ನೆಕ್ಕರ ಕೃಷ್ಣದಾಸರು

ನೊಂದೆನಯ್ಯ ಭವದೊಳು

(ರಾಗ - ಪೂರ್ವಿ ಆದಿತಾಳ) ನೊಂದೆನಯ್ಯ ಭವದೊಳು ಸಿಂಧುಶಯನ ವೇಂಕಟೇಶ ||ಪ|| ಒಂದು ದಿನ ಸುಖವಿಲ್ಲ ಗೋ- ವಿಂದ ಬಹಳ ಕರುಣದಿಂದ ನಿ- ರ್ಬಂಧವನ್ನು ಕಳೆದು ಎನ್ನ ತಂದೆ ನೀನೇ ರಕ್ಷಿಸಯ್ಯ ||೧|| ಕಪಟ ನಾಟಕಸೂತ್ರಧಾರಿ ಅಪರಿಮಿತ ಮಹಿಮ ಎನ್ನ ಅಪರಾಧವನು ಕ್ಷಮಿಸಿ ಮುಂದೆ ಕಪಟವಿಲ್ಲದೆ ರಕ್ಷಿಸಯ್ಯ ||೨|| ಕಂದಪ್ರಹ್ಲಾದನಂತೆ ತಂದೆ ಮುನಿದಾಡುವ ತೆರದಿ ಗ- ಜೇಂದ್ರನಂತೆ ದೃಢವಿಲ್ಲ ಮಂದಮತಿಯ ರಕ್ಷಿಸಯ್ಯ ||೩|| ನರಜನ್ಮದೊಳಗೆ ಪುಟ್ಟಿ ನರಕಭಾಜನ ತಾನಾಗಿ ದುರಿತ ಪಂಜರದೊಳಗೆ ನಾನು ಸೆರೆಯ ಬಿದ್ದೆ ರಕ್ಷಿಸಯ್ಯ ||೪|| ಹಗಲು ದೃಷ್ಟಿ ಕಾಣದವಗೆ ಮೊಗವುಗೊಂಡು ರಾತ್ರಿಯೊಳು ಹಗೆಯ ವನದಿ ಸಿಕ್ಕಿದವನ ಅಗಲಿ ಹೋಗದೆ ರಕ್ಷಿಸಯ್ಯ ||೫|| ಸಾವಿರ ಅಪರಾಧವನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ಮಾರ್ತರು ನಾಮವ ಧರಿಸಿ ಯಥಾರ್ಥವು

(ರಾಗ :ಮುಖಾರಿ ಅಷ್ಟತಾಳ ) ಸ್ಮಾರ್ತರು ನಾಮವ ಧರಿಸಿ ಯಥಾರ್ಥವು ಹರಿನಾಮವ ಬಹಳ ವಿಸ್ತರಿಸಿ ||ಪ|| ಕಣ್ಣಿಗೆ ಕಾಣದೆ ಪೂರ್ಣವಾಗಿಹ ನಾಮ ಚನ್ನಕೇಶವ ರಾಯನೆಂದೆಂಬ ನಾಮ ಉನ್ನತವಾಗಿಹ ನಾರಾಯಣ ನಾಮ ಮನ್ಮಥನಯ್ಯನು ಮಾಧವ ನಾಮವ ||೧|| ಅಂತರಂಗದಿ ಗೋವಿಂದನ ನಾಮವ ಚಿಂತಿಸಿ ವಿಷ್ಣುವ ಸಿರಿನಾಮವ ಸಂತತ ಮಧುಸೂಧನನೆಂಬ ನಾಮವ ಪಂಥವಿಡಿದು ತ್ರಿವಿಕ್ರಮ ನಾಮವ ||೨|| ಮನದೊಳು ಅನುದಿನ ವಾಮನನಾಮವ ವನಜಾಕ್ಷ ಶ್ರೀಧರಗುಣ ನಾಮವ ವಿನಯದಿ ಹೃಷಿಕೇಶನೆನುತಿಹ ನಾಮವ ತನುವಾದ ಪದುಮನಾಭನ ನಾಮವ ||೩|| ಅಂದದೊಳು ಧರಿಸಿರುವ ದಾಮೋದರ ನಾಮ ಚಂದದಿ ವಾಸುದೇವನ ನಾಮವ ಕುಂದದೆ ಸಂಕರ್ಷಣನೆಂಬ ನಾಮವ ಬಂಧನ ಪರಿಹಾರ ಪ್ರದ್ಯುಮ್ನ ನಾಮವ ||೪|| ಅರ್ಥಿಯಿಂದಲೆ ಅನಿರುದ್ಧನ ನಾಮವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ

(ರಾಗ ಭೈರವಿ ಝಂಪೆತಾಳ ) ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ ಕಾಮಿತಾರ್ಥವನೀವ ಕರುಣಿ ಭೂದೇವಿ||ಪ|| ಹರಿಯ ಪದದಲುದಿಸಿ ಹರಿಗೆ ವಧುವೆನಿಸಿ ಹರಿಗೆ ಸುತೆಯನು ಇತ್ತು ಹಿರಿಯಳಾದೆ ಹರಿನಾಮ ಕೀರ್ತನೆಯ ಹೊರೆವ ಧಾರುಣಿ ನಿನ್ನ ಮೊರೆ ಹೊಕ್ಕೆ ಮರೆಯದಿರು ಕರುಣದೋರೆನಗೆ ||೧|| ಕ್ಷಮೆ ದಮೆಯ ಶಾಂತ ಸದ್ಗುಣವೊಪ್ಪುವಳೆ ನಿನಗೆ ಭ್ರಮೆಬಟ್ಟು ಭೂಭುಜರು ಕಡಿದುಕೊಳುತಿಹರು ಅಮಿತ ಮಹಿಳೆ ನಿನ್ನ ನಿಜವ ಬಲ್ಲವರಾರು ತಮಗೆ ಋಣವಿದ್ದುದನು ಕೊಂಡೊಯ್ವರಲ್ಲದೆ ||೨|| ಚಿನ್ನ ಭಂಡಾರಗಳು ನಿನ್ನೊಡಲೊಳೊಪ್ಪಿದವು ಉನ್ನತ ರತುನಗಳು ನಿನ್ನೊಳಡಗಿಹವು ಅನ್ನಪಾನಂಗಳಿಗೆ ಬೀಜಮೂಲವೆ ನೀನು ನಿನ್ನ ಮರೆತಿಹ ಜನಕೆ ಮುನ್ನ ಸುಖವುಂಟೆ ||೩|| ಒಬ್ಬ ರಾಯನ ಗೆಲುವೆ ಒಬ್ಬ ರಾಯನಿಗೊಲಿವೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ

(ಕಾಂಬೋದಿ ರಾಗ ಝಂಪೆತಾಳ) ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ ಸಾಕುವಾಕೆಯೆ ನೀನು ಲೋಕಕ್ಕೆ ನೀ ತಾಯಿ ||ಪ|| ಬೇಸರಿಸಿ ಧರಿಸಿದಳು ಜನನಿ ಎನ್ನನು ದಶ - ಮಾಸಗ್ರಭದೊಳಿದೂ ಬಹಳ ಬಳಲಿದೆನು ಹೇಸಿಕೆಯ ವಿಣ್ಮೂತ್ರ ರಾಶಿಯೊಳುಗುದಿಸಿದರೆ ಅಸುರದಿ ಕೈಯೆತ್ತಿ ಪಿಡಿದು ರಕ್ಷಿಸಿದೆ ||೧|| ಮಲಮೂತ್ರ ಮೈಲಿಗೆಯ ಮೈಯೊಳಗೆ ಧರಿಸಿದರು ತಿಲಮಾತ್ರ ಹೇಸಿದೆಯ ಎನ್ನೊಳಗೆ ನೀನು ಜಲಜಮುಖಿ ಎನ್ ತಾಯಿ ಎಲೆಯ ಓಗರವಿಟ್ಟು ತೊಳೆದ ಹಸ್ತದಿ ಎನಗೆ ಕೊಲೆ(?)ಯನಿಕ್ಕಿದಳು ||೨|| ಮಗುವೆಂದು ಯೋಚಿಸದೆ ಉಗುಳುತ್ತ ಎಂಜಲನು ಒಗೆದು ಬೀಸಾಡಿದಳು ಎಡದ ಹಸ್ತದಲಿ ಜಗಳವಾಡಲು ಪಿತನು ಮಗನ ಮೋಹದ ಮೇಲೆ ತೆಗೆಯಬಾರದೆ ಮಲವನೆಂದು ಜರೆದಪಳು ||೩|| ಪಡೆದ ತಾಯ್ತಂದೆಗಳು ಅಡಗಿ ಹೋದರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ವಾಮಿ ವೇಂಕಟರಮಣ ಭೂಮಿಪಾಲಕ ದೇವ

( ಶಂಕರಾಭರಣ ರಾಗ ಆದಿತಾಳ)

 

ಸ್ವಾಮಿ ವೇಂಕಟರಮಣ ಭೂಮಿಪಾಲಕ ದೇವ

ಕಾಮಿತಾರ್ಥವನೀವ ಕರುಣ ಸಂಜೀವ ||ಪ||

 

ಸುರರು ಅಸುರರೆಲ್ಲ ಶರಧಿಯ ಮಥಿಸಲು

ಸಿರಿಯು ಜನಿಸಿ ಬಂದು ಹರಿಯ ಸೇರಿದಳು ||೧||

 

ಪತಿ ನೀನೆ ಗತಿಯೆಂದು ಸತಿ ಕುಸುಮಮಾಲೆಯನು

ಅತಿ ಹರುಷದಿ ಜಗತ್ಪತಿಗೆ ಇಕ್ಕಿದಳು ||೨||

 

ವಾರಿಧಿಯಾಕ್ಷಣ ಧಾರೆಯನೆರೆಯಲು

ವಾರಿಜಾಂಬಕಲಕ್ಷ್ಮಿ ಒಡನೆ ನಿಂದಿರಲು ||೩||

 

ಫಣ್ಫಿಹ್ತ್ರಸೆಮೆಣೆಯೊಳು ರಮಣಿಯನೊಡಗೊಂಡು

ಗುಣನಿಧಿಯ ಒಪ್ಪಿರಲು ತರುಣಿಯರೆಲ್ಲ ||೪||

 

ಪಚ್ಚವ ಧರಿಸಿ ನವ ಸ್ವಚ್ಛವಾಗಿಯೆ ತುಳಿದು

ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೂದಿಯ ಹಚ್ಚಿರೊ ಶುದ್ಧವೈಷ್ಣವರು

(ರಾಗ ಎರಕಲಕಾಂಬೋದಿ ಆದಿತಾಳ ) ಬೂದಿಯ ಹಚ್ಚಿರೊ ಶುದ್ಧವೈಷ್ಣವರಿದ- ರಾದಿಯ ತಿಳಿಯಲು ಕೇಳಿ ಬಲ್ಲವರು ||ಪ|| ಮೂಲಾಗ್ನಿಯಿಂದಲೆ ಸುಟ್ಟಿಹ ಬೂದಿ ಮೂಲ ಮಂತ್ರಂಗಳ ಜಪಿಸುವ ಬೂದಿ ಮೂಲಾಧಾರವ ತೋರುವ ಬೂದಿ ಕಾಲ ಕರ್ಮಂಗಳ ಕಡಿವಂಥ ಬೂದಿ ||೧|| ಏಳು ಸುತ್ತಿನ ಒಳಗೆ ಇರುವಂಥ ಬೂದಿ ಏಳು ವೈರಗಳನ್ನು ಕಳೆವಂಥ ಬೂದಿ ಏಳು ಅಗಳ ದಾಟಿ ಹಾರುವ ಬೂದಿ ಬ- ಹಳ ಜ್ಞಾನಿಗಳೆಲ್ಲ ಧರಿಸುವ ಬೂದಿ ||೨|| ಒಂಭತ್ತು ಕಡೆಯಿಂದ ಒಲಿದಿಟ್ಟ ಬೂದಿ ಕುಂಭಕದೊಳಗದ ಇರಿಸುವ ಬೂದಿ ಸಂಭ್ರಮದಿ ಅರಸನ ಗೆಲುವಂಥ ಬೂದಿ ಅಂಬರಕಾಗಿಯೆ ಲಂಬಿಪ ಬೂದಿ ||೩|| ಪಂಚಾಗ್ನಿಯಿಂದಲೆ ಬೆಂದಿಹ ಬೂದಿ ಪಂಚತತ್ವಗಳನು ಗೆಲುವಂಥ ಬೂದಿ ಪಂಚ ಮೃತ್ಯುಗಳನ್ನು ಕಳೆವಂಥ ಬೂದಿ ವಂಚಿಸಿಕೊಳ್ಳದೆ ಧರಿಸುವ ಬೂದಿ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜ್ಞಾನವಾವುದು ಅಜ್ಞಾನವಾವುದು

(ಪೂರ್ವಿ ರಾಗ , ರೂಪಕ ತಾಳ) ಜ್ಞಾನವಾವುದು ಅಜ್ಞಾನವಾವುದು ಮಾನವಾವುದು ದುಮ್ಮಾನವಾವುದು ||ಪ|| ಹರಿಯ ಸ್ಮರಣೆಯಿರಲದೊಂದು ಜ್ಞಾನವಲ್ಲವೆ ಕೊರಳ ಸೆರೆಯ ಕಾಣದಿಪ್ಪುದಜ್ಞಾನವಲ್ಲವೆ ಪರರ ಸತಿಯ ತೊರೆವುದೊಂದು ಮಾನವಲ್ಲವೆ ಪರರ ಸೇವೆಗಿರುವದವಮಾನವಲ್ಲವೆ ||೧|| ಧನ್ಯರನ್ನು ಮನ್ನಿಸುವುದು ಜ್ಞಾನವಲ್ಲವೆ ಹೊನ್ನ ಹುಗಿದು ಅನ್ನ ತೊರೆವುದಜ್ಞಾನವಲ್ಲವೆ ತನ್ನ ಸತಿಯ ಕೂಡಿರಲು ಮಾನವಲ್ಲವೆ ಅನ್ಯರೊಡನೆ ಕಳುವುದವಮಾನವಲ್ಲವೆ ||೨|| ಹಸಿದವರನು ಕಂಡು ಇಕ್ಕಲು ಜ್ಞಾನವಲ್ಲವೆ ಹುಸಿಕನಾಗಿ ಅಸತ್ಯಮಾಳ್ಪುದು ಅಜ್ಞಾನವಲ್ಲವೆ ಹಸನವಾಗಿ ನಡೆವ ಕೃತ್ಯ ಮಾನವಲ್ಲವೆ ಎಸೆವ ಜೂಜು ತಪ್ಪಲವಮಾನವಲ್ಲವೆ ||೩|| ಸ್ಥಿರವಿದಲ್ಲವೆಂಬ ಜೀವಿ ಜ್ಞಾನಿಯಲ್ಲವೆ ನರಕ ಭಯವ ಮರೆವ ಜಡನಜ್ಞಾನಿಯಲ್ಲವೆ ಹಿರಿಯರಿಂದ ಅನಿಸಿಕೊಂಬುದು ಮಾನವಲ್ಲವೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಕ್ಷಿಸೋ ಎನ್ನ ರಕ್ಷಿಸೋ

( ಪೂರ್ವಿ ರಾಗ ಅಷ್ಟತಾಳ) ರಕ್ಷಿಸೋ ಎನ್ನ ರಕ್ಷಿಸೋ ||ಪ|| ರಕ್ಷಿಸು ಎನ್ನನು ಅಕ್ಷಯಗುಣಪೂರ್ಣ ಲಕ್ಷುಮಿರಮಣನೆ ಪಕ್ಷಿವಾಹನನೆ ||ಅ.ಪ|| ಪಾದವಿಲ್ಲದೆ ಜಲದೊಳು ಮುಳುಗಾಡಿ ವೇದಚೋರಕನನ್ನು ಸೀಳಿ ಬಿಸಾಡಿ ವೇದಾಚಲದೊಳು ನಿಂತು ಕೈ ನೀಡಿ ಸಾಧು ಸಜ್ಜನಪಾಲ ನೀ ದಯಮಾಡಿ||೧|| ವಾರಿಧಿಮಥನದಿ ಸುರರಿಗೆ ಒಲಿದು ಮೇರುಮಂದರವನ್ನು ನೀ ಹೊತ್ತೆ ಬಲಿದು ವಾರಿಜಾಕ್ಷನೆ ವೈಕುಂಠದಿಂದಿಳಿದು ಊರಿದೆ ಚರಣವ ಗಿರಿಯೊಳು ನಲಿದು ||೨|| ಧರಿಣಿಯ ಒಯ್ದ ದಾನವಗಾಗಿ ನೀನು ಹರಣದ ಸೂಕರನಂತಾದುದೇನು ಚರಣಸೇವಕರಿಗೆ ನೀ ಕಾಮಧೇನು ಕರುಣದಿ ಸಲಹೆನ್ನ ನಂಬಿದೆ ನಾನು ||೩|| ತರಳನು ಕರೆಯೆ ಕಂಬದೊಳುದಿಸಿದೆಯೊ ದುರುಳದಾನವರ ಪ್ರಾಣವ ವಧಿಸಿದೆಯೊ ಕರುಳಮಾಲೆಯ ಕೊರಳೊಳು ಧರಿಸಿದೆಯೊ ಮರಳಿ ಬಂದವ ಫಣಿಗಿರಿಯನೇರಿದೆಯೊ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೇಂಕಟೇಶ ನಿನ್ನ ನಂಬಿದೆ, ಎನ್ನ ಸಂಕಟವನು ಪರಿಹರಿಸಯ್ಯ

( ಯಮುನಾಕಲ್ಯಾಣಿ ರಾಗ ಅಷ್ಟತಾಳ) ವೇಂಕಟೇಶ ನಿನ್ನ ನಂಬಿದೆ, ಎನ್ನ ಸಂಕಟವನು ಪರಿಹರಿಸಯ್ಯ ನೀನು ||ಪ|| ಒಡಲೆಂಬ ಕಡಲೆಡೆಗೊಂಡಿಹ ಹಡಗು ಕಡೆಯ ಕಾಣ ಬಹು ಜಡದಿಂದ ಗುಡುಗು ಜಡಿಯುತ್ತ ಬರುತಿಹ ಮಳೆ ಮುಂದೆ ತೊಡಗು ದಡವ ಸೇರಿಸೋ ಎನ್ನ ಒಡೆಯ ನೀ ಕಡೆಗು ||೧|| ಅಣುರೇಣು ತೃಣಕಾಷ್ಠದೊಳಗಿದ್ದು ನೀನು ಕ್ಷಣಕ್ಷಣ ಆರೈವ ಗುಣ ನಿನ್ನದೇನು ಪ್ರಣವರೂಪನೇ ನಿನ್ನ ಚರಣಕ್ಕೆ ನಾನು ಮಣಿವೆನು ಮನ್ನಿಸು ವರಕಾಮಧೇನು ||೨|| ನಾರಾಯಣ ನರಹರಿ ಜಗನ್ನಾಥ ದಾರಿದ್ರ್ಯ ದುಃಖ ನಿರ್ಮುಕ್ತ ನೀ ತಾತ ಸಾರಿದವರ ಸಂಸಾರದ ದಾತ ಮಾರಿದ ಮನವಕೊಂಬರೆ ನೀನೆ ಪ್ರೀತ ||೩|| ಉತ್ತಮವಾದ ಶ್ರೀಶೈಲನಿವಾಸ ಭಕ್ತರ ಸಲಹುವ ಬಿರುದುಳ್ಳ ಈಶ ಚಿತ್ತವು ತಿಳಿದೆನ್ನ ಕಾಯೋ ಸರ್ವೇಶ ನಿತ್ಯ ಮಂಗಲವೀವ ವಸ್ತು ಲಕ್ಷ್ಮೀಶ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಾಲಿಸೈ ತಿಮ್ಮಪ್ಪ ಪರಮಪಾವನನಪ್ಪ

(ರಾಗ ಭೈರವಿ ಅಷ್ಟತಾಳ) ಪಾಲಿಸೈ ತಿಮ್ಮಪ್ಪ ಪರಮಪಾವನನಪ್ಪ ಮೇಲುಗಿರಿಯೊಳಿಪ್ಪ ತಿರುಪತಿ ತಿಮ್ಮಪ್ಪ ||ಪ|| ಪ್ರಾಣದಾಸೆಗಳಿಂದ ಕಾಣ ಬರುವೆವೆಂದ ಆಣೆಭಾಷೆಯನೊಂದ ಮಾಣೆನೊ ಗೋವಿಂದ ಕಾಣಿಕೆಯ ಕರದಿಂದ ತ್ರಾಣ ಮೀರಿಯೆ ಬಂದ ಜಾಣರಾಯನೆ ಚಂದಗಾಣಿಸೊ ಶುಭದಿಂದ ||೧|| ಸ್ವಾಮಿ ನೀನೆ ಹೊಣೆ ಭೂಮಿಯೊಳು ರಕ್ಷಣೆ ಕಾಮಿತ ಸೈರಣೆ ನಾಮಕಲ್ಪನೆಯು ಪ್ರೇಮವಾಗಿಹ ಹಣೆನಾಮದ ಮನ್ನಣೆ ಸೌಮನಸ್ಯದ ಮಾಣೆ ತಾಮಸಕ್ಕಿಡಿಗಾಣೆ ||೨|| ಸೇವಕ ಸಂಕಲ್ಪ ಕಾವ ನಾಯಕನಿಪ್ಪ ಠಾವಿಗಾಗಿಯೇ ಪೋಪ ಭಾವದಿ ಇರುತಿಪ್ಪ ಜೀವನ ತಾಮಪ್ಪ ದೇವ ಕಾಣು ಈ ಕಪ್ಪ ಈವೆನೆನುತ ಬಪ್ಪ ಭೂವರಹ ತಿಮ್ಮಪ್ಪ ||೩|| ---- ಈ ರಚನೆ ನೆಕ್ಕರ ಕೃಷ್ಣದಾಸರದು
ದಾಸ ಸಾಹಿತ್ಯ ಪ್ರಕಾರ
ಬರೆದವರು