ಉಗಾಭೋಗ

Haridasa compositions that fall under ugAbgOga category

ಕ್ರಿಮಿಕೀಟನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ

ಕ್ರಿಮಿಕೀಟನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ ಹರಿಹರಿಣನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ ಕತ್ತೆ ಕರಡಿಯಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ ಹಂದಿಶುನಕನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ ಮರೆತೀಯೆ ಮಾನವ ನಿನ್ನ ಹಿಂದಿನ ಭವಗಳನೊಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಲ್ಲಿ ವನಗಳುಂಟು ಅಪ್ರಾಕೃತವಾದ

ಅಲ್ಲಿ ವನಗಳುಂಟು ಅಪ್ರಾಕೃತವಾದ ಫಲಪುಷ್ಪಗಳಿಂದೊಪ್ಪುತ್ತಲಿಹುದು ಪಕ್ಷಿಜಾತಿಗಳುಂಟು ಅತಿವಿಲಕ್ಷಣವಾದ ಕಿಲಕಿಲ ಶಬ್ದವು ರಂಜಿಸುವ ನುಡಿಗಳು ಮುಕುತರು ಬಂದು ಜಲಕ್ರೀಡೆಗಳ ಮಾಡಿ ಕುಳಿತು ಸುಖಿಪರು ಇಂಥಾ ಸುಖ ಬೇಕಾದರೆ ನೀಚವೃತ್ತಿಯ ಬಿಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಲ್ಲೆಂಥಾ ಸುಖಗಳುಂಟೊ ಅಲ್ಲಂಥಾ ಸುಖಗಳುಂಟು

ಇಲ್ಲೆಂಥಾ ಸುಖಗಳುಂಟೊ ಅಲ್ಲಂಥಾ ಸುಖಗಳುಂಟು ದುಃಖಮಿಶ್ರವಾದ ಸುಖ ಇಹಲೋಕದಲ್ಲಿಪ್ಪುದು ನಾಶವುಂಟು ದಿನಕೊಂದು ಬಗೆಬಗೆಯಾದಂಥ ಸುಖವಾಗಿ ನಾಶವಿಲ್ಲದ ಪ್ರಾಕೃತವಾದ ಸುಖವನನುಭವಿಸುತ್ತ ಕ್ರಮದಿ ತಿರುಗುವರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೆಟ್ಟದಂಥ ದುರಿತವು

ಬೆಟ್ಟದಂಥ ದುರಿತವು ಸುತ್ತಮುತ್ತಲೊಟ್ಟರೆ ಕೃಷ್ಣನಾಮದ ಕಿಡಿ ಬಿದ್ದು ಬೆಂದುಹೋದದ್ದು ಕಂಡೆ ಎಲೆ ಎಲೆ ದುರಿತವೆ ತಿರುಗಿ ನೋಡದೆ ಹೋಗು ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು ನಿನ್ನ ಕಂಡರೆ ಶಿಕ್ಷಿಸದೆ ಬಿಡ ಇನ್ನೊಮ್ಮೆ ಕಂಡರೆ ಶಿರವ ಚೆಂಡಾಡುವನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೇಗೆ ಬರೆದೀತು ಪ್ರಾಚೀನದಲ್ಲಿ

ಹೇಗೆ ಬರೆದೀತು ಪ್ರಾಚೀನದಲ್ಲಿ ಹಾಗೆ ಇರಬೇಕು ಸಂಸಾರದಲ್ಲಿ ಪಕ್ಷಿ ಕೂತಿತು ಅಂಗಳದಲ್ಲಿ ಹಾರಿ ಹೋಯಿತು ಆ ಕ್ಷಣದಲ್ಲಿ ಆಡುವ ಮಕ್ಕಳು ಮನೆ ಕಟ್ಟಿದರು ಆಟ ಸಾಕೆಂದು ಮುರಿದೋಡಿದರು ಸಂತೆ ನೆರೆದೀತು ನಾನಾ ಪರಿ ತಿರುಗಿ ಆಯಿತು ತಮ್ಮ ತಮ್ಮ ದಾರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಟ್ಟು ಯುವತಿಯ ಶಬ್ದ ಕೇಳಿದರೆ ಪಾಪ

ಮುಟ್ಟು ಯುವತಿಯ ಶಬ್ದ ಕೇಳಿದರೆ ಪಾಪ ಎಂಟೆರಡು ಮೂರಾಚಮನಕೆ ಪರಿಹರವೊ ದೃಷ್ಟಿಸಿ ನೋಡಿದರೆ ಥಟ್ಟನೆ ಜಲದಲ್ಲಿ ಐನೂರು ಸ್ನಾನದಿ ಶುದ್ಧ ಮೆಟ್ಟಿದಡೆ ಕುಳಿತ ಸ್ಥಳ ಮೂರುದಿನ ವರ್ಜಿಸಲುಬೇಕು ಉಚ್ಚಿಷ್ಟ ಸೋಂಕಲು ಐದು ನಿರಾಹಾರವಣ್ಣ ಇಷ್ಟು ಮಾಡಿದರೆ ಪಾಪ ಪರಿಹರವಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನೆ ಕರ್ತನು ಅಕರ್ತ ಸಿರಿ ಅಜಭವಾದಿ ಇಂದ್ರಾದ್ಯಮರರು

ನೀನೆ ಕರ್ತನು ಅಕರ್ತ ಸಿರಿ ಅಜಭವಾದಿ ಇಂದ್ರಾದ್ಯಮರರು ನೀನೆ ಸ್ವತಂತ್ರ ಅಸ್ವತಂತ್ರರವರು ನೀನೆ ಸರ್ವಾತ್ಮನಾಗಿ ಸ್ವೀಕರಿಸುವಾ ಜ್ಞಾನ ನಿನ್ನಾಧೀನ ಕರ್ಮ ನಿನ್ನಾಧೀನ ಅನಾದಿಕಾಲದಿ ಇರುವ ಜೀವರಿಗೆ ನೀನೆ ಸುಖವನೀವೆ ರುದ್ಧಕರ್ಮಗಳಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರು ಅಕ್ಷರದಿಂದ ವ್ಯಾಹೃತಿಯಿಂದ

ಆರು ಅಕ್ಷರದಿಂದ ವ್ಯಾಹೃತಿಯಿಂದ ಓಂಕಾರವಾಗುವುದು ಕೇಳಿ ಈ ಪರಿ ಇಪ್ಪತ್ತುನಾಲ್ಕು ಅಕ್ಷರದಿಂದ ತೋರುತಲಿ ಗಾಯತ್ರಿ ರಚಿಸಿದ ಹರಿಯ ಮೆರೆವುದೈ ಪುರುಷಸೂಕ್ತದಿ ಅನಂತವೇದರಾಶಿ ಧೊರೆಯೆಂದು ಪೊಗಳುವುವೊ ಓಂಕಾರ ಶ್ರೀಕಾರ ಮೆರೆವುದೈವತ್ತೊಂದು ಲಕ್ಷಗಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಧ್ಯಾಂಗುಲಿ ಮೇಲೆ ಮಣಿಸರವಿಟ್ಟಿನ್ನು

ಮಧ್ಯಾಂಗುಲಿ ಮೇಲೆ ಮಣಿಸರವಿಟ್ಟಿನ್ನು ಬದ್ಧ ಅಂಗುಟಾಗ್ರ ಎಣಿಸಬೇಕು ಕಿರಿ ಅಂಗುಲಿ ಪಂಚ ಭೋಗಿಸಿ ಇರಬೇಕು ಭದ್ರವಾಗಿ ನಿಲ್ಲಿಸಿ ನೀರು ಸೋರದೆ ಗಾಯತ್ರಿ ಬುದ್ಧಿಪೂರ್ವಕದಿಂದ ಗೆಯ್ಯುತಲಿರಬೇಕು ಮುದ್ದುಮೂರುತಿ ನಮ್ಮ ಪುರಂದರವಿಠಲನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡಾನಿಶದಲ್ಲಿ ಅರ್ಘ್ಯವನು

ಕಂಡಾನಿಶದಲ್ಲಿ ಅರ್ಘ್ಯವನು ಪ್ರಾತರದಿ ಮಂಡಲಾಕಾರ ಮಧ್ಯಾಹ್ನದಲ್ಲಿ ಪುಂಡಗಾರನಾಗಿ ಚರಿಸದಲೆ ಇದ್ದರೆ ಅವಗೆ ಪಂಡಿತ ಶ್ರೀಪುರಂದರವಿಠಲ ಒಲಿಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು