ಉಗಾಭೋಗ

Haridasa compositions that fall under ugAbgOga category

ಕುಲಪತಿಯಾದರು ಸಂಧ್ಯಾವಂದನೆ ಗೆಯ್ಯದ ಪಾಪಿಯಾದರು

ಕುಲಪತಿಯಾದರು ಸಂಧ್ಯಾವಂದನೆ ಗೆಯ್ಯದ ಪಾಪಿಯಾದರು ಪರದೋಷಿಯಾಗೆ ಪಾಪಗೆಯ್ದು ಪರಪತ್ನಿಯನಯ್ದಿರೆ ಶ್ರೀಪತಿ ಗೋಪಿಚಂದನಲಿಪ್ತಾಂಗಗೆ ಭೂಪತಿ ಪುರಂದರವಿಠಲ ಪಾದವ ತೋರ್ಪ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀರಾಮ ಎಂದರೆ ಭಾಗ್ಯಕ್ಕೆ ಕಾರಣ

ಶ್ರೀರಾಮ ಎಂದರೆ ಭಾಗ್ಯಕ್ಕೆ ಕಾರಣ ಶ್ರೀಕೃಷ್ಣ ಎಂದರೆ ದುರಿತ ನಿವಾರಣ ಎಚ್ಚತ್ತಿರು ಎಲೆ ಮನ ಮನವೆ ಎಚ್ಚತ್ತಿರೆಲೆ ಮನವೆ ಏಕೆ ಬೈಲನು ನೆನೆವೆ ಅಚ್ಯುತಾನಂತ ಗೋವಿಂದನೆಂಬ ನಾಮದಲಿ ಎಚ್ಚತ್ತಿರೆಲೆ ಮನವೆ ಏಕೆ ಬಯಲ ನೆನೆವೆ ಅಚ್ಯುತನೆ ಆದಿಕೇಶವನೆ ಅನಾಥಬಂಧೋ ಸಲಹೆಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಸಿವಾಯಿತೇಳಿ ದೇವರ ತೊಳೆಯೆಂಬರು

ಹಸಿವಾಯಿತೇಳಿ ದೇವರ ತೊಳೆಯೆಂಬರು ಹಸನಾಗಿ ಮನದಲ್ಲಿ ಮುಟ್ಟಿ ಪೂಜೆಯ ಮಾಡರು ಹಸಿ ಹಾವಿನ ಬುಟ್ಟಿಯಂತೆ ಮುದ್ದಿಟ್ಟುಕೊಂಡು ವಸುಧೆಯೊಳಗೆ ಉರಗಗಾರನಾಟ ಮಾಡುವರಯ್ಯ ಪರಧನ ಪರಸತಿ ಪರದ್ರವ್ಯಕ್ಕೆರಗೋರು ತ್ವರೆಗಳಾಗಿದ್ದರೆ ದುರಿತ ಪೋಗುವುದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದರಿಂಬಿಟ್ಟೆನಿಲ್ಯೆಂಬ ಮಹಾವ್ಯಾಧಿ ಬರಲಿ

ಇದರಿಂಬಿಟ್ಟೆನಿಲ್ಯೆಂಬ ಮಹಾವ್ಯಾಧಿ ಬರಲಿ , ಮ- ತ್ತಿದರಿಂಬಿಟ್ಟೆನಿಲ್ಯೆಂಬ ಮಹಾಭೀತಿ ಬರಲಿ , ಮ- ತ್ತಿದರಿಂಬಿಟ್ಟೆನಿಲ್ಯೆಂಬ ಮಹಾಬಾಧೆ ಬರಲಿ , ಮ- ತ್ತಿದರಿಂಬಿಟ್ಟೆನಿಲ್ಯೆಂಬ ಮಹಾ ಆಪತ್ತು ಬರಲಿ , ಮ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜೀವ ಜೀವಕೆ ಭೇದ , ಜಡಜಡಕೆ ಭೇದ

ಜೀವ ಜೀವಕೆ ಭೇದ , ಜಡಜಡಕೆ ಭೇದ ಜೀವಜಡ ಪರಮಾತ್ಮನಿಗೆ ಭೇದ ಜೀವಾಜೀವ ಮುಕ್ತಾಮುಕ್ತರ ಭೇದ ಸಂಸಾರದೊಳು ಭೇದ ಮುಕ್ತರೊಡೆಯ ಹರಿ ಭಕ್ತರಾಧೀನ , ಜಗ- ತ್ಕರ್ತು ನೀ ಸಲಹಯ್ಯ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಂತತ ಹನ್ನೆರಡು ಕೋಟಿ ಸುವರ್ಣಪುಷ್ಪ

ಸಂತತ ಹನ್ನೆರಡು ಕೋಟಿ ಸುವರ್ಣಪುಷ್ಪ ಸಮರ್ಪಿಸಲು ಅಂತ್ಯಫಲದಿ ಕೋಟಿ ಕೋಟಿ ಅಗಣಿತಫಲವು ಅರ್ಧ ತುಳಸೀದಳದ ತಂತು ಮಾತ್ರ ಭಕ್ತಿಯಿಂದ ಸಮರ್ಪಿಸಲು ಶ್ರೀಹೇಮಗತ ಪುರಂದರವಿಠಲ ವೈಕುಂಠಪದವಿಯನೀವನೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆ ಹರಿಸಿರಿಚರಣವಿರಲು

ಆ ಹರಿಸಿರಿಚರಣವಿರಲು ಮಿಕ್ಕ ಭೂರಿದೈವಗಳಿಗೇಕೆ ಭಜಿಸುವೆ ಮರುಳೆ ನೀರಡಿಸಿ ಜಾಹ್ನವಿ ತೀರದಲ್ಲಿದ್ದು ಭಾವಿ ನೀರು ಕುಡಿವ ಮಾನವರುಂಟೆ ಕಾರುಣ್ಯ ವೈಕುಂಠ ವಿಠಲರೇಯ ತಿರುವೇಂಗಳಪ್ಪ ಸಿರಿ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೇಡುವ ಕಷ್ಟಕ್ಕಿಂತ ಸಾವುದೆ ವರಲೇಸು

ಬೇಡುವ ಕಷ್ಟಕ್ಕಿಂತ ಸಾವುದೆ ವರಲೇಸು ಬೇಡುವವರಿಗೆ ವೊಬ್ಬಿ ಉಳಿಯೊದುಂಟೇನೊ ದೇವ ಧೊರೆಯುಂಟೆ ಗೂಡು ಕಿರಿದು ಮಾಡಿ ಬಲಿಯ ದಾನವ ಬೇಡಿ ನಾಡು ಅರಿಯಲು ಸ್ಥೂಲ ಸೂಕ್ಷ್ಮ ನಿನ್ನದೆ ಬೇಡುವ ಕಷ್ಟವನು ನೀನೆ ಬಲ್ಲೆಯೊ ಸ್ವಾಮಿ ಎನ್ನ ಬೇಡದಂತೆ ಮಾಡಯ್ಯ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧ್ವಜ ವಜ್ರಾಂಕುಶ ರೇಖಾಂಕಿತವಾದ

ಧ್ವಜ ವಜ್ರಾಂಕುಶ ರೇಖಾಂಕಿತವಾದ ಹರಿಪಾದಾಂಬುಜ ಸೇವಿಪ ಭಾಗವತರ ಭಾಗ್ಯ ನೋಡೊ ತ್ರಿಜಗವಂದ್ಯನ ಪಾಡುಭಕ್ತಿಯನು ಬೇಡು ಕುಜನರ ಮಾತುಗಳ ಸುಡು , ದುರ್ಜನರ ಸಂಗವ ಬಿಡು ಗಜೇಂದ್ರನ ಕಾಯಿದ ಶ್ರೀಕೃಷ್ಣನ ಸ್ಮರಣೆ ಮಾಡು ಪುರಂದರವಿಠಲನ ಬಿಡದೆ ಕೊಂಡಾಡು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಣಕದಿಂದಾಗಲಿ ಡಂಭದಿಂದಾಗಲಿ

ಅಣಕದಿಂದಾಗಲಿ ಡಂಭದಿಂದಾಗಲಿ ಇದ್ದಾಡಾಗಲಿ ಬಿದ್ದಾಡಾಗಲಿ ತಾಗಿದಾಡಾಗಲಿ ತಾಕಿಲ್ಲದಾಡಾಗಲಿ ಮರೆದು ಮತ್ತೊಮ್ಮೆಯಾಗಲಿ ಹರಿಹರಿಯೆಂದವನಿಗೆ ನರಕದ ಭಯವೇಕೆ ಯಮಪಟ್ಟಣ ಕಟ್ಟಿದರೇನು ಯಮಪಟ್ಟಣ ಬಟ್ಟಬಯಲಾದರೇನು ಹರಿದಾಸರಿಗೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು