ಇತರೆ

ಪಟ್ಟಿಯಲ್ಲಿಲ್ಲದ ಬೇರೆ ದಾಸರ ರಚನೆಗಳಿಗೆ ಈ ಟ್ಯಾಗ್ ಹಾಕಬಹುದು

ಎಂದೆಂದೂ ನಿನ್ನ ಪಾದವ ನಂಬಿದೆ ತಂದೆ

( ದ್ವಿಜಾವಂತಿ ರಾಗ ಆದಿತಾಳ) ಎಂದೆಂದೂ ನಿನ್ನ ಪಾದವ ನಂಬಿದೆ ತಂದೆ ಪಾಲಿಸೋ ಹರಿಯೆ ಬಂಧನಗಳ ನೀನಿಂದು ಓಡಿಸು ಎನ್ನ ಸಿಂಧುರವರದ ಸಿಂಧುಸುತೆಯ ರಮಣ ||ಪ|| ಗಂಗೆ ಕಾವೇರಿಯೊಳು ಅಂಗವ ತೊಳೆದರು ಹೋಗದು ಅಂಗದ ಕಲ್ಮಶವು ಹಿಂಗದೆ ನಾನಾ ಜಪಗಳು ಮಾಡಿದರು ಈ ಸಂಗವೆಂದಿಗೂ ಹರಿಯದು ರಂಗನೆ ನೀನು ಸಂಕಲ್ಪಿಸಿದೊಡೆ ಸಂಗ ಹಿಂಗಿ ಹೋಗುವುದಯ್ಯ ಪಾಪವು ಸಹಿತಲೆ ||೧|| ವ್ರತತಪ ದಾನಗಳಿಂದ ರಾಗದ್ವೇಷ ಗತಿಗೆಟ್ಟು ಪೋಪುದೇನೈ ಸತಿಸುತರಾಸೆಗಳು ಸುರರ ಪೂಜೆಗಳಿಂದ ಅತಿ ವೃದ್ಧಿಯಾಗುವುವೈ ಪತಿತಪಾವನ ನಿನ್ನ ಅನುದಿನ ನುತಿಸಲು ಶಿಥಿಲಗಳಾಗಿ ಇವುಗಳು ತೊಲಗುವವಲ್ಲದೆ ||೨|| ವೈಕುಂಠದರಸ ಎಂಬ ಸಿರಿನರಹರಿಯೆ ಪೋಷಿಸದಿದ್ದರೆ ನೀನು ಪಾಕಶಾಸನನು ಪಶುಪತಿಯೆ ಮೊದಲಾದ ಲೋಕಪಾಲರು ಪೊರೆವರೆ ಏಕ ಭಕ್ತಿಯಿಂದ ಏಕ ಚಿತ್ತದೊಳಿರ್ಪೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋಕುಲರನ್ನ ಏಕೆನ್ನ ಕೈ ಬಿಡುವೆ

( ರಾಗ ಅಸಾವೇರಿ ಆದಿತಾಳ) ಗೋಕುಲರನ್ನ ಏಕೆನ್ನ ಕೈ ಬಿಡುವೆ ||ಪ|| ನಾನು ಮಾಡಿದ ಪಾಪ ನರಕಸಾಧನವಾಯ್ತು ಏನು ಗತಿಯೊ ಎನಗೆ ಭಕ್ತರ ಕಾಮಧೇನು ಮಾಡುವುದೇನಯ್ಯ ಕೃಷ್ಣಯ್ಯ ಎನ್ನ ಹೀನ ಬುದ್ಧಿಗಳನ್ನು ನೆನೆಯದೆ ಸ್ವಾನುಭವ ಗೋಷ್ಠಿಯಲಿ ಸೇರಿಸಿ ಮೀನಕೇತನ ಜನಕ ಪಾಲಿಸೊ , ಮಾನ ಅಭಿಮಾನಗಳು ನಿನ್ನದು ||೧|| ಎಷ್ಟು ನಿಲ್ಲಿಸಿದರು ಕೆಟ್ಟ ಇಂದ್ರಿಯಗಳು ತಟ್ಟನೆ ತಿರುಗುವವು ಭ್ರಷ್ಟನ ಚಿತ್ತ ಎಷ್ಟು ಹಿಡಿದರು ನಿಲ್ಲದು, ಕೃಷ್ಣಯ್ಯ ಎನ್ನ ಕಷ್ಟವನು ನೀ ಮನಕೆ ತಂದು ಎನಗಿಷ್ಟವೆಂತಹುದು ಅಂತೆಗೈವುತ ಭ್ರಷ್ಟತನವನು ತಿದ್ದಿ ನಿನ್ನುತ್ಕೃಷ್ಟ ಪದವನು ಸೇರಿಸೆನ್ನನು ||೨|| ವೈಕುಂಠನಗರೀಶ ಗೆದ್ದೆನೈ ಭವಪಾಶ ಸಕ್ಕರೆ ಸಿಕ್ಕಿತಯ್ಯ ನಿನ್ನಯ ನಾಮ ಜಿಹ್ವೆಗೆ ದೊರೆವುದೆ ಕೃಷ್ಣಯ್ಯ ಎನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಮಲನಯನ ನೀ ಎನ್ನನು ತಳ್ಳಿದರೆ

(ತೋಡಿ ರಾಗ ಅಷ್ಟತಾಳ) ಕಮಲನಯನ ನೀ ಎನ್ನನು ತಳ್ಳಿದರೆ ತ್ಫರ್ತ್ರವೆ ಕರ್ತುವಿಲ್ಲವೈ ಮಮತೆಯಿಂದ ಮಗುವ ತಾಯಿ ಪೊರೆಯದಿರಲು ಮತ್ತೆ ಪೊರೆವರಾರೈ ಓ ಕೇಶವ ||ಪ|| ಪಂಚಭೂತಗಳ ಸಂಚಿತದ ದೇಹವು ವಂಚಿಪುದೈ ಕೇಶವ ಸಂಚಿತದ ವಸ್ತುವು ಕೊಂಚವಾದರೂ ಎನ್ನ ಹೊಂಚಿ ಈಗ ನೋಡದೈ ಓ ಕೇಶವ ||೨|| ಹೆಂಡತಿಯು ಮಕ್ಕಳು ಹಿಂಡುಗೂಡಿ ಬಂದು ದಂಡಿಪರೈ ಕೇಶವ ಕಂಡವರೊಂದಾಗಿ ಕಾಣದೆ ಎಂದಡೆ ಗೈದದೆ ಪೋಪರೈ ಓ ಕೇಶವ ||೨|| ಕಾಲನ ದೂತರು ಎನ್ನ ಕಾಲುಗಳನು ಕಟ್ಟಿ ಬಾಳಿಸರೈ ಕೇಶವ ಲೀಲೆಯಿಂದಲಿ ವೈಕುಂಠ ನಗರದೊಳಿರ್ಪ ಇಂದಿರೇಶನೆ ಪಾಲಿಸೈ ಓ ಕೇಶವ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಬೇಕು ಜೋಗಿಗೆ ? ಏನೂ ಬೇಡ

( ಪೂರ್ವಿ ರಾಗ , ಮಟ್ಟತಾಳ) ಏನು ಬೇಕು ಜೋಗಿಗೆ ? ಏನೂ ಬೇಡ ||ಪ|| ರಾಗಭೋಗ ಸರ್ವವನ್ನು ರಾಗವೆಂಬ ಕಾಗೆಗಳನು ಕೂಗುವೆಂಬ ಕೋಳಿಯನ್ನು ತೇಗಿ ಮೂಗನಾದ ಬಳಿಕ ||೧|| ಪಂಚಕಂಗಳನ್ನು ಸುಟ್ಟು ಪಂಚ ಫಕೀರನು ಆಗಿ ಪಂಚ ಪಂಚವೆಂಬ ಅರಿಗಳ ಹಂಚಿನಲಿ ಹುರಿದು ತಿಂದ ||೨|| ಅಷ್ಟ ದಿಕ್ಪಾಲಕರನ್ನು ಒಟ್ಟುಗೂಡಿ ಮದವನೆಲ್ಲ ಮೆಟ್ಟಿ ಸಿಂಹನಾಗಿ ಸವಿದ ದಿಟ್ಟ ಗಂಡಭೇರುಂಡಗೆ ||೩|| ಆರು ಬಣ್ಣ ತೋರಿ ಮೆರೆವ ಕಾರಣಾರ್ಥ ಪಕ್ಷಿಗಳನು ತೋರಿ ಹಾರುತಿರಲು ಬಡಿದು ಬೇರು ಸಹಿತ ನುಂಗಿದಂಥ ||೪|| ಏಳು ಹೆಡೆಯ ಸರ್ಪವನ್ನು ಕೋಳಿ ಕೂಗೆ ಅದನು ಕಂಡು ಜೋಳು ಮುಟ್ಟಿ ಶರಣು ಕಂಡೂ ತೋಳನನ್ನು ತಿಂದು ಬಿಟ್ಟ ||೫|| ಮೂರು ನಾಮ ಮೂರು ನೇಮ ಮೀರಿದಂಥ ಶಿರಸದವನ ಮೇರುವ ತುದಿಗೇಳು ಕಟ್ಟಿ ಮೂರು ನದಿಯ ದಾಟಿದಂಥ ||೬||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡಿದರೆ ನೋಡು ಮಾತಾಡು ತಾಯಿಗಳೆಂದು

(ರಾಗ ಮುಖಾರಿ ಝಂಪೆ ತಾಳ) ನೋಡಿದರೆ ನೋಡು ಮಾತಾಡು ತಾಯಿಗಳೆಂದು ನೋಡಿ ಭ್ರಮಿಸಲು ಬೇಡ ಪರಸತಿಯರ ||ಪ|| ದಾರಿಯೊಳು ಭಯವೆಂದು ಚೋರರೊಳು ಹೋಗುವರೆ ಕೇರು ಬೀಜದ ತೈಲ ಲೇಪಿಸುವರೆ ಅರಣ್ಯ ಮಧ್ಯದಲಿ ಮೃಗವಿರಲು ತುರಗವೆಂ- ದೇರುವರೆ ಪರಸತಿಯ ಪಾಪಿ ಮನವೆ ||೧|| ಹಸಿಯ ಎಕ್ಕೆಯ ಕಾಯಿ ನಸುಗುನ್ನಿ ತುರಚೆಯನು ತೃಷೆಗೆ ಮೆಲುವರೆ ವ್ಯಸನದೋರೀತೆಂದು ವಿಷವ ಸೇವಿಸಿದಂತೆ ನೋಡಿ ನೀ ಪರಸತಿಯ ವಿಷಯಕೆಳಸುವದೇಕೆ ಪಾಪಿ ಮನವೆ ||೨|| ಪ್ರೀತಿಯಿಂದಲಿ ಸತಿಯ ಮನೆಗಾಗಿ ಇಂದ್ರನತಿ- ಕಾತುರದಿ ಹೋಗಿ ಮೈ ತೂತಾದನು ಸೀತೆಗೋಸುಗವಾಗಿ ರಾವಣನು ತಾ ಕೆಟ್ಟ ಸೋತು ದ್ರೌಪದಿಗೆ ಕೀಚಕ ಕೆಟ್ಟನು ||೩|| ಕೆಟ್ಟವರ ದೃಷ್ಟ ಇನ್ನೆಷ್ಟು ಹೇಳಿದರೇನು ಬಿಟ್ಟುಬಿಡುವರೆ ತಮ್ಮ ಕೆಟ್ಟ ಗುಣವ ಕಟ್ಟಿನೊಳಗಿಟ್ಟು ಉತ್ಕೃಷ್ಟ ಜನಗಳ ಸಂಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೃಷ್ಣ ಪಾಲಿಸೋ ಶ್ರೀ ಶಾರ್ಙ್ಗಪಾಣಿ

(ಭೈರವಿ ರಾಗ ಆದಿತಾಳ) ಕೃಷ್ಣ ಪಾಲಿಸೋ ಶ್ರೀ ಶಾರ್ಙ್ಗಪಾಣಿ ||ಪ|| ಮಾತೆ ಉದರದೊಳತಿ ತಾಪದೊಳಿರ್ದೆ ರೀತಿಯ ಮರೆತು ನಾನಳುತ ಬಿದ್ದಿರ್ದೆ ಕಾತುರದಲಿ ಕುಣಿದಾಡಿ ನಗುತಿರ್ದೆ ಈ ತೆರನಾಗಿ ನಾ ಬಾಲನಾಗಿದ್ದೆ ||೧|| ಮುಂಜಿ ಮದುವೆಯಾಗಿ ಸಂಭ್ರಮದಿಂದ ಅಂಜಿಕೆಯು ಇಲ್ಲದೆ ತಿರುಗುತ್ತ ಮುದದಿ ಸಂಜೆ ವೇಳೆಯಲಿ ಸೂಳೆಯರ ಗೃಹದಿ ರಂಜಿಪ ಲೀಲೆಯೊಳು ಕಾಲವ ಕಳೆದೆನು ||೨|| ಚಿಂತೆ ಪಡುತ ನಾ ಚಿರಕಾಲವಿದ್ದೆ ಶ್ರಾಂತಿಯಿಲ್ಲದೆ ಸುತ್ತಿ ಸಾಯುತಲಿದ್ದೆ ಶಾಂತನಾದೆ ವೈಕುಂಠ ನಗರೀಶ ಭ್ರಾಂತಿಯ ಬಿಟ್ಟೆನೈ ಕಾಯೋ ಜಗದೀಶ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಾಲಿಸೋ ಜಗದೀಶ ಅನುದಿನಂ

(ರಾಗ ಶ್ರೀರಾಗ ಆದಿತಾಳ) ಪಾಲಿಸೋ ಜಗದೀಶ ಅನುದಿನಂ ಪಾಲಿಸೋ ಜಗದೀಶ ||ಪ|| ಮಂದಬುದ್ಧಿಯಲಿ ಸುದತೀಜನರ ಸೇರಿ ಕಂದಿದೆನೋ ದೇವಾ ಕಾಯೊ ಮುರಾರಿ ಇಂದು ಕೈಯ ಬಿಡುವುದು ಉಚಿತವೆ ಶೌರಿ , ನೀ ತಂದೆ ಗತಿಯು ಎನಗಾರು ವಿಹಾರಿ ||೧|| ಭಕ್ತರ ಪೊರೆಯುವಂಥ ಬಿರುದೆಲೋ ನಿನಗೆ ಭಕ್ತನೆಲೋ ನಾನು ನಿನ್ನ ಪದಗಳಿಗೆ ಯುಕ್ತರ ಸಂಗಗಳಿಗೆ ಸೇರಿಸೋ ಎನಗೆ ತಿಕ್ತವೇನೋ ನಾನು ನಿನ್ನ ನಾಲಿಗೆಗೆ ||೨|| ವೈಕುಂಠಪುರದೊಡೆಯ ಎನ್ನ ಕಾಯುವುದು ಲೋಕಪಾಲಕನಿಗೆ ಕಷ್ಟವೇನಿಹುದು ನೂಕಿಬಿಟ್ಟರೆ ಎನ್ನ ನೀತಿಯಾಗುವುದೇ ಸಾಕಬೇಕು ನೀ ಸುಮನೆ ಇರದೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರು ಒಲಿದರೇನು ನಮಗಿನ್ನಾರು ಮುನಿದರೇನು

(ರಾಗ ಶಂಕರಾಭರಣ ಆದಿತಾಳ) ಆರು ಒಲಿದರೇನು ನಮಗಿನ್ನಾರು ಮುನಿದರೇನು ಕ್ಷೀರಸಾಗರಶಯನ ಹರಿಯ ಸೇರಿದ ಹರಿದಾಸರಿಗೆ ||ಪ|| ಪಡೆದ ತಾಯಿಯು ತಂದೆಯು ನಮ್ಮೊಳಗೆ ಅಹಿತರು ಆದರೇನು ಮಡದಿ ಮಕ್ಕಳು ಮನೆಗಳು ನೆಂಟರು ಮುನಿಸುಗುಟ್ಟಿದರೇನು ಒಡನೆ ತಿರುಗುವ ಆ ಗೆಳೆಯನು ಮನದೊಳು ವೈರವ ಬೆಳೆಸಿದರೇನು ಕಡಲಶಯನನ ಕರುಣಾರೂಪನ ಒಲುಮೆಯುಳ್ಳ ಹರಿದಾಸರಿಗೆ ||೧|| ಊರನು ಆಳುವ ದೊರೆಯು ನಮ್ಮನು ಹೊರಗೆ ಹಾಕಿದರೇನು ಘೋರಾರಣ್ಯದೊಳು ಆಡುವ ಮೃಗಗಳು ಅಡ್ಡಗಟ್ಟೀದರೇನು ಮಾರಿ ಹಿಂಡು ಮುಸುಕಿದ ದಂಡು ಮೈಗೆ ಮುತ್ತಿದರೇನು ವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ ||೨|| ಕಾನನದೊಳು ಹರಿದಾಡುವ ಉರಗವು ಕಾಲಿಗೆ ಸುತ್ತಿದರೇನು ಜೇನಿನ ಅಂದದಿ ಕ್ರಿಮಿಕೀಟಂಗಳು ಚರ್ಮಕೆ ಮುತ್ತಿದರೇನು ಭಾನುಮಂಡಲ ಭಜಿಸುವ ಭಕ್ತರ ಬಲಗಳು ತಪ್ಪಿದರೇನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ವಾಮಿ ರಕ್ಷಿಸೋ ಶ್ರೀನಿವಾಸ

(ರಾಗ : ಯರಕಲ ಕಾಂಬೋಧಿ ತ್ರಿವಿಡೆ ತಾಳ) ಸ್ವಾಮಿ ರಕ್ಷಿಸೋ ಶ್ರೀನಿವಾಸ ಕಾಮಿತಾರ್ಥವನೀವ ಕಾಕೋದರಾದ್ರೀಶ ||ಪ|| ನಾನಾ ಜನ್ಮದಿ ಬಂದು ನಾನಾವ್ಯಾಧಿಗಳಿಂದ ದೀನನಾದೆನೊ ದೊರೆಯೇ ನಿನ್ನ ನಂಬದಲೆ ಮುನ್ನ್ಯಾರು ಗತಿ ಎನಗೆ ಮನ್ನಿಸೈ ನೀ ಬೇಗ ಸನ್ನಾಹವೇಕಯ್ಯ ಸಣ್ಣವನ ಪೊರೆಯಲು ||೧|| ತಂದೆತಾಯಿಯು ನೀನೆ ಬಂಧುಬಳಗವು ನೀನೆ ಕಂದನು ಕಾಂತೆಯು ನೀನೆನಗೆ ಹರಿಯೇ ಅಂದಗಳು ಚಂದಗಳು ಮಂದಿರವು ಮಾಣಿಕವು ಸಂದೇಹವೇನಯ್ಯ ಸರ್ವವೂ ನೀ ಎನಗೆ ||೨|| ಅಂದು ದ್ರೌಪತಿಯು ಮತ್ತಂದು ದಂತಾವಳನು ಕಂದ ಪ್ರಹ್ಲಾದನು ಅಂದು ತಾ ಧ್ರುವನು ಚಂದದೊಳು ನಿನ್ನನ್ನು ಮಂದಮತಿಯನು ಬಿಟ್ಟು ಪೊಂದಿ ಆನಂದವ ಪಡೆಯಲಿಲ್ಲವೆ ದೇವಾ ||೩|| ಕೊಬ್ಬಿನಾ ಕಣ್ಣು ಕಾಣದೆ ನಿನ್ನ ಮರೆತೆನಯ್ಯ ಅಬ್ಬರಿಸುತಲಿರ್ಪ ಎನ್ನ ಪಾಪಗಳೀಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳಾಂಗ ಮನ್ನಿಸಿ ತಪ್ಪನು

(ರಾಗ ನೀಲಾಂಬರಿ ಮಟ್ಟ ತಾಳ ) ಮಂಗಳಾಂಗ ಮನ್ನಿಸಿ ತಪ್ಪನು ರಂಗನಾಥ ರಕ್ಷಿಸೈ ತಂದೆ ಎನ್ನನು ||ಪ|| ಮಮತೆ ಇಲ್ಲದ ಮಡದಿ ಏತಕೆ, ರಂಗನಾಥ ಸುಮತಿ ಇಲ್ಲದ ಸುತನು ಏತಕೆ ಕುಮತಿಯುತರ ಸಂಗವೇಕೆ, ಸಮತೆಯಿಲ್ಲದ ಬಂಧುವೇಕೆ ಅಮಿತ ನಿನ್ನ ಚರಣಕಮಲ ರಮಿತನಾಗದ ಮನುಜನೇಕೆ ||೧|| ಕಣ್ಣು ಇಲ್ಲದ ರೂಪ ಏತಕೆ, ರಂಗನಾಥ ಹೊನ್ನು ಇಲ್ಲದ ಬಾಳು ಏತಕೆ ಮುನ್ನ ಮೂಗು ಇಲ್ಲದ ಮುಖವು ಮಣ್ಣು ತಿಂದು ಹೋದರೇನು ಅಣ್ಣ ನಿನ್ನ ಭಕುತಿ ಇಲ್ಲದ ಸಣ್ಣ ಮನುಜ ಸತ್ತರೇನು ||೨|| ದಾನವಿಲ್ಲದ ಧನವು ಏತಕೆ, ರಂಗನಾಥ ಜ್ಞಾನವಿಲ್ಲದ ವಿದ್ಯೆ ಏತಕೆ ಆಣೆ ಇಲ್ಲದ ಅರಸು ತಾನು ಅಡವಿಪಾಲು ಆದರೇನು ದೀನ ಬಂಧು ನಿನ್ನ ನಂಬದ ಮಾನಹೀನ ಮನುಜನೇತಕೆ ||೩|| ಮಕ್ಕಳಿಲ್ಲದ ಮನೆಯು ಏತಕೆ, ರಂಗನಾಥ ಅಕ್ಕರೆಯಿಲ್ಲದ ಊಟವೇತಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು