ಶ್ರೀದವಿಠಲದಾಸರ ರಚನೆ

ಗೋಪಿ ಕೇಳ್ ನಿನ್ನ ಮಗ ಜಾರ

ಕೀರ್ತನೆ: 'ಗೋಪಿ ಕೇಳ್ ನಿನ್ನ ಮಗ ಜಾರ'
ರಚನೆ: ಶ್ರೀದವಿಠಲದಾಸರು


ಗೋಪಿ ಕೇಳ್ ನಿನ್ನ ಮಗ ಜಾರ ಇವ ಚೋರ ಸುಕುಮಾರ   || ಪ ||
ಮುದದಿ ಮುಕುಂದ ಸದನಕಾ ಬಂದಾ
ದಧಿಯ ಮೀಸಲು ಬೆಣ್ಣೆ ತಿಂದ ನಿನ್ನಾ ಕಂದಾ ಆನಂದಾ

ಮಾರನ ಪಿತ ತಾ ಮನೆಯೊಳು ಪೊಕ್ಕ
ಹಿಡಿಯ ಹೋದರೆ ಕೈಗೆ ಸಿಕ್ಕ ನೋಡಿ ನಕ್ಕ ಭಾರಿ ಠಕ್ಕ   || 1 ||

ಹರೆಯದ ಪೋರಿ ಜಗದ ಕಣ್ಗೋರಿ(?)
ಭರದಿಂದ ಸೀರೆಯ ಸೆಳೆದಾ ಕರವ ಪಿಡಿದಾ ಮಾನ ಕಳೆದಾ   || 2 ||

ಬಹಳ ದಿನವಾಯ್ತು ಪೇಳುವುದ್ಹ್ಯಾಂಗೆ

ದಾಸ ಸಾಹಿತ್ಯ ಪ್ರಕಾರ