ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ
'ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ'
ರಚನೆ: ಶ್ರೀ ವಾದಿರಾಜ ಸ್ವಾಮಿಗಳು
ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ || ಪ ||
ಆರು ನಾನರಿಯೆ ನೀ ಸರಿರಾತ್ರಿಯಲಿ ಬಂದೀ || ಅ ||
ನೀರೊಳು ಮುಳುಗಿ ನಿಗಮಚೋರನ ಕೊಂದ ನೀರಜಾಕ್ಷನೆ ಭಾಮೆ ನಾನು
ನಾರುವ ಮೈಯ್ಯ ಎನ್ನೊಳು ತೋರದೆ ಸಾರಿ ದೂರ ನೀ ಪೋಗೋ ರಂಗ || 1 ||
ಮಂದರಗಿರಿಯನು ಬೆನ್ನೊಳಗಿಟ್ಟ೦ತ ಸುಂದರವದನನೇ ಭಾಮೆ ನಾನು
ಇಂದು ನಿನಗೆ ತಕ್ಕ ಭಾರಂಗಳಿಲ್ಲವಯ್ಯ ಸಿಂಧುವಿನೊಳಗೆ ಪೋಗೋ ರಂಗ || 2 ||
ದಾಸ ಸಾಹಿತ್ಯ ಪ್ರಕಾರ
- Read more about ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ
- Log in to post comments