ಗುರುಭಕುತಿಯಲಿ ಮನವು ಸ್ಥಿರಗೊಳ್ಳಲಿಬೇಕು
---ರಾಗ ಭೂಪ ತಾಳ -ದೀಪಚಂದಿ
ಗುರುಭಕುತಿಯಲಿ ಮನವು ಸ್ಥಿರಗೊಳ್ಳಲಿಬೇಕು |
ಅರಿತು ಸದ್ಭಾವದಲಿ ಧೃಡಗೊಳ್ಳಬೇಕು || ಪ||
ನಿಶ್ಚಯವಿಡಬೇಕು ದುಶ್ಚಲವ ಬಿಡಬೇಕು |
ನಿಶ್ಚಿಂತದಲಿ ನಿಜಸುಖ ಪಡಿಯಬೇಕು ||೧||
ನಂಬಿ ನಡಿಯಬೇಕು ಡಂಭಕವ ಬಿಡಬೇಕು |
ಹಂಬಲಿಸಿ ಅಂಬುಜಾಕ್ಷನ ನೋಡಬೇಕು ||೨||
ವಿಶ್ವಾಸವಿಡಬೇಕು ವಿಷಗುಣವ ಬಿಡಬೇಕು |
ವಿಶ್ವವ್ಯಾಪಕನ ವಿಶ್ವದಿ ನೋಡಬೇಕು ||೩||
ರತಿಪ್ರೇಮ ಬಿಡಬೇಕು ಅತಿ ಹರುಷಪಡಬೇಕು |
ಸ್ತುತಿಸ್ತವನವನು ಪಾಡಿ ಗತಿ ಪಡಿಯಬೇಕು ||೪||
ಆರು ಜರಿಯಬೇಕು ಮೂರು ಹರಿಯಬೇಕು |
ಅರಿತು ಗುರುಪಾದ ಮಹಿಪತಿ ಬೆರಿಯಬೇಕು ||೫||
----------- ರಚನೆ- ಮಹಿಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Read more about ಗುರುಭಕುತಿಯಲಿ ಮನವು ಸ್ಥಿರಗೊಳ್ಳಲಿಬೇಕು
- Log in to post comments