ಪದ / ದೇವರನಾಮ

ದಾಸರ ಪದಗಳು

ಕಲ್ಯಾಣಂ ತುಲಸಿ ಕಲ್ಯಾಣಂ

(ರಾಗ ಸೌರಾಷ್ಟ್ರ , ಆದಿತಾಳ) ಕಲ್ಯಾಣಂ ತುಲಸಿ ಕಲ್ಯಾಣಂ ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಲಸಿಗೆ ಬಲ್ಲಿದ ಶ್ರೀವಾಸುದೇವನಿಗೆ ||ಪ|| ಅಂಗಳದೊಳಗೆಲ್ಲ ತುಲಸಿಯ ವನಮಾಡಿ ಶೃಂಗಾರವ ಮಾಡಿ ಶೀಘ್ರದಿಂದ ಕಂಗಳ ಪಾಪವ ಪರಿಹರಿಸುವ ಮುದ್ದು ರಂಗ ಬಂದಲ್ಲಿ ತಾ ನೆಲೆಸಿದನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಟ್ಟಬೇಕು ಕಾಟದೆಮ್ಮೆ

(ರಾಗ ಆಹೇರಿ ಅಟತಾಳ) ಕಟ್ಟಬೇಕು ಕಾಟದೆಮ್ಮೆ ಅದರ ಹಯನ ಎಷ್ಟಾದರು ಉಣಬೇಕು ||ಪ|| ಹಮ್ಮುಯೆಂಬೋದೆ ಎಮ್ಮೆ , ಗಮ್ಮುಯೆಂಬೋದೆ ಹಗ್ಗ ಹೆಮ್ಮುಯೆಂಬೋದೆ ಅದಕೆ ಧಮ್ಮ ಗುದ್ದಿ ಸುಮ್ಮನ ಮನದಿಂದ ಹಾಲ್ಕರೆದು ಪರ - ಬೊಮ್ಮನಿಗರ್ಪಿಸಬೇಕು ನಿತ್ಯದಿ || ಚಂಡಿತನವೆಂಬ ಹಿಂಡಿ ಇಡಬೇಕು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂದನೇಕೆ ಮಲಗನೆ

(ರಾಗ ಶಂಕರಾಭರಣ ಅಟತಾಳ) ಕಂದನೇಕೆ ಮಲಗನೆ , ಕೇಳೆಲೆ ಸಖಿ ||ಪ|| ಕಾಯಜಜನಕಗೇನಾಯಿತು ಇವಗೆ ಯಾವಳ ದೃಷ್ಟಿ ತಾಗಿತೆ ||ಅ|| ಕಂದನೇಕೆ ಕಣ್ಣ ಮುಚ್ಚನೆ ಇಂದು ನೀರದಡದಲ್ಲಿರುವನೆ , ಏ- ನೆಂದರು ಮುಖವೆತ್ತಿ ನೋಡನೆ , ಗೋ- ವಿಂದ ಬಾ ಎಂದರೆ ಬಾಯ ತೆರೆವನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಯಲಾರೆನು ಕೃಷ್ಣ ಕಂಡವರ ಬಾಗಿಲನು

(ರಾಗ ಭೈರವಿ ಅಟತಾಳ) ಕಾಯಲಾರೆನು ಕೃಷ್ಣ ಕಂಡವರ ಬಾಗಿಲನು ನಾಯಿಕುನ್ನಿಗಳಂತೆ ಪರರ ಪೀಡಿಸುತ ||ಪ|| ಉದಯಕಾಲದಲೆದ್ದು ಸಂಧ್ಯಾವಿಧಿಯ ಬಿಟ್ಟು ಪದುಮನಾಭನ ಸ್ಮರಣೆ ಮೊದಲಿಲ್ಲದೆ ಮುದದಿ ನಿನ್ನರ್ಚಿಸದೆ ನರರ ಸದನವ ಪೊಕ್ಕು ಒದಗಿ ಸೇವೆಯ ಮಾಡಿ ಅವರ ಬಾಗಿಲನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೂಸು ಕಂಡೆವಮ್ಮ

(ರಾಗ ಪಂತುವರಾಳಿ , ಅಟತಾಳ) ಕೂಸು ಕಂಡೆವಮ್ಮ , ಅಮ್ಮ ನಿಮ್ಮ ಕೂಸು ಕಂಡೆವಮ್ಮ ||ಪ|| ಕಾಸಿಗೆ ವೀಸವ ಬಡ್ಡಿ ಗಳಿಸಿಕೊಂಡು ಶೇಷಗಿರಿಯ ಮೇಲೆ ವಾಸವಾಗಿದ್ದನೆ || ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದು ಕಂಚಿ ಪಟ್ಟಣದಿ ಬಲ್ ಮಿಂಚಾಗಿದ್ದನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೈಮೀರಿ ಹೋದ ಮಾತಿಗೆ

(ರಾಗ ಸೌರಾಷ್ಟ್ರ ಅಟತಾಳ) ಕೈಮೀರಿ ಹೋದ ಮಾತಿಗೆ ಹುಡುಕಾಡಬಾರದು ||ಪ|| ಮಾತು ಕೇಳದ ಮಕ್ಕಳ ಹೆಸರು ತೆಗೆಯಬಾರದು , ತನ್ನ ಪ್ರೀತಿ ಇಲ್ಲದ ಪತಿಯ ಕಂಡು ಹಿಗ್ಗಬಾರದು || ಜಾರತ್ವ ಮಾಡೊ ಪತ್ನಿಯ ಕೂಡಿ ಅಳಬಾರದು ವೈರತ್ವ ಮಾಳ್ಪವರ ಸೊಲ್ಲು ಕೇಳಬಾರದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಡೊ ಕೊಡೊ ಕೊಡೊ ಕೊಡೊ

(ರಾಗ ಪರೋಜ ಆದಿತಾಳ) ಕೊಡೊ ಕೊಡೊ ಕೊಡೊ ಕೊಡೊ ರಂಗಾ ಕೊಡೊ ಮಡದಿಯರುಡುವ ಸೀರೆಗಳ ||ಪ|| ಭಂಡುಮಾಡದಿರು ಭಾವಜನಯ್ಯನೆ ನೀರಜನಾಭನೆ ದಯಮಾಡೋ || ಗರತಿಯರೆಲ್ಲರು ಗುಲ್ಲು ಮಾಡುವರು ದೀನನಾಥನೆ ದಯಮಾಡೊ || ಸುರಹೊನ್ನೆಮರವೇರಿ ಅಡಗಿದ ನಿಪುಣನೆ ಆನಂದಭರಿತನೆ ದಯಮಾಡೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯಮಂಗಳಂ ನಿತ್ಯ ಶುಭಮಂಗಳಂ

(ರಾಗ ಭೈರವಿ ಛಾಪುತಾಳ ) ಜಯಮಂಗಳಂ ನಿತ್ಯ ಶುಭಮಂಗಳಂ ||ಪ|| ಸಚ್ಚಿದಾನಂದ ಸರ್ವಗುಣಪೂರ್ಣಗೆ ಅತ್ಯಂತ ಸುಜ್ಞಾನಗಬ್ಜಾಕ್ಷಗೆ ಮೆಚ್ಚಿ ಗೋಪಿಯರೊಡನೆ ಮನವಿಟ್ಟು ಕೂಡಿದಗೆ ನಿತ್ಯಕಲ್ಯಾಣ ನಿರ್ದೋಷಗೆ || ವ್ಯಾಸಾವತಾರಗೆ ವೇದಉದ್ಧಾರಗೆ ಸಾಸಿರನಾಮದಾ ಸರ್ವೇಶಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಯಬೇಕೆನ್ನ ಗೋಪಾಲ

(ರಾಗ ಕಾಪಿ ಅಟತಾಳ) ಕಾಯಬೇಕೆನ್ನ ಗೋಪಾಲ , ಒಂದು- ಪಾಯವನರಿಯೆನು ಭಕ್ತರಪಾಲ ||ಪ|| ಹಲವು ಜನ್ಮಗಳೆತ್ತಿ ಬಂದೆ, ಮಾಯಾ- ಬಲವೆಂದರಿಯದೆ ಭವದೊಳು ನೊಂದೆ ಒಲಿದು ಭಯವಾಯಿತು ಮುಂದೆ , ನೀನು ಸುಲಭನೆಂದು ಕೇಳಿ ಶರಣೆಂದು ತಂದೆ || ವಿತ್ತದೊಳಗೆ ಮನವಿಟ್ಟು, ನಿನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕದವ ಮುಚ್ಚಿದಳಿದಕೋ ಗೈಯಾಳಿ ಮೂಳಿ

(ರಾಗ ಮಧ್ಯಮಾವತಿ ಆದಿತಾಳ) ಕದವ ಮುಚ್ಚಿದಳಿದಕೋ ಗೈಯಾಳಿ ಮೂಳಿ ||ಪ|| ಕದವ ಮುಚ್ಚಿದಳಿದಕೋ ಚಿಲುಕ ಅಲ್ಲಾಡುತ್ತಿದೆ ಒದಗಿದ್ದ ಪಾಪವು ಹೋದೀತು ಹೊರಗೆಂದು ||ಅ|| ಭಾರತ ರಾಮಾಯಣ ಪಂಚರಾತ್ರಾಗಮ ಸಾರತತ್ವದ ಬಿಂದು ಸೇರೀತು ಒಳಗೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು