ಕೈಮೀರಿ ಹೋದ ಮಾತಿಗೆ

ಕೈಮೀರಿ ಹೋದ ಮಾತಿಗೆ

(ರಾಗ ಸೌರಾಷ್ಟ್ರ ಅಟತಾಳ) ಕೈಮೀರಿ ಹೋದ ಮಾತಿಗೆ ಹುಡುಕಾಡಬಾರದು ||ಪ|| ಮಾತು ಕೇಳದ ಮಕ್ಕಳ ಹೆಸರು ತೆಗೆಯಬಾರದು , ತನ್ನ ಪ್ರೀತಿ ಇಲ್ಲದ ಪತಿಯ ಕಂಡು ಹಿಗ್ಗಬಾರದು || ಜಾರತ್ವ ಮಾಡೊ ಪತ್ನಿಯ ಕೂಡಿ ಅಳಬಾರದು ವೈರತ್ವ ಮಾಳ್ಪವರ ಸೊಲ್ಲು ಕೇಳಬಾರದು || ದುಷ್ಟೆ ಕರ್ಕಶಿ ಸ್ತ್ರೀಯಳ ಹೆಸರು ತೆಗೆಯಬಾರದು ಹತ್ತು ಮಂದಿಗಂಜದವನ ಸ್ನೇಹಿಸಬಾರದು || ಪಂಕ್ತ್ಯಾಗೆ ಪರಪಂಕ್ತಿಯನ್ನು ಮಾಡಬಾರದು ಮಂಕುಜೀವನಾಗಿ ಮುಕ್ತಿ ಬೇಡಬಾರದು || ಆಚಾರಹೀನ ಮನೆಯೊಳೂಟ ಮಾಡಬಾರದು ವಿಚಾರ ಇಲ್ಲದ ಸಭೆಯೊಳು ಕೂಡ್ರಬಾರದು || ಪರಪುರುಷರಿದ್ದೆಡೆಯೊಳು ಒಬ್ಬಳಿರಬರದು , ಸ್ವಾಮಿ ಪುರಂದರವಿಠಲನ ಧ್ಯಾನ ಮರೆಯಬಾರದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು