ನಂಬಬೇಡ ನಂಬಬೇಡ

ನಂಬಬೇಡ ನಂಬಬೇಡ

(ರಾಗ ಸೌರಾಷ್ಟ್ರ ಆದಿತಾಳ) ನಂಬಬೇಡ ನಂಬಬೇಡ ನಂಬಲೊಜ್ರ ಕಂಬವಲ್ಲ ||ಪ|| ತುಂಬಿದ ಅಸ್ಥಿಮಾಂಸ ರಕ್ತ ಜಂಬುಕನ ಬಾಯ ತುತ್ತ ||ಅ.ಪ|| ಎಂಬತ್ತನಾಲ್ಕು ಲಕ್ಷ ಕುಂಭದೊಳು ಹೊಕ್ಕು ಬಳಲಿ ನಂಬಲಾರದೊಂದು ಕ್ಷಣಕೆ ಅಂಬರಕ್ಕೆ ಹಾರುವದ ||೧|| ಮಲವು ಬದ್ಧವಾದ ತನು ಮಲೆತು ಇರುವುದೇನು ಬಲುಹುಗುಂದಿದ ಮೇಲೆ ಫಲವಿಲ್ಲದರಿಂದ ||೨|| ಮಾಳಿಗೆ ಮನೆಯ ಬಿಟ್ಟು ಮಾಡಿದ ಓಗರ ಬಿಟ್ಟು ಜಾಳಿಗೆ ಹೊನ್ನನು ಬಿಟ್ಟು ಜಾರುವುದು ತನುವ ಬಿಟ್ಟು ||೩|| ಆಸೆಯನ್ನು ನೋಡಿ ಮೃತ್ಯು ಮೋಸವನ್ನು ಯೋಚಿಸುವುದು ಸಾಸಿರನಾಮನ ಭಜಿಸಿ ದಾಸನಾಗು ಅನುದಿನ ||೪|| ಮಡದಿಮಕ್ಕಳು ಇವನ ಕಡೆಯ ಬಾಗಿಲೊಳಗಿಟ್ಟು ಒಡವೆವಸ್ತುಗಳನು ನೋಡಿ ಅಡಗಿಸಿ ಇಡುವರಂತೆ ||೫|| ಈಗಲೋ ಇನ್ನಾವಾಗಲೊ ಭೋಗದಾಸೆ ತೀರಲೊಂದು ಹಾಗಗಳಿಗೆ ನಿಲ್ಲದಯ್ಯ ಈ ಗರುವ ಪರುಮಾತ್ಮ ||೬|| ವಾರಕದಾಭರಣವನ್ನು ಕೇರಿಯೊಳು ಕೊಂಬುವರಿಲ್ಲ ವರಾಹ ತಿಮ್ಮಪ್ಪಗಿಟ್ಟು ವಂದಿಸಿ ಕೈಗಳ ತಟ್ಟು ||೭|| -- ರಚನೆ ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು