ನೆಕ್ಕರ ಕೃಷ್ಣದಾಸರು

ವೇಂಕಟಾಚಲನಿವಾಸ ಸಲಹಯ್ಯ

(ಮಧ್ಯಮಾವತಿ ರಾಗ ಝಂಪೆತಾಳ) ವೇಂಕಟಾಚಲನಿವಾಸ ಸಲಹಯ್ಯ ಪಂಕಜಾಕ್ಷನೆ ಶ್ರೀನಿವಾಸ ||ಪ|| ವಾರಿಯೊಳು ಮುಳುಗಾಡಿದೆ, ಮಂದರದ ಮೇರು ಬೆನ್ನೊಳು ತಾಳಿದೆ ಕಾರಡವಿಯೊಳು ಚರಿಸಿದೆ, ಕಂಬದೊಳು ಘೋರ ರೂಪವ ತೋರಿದೆ||೧|| ವಟುವಾಗಿ ಧರೆಯನಳೆದೆ, ಕೊಡಲಿಯೊಳು ಪಟುತರದ ನೃಪರ ಗೆಲಿದೆ ಅಟವಿವಾಸವ ಮಾಡಿದೆ, ರಣದೊಳಗೆ ಚಟುಳ ವಾಜಿಯ ನಡೆಸಿದೆ ||೨|| ಅಂಗದಂಬರವ ಮರೆದೆ, ಕಡೆಯೊಳು, ತು- ರಂಗದೊಳು ಏರಿ ನಲಿದೆ ಬಂಗಾರದದ್ರಿಯೊಳು ಮೆರೆದೆ , ವರಾಹ ರಂಗತಿಮ್ಮಪ್ಪ ಒಲಿದೆ ||೩|| -- ರಚನೆ :- ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನುಮಾನವೇತಕೆ ಅನುಗುಣವಾಗಿಯೆ ಪ್ರಣವರೂಪನ

( ಕೇದಾರಗೌಳ ರಾಗ ಅಷ್ಟತಾಳ) ಅನುಮಾನವೇತಕೆ ಅನುಗುಣವಾಗಿಯೆ ಪ್ರಣವರೂಪನ ಹೋಗಿ ನೋಡಿ ಬರುವುದಕೆ ||ಪ|| ಹೋಗುವ ಎಂದೆಂಬ ಮಾತು ನಿಶ್ಚಯವಾಗಿ ಬೇಗದ ಪಯಣದಲಿ ನಾಗಗಿರೀಶನ ಕಂಡು ಕಾಣಿಕೆಯಿತ್ತು ಸಾಗಿ ಬರುವ ಊರಿಗೆ ಇವರಿಗೆ ||ಅ|| ಕೋನೇರಿವಾಸನ ನಾ ಹೋಗಿ ನೋಡಲು ಮಾನವ ಜನುಮದಲಿ ಹೀನ ವೃತ್ತಿಯ ಬಿಟ್ಟು ಜ್ಞಾನಬುತ್ತಿಯ ಕಟ್ಟಿ ಕಾಣಲು ಇಹಪರವಾತ ತಾನೆರೆವ ||೨|| ರಾಮನ ಶಿಕ್ಷೆಯು ರಾಮನ ರಕ್ಷೆಯು ರಾಮನ ನಿಜಮತವು ರಾಮ ಆಂಜನೇಯನ ಗಿರಿಯೊಳು ನಿಂತಿಪ್ಪ ಭೂಮಿ ವರಾಹ ತಿಮ್ಮಪ್ಪ ||೩|| -- ರಚನೆ :-ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಸುಕೃತದ ಫಲವೊ ಶ್ರೀನಿವಾಸನೆ ಹೇಳು

(ರಾಗ ಭೈರವಿ ಝಂಪೆತಾಳ) ಏನು ಸುಕೃತದ ಫಲವೊ ಶ್ರೀನಿವಾಸನೆ ಹೇಳು ಹಾನಿಯಾಗಿಯೆ ಅವಮಾನ ತೋರುತಿದೆ ||ಪ|| ವಾಸುದೇವನೆ ಎನ್ನ ಈಸುದಿನ ಪರಿಯಂತ ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸಿದೆ ಈಸಾಡಿದೆನು ನಾನು ಈ ಗೃಹದೊಳೀಗೇನು ದಾಸಿನವು ನಿನಗಾಯಿತು ಮೋಸ ಯೋಚಿಪರೆ ||೧|| ಹಗಲುಗತ್ತಲೆಯಾಗಿ ಮೊಗವು ಕಾಣದೆ ಎನಗೆ ಜಗದುದರ ನಿನ್ನಾಣೆ ನಗೆಯಾಯ್ತು ಜಗಕೆ ಹಗೆಯ ಮಧ್ಯದಿ ಸಿಲುಕಿ ಮೃಗವು ಬಾಯ್ಬಿಟ್ಟಂತೆ ಮಿಗ ಕ್ಲೇಶಬಟ್ಟು ನರಮೃಗವು ತಾನಾದೆ ||೨|| ಆರು ಹಿತವರು ಇಲ್ಲ ಧಾರುಣಿಯ ಬಲವಿಲ್ಲ ಪಾರಾಗಿ ನಾಚಿಕೆಯು ಬೇರೂರಿತು ಘೋರ ಆಡವಿಯ ಒಳಗೆ ಗಾರುಗತ್ತಲೆ ಸುತ್ತಿ ಮಾರಿದೆಯ ಚೋರರಿಗೆ ದಾರಿಗಾಣಿಸದೆ ||೩|| ದೊರೆಯು ಮನ್ನಿಸಿ ಕೊಡಲು ನೆರೆಹೊರೆಯ ಕರಕರೆಯು ಹರದಿಯೊಳು ನಂಬಿಗೆಯು ಕಿರಿದಾಯಿತು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಣದಿದ್ದರೆ ನಮ್ಮ ಪ್ರಾಣ ಉಳಿಯದು

(ಭೈರವಿ ರಾಗ ತ್ರಿವಿಡೆ ತಾಳ) ಕಾಣದಿದ್ದರೆ ನಮ್ಮ ಪ್ರಾಣ ಉಳಿಯದು ಜಾಣರಾಯಗೆ ಇಟ್ಟ ಕಾಣಿಕೆಯನು ಕೊಟ್ಟು ||ಪ|| ಕಷ್ಟಗಳೆಲ್ಲವು ಬೆನ್ನಟ್ಟಿ ಬರುವಾಗ ಕಟ್ಟಿದ ಹರಕೆಗಳೆಲ್ಲವನು ಸಿಟ್ಟುಮಾಡುವ ಸ್ವಾಮಿ ಇಟ್ಟುಕೊಂಡರೆ ಇನ್ನು ಮುಟ್ಟಿಸಿಕೊಡಬೇಕಲ್ಲಿ ತಿಮ್ಮಪ್ಪನಲ್ಲಿ ||೧|| ಗಂಡಹೆಂಡತಿಯು ಮಕ್ಕಳು ಸಹವಾಗಿ ದಂಡು ಮಾಳ್ಪೆವು ತಾವು ಎನುತಲಿ ಉಂಡೆವು ಸ್ಥಿರವಾರ ಊಟವ ಏಕವ ಕಂಡು ಬಹರೆ ಹೋಗುವ ದಯವಾಗುವ ||೨|| ಕಟ್ಟಿದ ಕಾಣಿಕೆ ಇಟ್ಟು ಚರಣದಲ್ಲಿ ಸಾಷ್ಟಾಂಗವು ಎರಗಿದರೆ ದೃಷ್ಟಿಯಿಂದಲೆ ನೋಡಿ ದಯಮಾಡಿ ಕಳುಹುವ ಬೆಟ್ಟದ ವರಾಹ ನಮ್ಮಪ್ಪ ತಿಮ್ಮಪ್ಪನು ||೩|| -- ರಚನೆ -ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರುಳತನವು ಬಂದು ಎನ್ನ ಕೊರಳ ಕೊಯ್ವುದು

(ರಾಗ ಸೌರಾಷ್ಟ್ರ ಆದಿತಾಳ) ಮರುಳತನವು ಬಂದು ಎನ್ನ ಕೊರಳ ಕೊಯ್ವುದು ದುರುಳನಾಗಿ ಇರುಳುಹಗಲು ಒರಲುತಿಪ್ಪುದು ||ಪ|| ಮಾರಿಯನ್ನು ಮನೆಗೆ ತಂದು ತೋರಿಯಿಡುವುದು ಚೋರರನ್ನು ತಂದು ತನಗೆ ಸೇರಿ ಕೊಡುವುದು ದೂರುಬಪ್ಪ ದಾರಿಯನ್ನು ಸೇರಿ ನಡೆವುದು ಸಾರಿ ಪರನಾರಿಯನು ಸೂರೆಗೊಂಬುದು ||೧|| ಹೆಂಡತಿಯ ಸುಲಿದು ತನ್ನ ಮಿಂಡಿಗಿಡುವುದು ಕಂಡುಕಂಡು ಹರುಷ ತಾಳಿಕೊಂಡು ಇರುವುದು ಭಂಡತನದಿ ಕೊಂದು ದೂರಕೊಂಡು ಪೋಪುದು ಉಂಡು ಉಡುವ ಹರುಷ ಸರಿಯ ಮಿಂಡಿಗಪ್ಪುದು ||೨|| ಸೂಳೆಯನ್ನು ಕಂಡು ಹರುಷತಾಳಿ ಇರುವುದು ವೇಳೆಗವಳು ಬಾರದಿರಲು ಚೀರಿ ಅಳುವುದು ಹಾಳು ಬದುಕಿನೊಳಗೆ ಬಹಳ ಚಾಳು ತೋರ್ಪುದು ಖೂಳರನ್ನು ಕರೆದು ಅನ್ನಪಾಲನೆರೆವುದು ||೩|| ಇಲಿಯು ಹೆಚ್ಚಿತೆಂದು ಮನೆಗೆ ಉರಿಯನಿಡುವುದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಂಬಬೇಡ ನಂಬಬೇಡ

(ರಾಗ ಸೌರಾಷ್ಟ್ರ ಆದಿತಾಳ) ನಂಬಬೇಡ ನಂಬಬೇಡ ನಂಬಲೊಜ್ರ ಕಂಬವಲ್ಲ ||ಪ|| ತುಂಬಿದ ಅಸ್ಥಿಮಾಂಸ ರಕ್ತ ಜಂಬುಕನ ಬಾಯ ತುತ್ತ ||ಅ.ಪ|| ಎಂಬತ್ತನಾಲ್ಕು ಲಕ್ಷ ಕುಂಭದೊಳು ಹೊಕ್ಕು ಬಳಲಿ ನಂಬಲಾರದೊಂದು ಕ್ಷಣಕೆ ಅಂಬರಕ್ಕೆ ಹಾರುವದ ||೧|| ಮಲವು ಬದ್ಧವಾದ ತನು ಮಲೆತು ಇರುವುದೇನು ಬಲುಹುಗುಂದಿದ ಮೇಲೆ ಫಲವಿಲ್ಲದರಿಂದ ||೨|| ಮಾಳಿಗೆ ಮನೆಯ ಬಿಟ್ಟು ಮಾಡಿದ ಓಗರ ಬಿಟ್ಟು ಜಾಳಿಗೆ ಹೊನ್ನನು ಬಿಟ್ಟು ಜಾರುವುದು ತನುವ ಬಿಟ್ಟು ||೩|| ಆಸೆಯನ್ನು ನೋಡಿ ಮೃತ್ಯು ಮೋಸವನ್ನು ಯೋಚಿಸುವುದು ಸಾಸಿರನಾಮನ ಭಜಿಸಿ ದಾಸನಾಗು ಅನುದಿನ ||೪|| ಮಡದಿಮಕ್ಕಳು ಇವನ ಕಡೆಯ ಬಾಗಿಲೊಳಗಿಟ್ಟು ಒಡವೆವಸ್ತುಗಳನು ನೋಡಿ ಅಡಗಿಸಿ ಇಡುವರಂತೆ ||೫|| ಈಗಲೋ ಇನ್ನಾವಾಗಲೊ ಭೋಗದಾಸೆ ತೀರಲೊಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡುವ ಬನ್ನಿರೆಲ್ಲರು ಲೋಕ ನಾಯಕ ಚೆಲ್ವಮೂಡಲ ಗಿರಿವಾಸ ಶ್ರೀವೇಂಕಟೇಶನ

( ಶಂಕರಾಬಹರಣ ರಾಗ ತ್ರಿವಿಡೆ ತಾಳ) ನೋಡುವ ಬನ್ನಿರೆಲ್ಲರು ಲೋಕ ನಾಯಕ ಚೆಲ್ವ- ಮೂಡಲ ಗಿರಿವಾಸ ಶ್ರೀವೇಂಕಟೇಶನ ||ಪ|| ಭೂಮಿಗೆ ವೈಕುಂಠವೆಂದು ತೋರುತ ನಿಂತ ಸ್ವಾಮಿ ಪುಷ್ಕರಿಣಿಯ ತೀರದೊಳು ಪ್ರೇಮದಿ ಭಕ್ತರ ಸಲಹಿಕೊಂಬುವನಂತೆ ಕಾಮಿತಾರ್ಥವನಿತ್ತು ಕಳುಹುವನಂತೆ ||೧|| ಬ್ರಹ್ಮಾದಿಸುರರಿಂದ ಪೂಜಿಸಿಕೊಂಬನಂತೆ ನಿರ್ಮಲರೂಪದಿ ತೋರ್ಪನಂತೆ ಕರ್ಮಬಂಧಗಳನ್ನು ಕಡಿದು ಕೊಡುವನಂತೆ ಹೆಮ್ಮೆಯ ಪತಿಯೆಂದು ತೋರ್ಪನಂತೆ ||೨|| ಆಡಿ ತಪ್ಪುವರಿಗೆ ಕೇಡ ಬಗೆವನಂತೆ ನೋಡಿಯೆ ನಡೆಯಲು ಕೊಡುವನಂತೆ ಮೂಡಿದ ಆದಿತ್ಯ ಶತಕೋಟಿತೇಜನಂತೆ ರೂಢಿಗೊಡೆಯ ನಮ್ಮ ವರಾಹತಿಮ್ಮಪ್ಪನಂತೆ ||೩|| -- ರಚನೆ ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸುಮ್ಮನೊಲಿವನೆ ಪರಬೊಮ್ಮನಾದ ತಿಮ್ಮರಾಯ

(ರಾಗ ಮಧ್ಯಮಾವತಿ ಆದಿತಾಳ) ಸುಮ್ಮನೊಲಿವನೆ ಪರಬೊಮ್ಮನಾದ ತಿಮ್ಮರಾಯ ಸುಮ್ಮನೊಲಿವನೆ? ||ಪ|| ಮಂದವಾರ ದಿವಸದಲ್ಲಿ ಮಿಂದು ಮಡಿಯನುಟ್ಟುಕೊಂಡು ಗೋ ವಿಂದ ಎನುತ ನಾಮವಿಕ್ಕಿ ವಂದನೆಯ ಮಾಡದನಕ ||೧|| ಗರ್ವವನ್ನು ಉಳಿದು ಮನದಿ ಸಾರ್ವಭೌಮನನ್ನು ನೆನೆದು ನಿರ್ವಹಿಸಿ ಶೇಷನು ಸುತ್ತಿದ ಪರ್ವತವನ್ನು ಏರದನಕ ||೨|| ಕಾಸು ದುಡ್ಡು ಚಕ್ರನಾಣ್ಯ ವೀಸವುಳಿಯದಂತೆ ಬಡ್ಡಿ ವಾಸಿಯಿಕ್ಕಿ ಗಂಟ ಕಟ್ಟಿ ಈಸುಕೊಂಡು ಸೂಸದನಕ ||೩|| ದೇಶ ದೇಶದಿಂದ ಕಪ್ಪ ಗಾಸಿಯಾಗದಂತೆ ತರಿಸಿ ಕೋಶಕಿಕ್ಕಿ ಕೊಂಬ ಲಕ್ಷ್ಮಿಯ ಈಶನನ್ನು ನೆನೆಯದನಕ ||೪|| ಗುಡವ ಕದಡಿಕೊಂಡು ಸಂಗಡ ಕಡಲೆಯನ್ನು ನೆನೆಸಿ ಇಟ್ಟು ಒಡೆದ ನಾರಿಕೇಳವು ಸಹಿತ ಒಡೆಯಗೆಂದು ಇಡದ ತನಕ ||೫|| ಆಶಾಪಾಶವನ್ನು ಬಿಟ್ಟು ದೇಶವನ್ನು ತೊಳಲಿ ಬಳಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ

( ಸೌರಾಷ್ಟ್ರ ರಾಗ ಆದಿತಾಳ) ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ ಕಾವುದಯ್ಯ ವೇಂಕಟೇಶ ಕರುಣದಿಂದೆನ್ನ ||ಪ|| ಕಣ್ಣಿಗೆ ಕಾಣದ ನೋವು ಹುಣ್ಣುಗಳಿಲ್ಲದ ನೋವು ಬಣ್ಣವು ಮಾಸಿದ ನೋವು ಬಲುಹಾದ ನೋವು ಎಣ್ಣಿಮೆಯಿಲ್ಲದ ನೋವು ಎಣಿಕೆಗೊಳ್ಳದ ನೋವು ಬಣ್ಣನೆಯ ನುಡಿಯ ನೋವು ಬಂದೀತು ನೋವು ||೧|| ದುಷ್ಟರಿಂದ ನೊಂದ ನೋವು ಹೊಟ್ಟೆಯೊಳ್ಹುಟ್ಟಿದ ನೋವು ಕಷ್ಟಗಳ ಬಿಟ್ಟ ನೋವು ಕಡುಹಾದ ನೋವು ನಿಷ್ಠುರದ ನುಡಿಯ ನೋವು ನಿಂದೆಯ ಮಾತಿನ ನೋವು ಇಷ್ಟರು ಇಲ್ಲದ ನೋವು ಇಂತಾದ ನೋವು||೨|| ಬಡವನಾಗಿಹ ನೋವು ಒಡೇಯರಿಲ್ಲದ ನೋವು ಕೆಡುಗರ ನುಡಿಯ ನೋವು ಕೆಟ್ಟಿಹ ನೋವು ಪಡೆದ ಕರ್ಮದ ನೋವು ಪಾಪವೆಂಬುದು ನೋವು ಕಡೆಯ ಕಾಲದ ನೋವು ಕಾಳಾಹಿ ನೋವು ||೩|| ವಿದ್ಯೆಯಿಲ್ಲದ ನೋವು ಬುದ್ಧಿ ಕೆಟ್ಟಿಹ ನೋವು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾಯೆಯೆನ್ನ ಕಾಯ ಸುತ್ತಿ ಬಾಯ ಹೊಯ್ವುದು

(ಮಧ್ಯಮಾವತಿ ರಾಗ ಆದಿತಾಳ) ಮಾಯೆಯೆನ್ನ ಕಾಯ ಸುತ್ತಿ ಬಾಯ ಹೊಯ್ವುದು ಆಯ ತಪ್ಪಿ ಆಯ ಕೆಟ್ಟ ನ್ಯಾಯ ಬಪ್ಪುದು ||ಪ|| ಹೆತ್ತ ತಾಯಿ ತಂದೆಯನ್ನು ಒತ್ತಿ ಬಯ್ವುದು ಅತ್ತೆಯನ್ನು ಕಂಡ ಹರುಷವಿತ್ತು ನಗುವುದು ಮೃತ್ಯುವನ್ನು ತಂದು ತನ್ನ ಹತ್ತಿರಿಡುವದು ಒತ್ತಿನವನ ಹೊರಗೆ ಸಾರೆನುತ್ತ ನುಡಿವುದು ||೧|| ಗುರುಗಳನ್ನ ಜರೆದು ಕರಕರೆಯ ತಪ್ಪುದು ಕೊರಳು ಕೊಯ್ಕರನ್ನು ತಾನು ಸೆರಗ ಪಿಡಿವುದು ಸಿರಿಯ ತಂದು ಹೊರಗೆ ಇರಿಸಿ ಮರವೆ ತೋರ್ಪುದು ಗರುವತನದಿ ಪರರ ಒಡವೆ ಇರುಳು ಸುಲಿವುದು ||೨|| ದಾನದತ್ತವಾದುದನ್ನು ತಾನು ಸೆಳೆಯುವುದು ಮಾನವನ್ನು ಹಿಡಿದು ಮೇಲೆ ಮಾನ ಇಡುವುದು ಜ್ಞಾನಿಯನ್ನು ಕಂಡು ಮನದಿ ಬೇನೆ ತೋರ್ಪುದು ಅನಾಥರನ್ನು ಕಂಡು ಮನದಿ ಹೀನ ನುಡಿವುದು||೩|| ಅನ್ನವನ್ನು ಇತ್ತವರ ಮುನ್ನ ಬೈವುದು
ದಾಸ ಸಾಹಿತ್ಯ ಪ್ರಕಾರ
ಬರೆದವರು