆ ಕರುಣವಿಲ್ಲದವಂಗೆ ದುಃಖವ ಒರೆಯೆ ಕರುಣಿಸಲಾಪನೆ ||೨|| ನೀಚನಿಗೆ ಸಂಪತ್ತು ಬಂದರೆ ನೀಚತನವನು ಬಿಡುವನೆ ನಾಚಿಕೆಯು ಬಿಟ್ಟಿರ್ಪ ಮನುಜನು ಹಿಂದು ಮುಂದನು ನೋಳ್ಪನೆ ಬಾಚಿಕೊಂಬಾ ದುರುಳರಾಜನು ಬಡವನೆಂದೊಡೇ ಬಿಡುವನೆ ಈ ಚರ್ತುರ್ಭುಜ ವಿಠ್ಠಲೇಶನು ತನ್ನವರ ಕೈ ಬಿಡುವನೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು